ಬೀದರ್ : ಟಿಟಿ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿಯಾಗಿ ಡಿಕ್ಕಿಯಾಗಿ ವೈದ್ಯನೋರ್ವ ಸಾವನ್ನಪ್ಪಿದ ಘಟನೆ ಬೀದರ್‌ನ ಔರಾದ್ ತಾಲೂಕಿನ ಮುಸ್ತಾಪುರ ಟೋಲ್ ನಾಕಾ ಬಳಿ ನಡೆದಿದೆ.
ಸಂತಪೂರ ನಿವಾಸಿ 41 ವರ್ಷದ ನೀಲಕಂಠ ಬೋಸ್ಲೆ ಎಂಬಾತ ಸಾವನ್ನಪ್ಪಿದ್ದಾನೆ. ಮಹಾರಾಷ್ಟ್ರ ಕಡೆಯಿಂದ ಬರುತ್ತಿದ್ದ ಟಿಟಿ ಟ್ರಾವೆಲರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಅಪಘಾತದ ನಂತರ ಟ್ರಾವಲರ್ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಸಂತಪೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಸಿಸಿಟಿವಿ ದೃಷ್ಯ ಗ್ಯಾರಂಟಿ ನ್ಯೂಸ್ ಗೆ ಲಭ್ಯವಾಗಿದೆ.