ಇಂದು (ಗುರುವಾರ) ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ಈ ವಿಶೇಷ ದಿನವನ್ನು ಇನ್ನಷ್ಟು ಗ್ರ್ಯಾಂಡ್ ಮಾಡಲು ಯಶ್ ತಮ್ಮ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ (Toxic) ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದ್ದಾರೆ. ಅಭಿಮಾನಿಗಳು ಕಾಯುತ್ತಿದ್ದ ಕ್ಷಣಕ್ಕೆ ಇಂದು ಬೆಳಿಗ್ಗೆ 10 ಗಂಟೆ 10 ನಿಮಿಷಕ್ಕೆ ಯಶ್ ತಮ್ಮ ಪಾತ್ರದ ಹೆಸರನ್ನು ವಿಶೇಷ ವಿಡಿಯೊ ಮೂಲಕ ಅನಾವರಣಗೊಳಿಸಿದ್ದಾರೆ.
2 ನಿಮಿಷ 51 ಸೆಕೆಂಡುಗಳ ಈ ಪಾತ್ರ ಪರಿಚಯದ ವಿಡಿಯೊ ಬಿಡುಗಡೆಯಾದ ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ವಿಡಿಯೊ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದು, ‘ಟಾಕ್ಸಿಕ್’ ಸಿನಿಮಾದ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ಇದುವರೆಗೆ ಯಾರೂ ನೋಡಿರದ ಹೊಸ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದು, ಅವರ ಸ್ಟೈಲ್, ಅಟ್ಟಿಟ್ಯೂಡ್ ಅಭಿಮಾನಿಗಳಿಗೆ ಹೊಸ ಅನುಭವ ನೀಡಿದೆ.
ಈ ವಿಡಿಯೊದಲ್ಲಿ ಯಶ್ ಪಾತ್ರದ ಹೆಸರು ‘ರಾಯನ್’ ಎಂದು ಬಹಿರಂಗವಾಗಿದೆ. ಪಾತ್ರದ ಇಂಟ್ರೊಡಕ್ಷನ್ ಸ್ಟೈಲ್, ಬ್ಯಾಕ್‌ಗ್ರೌಂಡ್ ಸ್ಕೋರ್ ಮತ್ತು ದೃಶ್ಯಗಳ ಮೆರುಗು ನೋಡಿದೆ..
ಹಸಿಬಿಸಿ ದೃಶ್ಯ… ಎಲ್ಲರ ಕಣ್ಣೆಳೆದ ಬ್ಯೂಟಿ!
ವಿಡಿಯೊ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳ ಗಮನ ಸೆಳೆದದ್ದು ಒಂದು ವಿಶೇಷ ದೃಶ್ಯ. ಕಾರಿನೊಳಗೆ ಯಶ್ (ರಾಯನ್) ಜೊತೆ ಕಾಣಿಸಿಕೊಂಡ ಬೋಲ್ಡ್ ಮತ್ತು ಗ್ಲಾಮರಸ್ ಸುಂದರಿ ಯಾರು ಎಂಬ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. “ಈಕೆ ಯಾರು?”, “ಟಾಕ್ಸಿಕ್‌ನ ನಾಯಕಿ ಇವರೇನಾ?” ಎಂಬ ಪ್ರಶ್ನೆಗಳು ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ..
ಹಾಲಿವುಡ್ ಟಚ್- ನಟಾಲಿಯಾ ಬರ್ನ್ ಎಂಟ್ರಿ!
ಯಶ್ ಜೊತೆ ಕಾರಿನೊಳಗೆ ಕಾಣಿಸಿಕೊಂಡಿರುವ ಈ ಚೆಲುವೆಯ ಹೆಸರು ನಟಾಲಿಯಾ ಬರ್ನ್ (Natalie Burn). ಇವರು ಕೇವಲ ನಟಿಯಷ್ಟೇ ಅಲ್ಲ, ರೂಪದರ್ಶಿ, ಬರಹಗಾರ್ತಿ ಹಾಗೂ ನಿರ್ಮಾಪಕಿ ಕೂಡ ಹೌದು. ಉಕ್ರೇನ್ ಮೂಲದ ಈಕೆ, ನಂತರ ಅಮೆರಿಕಾದಲ್ಲಿ ನೆಲೆಸಿದ್ದು, ಹಾಲಿವುಡ್ ಸಿನಿಮಾಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ..
ನಟಾಲಿಯಾ ಬರ್ನ್ ಅವರದೇ ಆದ ನಿರ್ಮಾಣ ಸಂಸ್ಥೆ ‘7ಹೆವೆನ್ ಪ್ರೊಡಕ್ಷನ್ಸ್’ ಇದೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಾವು ‘ದಿ ಆಕ್ಟರ್ಸ್ ಸ್ಟುಡಿಯೊ’ ಮತ್ತು ‘ದಿ ಟೆಲಿವಿಷನ್ ಅಕಾಡೆಮಿ’ ಸದಸ್ಯೆ ಎಂದು ಪರಿಚಯಿಸಿಕೊಂಡಿದ್ದಾರೆ.
‘ಟಾಕ್ಸಿಕ್’ನಲ್ಲಿ ಯಾವ ಪಾತ್ರ?
ಈಗಾಗಲೇ ಬಿಡುಗಡೆಗೊಂಡಿರುವ ವಿಡಿಯೊದಲ್ಲಿ ನಟಾಲಿಯಾ ಬರ್ನ್ ಅವರ ಪಾತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಅವರ ಬೋಲ್ಡ್ ಲುಕ್ ಮತ್ತು ರಾಯನ್ ಜೊತೆಗೆ ಇರುವ ದೃಶ್ಯಗಳು, ಕಥೆಯಲ್ಲಿ ಪ್ರಮುಖ ಪಾತ್ರವಿರಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿವೆ. ಇದರಿಂದ ‘ಟಾಕ್ಸಿಕ್’ ಸಿನಿಮಾ ಕೇವಲ ಪ್ಯಾನ್ ಇಂಡಿಯಾ ಮಾತ್ರವಲ್ಲ, ಇಂಟರ್‌ನ್ಯಾಷನಲ್ ಲೆವೆಲ್ ಪ್ರಾಜೆಕ್ಟ್ ಎಂಬ ಭಾವನೆ ಅಭಿಮಾನಿಗಳಲ್ಲಿ ಮೂಡಿದೆ.
ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್!
ಹುಟ್ಟುಹಬ್ಬದ ದಿನವೇ ಪಾತ್ರದ ಹೆಸರು ಅನಾವರಣ, ಹೊಸ ಲುಕ್, ಹಾಲಿವುಡ್ ನಟಿಯ ಎಂಟ್ರಿ ಇವೆಲ್ಲವೂ ಯಶ್ ಅಭಿಮಾನಿಗಳಿಗೆ ಡಬಲ್ ಖುಷಿ ಕೊಟ್ಟಿದೆ. ‘ಟಾಕ್ಸಿಕ್’ ಸಿನಿಮಾ ಯಾವ ಮಟ್ಟಿಗೆ ಸಿನಿರಂಗದಲ್ಲಿ ಸಂಚಲನ ಮೂಡಿಸಲಿದೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.





