ಕಂಡ ಕನಸು ನನಸು ಮಾಡೋಕೆ ಗೀತು ಮೋಹನ್‌ದಾಸ್ ದೊಡ್ಡ ಹಠಕ್ಕೆ ಬೀಳುತ್ತಾರೆ. ಅದಕ್ಕೆ ನಂಬಿಕೆಯೊಂದು ಕೈಗೂಡಬೇಕಾಗುತ್ತೆ. ಆದ್ರೆ ನಂಬಿಕೆ ಜೊತೆ ಅವಕಾಶವೂ ಒಗ್ಗೂಡುತ್ತೆ. ಅದೇ ನಟ ಯಶ್ ಆಕೆ ಮೇಲೆ ಇಡುವ ಭರವಸೆ. ಅದ್ರಿಂದ 50 ಲಕ್ಷದ ಡೈರೆಕ್ಟರ್ 500 ಕೋಟಿ ಸಿನಿಮಾ ಡೈರೆಕ್ಟರ್ ಆಗಿ ಬದಲಾಗ್ತಾರೆ. ಅದ್ಹೇಗೆ ಅನ್ನೋದ್ರ ಜೊತೆಗೆ ತಮಿಳುನಾಡಲ್ಲಿ ಓಪನ್ ಆಗಿರೋ ನಮ್ಮ ಕನ್ನಡದ ರುಕ್ಕಮ್ಮನ ಎಳನೀರು ಬಂಕ್ ಕಹಾನಿ ಕೂಡ ನೋಡ್ಕೊಂಡ್ ಬರೋಣ ಬನ್ನಿ.
- ಗೀತು ಒಂದೇ ಒಂದು ಛಲಕ್ಕೆ ಯಶ್ ನಂಬಿಕೆ & ಅವಕಾಶ..!!
- ಮಹಿಳಾ ಡೈರೆಕ್ಟರ್ ಪಾಲಿಗೆ ನಮ್ಮ ಯಶ್ ರಿಯಲ್ ಹೀರೋ
- 50 ಲಕ್ಷ ಡೈರೆಕ್ಟರ್ 500 ಕೋಟಿ ಡೈರೆಕ್ಟರ್ ಆದ ರೋಚಕತೆ
ಬಾಲನಟಿ, ನಟಿಯಾಗಿ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಮಲಯಾಳಂ ಚೆಲುವೆ ಗೀತು ಮೋಹನ್‌ದಾಸ್ ಆನ್ ಸ್ಕ್ರೀನ್ ಬಿಟ್ಟು ಆಫ್‌ಸ್ಕ್ರೀನ್‌ಗೆ ಜಾರುತ್ತಾರೆ. ಅಂದ್ರೆ ನಿರ್ದೇಶನಕ್ಕೆ ಕೈ ಹಾಕಿದಾಗ ಮೊದಲು ಶಾರ್ಟ್ ಫಿಲ್ಮ್ಸ್ ಮಾಡಿಕೊಂಡು ನಂತ್ರ ಲಯರ್ಸ್ ಡೈಸ್ ಅನ್ನೋ ಸಿನಿಮಾ ಮಾಡ್ತಾರೆ. ಅದಾದ ಬಳಿಕ ಮೂಥೋನ್ ಅನ್ನೋ ನ್ಯಾಷನಲ್ ಅವಾರ್ಡ್ ಮೂವಿ ಕೂಡ ಮಾಡ್ತಾರೆ. ಸಾಲು ಸಾಲು ಇಂಟರ್‌ನ್ಯಾಷನಲ್ ಅವಾರ್ಡ್ಸ್ ಜೊತೆ ಸ್ಟೇಟ್ ಹಾಗೂ ನ್ಯಾಷನಲ್ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಳ್ತಾರೆ. ತಮ್ಮ ಚಿತ್ರದ ಮೂಲಕ ಆಸ್ಕರ್ ಅಂಗಳಕ್ಕೂ ಹೋಗಿ ಬರ್ತಾರೆ ಗೀತು.
ಆದ್ರೆ ಸಕ್ಸಸ್‌ಫುಲ್ ಸಿನಿಮಾಗಳನ್ನ ನೀಡಿದ ಗೀತುಗೆ ಮಾತ್ರ ಯಾರೂ ಅವಕಾಶ ನೀಡಲ್ಲ. ಯಾಕಂದ್ರೆ ಆಕೆ ಹೆಣ್ಣು ಅನ್ನೋ ಕಾರಣಕ್ಕೆ. ಅದೇ ಹಠದಿಂದ ಇಂಡಿಯಾದ ಬಿಗ್ಗೆಸ್ಟ್ ಸ್ಟಾರ್ ಜೊತೆ.. ಸೆನ್ಸೇಷನಲ್ ಸ್ಟಾರ್‌ಕಾಸ್ಟ್ ಜೊತೆ ಬಹುಕೋಟಿ ಸಿನಿಮಾ ಮಾಡುವ ಕನಸು ಕಾಣ್ತಾರೆ. ಹಠಕ್ಕೆ ಬಿದ್ದು ಯಶ್ ಜೊತೆ ಸಿನಿಮಾಗೆ ಕೈ ಜೋಡಿಸ್ತಾರೆ. ಯಾರೂ ನಂಬದೆ ಇದ್ದಾಗ ನಂಬಿಕೆ ಜೊತೆ ಅವಕಾಶ ನೀಡಿ, ಗೀತು ನಿರ್ದೇಶನದ ಮೇಲೆ ಭರವಸೆ ಕೂಡ ಇಡ್ತಾರೆ ನಮ್ಮ ಯಶ್. ಅದ್ರಿಂದ 50 ಲಕ್ಷ ಚಿತ್ರದ ನಿರ್ದೇಶಕಿ 500 ಕೋಟಿ ಟಾಕ್ಸಿಕ್ ಡೈರೆಕ್ಟರ್ ಆಗಿ ಬದಲಾಗ್ತಾರೆ. ಆ ಎಮೋಷನಲ್ ಮೊಮೆಂಟ್ಸ್‌ನ ಗೀತು ಚೆನ್ನೈ ಇವೆಂಟ್‌ನಲ್ಲಿ ಭಾವನಾತ್ಮಕವಾಗಿ ಶೇರ್ ಮಾಡಿದ್ದು ವಿಶೇಷ.
- ಯಶ್ ನಿರೀಕ್ಷೆ ಪಡೆಯಪ್ಪ.. ಗೀತು ಐಡಿಯಾ ಮೂಡ್ ಫಾರ್ ಲವ್
- ಎರಡೂ ಚಿತ್ರಗಳ ನೆರಳು ಟಾಕ್ಸಿಕ್- ಎ ಫೇರಿ ಟೇಲ್ ಫಾರ್ ಗ್ರೋನಪ್ಸ್
ಅಂದಹಾಗೆ ಯಶ್ ಜೊತೆ ಆರಂಭದ ದಿನಗಳಲ್ಲಿ ಕಥೆ ಡಿಸ್ಕಷನ್ ಮಾಡ್ತಿದ್ದ ಗೀತುಗೆ ಸೂಪರ್ ಸ್ಟಾರ್ ರಜನೀಕಾಂತ್‌ರ ಪಡೆಯಪ್ಪನಂತಹ ಸಿನಿಮಾ ಮಾಡ್ಬೇಕು ಅಂತ ಯಶ್ ಕೇಳಿರ್ತಾರೆ. ಆದ್ರೆ ಹಾಲಿವುಡ್‌ನ ಇನ್ ದಿ ಮೂಡ್ ಫಾರ್ ಲವ್ ಸಿನಿಮಾನ ಗೀತು ಹೇಳ್ತಾರಂತೆ. ಆದ್ರೆ ಟಾಕ್ಸಿಕ್ ಸಿನಿಮಾದಲ್ಲಿ ಇವೆರಡೂ ಚಿತ್ರಗಳ ಒಂದು ನೆರಳನ್ನ ಕಾಣಬಹುದಂತೆ. ಅವುಗಳ ನಡುವೆ ನಮಗೊಂದು ರಿಧಮ್ ಸಿಕ್ತು. ಅದು ಬೇರೆಯದ್ದೇ ಪ್ರಪಂಚ ಅಂತ ಇದೇ ಮೊದಲ ಬಾರಿಗೆ ಗೀತು ಮೋಹನ್‌ದಾಸ್ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಬಹಿರಂಗಪಡಿಸಿದ್ದಾರೆ.
- ದ್ರಾವಿಡರ ಊರಲ್ಲಿ ರುಕ್ಮಿಣಿ ಬಂಕ್.. ಎಳನೀರಿಗೆ ರಾಯಭಾರಿ
- ಓ ಮೈ ಗಾಡ್.. ಚೆನ್ನೈನಲ್ಲಿ ರುಕ್ಕಮ್ಮಗೆ ಯಶ್‌ನ ಮೀರಿದ ಕ್ರೇಜ್
ಯೆಸ್.. ಕಾಂತಾರ ಕ್ವೀನ್ ರುಕ್ಮಿಣಿ ವಸಂತ್ ಏನೂ ಇದೇ ಮೊದಲ ಬಾರಿಗೆ ಕಾಲಿವುಡ್‌ಗೆ ಕಾಲಿಡ್ತಿಲ್ಲ. ಈ ಮೊದಲು ಶಿವಕಾರ್ತಿಕೇಯನ್ ಹಾಗೂ ವಿಜಯ್ ಸೇತುಪತಿ ಚಿತ್ರಗಳಿಂದ ಅಲ್ಲಿನ ಚಿತ್ರಪ್ರೇಮಿಗಳ ದಿಲ್ ದೋಚಿ ಆಗಿದೆ. ಹಾಗಾಗಿ ಯಶ್‌ಗೆ ಮೀರಿದ ಸ್ಟಾರ್ಡಮ್ ತಮಿಳಲ್ಲಿ ಆಕೆಗಿದೆ. ಇನ್‌ಫ್ಯಾಕ್ಟ್ ಇವೆಂಟ್‌ನಲ್ಲಿ ಕನ್ನಡತಿ ರುಕ್ಕಿಣಿ ವೇದಿಕೆ ಏರುತ್ತಿದ್ದಂತೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಆಗುತ್ತೆ.
ಅಲ್ಲೇ ಹುಟ್ಟಿ ಬೆಳೆದವರಂತೆ ತಮಿಳು ಮಾತಾಡುವ ರುಕ್ಕಮ್ಮನಿಗೆ ಅಲ್ಲೊಂದು ಬಿಗ್ ಸರ್‌ಪ್ರೈಸ್ ಕಾದಿತ್ತು. ಅದೇನಪ್ಪಾ ಅಂದ್ರೆ.. ಆಕೆಯ ಹೆಸರಲ್ಲಿ ತಮಿಳುನಾಡಲ್ಲಿ ಎಳನೀರು ಬಂಕ್ ಇದೆ. ಇದು ಅಚ್ಚರಿ ಅನಿಸಿದ್ರೂ ಅಷ್ಟರ ಮಟ್ಟಿಗೆ ಅಲ್ಲಿನ ಜನಕ್ಕೆ ಇಷ್ಟ ಆಗಿಬಿಟ್ಟಿದ್ದಾರೆ ನಮ್ಮ ರುಕ್ಕಮ್ಮ. ಹೌದು.. ರುಕ್ಮಿಣಿ ವಸಂತ್ ಎಳನೀರನ್ನ ಕುಡಿಯೋ ಮೂಲಕ ಎಲ್ಲೆಡೆ ಫೋಟೋಸ್ ಪೋಸ್ಟ್ ಮಾಡ್ತಿದ್ರು. ಸಂದರ್ಶನವೊಂದರಲ್ಲಿ ಕೂಡ ಆ ಬಗ್ಗೆ ಮಾತನಾಡಿದ್ರು. ಹಾಗಾಗಿ ಆಕೆಯನ್ನ ಎಳನೀರಿಗೆ ಬ್ರ್ಯಾಂಡ್ ಅಂಬಾಸಿಡರ್ ಮಾಡಿದ್ದಾರೆ ಅಲ್ಲಿನ ಜನ. ಆಕೆಯನ್ನ ಪಾಸಿಟಿವ್ ಆಗಿ ಟ್ರೋಲ್ ಮಾಡಿರೋ ಫೋಟೋಸ್ ಸಮೇತ ಆಕೆಗೆ ಮೆಚ್ಚುಗೆ ವ್ಯಕ್ತಪಡಿಸಲಾಯ್ತು. ಅದಕ್ಕೆ ಸಿಕ್ಕಾಪಟ್ಟೆ ಸಂತಸ ಕೂಡ ಹೊರಹಾಕಿದ್ರು ರುಕ್ಮಿಣಿ.
- ಕಿಯಾರಾ ಪ್ರೆಗ್ನೆಂಟ್ ಅಂದಾಗ ಯಶ್-ಗೀತು ಮಾಡಿದ್ದೇನು?
- ಶೂಟಿಂಗ್ ಬಗ್ಗೆ ಯೋಚಿಸದೆ ಕಂಗ್ರಾಜುಲೇಟ್ ಮಾಡಿದ್ರಂತೆ
ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ಚೆನ್ನೈ ಇವೆಂಟ್‌ನಲ್ಲೂ ತನ್ನ ಬೆಡಗು ಬಿನ್ನಾಣದ ರಂಗು ಚೆಲ್ಲಿದ್ರು. ಇಂಟರೆಸ್ಟಿಂಗ್ ಅಂದ್ರೆ ಇಲ್ಲಿಯ ತನಕ ಎಲ್ಲೂ ಮಾತನಾಡಿರದ ವಿಷಯಗಳನ್ನ ಆ ವೇದಿಕೆಯಲ್ಲಿ ಶೇರ್ ಮಾಡಿದ್ರು. ಅದ್ರಲ್ಲೂ ತಾನು ಮೊದಲ ಬಾರಿಗೆ ಪ್ರೆಗ್ನೆಂಟ್ ಅನ್ನೋದನ್ನ ತನ್ನ ಕುಟುಂಬಕ್ಕೆ ಬಿಟ್ರೆ ಮೊದಲು ಹೇಳಿದ್ದೇ ಯಶ್-ಗೀತು ಮೋಹನ್‌ದಾಸ್ ಬಳಿಯಂತೆ. ಆಗ ಅವರಿಬ್ಬರೂ ಸಹ ಆನಂದಭಾಷ್ಪದೊಂದಿಗೆ ಮನಸಾರೆ ಅಭಿನಂದನೆ ತಿಳಿಸಿದ ಪರಿ ನನ್ನ ಹೃದಯ ತುಂಬಿ ಬಂತು ಎಂದಿದ್ದಾರೆ. ಸಾಮಾನ್ಯವಾಗಿ ಶೂಟಿಂಗ್ ಗತಿ ಏನು..? ಹೇಗೆ ಅನ್ನೋ ಪ್ರಶ್ನೆಗಳು ಮೂಡಬೇಕಿತ್ತು. ಆದ್ರೆ ಅವರಲ್ಲಿ ಆ ಆತಂಕಕ್ಕಿಂತ ನನಗಾದ ಶುಭವನ್ನ ಆನಂದಿಸಿದ್ರು ಎಂದರು.
ಹುಮಾ ಖುರೇಷಿ ಕೂಡ ಸಿನಿಮಾ ಹಾಗೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದು, ಕೆವಿಎನ್‌ಗೆ ತಮಿಳು ಚಿತ್ರರಂಗ ಹಾಗೂ ಅಲ್ಲಿನ ಸಿಎಂ ವಿಜಯ್ ಬಹಳ ಸ್ಪೆಷಲ್. ಹಾಗಾಗಿ ಕೂ ಹಿಡಿದ ತಮಿಳು ಜನರ ಬಗ್ಗೆ ಬಹಳ ವಿಧೇಯಕ ಮಾತುಗಳನ್ನಾಡಿದ್ರು.
ಅದೇ ವೇದಿಕೆಯಲ್ಲಿ ದೊಡ್ಡದೊಂದು ಕೇಕ್ ಕಟ್ ಮಾಡಿಸೋ ಮೂಲಕ ಟಾಕ್ಸಿಕ್ ಅನ್ನದಾತ ಕೆ ವೆಂಕಟ್ ನಾರಾಯಣ್ ಅವ್ರ ಬರ್ತ್ ಡೇ ಕೂಡ ಸೆಲೆಬ್ರೇಟ್ ಮಾಡಿದ್ರು ನಟ ಯಶ್ ಹಾಗೂ ಟೀಂ ಟಾಕ್ಸಿಕ್. ಒಟ್ಟಾರೆ ಟಾಕ್ಸಿಕ್‌ನ ಒಂದೊಂದು ಇವೆಂಟ್ ಕೂಡ ಅರ್ಥಪೂರ್ಣ ಹಾಗೂ ಅವಿಸ್ಮರಣೀಯ ಅನಿಸಿವೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





