ವಾಮನ.. ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಇಷ್ಟೊತ್ತಿಗಾಗ್ಲೇ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ ಅದ್ಯಾಕೋ ಚಿತ್ರದ ನಿರ್ಮಾಪಕರು ಹಾಗೂ ನಾಯಕನಟ ನಡುವಿನ ಮನಸ್ತಾಪಗಳಿಂದಾಗಿ ರಿಲೀಸ್ ಆಗದೆ ಹಾಗೆಯೇ ಡಬ್ಬಿಯಲ್ಲಿ ಉಳಿದಿತ್ತು. ಆದ್ರೀಗ ಅವರಿಬ್ಬರ ನಡುವಿನ ಮುನಿಸಿಗೆ ಬ್ರೇಕ್ ಬಿದ್ದಿದ್ದು, ತೆರೆಗಪ್ಪಳಿಸೋಕೆ ಸಜ್ಜಾಗಿದೆ ವಾಮನ. ಇದೇ ಏಪ್ರಿಲ್ 10ಕ್ಕೆ ಚಿತ್ರದ ರಿಲೀಸ್ ಡೇಟ್ ಫೈನಲ್ ಆಗಿದೆ. ಅದನ್ನ ಸ್ವತಃ ಚಿತ್ರದ ನಾಯಕನಟನೇ ತಮ್ಮ ಸೋಶೀಯಲ್ ಮೀಡಿಯಾದಲ್ಲಿ ಅಧಿಕೃತಗೊಳಿಸಿದ್ದಾರೆ.
ಸ್ಯಾಂಡಲ್ ವುಡ್ ನ ಶೋಕ್ದಾರ್ ಧನ್ವೀರ್ ಗೌಡ ನಟನೆಯ ನಾಲ್ಕನೇ ಸಿನಿಮಾ ವಾಮನ ಕೊನೆಗೂ ಪ್ರೇಕ್ಷಕರನ್ನ ರಂಜಿಸೋಕೆ ಸಜ್ಜಾಗಿದೆ. ಮುದ್ದು ರಾಕ್ಷಸಿ ಸಾಂಗ್ ಹಾಗೂ ಟೀಸರ್ ಸ್ಯಾಂಪಲ್ಸ್ ನಿಂದ ಭರವಸೆ ಮೂಡಿಸಿದ್ದ ಧನ್ವೀರ್ ಗೌಡ- ರೀಷ್ಮಾ ನಾಣಯ್ಯ ನಟನೆಯ, ಶಂಕರ್ ನಿರ್ದೇಶನದ ಈ ಸಿನಿಮಾ ಇದೀಗ ತೆರೆಗೆ ಬರ್ತಿರೋದು ಖುಷಿಯ ವಿಚಾರ. ನಿರ್ಮಾಪಕ ಚೇತನ್ ಗೌಡ ಅವರು ಬಹಳ ಇಷ್ಟಪಟ್ಟು ಈ ಸಿನಿಮಾ ಮಾಡಿದ್ರು. ಧನ್ವೀರ್ ಗೌಡ ಕೂಡ ಈ ಚಿತ್ರಕ್ಕಾಗಿ ಸಿಕ್ಕಾಪಟ್ಟೆ ಎಫರ್ಟ್ ಹಾಕಿದ್ರು. ಅವರ ಸಿನಿಮಾ ಪ್ಯಾಷನ್ ಪ್ರತಿ ಫ್ರೇಮ್ ನಲ್ಲೂ ಎದ್ದು ಕಾಣ್ತಿತ್ತು. ಆ ಎಫರ್ಟ್ ಅಕ್ಷರಶಃ ಈಗ ಬೆಳ್ಳಿಪರದೆ ಬೆಳಗಲಿದೆ.
ಅಂದಹಾಗೆ ಧನ್ವೀರ್ ಗೌಡ ಈಗ ಮೋಸ್ಟ್ ಟ್ರೆಂಡಿಂಗ್ ನಟ. ಅದಕ್ಕೆ ಕಾರಣ ನಟ ದರ್ಶನ್. ಹೌದು.. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ರು. ನಂತ್ರ ಬೇಲ್ ಮೇಲೆ ಹೊರಬಂದಿದ್ದಾರೆ. ಆದ್ರೆ ಅಂದಿನಿಂದ ಇಂದಿನವರೆಗೂ ಸದಾ ದರ್ಶನ್ ಕುಟುಂಬದ ಜೊತೆ ಹಾಗೂ ದರ್ಶನ್ ಜೊತೆ ಶ್ರೀರಾಮನ ಜೊತೆ ಹನುಮ ನಿಂತಂತೆ ನಿಂತ ಏಕೈಕ ವ್ಯಕ್ತಿ ಈ ಧನ್ವೀರ್ ಗೌಡ. ಅವರು ದರ್ಶನ್ ರನ್ನ ಇಷ್ಟ ಪಡುವ ರೀತಿ ನಿಜಕ್ಕೂ ಅದ್ಭುತ. ಅದನ್ನ ಪದಗಳಲ್ಲಿ ಬಣ್ಣಿಸಲಾಗದ್ದು. ಸ್ವಂತ ಸಹೋದರನಂತೆ ಧನ್ವೀರ್ ನಟ ದರ್ಶನ್ ಪರ ನಿಂತಿದ್ದು ನಿಜಕ್ಕೂ ದರ್ಶನ್ ಫ್ಯಾನ್ಸ್ ಗೆ ಖುಷಿ ಇದೆ. ಹಾಗಾಗಿ ವಅಮನ ಸಿನಿಮಾನ ದರ್ಶನ್ ಚಿತ್ರಗಳ ರೀತಿಯೇ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡೋ ಮುಖೇನ ರಿಲೀಸ್ ಮಾಡಲಿದ್ದಾರೆ ಡಿಬಾಸ್ ದರ್ಶನ್ ಫ್ಯಾನ್ಸ್ ಎನ್ನಲಾಗ್ತಿದೆ.