ರಕ್ಷಣಾ ಮತ್ತು ನೌಕಾ ರಂಗಗಳಲ್ಲಿ ತನ್ನದೇ ಆದ ಸ್ಪಷ್ಟ ಹಾಗೂ ಸ್ವತಂತ್ರ ನಿಲುವನ್ನು ಹೊಂದಿರುವ ಭಾರತ, ಜಾಗತಿಕ ಮಟ್ಟದಲ್ಲಿ ವಿಶೇಷ ಗೌರವಕ್ಕೆ ಪಾತ್ರವಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಭಾರತಕ್ಕೆ ಹಲವಾರು ಮಿತ್ರ ರಾಷ್ಟ್ರಗಳಿದ್ದರೂ, ಗಡಿ ಭಾಗಗಳಲ್ಲಿ ಶತ್ರು ರಾಷ್ಟ್ರಗಳ ಸವಾಲುಗಳಿಗೇನೂ ಕೊರತೆಯಿಲ್ಲ. ಈ ನಿಟ್ಟಿನಲ್ಲಿ ಆರ್ಥಿಕವಾಗಿ ಸದೃಢವಾಗುತ್ತಿರುವ ಭಾರತ, ಮಿಲಿಟರಿ ಶಕ್ತಿಯಲ್ಲಿಯೂ ಜಾಗತಿಕ ಮಟ್ಟದ ಬಲವನ್ನು ಮೈಗೂಡಿಸಿಕೊಳ್ಳುತ್ತಿದೆ.
ಭಾರತದ ಬತ್ತಳಿಕೆಗೆ ಬಂತು AK-203 ರೈಫಲ್: ಈಗಾಗಲೇ ಭಾರತೀಯ ಸೇನೆಯ ಬಳಿ ಇನ್ಸಾಸ್ (INSAS), AK-47 ಸೇರಿದಂತೆ ಹಲವು ಮಾರಕ ಶಸ್ತ್ರಾಸ್ತ್ರಗಳಿವೆ. ಆದಾಗ್ಯೂ ಗಡಿಗಳಲ್ಲಿ ಪಾಕಿಸ್ತಾನ ಹಾಗೂ ಚೀನಾದಂತಹ ನೆರೆ ರಾಷ್ಟ್ರಗಳು ಆಗಾಗ ಭಾರತವನ್ನು ಕೆಣಕುವ ಕೆಲಸ ಮಾಡುತ್ತಲೇ ಇರುತ್ತವೆ. ಅಂತಹ ಶತ್ರುಗಳ ಕುಕೃತ್ಯಗಳಿಗೆ ಭಾರತೀಯ ಪಡೆಗಳು ಸೂಕ್ತ ಉತ್ತರ ನೀಡುತ್ತಿದ್ದು, ಇದೀಗ ಸಶಸ್ತ್ರ ಪಡೆಗಳ ಪ್ರಹಾರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಅತ್ಯಾಧುನಿಕ AK-203 ಅಸಾಲ್ಟ್ ರೈಫಲ್ ಗಳನ್ನು ಸೇನೆಗೆ ಸೇರ್ಪಡೆಗೊಳಿಸಲಾಗುತ್ತಿದೆ.
ಭಾರತದ ಬತ್ತಳಿಕೆಗೆ ಬರಲಿದೆ ಆರುವರೇ ಲಕ್ಷ AK 203 ರೈಫಲ್‌ಗಳು :- ಭಾರತದಲ್ಲಿಯೇ ತಯಾರಾಗುತ್ತಿರುವ ಈ ಗನ್ AK 203 ರೈಫಲ್‌ಗಳು ರಷ್ಯಾದ AK 47 ಗಿಂತಲೂ ಕೂಡ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಈ ಗನ್ 3.8 ಕೆಜಿಯಷ್ಟು ಗಾತ್ರವನ್ನ ಹೊಂದಿದ್ದು,ಇದರ ಮ್ಯಾಗಜೀನ್‌ನಲ್ಲಿ ಒಂದು ಬಾರಿಗೆ 30 ಗುಂಡುಗಳನ್ನ ತುಂಬಬಹುದಾಗಿದ್ದು, ಭಾರತದ ಬೆಲೆಯಲ್ಲಿ 90 ಸಾವಿರ ಬೆಲೆ ಬಾಳುತ್ತದೆ ಎಂದು ತಿಳಿದು ಬಂದಿದೆ ಅಲ್ಲದೇ 800 ರಿಂದ 950 ಮೀಟರ್‌ನಷ್ಟು ದೂರ ಫೈರ್ ಮಾಡಬಹುದಾಗಿದೆ.. ಸದ್ಯ ಇದು ಭಾರತದಲ್ಲಿಯೇ ತಯಾರಾಗುತ್ತಿದ್ದು, ರಷ್ಯಾ ಹಾಗೂ ಭಾರತ ಸಹಕಾರದಲ್ಲಿ 2 ಕೂಡ ತಯಾರು ಮಾಡುತ್ತಿದೆ ಎನ್ನಬಹುದಾಗಿದೆ..
AK 47 ಗೂ AK 203 ಗೂ ಇದೆ ಹಲವು ವ್ಯತ್ಯಾಸಗಳು :-
AK 47 :- ಈಗಾಗಲೇ ತಿಳಿದಿರುವಂತೆ ರಷ್ಯಾದ AK 47 ರೈಫಲ್ ಬರೀ ಭಾರತ ಮಾತ್ರವಲ್ಲದೇ ಅಮೆರಿಕಾ, ಫ್ರಾನ್ಸ್ ಸೇರಿದಂತೆ ಸುಮಾರು 82 ದೇಶಗಳು AK 47 ರೈಫಲ್ ಹೊಂದಿದೆ ಎಂದು ತಿಳಿದು ಬಂದಿದೆ. AK 47 ಬಂದೂಕು 4.3 ಕೆಜಿಯಷ್ಟು ಗಾತ್ರವನ್ನ ಹೊಂದಿರುವದಲ್ಲದೇ ಇದರಿಂದ ಹಾರುವ ಬುಲೆಟ್ ಗಳು 300 ರಿಂದ 400 ಮೀಟರ್ವರೆಗೂ ಕೂಡ ಕೂಡ ತಲುಪುತ್ತದೇ ಈ AK 47 ಬಂದೂಕನ್ನ ಬರೀ ಭಾರತ ಮಾತ್ರವಲ್ಲ ಫ್ರಾನ್ಸ್, ಅಮೆರಿಕಾ, ರಷ್ಯಾ ಸೇರಿದಂತೆ ಆನೇಕ ದೇಶಗಳು ಬಳಸುತ್ತಿದೆ.. AK 47 ರೈಫಲ್ ನಲ್ಲಿ 30ರಿಂದ ಹಿಡಿದು 100 ಗುಂಡುಗಳ ವರೆಗೂ ಕೂಡ ತುಂಬಬಹುದಾಗಿದ್ದು, ಒಂದೇ ಬಾರಿಗೆ 40 ರಿಂದ 60 ಗುಂಡುಗಳನ್ನ ಯಶಸ್ವಿಯಾಗಿ ಶೂಟ್ ಮಾಡಬಹುದಾಗಿದೆ.
AK 203 ;- ಸ್ವದೇಶಿ ನಿರ್ಮಿತವಾಗಿರುವ AK 203 ರೈಫಲ್ AK 47 ಗಿಂತಲೂ ಭಿನ್ನ ಎನ್ನಬಹುದಾಗಿದೆ ಯಾಕೆಂದರೆ ಇದರ ಮ್ಯಾಗಜೀನ್ ಏಕಕಾಲಕ್ಕೆ 30ಗುಂಡುಗಳನ್ನ ತುಂಬಬಹುದಾಗಿದ್ದು, ಫುಲಿ ಲೋಡೆಡ್ ರೈಫಲ್ 3.8 ಕೆಜಿಯಷ್ಟು ಗಾತ್ರವನ್ನ ಹೊಂದಿದೆ. ಅಲ್ಲದೇ ಇದನ್ನು ಎಲ್ಲಾ ಹವಮಾನಕ್ಕೂ ಕೂಡ ಹೊಂದಿಕೆಯಾಗುವಂತೆ ತಯಾರಿಸಲಾಗುತ್ತಿದೆ, ಅಲ್ಲದೇ ಇದರ ಮ್ಯಾಗಜೀನ್ ಗಳು ಕೂಡ ಜ್ಯಾಮ್ ಅಗುವುದಿಲ್ಲ.
ಶತ್ರುಗಳು ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಶತ್ರುಗಳ ಗುಂಡಿಗೆಯನ್ನ ಸೀಳುವುದರಲ್ಲಿ ಇದು ಅನುಮಾನವೇ ಇಲ್ಲ ಎಂದು ಹೇಳಲಾಗುತ್ತಿದೆ.. ಅಲ್ಲದೇ ಇದು ಸೈನಿಕರ ಅನುಕೂಲಕ್ಕೆ ತಕ್ಕಂತೆ ಮಡಚಿಕೊಳ್ಳಬಹುದಾಗಿದೆ.





