ಬಾಲಿವುಡ್ ಬ್ಯೂಟಿ ಊರ್ವಶಿ ರೌಟೆಲಾ ಮೇಲೆ ಟೈಟಾನಿಕ್ ಹೀರೋ ಕಣ್ಣು ಬಿದ್ದಿದೆ. ಯೆಸ್.. ಲಿಯೋನಾರ್ಡೋ ಡಿಕ್ಯಾಪ್ರಿಯೋ ಈ ಚೆಂದುಳ್ಳಿ ಚೆಲುವೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕ್ವೀನ್ ಆಫ್ ಕಾನ್ಸ್ ಅಂತಲೂ ಹಾಡಿ ಹೊಗಳಿದ್ದಾರೆ.
ಬಾಲಿವುಡ್ ಜೊತೆಗೆ ತೆಲುಗು, ತಮಿಳು, ಬೆಂಗಾಳಿಯಲ್ಲೂ ತನ್ನ ಬೆಡಗು ಬಿನ್ನಾಣಗಳನ್ನ ತೋರಿಸಿರೋ ಊರ್ವಶಿ ರೌಟೆಲಾ, ಮಅಡೆಲ್ ಕಮ್ ನಟಿಮಣಿ. ಕಳೆದ ಒಂದು ದಶಕದಲ್ಲಿ ಈಕೆ ಭಾರತೀಯ ಚಿತ್ರರಂಗದ ಮೋಸ್ಟ್ ಡಿಮ್ಯಾಂಡಿಂಗ್ ಐಟಂ ಡ್ಯಾನ್ಸರ್ ಆಗಿ ಬೆಳೆದಿದ್ದಾರೆ. ಸಾಲು ಸಾಲು ಆಲ್ಬಮ್ ಸಾಂಗ್ಸ್ ಕೂಡ ಮಾಡಿದ್ದಾರೆ. ಈಕೆಯ ವೈಯ್ಯಾರಕ್ಕೆ ಮರುಳಾಗದವರೇ ಇಲ್ಲ. ಅದರಲ್ಲೂ ಪಡ್ಡೆ ಹುಡುಗರ ಹಾರ್ಟ್ ಫೇವರಿಟ್ ಊರ್ವಶಿ.
ಅಂದಹಾಗೆ ಈಕೆ ಬರೀ ಬಾಲಿವುಡ್ ಹಾಗೂ ಸೌತ್ ಇಂಡಸ್ಟ್ರಿಯ ಬೇರೆ ಬೇರೆ ಚಿತ್ರರಂಗಗಳಿಗೆ ಮಾತ್ರ ಸೀಮಿತ ಆಗಿಲ್ಲ. ನಡುವೆ ನಮ್ಮ ಸ್ಯಾಂಡಲ್‌ವುಡ್‌ಗೂ ಚಿರಪರಿಚಿತಳು. ಡಿಬಾಸ್ ದರ್ಶನ್ ನಟನೆಯ ಐರಾವತ ಚಿತ್ರದ ನಾಯಕನಟಿ ಇದೇ ಊರ್ವಶಿ ರೌಟೆಲಾ. 2013ರಲ್ಲಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಊರ್ವಶಿಯನ್ನ ಕನ್ನಡಕ್ಕೆ ಕರೆತಂದಿದ್ರು ಡೈರೆಕ್ಟರ್ ಎ. ಪಿ. ಅರ್ಜುನ್.
ಮೊನ್ನೆಯಷ್ಟೇ ಬಾಲಯ್ಯ ಜೊತೆ ಢಾಕು ಮಹಾರಾಜ್ ಚಿತ್ರದಲ್ಲಿ ಐಟಂ ಹಾಡೊಂದಕ್ಕೆ ಸ್ಟೆಪ್ ಹಾಕಿ ಹೋಗಿದ್ದ ಊರ್ವಶಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದ್ರು. ಇದೀಗ ಇತ್ತೀಚೆಗೆ ಮೇ 13ರಿಂದ 24ರವರೆಗೆ ಫ್ರಾನ್ಸ್‌ನಲ್ಲಿ ನಡೆದ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್‌ನಲ್ಲಿ ಊರ್ವಶಿ ರೌಟೆಲಾ ಹೆಜ್ಜೆ ಹಾಕಿದ್ರು. ತಮ್ಮ ಸೌಂದರ್ಯವನ್ನು ವಿಶ್ವ ಸಿನಿ ದಿಗ್ಗಜರ ಮುಂದೆ ತೆರೆದಿಟ್ಟಿದ್ದರು. ಆಕೆಯ ಕಾಸ್ಟ್ಯೂಮ್, ಅಂದ, ಚೆಂದ, ಹಾವ, ಭಾವ, ನೋಟ, ಮಾಟಕ್ಕೆ ಇಂಡಿಯನ್ ಮಂದಿ ಅಲ್ಲ, ಹಾಲಿವುಡ್‌ನ ವರ್ಲ್ಡ್ ಫೇಮಸ್ ಆ್ಯಕ್ಟರ್ ಫಿದಾ ಆಗಿದ್ದಾರೆ.
ಐತಿಹಾಸಿಕ ಟೈಟಾನಿಕ್ ಸಿನಿಮಾ ಖ್ಯಾತಿಯ ಹಾಲಿವುಡ್ ಸೂಪರ್ ಸ್ಟಾರ್ ಲಿಯೋನಾರ್ಡೋ ಡಿಕ್ಯಾಪ್ರಿಯೋ ನಮ್ಮ ಭಾರತೀಯ ಚೆಲುವೆ ಊರ್ವಶಿ ಚೆಲುವಿಗೆ ಬೋಲ್ಡ್ ಆಗಿದ್ದಾರೆ. ಆಕೆಯೊಂದಿಗೆ ಕ್ಯಾಮೆರಾಗೆ ಪೋಸ್ ಕೂಡ ನೀಡಿರೋ ಡಿಕ್ಯಾಪ್ರಿಯೋ, ಊರ್ವಶಿಯನ್ನ ಕ್ವೀನ್ ಆಫ್ ಕಾನ್ಸ್ ಅಂತ ಕರೆದರಂತೆ. ಅದನ್ನ ಸ್ವತಃ ಊರ್ವಶಿ ರೌಟೆಲಾ ಅವರೇ ಮಾಧ್ಯಮಗಳ ಮುಂದೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇದು ನಿಜಕ್ಕೂ ಖುಷಿಯ ವಿಚಾರವೇ ಸರಿ. ಒಬ್ಬ ವರ್ಲ್ಡ್ ಫೇಮಸ್ ಆ್ಯಕ್ಟರ್ ನಮ್ಮ ಭಾರತೀಯ ಚೆಲುವೆಯನ್ನ ಇಷ್ಟರ ಮಟ್ಟಿಗೆ ಹೊಗಳಿರೋದು ಇಂಟರೆಸ್ಟಿಂಗ್. ಆಕೆಯ ಬ್ಯೂಟಿಯೇ ಆತನನ್ನ ಇಂಪ್ರೆಸ್ ಮಾಡಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ. ನಮ್ಮ ಐರಾವತ ಕ್ವೀನ್ ಹೀಗೆ ಒಳ್ಳೆಯ ಪ್ರಶಂಸೆ ಪಡೆದುಕೊಂಡಿರೋದು ಸದ್ಯ ಇಂಟರ್ ನ್ಯಾಷನಲ್ ನ್ಯೂಸ್ ಆಗಿದ್ದು, ಡಿಕ್ಯಾಪ್ರಿಯೋ ಕೊಂಡಾಡಿದ ಚೆಲುವೆ ಯಾರು ಅಂತ ವಿದೇಶಿಗರು ಕೂಡ ಗೂಗಲ್‌ನಲ್ಲಿ ಸರ್ಚ್ ಮಾಡ್ತಿದ್ದಾರಂತೆ.