ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.
2023ರ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ ಫಲಿತಾಂಶದಲ್ಲಿ 16,395 ಮತಗಳ ಅಂತರದಲ್ಲಿ ಬಿಜೆಪಿಯ ಎಸ್.ರಘು ಗೆಲುವು ಸಾಧಿಸಿದ್ದರು.ಫಲಿತಾಂಶದ ವಿವರ ನೋಡುವುದಾದರೆ, ಬಿಜೆಪಿಯ ಎಸ್.ರಘು 69,228, ಕಾಂಗ್ರೆಸ್ ನ ಆನಂದ್ ಕುಮಾರ್ 52,833, ಎಎಪಿಯ ದಾಸರಿ 2967 ಮತಗಳನ್ನು ಪಡೆದಿದ್ದರು.
ಸಿವಿ ರಾಮನ್ ನಗರ ಕ್ಷೇತ್ರದ ಚಿತ್ರಣ..
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸಿವಿ ರಾಮನ್ ನಗರ ಕ್ಷೇತ್ರವು -ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಕಡಿಮೆ ಮತದಾನ ಆಗುವ ಕ್ಷೇತ್ರವಾಗಿದೆ. ಕಾಂಗ್ರೆಸ್- ಬಿಜೆಪಿ ನಡುವೆ ನೇರಾ ಪೈಪೋಟಿ ಇದ್ದು, ಸತತವಾಗಿ ನಾಲ್ಕು ಬಾರಿ ಎಸ್.ರಘು ಗೆದ್ದು ಬಂದಿದ್ದಾರೆ.
ಎಎಪಿ ಅಭ್ಯರ್ಥಿ ದಾಸರಿ ಕಳೆದ ಚುನಾವಣೆಯಲ್ಲಿ ಸಾಕಷ್ಟು ಸೌಂಡ್ ಮಾಡಿದ್ದರು. ಕಾಂಗ್ರೆಸ್ ನ ಆನಂದ್ ಕುಮಾರ್ ಸೋತರು ಕ್ಷೇತ್ರದಲ್ಲೇ ಟಿಕಾಣಿ ಹೊಂದಿದ್ದಾರೆ. ಗ್ಯಾರಂಟಿ ಯೋಜನೆಗಳನ್ನ ಇಟ್ಕೊಂಡು ಈ ಬಾರಿ ಗೆಲ್ಲಲು ಸರ್ಕಸ್ ಮಾಡುತ್ತಿದ್ದು, ಕಾಂಗ್ರೆಸ್ ನಿಂದ ಸಂಪತ್ ರಾಜ್ ಕೂಡ ಟಿಕೆಟ್ ಗೆ ಪ್ರಯತ್ನ ಮಾಡುತಿದ್ದರೆ.
ಮೂಡ್ ಆಫ್ ಕರ್ನಾಟಕ ಸಿವಿ ರಾಮನ್ ನಗರ ಹೇಗಿದೆ ಮೂಡ್.?
ವಿವಾದ ಇಲ್ಲದ ಎಸ್.ರಘು ಸಿವಿ ರಾಮನ್ ನಗ ಜನತೆ ಈಗಲೂ ಇಷ್ಟ, ಕ್ಷೇತ್ರದಲ್ಲಿ ಸಕ್ರಿಯ, ಸೌಮ್ಯ ಸ್ವಭಾವದ ವ್ಯಕ್ತಿ. ಕ್ಷೇತ್ರದಲ್ಲಿ ಶೇ. 70ಕ್ಕೂ ಅಧಿಕ ಮತದಾರರು ಶಿಕ್ಷಿತರು. ಗ್ಯಾರಂಟಿ ನಡುವೆಯೂ ಕೇಂದ್ರ ಸರ್ಕಾರದ ಸಾಧನೆಗಳ ಪರ ಒಲವು ಹೊಂದಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲಿ ಟಿಕೆಟ್ ಫೈಟ್ ಹೆಚ್ಚಾಗಿದ್ದು ಯಾರಿಗೆ ಸಿಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.
ಸಿವಿ ರಾಮನ್ ನಗರ ಆಕಾಂಕ್ಷಿಗಳು
ಸಿವಿ ರಾಮನ್ ನಗರ ಆಕಾಂಕ್ಷಿಗಳನ್ನೂ ನೋಡುವುದಾದರೆ, ಬಿಜೆಪಿಯ ಎಸ್.ರಘು, ಕಾಂಗ್ರೆಸ್ ನಿಂದ ಆನಂದ್ ಕುಮಾರ್ ಅಥವಾ ಸಂಪತ್ ರಾಜ್ ಹಾಗೂ ಎಎಪಿಯ ದಾಸರಿ ಕಣಕ್ಕೆ ಇಳಿಯಬಹುದು.
ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
- Tata Play-1665
- U-Digital-ಮೈಸೂರು-160
- Metro Cast Network-ಬೆಂಗಳೂರು-ಬೆಳಗಾವಿ-30-828
- V4 digital network-623
- Abhishek network-817
- Malnad Digital network-45
- JBM network-ರಾಮದುರ್ಗ-54
- Channel net nine-ಧಾರವಾಡ-128
- Basava cable network-ಚಳ್ಳಕೆರೆ-54
- City channel network– ಚಳ್ಳಕೆರೆ-54
- RST digital-ಕಾರ್ಕಳ-101
- Vinayak cable-ಪಟ್ಟನಾಯಕನಹಳ್ಳಿ-54
- Mubarak digital-ಸಂಡೂರು-54
- SB cable-ಸವದತ್ತಿ-54
- Bhosale network-ವಿಜಯಪುರ-54
- Surya digital-ಜಗಳೂರು-54
- Gayatri network-ಸಿಂಧನೂರು-54
- Global vision-ದಾವಣಗೆರೆ-54
- Janani cable-ಮಂಡ್ಯ-54
- Hira cable-ಬೆಳಗಾವಿ-ಹುಬ್ಬಳ್ಳಿ-54
- UDC network-ಹಾರೋಗೇರಿ-54
- Moka cable-ಬಳ್ಳಾರಿ-100
- CAN network-ಚಿಕ್ಕೋಡಿ-54
- KK digital-ಗಂಗಾವತಿ-54
- Victory network-ದಾವಣಗೆರೆ-54





