ವರದಿ: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
ಬಡಕುಟುಂಬ ಬದುಕನ್ನ ಕಟ್ಟಿಕೊಳ್ಳಲು ಹಸು ಸಾಕಾಣಿಕೆ ನಡೆಸುತ್ತಿದ್ರು. ಆದರೆ ಕತರ್ನಾಖ್ ಕಳ್ಳರ ಕಾಟಕ್ಕೆ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ರಾತ್ರೋರಾತ್ರಿ ಕತರ್ನಾಕ್ ಕಳ್ಳರು ಹಸುವನ್ನ ಕದ್ದು ಪರಾರಿಯಾಗಿದ್ದಾರೆ.
ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ ಮುಸುಕುದಾರಿಗಳಿಂದ ರೈತರ ಬದುಕು ಕಂಗಾಲಾಗಿದ್ದಾರೆ.
ಸಿಸಿಟಿವಿ ದೃಶ್ಯದಲ್ಲಿ ನೋಡುವಂತೆ ರಾತ್ರೋ ರಾತ್ರಿ ಹಸುಗಳನ್ನ ಕಳ್ಳತನ ಮಾಡ್ತಿರೊದನ್ನ ನೋಡ ಬಹುದು.
ಒಂದರ ಹಿಂದೆ ಒಂದು ಮೂಕ ಪ್ರಾಣಿಗಳು ಮುಸುಕುದಾರಿಯ ಹಿಂದೆ ಹೋಗ್ತಿರೋದನ್ನ ನೋಡ್ತಿದ್ರೆ. ಎಂತವರಿಗೂ ಒಂದು ಕ್ಷಣ ಕೋಪ ಉಕ್ಕಿ ಬರತ್ತೆ.
ಇದು ಬೆಂಗಳೂರು ಉತ್ತರ ತಾಲೂಕಿನ ಕಿತ್ತನಗಳ್ಳಿ ಗ್ರಾಮದಲ್ಲಿ ನಡೆದಿರುವ ಘಟನೆ, ರೈತ ಕೃಷ್ಣಪ್ಪ ಎಂಬ ಕಟುಂಬದವರ ಮನೆ ಮುಂದೆ ಹಸು ಸಾಕಾಣಿಕೆ ಮಾಡ್ತಿದ್ರು. ಬರೋಬ್ಬರಿ 12 ಹಸುಗಳನ್ನ ಸಾಕಿದ್ದ ಕೃಷ್ಣಪ್ಪ ಕುಟುಂಬದವರು ಹಸು ಸಾಕಾಣೆಯೇ ಜೀವನಕ್ಕೆ ಆಧಾರ ಮಾಡಿಕೊಂಡಿದ್ರು.
ರೈತರಾದ ಶಾಂತಮ್ಮ ಮತ್ತು ಕೃಷ್ಣಪ್ಪ ಒಂದೊಂದು ಕರುನ್ನ ಸಾಕಿಸಲಹಿ ದೊಡ್ಡದು ಮಾಡುವಷ್ಟರಲ್ಲಿ ಅದಕ್ಕೆ ತಗುಲುವ ವೆಚ್ಚ ಭರಿಸಲು ರೈತ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಮೂರು ಹಸುಗಳಲ್ಲಿ ಒಂದು ಹಸು ಎರಡು ತಿಂಗಳಲ್ಲಿ ಕರುಹಾಕಬೇಕಿತ್ತು. ಇನ್ನೆರಡು ಹಸುಗಳಿಂದ ಮನೆ ನಡೆಸುವಷ್ಟು ಸಂಪಾದನೆ ಇತ್ತು ಅಂತಹ ಸಂಪಾದನೆಗೆ ಈ ಖತರ್ನಾಕ್ ಕಳ್ಳರು ಕತ್ರಿ ಹಾಕಿದ್ದಾರೆ.
ಸದ್ಯ ಘಟನೆ ಸಂಬಂದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೊಂದೆ ಪ್ರಕರಣ ಅಲ್ಲ ಈ ರೀತಿಯಾಗಿ ಹಸು ಕಳ್ಳತನ ಮೇಲಿಂದ ಮೇಲೆ ಬೆಳಕಿಗೆ ಬರಿತ್ತಿದ್ದು ಆದಷ್ಟು ಬೇಗ ಹಸು ಕಳ್ಳರ ಗ್ಯಾಂಗ್ ಅನ್ನು ಪೊಲೀಸರು ಪತ್ತೆ ಮಾಡಬೇಕಿದೆ.
ವರದಿ: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
| Reported by: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ





