ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
ರಾಕಿ ಭಾಯ್ ಟಾಕ್ಸಿಕ್ ಅಡ್ಡಾಗೆ ಡಾಲ್ಸ್ ಎಂಟ್ರಿ ಕೊಟ್ಟಾಗಿದೆ. ಬ್ಯಾಕ್ to ಬ್ಯಾಕ್ ಟಾಕ್ಸಿಕ್ ಅಪ್ಡೇಟ್ ಕೊಡ್ತಿರೋ ಯಶ್ ಇದೀಗ ಲೇಡಿ ಸೂಪರ್ ಸ್ಟಾರ್ ನಯನತಾರಾ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಕೈಯಲ್ಲಿ ಗನ್ ಹಿಡಿದು.. ಸಖತ್ ಬೋಲ್ಡ್ ಆಗಿ ನಯನತಾರಾ ಕಾಣಿಸಿಕೊಂಡಿದ್ದಾರೆ.. ಹಾಗಾದ್ರೆ ಟಾಕ್ಸಿಕ್ನಲ್ಲಿ ನಯನತಾರಾ ಲುಕ್ ಹೇಗಿದೆ ಅವರ ಪಾತ್ರದ ಹೆಸರೇನು ಅನ್ನೋದ್ರ ಕಂಪ್ಲೀಟ್ ಡಿಟೈಲ್ ಇಲ್ಲಿದೆ ನೋಡಿ
‘ಟಾಕ್ಸಿಕ್’ ಡಾಲ್ಸ್ ರಾಕಿಂಗ್.. ಪತರಗುಟ್ಟಿದ ಬಾಲಿವುಡ್
ರಾಕಿಭಾಯ್ ಟಾಕ್ಸಿಕ್ ಅಡ್ಡಾದಲ್ಲಿ ಲೇಡಿ ಸೂಪರ್ ಸ್ಟಾರ್..!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಅಪ್ಕಮಿಂಗ್ ಸಿನಿಮಾ ‘ಟಾಕ್ಸಿಕ್’ ಸಿನಿಮಾ ರಿಲೀಸ್ಗೆ ಕೆಲವೇ ತಿಂಗಳು ಬಾಕಿ ಉಳಿದಿವೆ. ಈ ಚಿತ್ರದ ಪಾತ್ರಗಳನ್ನು ಒಂದೊಂದಾಗಿಯೇ ಚಿತ್ರತಂಡ ರಿವೀಲ್ ಮಾಡುತ್ತಿದೆ.. ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಪಾತ್ರಗಳನ್ನ ಈಗಾಗಲೇ ಪರಿಚಯಿಸಲಾಗಿದೆ. ಅದರಂತೆ ಇದೀಗ ಲೇಡಿ ಸೂಪರ್ ಸ್ಟಾರ್ ನಯನತಾರಾ ಪಾತ್ರದ ಅನಾವರಣ ಆಗಿದೆ.
ಯೆಸ್, ನಯನತಾರಾ ‘ಟಾಕ್ಸಿಕ್’ ಚಿತ್ರಕ್ಕಾಗಿ ಹಲವು ದಿನಗಳ ಕಾಲ ಶೂಟ್ ಮಾಡಿದ್ದರು. ಅವರ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಈಗ ಅವರ ಪಾತ್ರವನ್ನು ಅನಾವರಣ ಮಾಡಲಾಗಿದೆ. ಸಿನಿಮಾದಲ್ಲಿ ಗಂಗಾ ಹೆಸರಿನ ಪಾತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ. ಅವರ ಲುಕ್ಗೆ ಫ್ಯಾನ್ಸ್ ಫ್ಲಾಟ್ ಆಗಿದ್ದಾರೆ. ಅರಮನೆಯ ರೀತಿಯ ಸೆಟ್ನಲ್ಲಿ ನಯನತಾರಾ ಎಂಟ್ರಿ ಕೊಡುತ್ತಿದ್ದಾರೆ. ಹಿಂಭಾಗದಲ್ಲಿ ವಿದೇಶಿಗರು ಕಾವಲು ಕಾಯಲು ನಿಂತಿದ್ದಾರೆ. ನಯನತಾರಾ ಕೈಯಲ್ಲಿ ಶಾಟ್ ಗನ್ ಇದೆ. ನಯನತಾರಾ ಲುಕ್ ಅನೇಕರಿಗೆ ಇಷ್ಟ ಆಗಿದೆ. ಸಿನಿಮಾದಲ್ಲಿ ಅವರ ಪಾತ್ರದಿಂದ ಸಾಕಷ್ಟು ಮಾಸ್ ಅಂಶಗಳನ್ನು ಫ್ಯಾನ್ಸ್ ನಿರೀಕ್ಷಿಸುತ್ತಾ ಇದ್ದಾರೆ.
ಕೈಯಲ್ಲಿ ಗನ್ ಹಿಡಿದ ಗಂಗಾ.. ನಯನತಾರಾ ಫಸ್ಟ್ ಲುಕ್ ರಿವೀಲ್
ಜನವರಿ 8ಕ್ಕೆ ರಿಲೀಸ್ ಆಗುತ್ತಾ ಟಾಕ್ಸಿಕ್ ಟೀಸರ್..!
ಜನವರಿ 8 ನಟ ಯಶ್ ಹುಟ್ಟುಹಬ್ಬವಿದೆ . ಈ ಸಂದರ್ಭದಲ್ಲಿ ‘ಟಾಕ್ಸಿಕ್’ ಚಿತ್ರದ ಟೀಸರ್ ರಿಲೀಸ್ ಆಗೋ ನಿರೀಕ್ಷೆ ಇದೆ. ಅದಕ್ಕೂ ಮುನ್ನ ಎಲ್ಲಾ ಪಾತ್ರಗಳನ್ನು ಪರಿಚಯಿಸೋ ಪ್ಲ್ಯಾನ್ ಅಲ್ಲಿ ತಂಡ ಇದ್ದಂತೆ ಇದೆ. ರಿಲೀಸ್ ಮಾಡುತ್ತಿರುವ ಪ್ರತಿ ಪೋಸ್ಟರ್ ಕೂಡ ಕಲರ್ಫುಲ್ ಆಗಿದೆ. ‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಯಶ್, ಗೀತು ಜೊತೆ ಸೇರಿ ಕಥೆ ಬರೆದಿದ್ದಾರೆ.
ರಿವೀಲ್ ಆದ ಪೋಸ್ಟರ್ನಲ್ಲಿ ಮಾರ್ಚ್ 19ರಂದು ರಿಲೀಸ್ ಮಾಡಲಾಗುವುದು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈಗಾಗಲೇ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.
ಇನ್ನು ಮಾರ್ಚ್ 19ರಂದು ಈದ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಿವೆ. ಹಿಂದಿಯಲ್ಲಿ ‘ಧುರಂಧರ್ 2’ ಸಿನಿಮಾ ತೆರೆಗೆ ಬರುತ್ತಿದೆ. ಈ ಎರಡು ಸಿನಿಮಾಗಳ ಮಧ್ಯೆ ದೊಡ್ಡ ಕ್ಲ್ಯಾಶ್ ಏರ್ಪಡುವ ಸಾಧ್ಯತೆ ಇದೆ.





