ಕೋಲಾರ ಜಿಲ್ಲೆಯ ಮಾಲೂರು ನಗರದಲ್ಲಿ ಒಂದು ಎಕರೆ ಜಮೀನು, 10 ಕೋಟಿಗೂ ಹೆಚ್ಚು ಬೆಲೆ ಬಾಳುತ್ತೆ, ನೂರು ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ ಎನ್ನಲಾಗುವ ಸರ್ಕಾರಿ ಜಮೀನು ಸ್ವಾಧೀನಕ್ಕೆ ಮಾಲೂರು ತಾಲೂಕು ಆಡಳಿತ ಮುಂದಾಗಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಜಮೀನು ಒತ್ತುವರಿ ಗಡಿ ಗುರ್ತು ಮಾಡ್ತಿರೊ ಅಧಿಕಾರಿಗಳು, ಮತ್ತೊಂದೆಡೆ ಅಧಿಕಾರಿಗಳ ಗಡಿ ಸರ್ವೇಗೆ ವಿರೋಧಿಸಿ, ವಾಗ್ವಾದ ಮಾಡುತ್ತ ಆಕ್ರೋಶ ಹೊರಹಾಕ್ತಿರುವ ರೈತರು. ಹೌದು ಮಾಲೂರು ನಗರದ ರೈಲ್ವೆ ಬ್ರಿಡ್ಜ್ ನ, ಎರಡೂ ಬದಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ 16.12 ಎಕರೆ ಜಮೀನಿದೆ.
ಮಾಲೂರು ನಗರದಲ್ಲಿ ರೈಲ್ವೆ ಬ್ರಿಡ್ಜ್ ಹಾಗೂ ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ, 1968 ರಲ್ಲಿ ಭೂಸ್ವಾದೀನ ಪ್ರಕ್ರಿಯೆ ಮೂಲಕ ಲೋಕೋಪಯೋಗಿ ಇಲಾಖೆಗೆ ಸರ್ಕಾರ ಜಮೀನು ನೀಡಿತ್ತು. ಇರುವ 16.13 ಎಕರೆ ಜಾಗದಲ್ಲಿ ಈಗಾಗಲೇ ರೈಲ್ವೆ ಬ್ರಿಡ್ಜ್ ಹಾಗು ರಸ್ತೆಗೆಂದು 7 ಎಕರೆ ಬಳಕೆಯಾಗಿದ್ದು, ಉಳಿದ 9 ಎಕರೆ ಜಾಗ ವಶಕ್ಕೆ ಪಡೆಯಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ.
ಮಾಲೂರು ತಹಶೀಲ್ದಾರ್ ರೂಪಾ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಸರ್ವೇ ನಡೆಸಿ, ಲೋಕೋಪಯೊಗಿ ಇಲಾಖೆಗೆ ನೀಡಿದ ಜಮೀನಿನ ಗಡಿ ಗುರ್ತು ಮಾಡಲು ಅಧಿಕಾರಿಗಳು ಮುಂದಾದಾಗ, ಕೆಲ ಜಮೀನು ಮಾಲೀಕರು ವಿರೋಧಿಸಿ, ವಾಗ್ವಾದ ನಡೆಸಿದ್ದರು. ಒತ್ತುವರಿ ಆಗಿದೆಯೆಂಬ ಜಮೀನು ಹೊಂದಿರುವ ನಾರಾಯಣಸ್ವಾಮಿ ಎಂಬುವವರ ತೋಟದಲ್ಲಿ ಕುಲ್ಲು ಕಂಬ ನೆಡಲು ಮುಂದಾದಾಗ, ಜಮೀನಿನ ಸೂಕ್ತ ದಾಖಲೆಯನ್ನ ತೊರಿಸಿದ್ದು, ಪಿತ್ರಾರ್ಜಿತ ಆಸ್ತಿಯಾಗಿದ್ದರು, ಜಮೀನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ನೆಟ್ಟ ಕಂಬ ಕಿತ್ತೆಸೆಯಲು ಮುಂದಾದಾಗ ಪೊಲೀಸರು ಹಾಗೂ ರೈತ ಕುಟುಂಬದ ಮಧ್ಯೆ ವಾಗ್ವಾದ ನಡೆದಿದ್ದು, ಜಮೀನು ಬಿಡುವುದಿಲ್ಲ ಎಂದು ಜಮೀನು ಮಾಲೀಕರು ಹೇಳುತ್ತಿದ್ದಾರೆ. ರೈಲ್ವೆ ಬ್ರಿಡ್ಜ್ ನ ಎರಡೂ ಬದಿಯಲ್ಲಿ ಸದ್ಯ ಖಾಲಿಯಿರುವ 9 ಎಕರೆ ಜಮೀನು ಸುಮಾರು 100 ಕೋಟಿಗೂ ಹೆಚ್ಚು ಬೆಲೆ ಬಾಳುತ್ತಿದ್ದು, ಪ್ರಭಾವಿಗಳು ಸರ್ಕಾರಿ ಭೂಮಿಗೆ ದಾಖಲೆ ಸೃಷ್ಟಿಸಿ, ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ. ಜೊತೆಗೆ ಭೂ ಸ್ವಾದೀನ ಪ್ರಕ್ರಿಯೆ ಮೂಲಕ ಜಮೀನಿಗೆ ಪರಿಹಾರ ಪಡೆದುಕೊಂಡವರು ಜಮೀನು ಒತ್ತುವರಿ ಮಾಡಿದ್ದಾರೆ ಎಂಬುದು ಲೋಕೊಪಯೋಗಿ ಇಲಾಖೆಯ ಆರೋಪವಾಗಿದೆ.
ಇನ್ನು ಕೆಲ ಜಮೀನು ಮಾಲೀಕರ ಜಮೀನು ವಶಕ್ಕೆ ಪಡೆಯಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾದಾಗ ನ್ಯಾಯಾಲಯ ತಡೆಯಾಜ್ಞೆ ಆದೇಶವನ್ನ ತೋರಿಸಿದ ಹಿನ್ನಲೆ, ಅಧಿಕಾರಿಗಳು ಸುಮ್ಮನಾದರು. ಈ ಬಗ್ಗೆ ಆಧಿಕಾರಿಗಳು, ಸರ್ಕಾರದಿಂದ ಲೋಕೊಪಯೋಗಿ ಇಲಾಖೆಗೆ ನೀಡಿದ್ದ, 16.13 ಎಕರೆ ಜಾಗವನ್ನ ಹಸ್ತಾಂತರ ಮಾಡುತ್ತೇವೆ ಎಂದಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಯ ಮಾಲೂರು ನಗರದಲ್ಲಿ ಒಂದು ಎಕರೆ ಜಮೀನಿನ ಬೆಲೆ 10 ಕೋಟಿಗೂ ಮೀರಿದ್ದು, ನಗರ ವ್ಯಾಪ್ತಿಯಲ್ಲಿ ಸರ್ಕಾರಿ ಕಚೇರಿಗಳ ಕಾರ್ಯ ಕಲಾಪಕ್ಕೆ ಸರ್ಕಾರಿ ಜಮೀನು ಇಲ್ಲದಂತಾಗಿದೆ. ಲೋಕೋಪಯೋಗಿ ಇಲಾಖೆಗೆ ನೀಡಿದ್ದು 16 ಎಕರೆ ಜಮೀನು ವಶಕ್ಕೆ ತಾಲೂಕು ಆಡಳಿತ ಮುಂದಾಗಿದ್ದು, ಇದಕ್ಕೆ ಜಮೀನು ಮಾಲೀಕರು ವಿರೋಧಿಸಿದ್ದು, ಅಧಿಕಾರಿಗಳು ಮತ್ತೆ ನ್ಯಾಯಾಂಗ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
- Tata Play-1665
- U-Digital-ಮೈಸೂರು-160
- Metro Cast Network-ಬೆಂಗಳೂರು-ಬೆಳಗಾವಿ-30-828
- V4 digital network-623
- Abhishek network-817
- Malnad Digital network-45
- JBM network-ರಾಮದುರ್ಗ-54
- Channel net nine-ಧಾರವಾಡ-128
- Basava cable network-ಚಳ್ಳಕೆರೆ-54
- City channel network– ಚಳ್ಳಕೆರೆ-54
- RST digital-ಕಾರ್ಕಳ-101
- Vinayak cable-ಪಟ್ಟನಾಯಕನಹಳ್ಳಿ-54
- Mubarak digital-ಸಂಡೂರು-54
- SB cable-ಸವದತ್ತಿ-54
- Bhosale network-ವಿಜಯಪುರ-54
- Surya digital-ಜಗಳೂರು-54
- Gayatri network-ಸಿಂಧನೂರು-54
- Global vision-ದಾವಣಗೆರೆ-54
- Janani cable-ಮಂಡ್ಯ-54
- Hira cable-ಬೆಳಗಾವಿ-ಹುಬ್ಬಳ್ಳಿ-54
- UDC network-ಹಾರೋಗೇರಿ-54
- Moka cable-ಬಳ್ಳಾರಿ-100
- CAN network-ಚಿಕ್ಕೋಡಿ-54
- KK digital-ಗಂಗಾವತಿ-54
- Victory network-ದಾವಣಗೆರೆ-54