ಸಲ್ಲೂ, ಆಮೀರ್, ಶಾರೂಖ್.. ಇಲ್ಲಿಯವರೆಗೆ ಭಾರತೀಯ ಚಿತ್ರರಂಗದ ಪಾಲಿಗೆ ಸೂಪರ್ ಸ್ಟಾರ್ ಹೀರೋಗಳು. ಆದ್ರೆ ಇಂಡೋ-ಪಾಕ್ ವಾರ್ ಬಗ್ಗೆ ತುಟಿ ಬಿಚ್ಚದ ಇವರುಗಳು ನಿಜ ಜೀವನದಲ್ಲಿ ಝೀರೋಗಿಂತ ಕಡೆ. ಭಾರತೀಯರಿಂದ ಕೋಟಿ, ಕೋಟಿ ಆಸ್ತಿ ಮಾಡಿರೋ ಖಾನ್‌ಗಳನ್ನು ಇನ್ಮುಂದೆಯೂ ಕೂಡ ಆರಾಧಿಸ್ತೀರಾ..? ನೀವೇ ಡಿಸೈಡ್ ಮಾಡಿ.
- ಭಾರತದ ನಡೆಗೆ ಸಲ್ಲು, ಆಮೀರ್ & ಶಾರೂಖ್ ಮೌನ
- ಆಪರೇಷನ್ ಸಿಂದೂರಕ್ಕೆ ಮೆಚ್ಚುಗೆ ಸೂಚಿಸದ ಸ್ಟಾರ್ಸ್..!
- ಪಾಕ್ ಮೇಲೆ ಪ್ರೀತಿಯೋ.. ಇಸ್ಲಾಂ ವ್ಯಾಮೋಹವೋ..?
- ಕೋಟಿ ಕೋಟೆ ಕಟ್ಟಿದವರು ಕೋಟಿ ಮನಸ್ಸು ಗೆಲ್ಲಲಿಲ್ಲ..!!
ಖಾನ್‌ತ್ರಯರು ಅಂತಲೇ ಫೇಮಸ್ ಆಗಿರೋ ಶಾರೂಖ್ ಖಾನ್, ಸಲ್ಮಾನ್ ಖಾನ್ ಹಾಗೂ ಆಮೀರ್ ಖಾನ್ ನಮ್ಮ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳು. ಇವರುಗಳ ಆಸ್ತಿಯ ಒಟ್ಟು ಮೊತ್ತ ಕೇಳಿದ್ರೆ ಅಕ್ಷರಶಃ ಬೆಚ್ಚಿ ಬೀಳ್ತೀರಾ. ಹೌದು.. ಒಬ್ಬೊಬ್ಬರೂ ಕೂಡ ಸಾವಿರಾರು ಕೋಟಿಗೆ ಬಾಳ್ತಾರೆ. ಹಾಗಾದ್ರೆ ಯಾವ್ಯಾವ ಸ್ಟಾರ್ ಬಳಿ ಎಷ್ಟು ಕೋಟಿ ಆಸ್ತಿ ಇದೆ ಅಂತ ಹೇಳ್ತೀವಿ ಕೇಳಿ.
ಬಾಲಿವುಡ್‌ನ ಬಾದ್‌ಷಾ ಅಂತಲೇ ಖ್ಯಾತಿ ಪಡೆದಿರೋ ಶಾರೂಖ್ ಖಾನ್ ಒಟ್ಟು ಆಸ್ತಿಯ ಮೊತ್ತ ಹೆಚ್ಚೂ ಕಮ್ಮಿ 7300 ಕೋಟಿ ರೂಪಾಯಿಗಳು. ಭಾಯಿಜಾನ್ ಸಲ್ಮಾನ್ ಖಾನ್ 2900 ಕೋಟಿಗಳಿಗೂ ರೂಪಾಯಿಗಳಿಗೂ ಅಧಿಕ ಮೊತ್ತದ ಆಸ್ತಿ ಹೊಂದಿದ್ದಾರೆ. ಇನ್ನು ಮಿಸ್ಟರ್ ಪರ್ಫೆಕ್ಷನಿಸ್ಟ್ ಅನಿಸಿಕೊಳ್ಳೋ ಆಮೀರ್ ಖಾನ್ 1868 ಕೋಟಿ ರೂಪಾಯಿಗಳ ಒಡೆಯ. ಇದೆಲ್ಲವೂ ಕೊಟ್ಟಿದ್ದು ಯಾರು.. ನಾವೇ ಅಲ್ಲವೇ..? ಇವರುಗಳನ್ನ ತಲೆ ಮೇಲೆ ಹೊತ್ತು ಮೆರೆಸಿದ್ಯಾರು.. ನಾವುಗಳೇ ಅಲ್ಲವೇ..?
ಇದೀಗ ಇಡೀ ದೇಶದ ಜನರಲ್ಲಿ ಉಗ್ರರ ಮೇಲಿನ ಕಿಚ್ಚು ಹೊತ್ತು ಉರಿಯುತ್ತಿದೆ. ಇವರುಗಳಿಗೆ ಉಗ್ರರನ್ನು ಖಂಡಿಸುವ ಮನಸ್ಥಿತಿ ಇಲ್ಲ. ಎಂಥದ್ದೇ ಪರಿಸ್ಥಿತಿ ಬಂದರೂ ಸಹ ಇವರುಗಳಿಗೆ ಇವ್ರ ಪಂಥವೇ ಮುಖ್ಯ. ಪಹಲ್ಗಾಮ್ ನಲ್ಲಿನ ಟೂರಿಸ್ಟ್‌ಗಳ ಮೇಲಿನ ಉಗ್ರರ ಅಟ್ಯಾಕ್ ಕುರಿತು ಶಾರೂಖ್ ಒಂದು ತೋರ್ಪಡಿಕೆ ಪೋಸ್ಟ್ ಹಾಕಿದ್ರು ಅನ್ನೋದು ಬಿಟ್ರೆ, ನಮಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನುವಂತಿದ್ರು ಆಮೀರ್ ಹಾಗೂ ಸಲ್ಮಾನ್.
ಹೋದ್ರೆ ಹೋಗಲಿ ಬಿಡಿ.. ಅದಕ್ಕೆ ರಿಯಾಕ್ಟ್ ಮಾಡದಿದ್ರೆ ಏನಂತೆ..? ಇದೀಗ ಆಪರೇಷನ್ ಸಿಂದೂರ ನಡೆದಿದೆ ಅಲ್ಲವಾ.. ಅದಕ್ಕಾದ್ರೂ ಖುಷಿಯಿಂದ ಒಂದು ಪೋಸ್ಟ್ ಹಾಕಿ ದೇಶಪ್ರೇಮ ಮೆರೆಯಬಹುದಿತ್ತು ಅಲ್ಲವೇ..? ಇದರಲ್ಲೇ ಗೊತ್ತಾಗ್ತಿದೆ ಇವರುಗಳ ಮನಸ್ಥಿತಿ. ಇವರುಗಳ ಚಿಂತನೆ. ಇವರುಗಳ ಹೀರೋಯಿಸಂ. ಹೌದು.. ಒಬ್ಬೇ ಒಬ್ಬ ಸ್ಟಾರ್ ಸಹ ಸಿಂಗಲ್ ಪೋಸ್ಟ್ ಕೂಡ ಮಾಡಿಲ್ಲ. ಇದನ್ನ ನೋಡ್ತಿದ್ರೆ ಇವರುಗಳಿಗೆ ಪಾಕ್ ಮೇಲಿನ ಪ್ರೀತಿಯೋ ಅಥ್ವಾ ಇಸ್ಲಾಂ ಮೇಲಿನ ವ್ಯಾಮೋಹವೋ ಅನ್ನೋ ಅನುಮಾನ ಕಾಡುತ್ತೆ.
ಸಿನಿಮಾಗಳಲ್ಲಿ ಸರ್ವ ಧರ್ಮ ಸಾರುವ ಇವರುಗಳು, ತಮ್ಮ ಪಾತ್ರಗಳ ಮೂಲಕ ಪೇಟ್ರಿಯಾಟಿಸಂ ತೋರಿಸೋ ಈ ಸ್ಟಾರ್‌ಗಳು ನಿಜ ಜೀವನದಲ್ಲಿ ಸ್ವಾರ್ಥಿಗಳಾಗಿಬಿಟ್ರಾ..? ರೀಲ್‌ನಲ್ಲಷ್ಟೇ ಹೀರೋಗಳಾ.. ರಿಯಾಲಿಟಿಯಲ್ಲಿ ಝೀರೋಗಳಾದ್ರಾ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಈ ದೇಶದ ಉಪ್ಪು ತಿಂದು ಬದುಕ್ತಿರೋ ಖಾನ್‌ಗಳು ದೇಶದ ಬಗ್ಗೆ ಹೆಮ್ಮೆ ಪಡಬೇಕು. ಪ್ರೀತಿ, ಗೌರವ ತೋರಬೇಕು. ಭದ್ರತೆ ವಿಚಾರದಲ್ಲಿ ಸರ್ಕಾರದ ನಿಲುವುಗಳನ್ನು ಪಾಲಿಸಬೇಕು. ಇಂತಹ ಸಂದರ್ಭಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸದ ಇವರುಗಳು ಸಾವಿರ ಸಿನಿಮಾ ಮಾಡಿ ಹೀರೋಯಿಸಂ ತೋರಿಸಿದ್ರೂ ಅದು ವೇಸ್ಟ್. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸಮಯ ಬಂದಾಗ ತಕ್ಕ ಪಾಠ ಕಲಿಸಿಯೇ ಕಲಿಸ್ತಾರೆ. ಜನಕ್ಕೆ ಖಾನ್‌ಗಳ ಮೇಲಿನ ಅಭಿಪ್ರಾಯ ಬದಲಾಗೋಕೆ ಮೊದಲೇ ಖಾನ್‌ಗಳು ಬದಲಾದ್ರೆ ಹೀರೋಸ್ ಅನಿಸಿಕೊಳ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ಭಾರತೀಯರು ಅನಿಸಿಕೊಳ್ತಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್