ಸೌತ್ ಸಿನಿದುನಿಯಾದ ಮೂರು ಇಂಡಸ್ಟ್ರಿ ಮಂದಿ ಒಟ್ಟುಗೂಡಿ ಮಾಡ್ತಿರೋ ಸಿನಿಮಾ ಸ್ಲಂ ಡಾಗ್ 33 ಟೆಂಪಲ್ ರೋಡ್. ಈ ಚಿತ್ರದ ಮತ್ತೊಂದು ಟೀಸರ್ ಹೊರಬಿದ್ದಿದ್ದು, ಸಿನಿಮಾದ ಅಸಲಿ ಕಥೆ ಏನು ಅನ್ನೋದ್ರ ಹಿಂಟ್ ನೀಡಿದೆ.
ಅನ್ನ ಕೊಡೋ ಕೈ.. ಕೈಯೊಡ್ಡಬಾರದು.. ಸ್ಲಂ ಡಾಗ್ ಕಥೆ ರಿವೀಲ್
ಸೇತುಪತಿ-ದುನಿಯಾ ವಿಜಯ್‌ಗೆ ಪೂರಿ ಜಗನ್ನಾಥ್ ಡೈರೆಕ್ಷನ್..!
ತಾಯಿಯ ಎಮೋಷನ್.. ಮಗನ ಆ್ಯಕ್ಷನ್.. ಸ್ಲಂ ಡಾಗ್ ವರ್ಲ್ಡ್
ಝರೀನಾ ವಹಾಬ್ ರೋಲ್‌ನಿಂದ ಅಸಲಿ ಮ್ಯಾಟರ್ ಬಯಲು
ರಾ & ರಗಡ್ ಸಿನಿಮಾಗಳ ಮೂಲಕ ಮಾಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿದ್ದ ಸೆನ್ಸೇಷನಲ್ ಕಲ್ಟ್ ಡೈರೆಕ್ಟರ್ ಪೂರಿ ಜಗನ್ನಾಥ್ ಈಸ್ ಬ್ಯಾಕ್. ಹೌದು.. ಲೈಗರ್ ಬಳಿಕ ಸ್ಲಂ ಡಾಗ್ ಅನ್ನೋ ಎಮೋಷನಲ್ ಕಮ್ ಆ್ಯಕ್ಷನ್ ವೆಂಚರ್‌ಗೆ ಕೈ ಹಾಕಿದ್ದ ಪೂರಿ, ಇದೀಗ ಆ ಪ್ರಾಡಕ್ಟ್‌ನ ಒಂದೊಂದೇ ಕ್ಯಾರೆಕ್ಟರ್‌ಗಳನ್ನ ರಿವೀಲ್ ಮಾಡ್ತಾ ಹೋಗ್ತಿದ್ದಾರೆ. ಸದ್ಯ ಬಿಡುಗಡೆ ಆಗಿರೋ ಝರೀನಾ ವಹಾಬ್ ಪಾತ್ರದ ದೃಶ್ಯಗುಚ್ಚ ಸಿನಿಮಾದ ಅಸಲಿ ಕಥೆಯ ಜಿಸ್ಟ್ ಬಿಟ್ಟುಕೊಟ್ಟಿದೆ.
ಜುಬೇದಾ ಪಾತ್ರಕ್ಕೆ ಹಿರಿಯ ನಟಿ ಝರೀನಾ ವಹಾಬ್ ಜೀವ ತುಂಬಿದ್ದು, ಇದು ತಾಯಿ-ಮಗನ ಬಾಂಡಿಂಗ್‌ಗೆ ಸಾಕ್ಷಿ ಆಗಿದೆ. ಅಲ್ಲದೆ.. ಇಲ್ಲಿ ತಾಯಿಯ ಎಮೋಷನ್ ಹಾಗೂ ಮಗನ ಆ್ಯಕ್ಷನ್ ಕೂಡಿರೋ ಸ್ಲಂ ಡಾಗ್ ಪರಪಂಚ ಅನ್ನೋದ್ರ ಹಿಂಟ್ ಕೂಡ ಸಿಕ್ಕಿದೆ. ಪೂರಿ ಜಗನ್ನಾಥ್ ಈ ಸಿನಿಮಾಗಾಗಿ ತಮಿಳಿನ ವಿಜಯ್ ಸೇತುಪತಿಯನ್ನ ಹೀರೋ ಆಗಿ ಕರೆತಂದಿದ್ರೆ, ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್‌ರನ್ನ ಖಡಕ್ ವಿಲನ್ ಆಗಿಸಿದ್ದಾರೆ.
ಪೂರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಪವರ್‌ಫುಲ್ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಖ್ಯಾತ ನಟಿ ಟಬು ಕ್ಯಾರೆಕ್ಟರ್ ಟೀಸರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಇನ್ ಫ್ಯಾಕ್ಟ್ ಅದಕ್ಕೆ ಭರ್ಜರಿ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಆಕೆ ಎಷ್ಟು ಡೇರಿಂಗ್ & ಡ್ಯಾಶಿಂಗ್ ಸೂಪರ್ ಕಾಪ್ ಅನ್ನೋದಕ್ಕೆ ಆ ಟೀಸರ್ ಝಲಕ್ ನಿದರ್ಶನವಾಗಿತ್ತು.
ತಾಯಿಯ ಪಾತ್ರಕ್ಕೆ ಹಿರಿಯ ನಟಿ ಝರೀನಾ ವಹಾಬ್ ಜೀವ ತುಂಬಿದ್ದು, ಬಿಡುಗಡೆಯಾಗಿರುವ ಗ್ಲಿಂಪ್ಸ್ ಅತ್ಯಂತ ಭಾವನಾತ್ಮಕವಾಗಿ ಮೂಡಿಬಂದಿದೆ. ರೈಲ್ವೆ ನಿಲ್ದಾಣದಲ್ಲಿ ಬದುಕು ಕೊನೆಗೊಳಿಸಲು ನಿರ್ಧರಿಸಿದ ಸಂದರ್ಭದಲ್ಲಿ ಅತಿಯಾದ ಹಸಿವು ತಾಳಲಾರದೆ ಅನಿವಾರ್ಯವಾಗಿ ಭಿಕ್ಷೆ ಬೇಡಬೇಕಾಗಿ ಬಂದ ಘಟನೆಯನ್ನು ‘ಜುಬೇದಾ’ ನೆನಪಿಸಿಕೊಳ್ಳುವ ಈ ಸನ್ನಿವೇಶ ಪ್ರೇಕ್ಷಕರ ಕಣ್ಣಂಚಲ್ಲಿ ನೀರು ತರಿಸುವಂತಿದೆ. ಬದುಕಿಗಾಗಿ ಹೋರಾಟ, ಸ್ವಾಭಿಮಾನ ಹಾಗೂ ತಾಯಿಯೊಬ್ಬಳ ನೋವಿನ ಜರ್ನಿ ತೆರೆದಿಟ್ಟಿರೋ ಈ ದೃಶ್ಯವು ಭಿಕ್ಷುಕರ ಬದುಕಿನ ಕಟು ವಾಸ್ತವವನ್ನ ಕಟ್ಟಿಕೊಡೋದ್ರ ಜೊತೆಗೆ ಚಿತ್ರದ ಕಥೆಯ ಮೂಲ ಭಾವನೆಯನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸಿದೆ.
ಝರೀನಾ ವಹಾಬ್ ಅವರ ಪ್ರಬುದ್ಧ ನಟನೆ ಇಡೀ ಸನ್ನಿವೇಶಕ್ಕೆ ಅಪಾರ ತೂಕ ತಂದುಕೊಟ್ಟಿದ್ದು, ಚಿತ್ರಕಥೆಗೆ ಭಾವನಾತ್ಮಕ ಬೆಂಬಲ ನೀಡಿದೆ. ಈ ಗ್ಲಿಂಪ್ಸ್‌ನಲ್ಲಿ ವಿಜಯ್ ಸೇತುಪತಿ ಸೇರಿದಂತೆ ಇತರ ಪ್ರಮುಖ ಪಾತ್ರಗಳು ಕೂಡ ಗಮನಸೆಳೆಯುತ್ತವೆ. ಚಿತ್ರದಲ್ಲಿ ಸಂಯುಕ್ತಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸ್ಯಾಂಡಲ್‌ವುಡ್‌ನ ದುನಿಯಾ ವಿಜಯ್, ಬ್ರಹ್ಮಾಜಿ ಹಾಗೂ ವಿಟಿವಿ ಗಣೇಶ್ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ಟೆಕ್ನಿಕಲಿ ಸಖತ್ ರಿಚ್ ಆಗಿ ಮೂಡಿಬರ್ತಿರೋ ಈ ಸ್ಲಂ ಡಾಗ್ 33 ಟೆಂಪಲ್ ರನ್ ಚಿತ್ರಕ್ಕೆ ಸ್ಯಾಮ್ ಕೆ. ನಾಯ್ಡು ಕ್ಯಾಮೆರಾ ವರ್ಕ್, ಹರ್ಷವರ್ಧನ್ ರಾಮೇಶ್ವರ್ ಸಂಗೀತ ಮತ್ತು ಸಂತೋಷ್ ನೂಜಿಲ್ಲಾ ಸಂಕಲನವಿದೆ. ಅನಿಲ್ ಪಡೂರಿ VFX ಜವಾಬ್ದಾರಿ ಹೊತ್ತಿದ್ದು, ಔಟ್ & ಔಟ್ ಆ್ಯಕ್ಷನ್ ಡ್ರಾಮಾ ಆಗಿ ಹೊರಹೊಮ್ಮುತ್ತಿರೋ ಈ ಸ್ಲಂ ಡಾಗ್ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಚಿತ್ರವಾಗಿ ಥಿಯೇಟರ್‌ಗೆ ಲಗ್ಗೆ ಇಡಲಿದೆ.





