ರಾಕಿಂಗ್ ಸ್ಟಾರ್ ಯಶ್ ಲಾಸ್ ವೇಗಾಸ್‌ನಲ್ಲಿ ನಡೆದ ಸಿನಿಮಾಕಾನ್‌ನಲ್ಲಿ ಭಾಗಿಯಾದ ಮೊದಲ ಇಂಡಿಯನ್ ಸೂಪರ್ ಸ್ಟಾರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಷಯವನ್ನ ನಾವು ನಿಮಗೆ ಇದೇ ಗ್ಯಾರಂಟಿ ಪಿಚ್ಚರ್‌ನಲ್ಲಿ ಹೇಳಿದ್ವಿ. ಆದ್ರೆ ಅಲ್ಲಿ ಅವರು ತಮ್ಮ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವೀಸ್ ಟಾಕ್ಸಿಕ್ ಹಾಗೂ ರಾಮಾಯಣ ಬಗ್ಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಇದರ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ..
- ಟಾಕ್ಸಿಕ್-ರಾಮಾಯಣ ಬಗ್ಗೆ ಯಶ್ ಎಕ್ಸ್‌ಕ್ಲೂಸಿವ್ ಟಾಕ್
- ಹಾಲಿವುಡ್‌ನಲ್ಲಿ ಕಾಣಲ್ವಂತೆ ಟಾಕ್ಸಿಕ್ ರೀತಿಯ ವಿಶ್ಯುವಲ್ಸ್
- ಭಾರತದ ಸಾಂಸ್ಕೃತಿಕ ರಾಯಭಾರಿ, ಹೆಮ್ಮೆಯ ಕನ್ನಡಿಗ ಯಶ್
- ಮೊದಲ ಭಾಗದಲ್ಲಿ ಮುಖಾಮುಖಿ ಆಗಲ್ಲ ರಾಕಿ-ರಣ್‌ಬೀರ್..!
ಯೆಸ್.. ಕೆಜಿಎಫ್ ಚಿತ್ರಗಳಿಂದ ನಮ್ಮ ಯಶ್ ಈಗಾಗ್ಲೇ ಕನ್ನಡದ ಸಿನಿಮಾಗಳನ್ನ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದ್ರು. ಇದೀಗ ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳನ್ನ ಇಂಟರ್‌ನ್ಯಾಷನಲ್ ಮಾರ್ಕೆಟ್ ಮೂಲಕ ಹಾಲಿವುಡ್ ರೇಂಜ್‌ಗೆ ಕೊಂಡೊಯ್ಯುವ ಕಾರ್ಯ ಮಾಡ್ತಿದ್ದಾರೆ. ಅದೇ ಕಾರಣದಿಂದ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ಸಿನಿಮಾಕಾನ್ ಇವೆಂಟ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಿ ತಮ್ಮ ಎರಡೂ ಬಹುನಿರೀಕ್ಷಿತ ಚಿತ್ರಗಳ ಬಗ್ಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
ಪ್ರತಿಷ್ಠಿತ ಸಿನಿಮಾಕಾನ್ ಇವೆಂಟ್‌ನಲ್ಲಿ ಭಾಗಿಯಾದ ಮೊದಲ ಇಂಡಿಯನ್ ಸೂಪರ್ ಸ್ಟಾರ್ ಅನ್ನೋ ದಾಖಲೆ ಬರೆದಿರೋ ಯಶ್, ತಮ್ಮ ರಾಮಾಯಣ ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಅಲ್ಲಿ ಮಾತಾಡ್ತಾ, ಇದೇ ದೀಪಾವಳಿಗೆ ಬರ್ತಿರೋ ರಾಮಾಯಣ ಮೊದಲ ಭಾಗದಲ್ಲಿ ರಾಮ ರಣ್‌ಬೀರ್ ಹಾಗೂ ರಾವಣ ಮೊದಲ ಭಾಗದಲ್ಲಿ ಮುಖಾಮುಖಿ ಆಗೋದೇ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ರಣ್‌ಬೀರ್ ಅದ್ಭುತ ಕಲಾವಿದ. ನಮ್ಮ ವಿಷನ್‌ಗಳು ಒಂದೇ.. ಹಾಗಾಗಿ ಕೆಮಿಸ್ಟ್ರಿ ಮ್ಯಾಟರ್ ಆಗಲ್ಲ ಅಂದಿದ್ದಾರೆ ಯಶ್.
ರಾವಣ ಎಲ್ಲರೂ ಅಂದುಕೊಂಡಷ್ಟು ಕೆಟ್ಟವನಲ್ಲ. ಅಫ್ ಕೋರ್ಸ್ ಕೆಟ್ಟವನೇ. ಆದ್ರೆ ಆತನೊಬ್ಬ ಅದ್ಭುತ ಸಂಗೀತಗಾರ, ಮಹಾನ್ ಶಿವನ ಭಕ್ತ, ಜನ ಮೆಚ್ಚುವ ಲಂಕಾಧಿಪತಿ. ಹೀಗಾಗಿ ಆ ಎಲ್ಲಾ ಮಜಲುಗಳನ್ನ ಇಲ್ಲಿ ತೋರಿಸೋ ಪ್ರಯತ್ನ ನಡೆದಿದೆ ಎಂದಿದ್ದಾರೆ.
ಇದೇ ವೇಳೆ ಟಾಕ್ಸಿಕ್ ಟೀಸರ್‌ಗೆ ಕ್ಲೀನ್ ಬೋಲ್ಡ್ ಆಗಿರೋ ಸಂದರ್ಶನಕಾರ, ನಮಗೆ ಇಲ್ಲಿ ಹಾಲಿವುಡ್‌ನಲ್ಲಿ ಏಕೆ ಟಾಕ್ಸಿಕ್‌ನಂತಹ ವಿಶ್ಯುವಲ್ಸ್ ಕಾಣಿಸಲ್ಲ ಅಂತ ಪ್ರಶ್ನಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ರಾಕಿಭಾಯ್, ಟಾಕ್ಸಿಕ್ ತುಂಬಾನೇ ಮಹತ್ವಾಕಾಂಕ್ಷೆಯ ಸಿನಿಮಾ. ಜನ ನನಗೆ ಸಕ್ಸಸ್ ಕೊಟ್ಟಿದ್ದು ಸೆಲೆಬ್ರೇಟ್ ಮಾಡೋಕೆ ಅಲ್ಲ. ಅಥ್ವಾ ಮಜಾ ಮಾಡೋಕೆ ಅಲ್ಲ. ಪ್ರತಿ ಬಾರಿ ಸಕ್ಸಸ್ ಸಿಕ್ಕಾಗಲೂ ಮತ್ತಷ್ಟು ಉತ್ತಮ ಸಿನಿಮಾಗಳನ್ನ ಮಾಡುವ ಜವಾಬ್ದಾರಿ ನನ್ನ ಮೇಲಿದೆ ಅನಿಸುತ್ತೆ ಎಂದಿದ್ದಾರೆ.
ಭಾರತದ ಕಥೆಗಳು ಹಾಗೂ ಭಾರತದ ಚಿತ್ರರಂಗವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶ ನನ್ನದು. ಭಾರತೀಯರು ನನ್ನನ್ನ ದೊಡ್ಡ ಮಟ್ಟಕ್ಕೆ ಬೆಂಬಲಿಸುತ್ತಾ ಬರ್ತಿದ್ದಾರೆ. ಅಮೆರಿಕದಲ್ಲೂ ಸಾಕಷ್ಟು ಮಂದಿ ಸಪೋರ್ಟ್ ಮಾಡಿದ್ದೀರಿ. ಅವರೆಲ್ಲರಿಗೂ ಧನ್ಯವಾದ ಅಂತ ಕೃತಜ್ಙತೆಯನ್ನ ತಿಳಿಸೋ ಮೂಲಕ ಭೇಷ್ ಅನಿಸಿಕೊಳ್ತಿದ್ದಾರೆ ನಮ್ಮ ಹೆಮ್ಮೆಯ ಕನ್ನಡಿಗ ಯಶ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





