ಮಾನ್‌ಸ್ಟರ್ ಯಶ್ ಟಾಕ್ಸಿಕ್‌ಗೆ ಬರೀ ಧುರಂಧರ್ ಸೀಕ್ವೆಲ್ ಅಷ್ಟೇ ಸಮಸ್ಯೆ ಆಗ್ತಿಲ್ಲ. ಟಾಲಿವುಡ್‌ನ ಉಸ್ತಾದ್ ಕೂಡ ಸವಾಲ್ ಹಾಕ್ತಿದ್ದಾನೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಕಟ್ಟ ಕಡೆಯ ಸಿನಿಮಾ ನಮ್ಮ ರಾಕಿಂಗ್ ಸ್ಟಾರ್ ಚಿತ್ರದ ಬಾಕ್ಸ್ ಆಫೀಸ್‌ಗೆ ಮಾರಕ ಆಗುವ ಸೂಚನೆ ಸಿಕ್ಕಿದೆ. ಇದರೊಟ್ಟಿಗೆ ಉಸ್ತಾದ್ ಜೊತೆ ರಾಮ್ ಚರಣ್ ಪೆದ್ದಿ ರಿಲೀಸ್ ಡೇಟ್ ಲಾಕ್ ಆಗಿರೋ ಜನರ್ದಸ್ತ್ ಖಬರ್ ನಿಮಗಾಗಿ.
ಮಾರ್ಚ್ 19ಕ್ಕೆ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಬರೋದು ಕಾತರಿ ಆಗಿದೆ. ಇಡೀ ವರ್ಲ್ಡ್ ಸಿನಿದುನಿಯಾ ಆ ಚಿತ್ರಕ್ಕಾಗಿ ಕಾಯ್ತಿದೆ. ಟೀಸರ್ ಮಾಡಿರೋ ಮೋಡಿ, ಯಶ್ ಸ್ವ್ಯಾಗ್, ತಾರಾಗಣ, ಮೇಕಿಂಗ್ ಎಲ್ಲವೂ ಹಾಲಿವುಡ್ ಫ್ಲೇವರ್ ಅನಿಸ್ತಿದೆ. ಇಂತಹ ಸಿನಿಮಾದ ಎದುರು ರಣ್‌ವೀರ್ ಸಿಂಗ್ ಧುರಂಧರ್-2 ಕೂಡ ಬರ್ತಿದೆ. ಅದೇನೇ ಬಿಗ್ ಬಾಕ್ಸ್ ಆಫೀಸ್ ಕ್ಲ್ಯಾಶ್‌ಗೆ ನಾಂದಿ ಹಾಡಿದೆ. ಸಾಲದು ಅಂತ ಇದೀಗ ಟಾಲಿವುಡ್‌ನ ಮತ್ತೊಂದು ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ಗೆ ಸವಾಲ್ ಹಾಕ್ತಿದೆ. ಅದೇ ಉಸ್ತಾದ್ ಭಗತ್ ಸಿಂಗ್.

ಟಾಕ್ಸಿಕ್‌ಗೆ ಉಸ್ತಾದ್ ಸವಾಲ್.. ಯಶ್ ಬೆನ್ನಲ್ಲೇ PK ಎಂಟ್ರಿ
ಇದು ಪವರ್ ಸ್ಟಾರ್ ಪವನ್ ಕಲ್ಯಾಣ್ ಕೊನೆಯ ಸಿನಿಮಾ

ಪವರ್ ಸ್ಟಾರ್ ಪವನ್ ಕಲ್ಯಾಣ್ ಒನ್ಸ್ ಅಗೈನ್ ಪೊಲೀಸ್ ಕಾಪ್ ಆಗಿ ಮಿಂಚಲಿರೋ ಉಸ್ತಾದ್ ಚಿತ್ರ ಈಗಾಗ್ಲೇ ಟೀಸರ್, ಸಾಂಗ್ಸ್ ಹಾಗೂ ಮೇಕಿಂಗ್‌ನಿಂದ ಕ್ರೇಜ್ ಹುಟ್ಟಿಸಿದೆ. ಮಿಗಿಲಾಗಿ ಆಂಧ್ರ ಡಿಸಿಎಂ ಪವನ್ ಕಟ್ಟ ಕಡೆಯ ಸಿನಿಮಾ ಕೂಡ ಹೌದು. ಈ ಹಿಂದಿನ ಅವ್ರ ಓಜಿ ಮಾಡಿದ ಮೋಡಿಗೆ ಸದ್ಯ ಕ್ರೇಜ್ ದುಪ್ಪಟ್ಟಾಗಿದೆ. ನಮ್ಮ ಕನ್ನಡತಿ ಶ್ರೀಲೀಲಾ ನಾಯಕಿಯಾಗಿದ್ದು, ಟಾಕ್ಸಿಕ್ ಮಾರ್ಚ್ 19ಕ್ಕೆ ತೆರೆಕಂಡ್ರೆ ಅದಾದ ಒಂದೇ ವಾರಕ್ಕೆ ಅಂದ್ರೆ ಮಾರ್ಚ್ 26ಕ್ಕೆ ಉಸ್ತಾದ್ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ.

ರಾಮ್ ಚರಣ್ ಫ್ಯಾನ್ಸ್‌ಗೂ ಸಿಕ್ತು ಬಿಗ್ ಬ್ರೇಕಿಂಗ್ ನ್ಯೂಸ್
ಏಪ್ರಿಲ್ 30ಕ್ಕೆ ಮೊಸ್ಟ್ ಎಕ್ಸ್‌ಪೆಕ್ಟೆಡ್ ಪೆದ್ದಿ ಗ್ರ್ಯಾಂಡ್ ರಿಲೀಸ್
ಅವಳಿ ಮಕ್ಕಳ ತಂದೆಯಾಗೋ ಮೂಲಕ ಆಲ್‌ರೆಡಿ ಸೆಲೆಬ್ರೇಷನ್ ಮೂಡ್‌ನಲ್ಲಿದ್ದ ರಾಮ್ ಚರಣ್ ತೇಜಾ, ಇದೀಗ ಫ್ಯಾನ್ಸ್‌ಗೆ ತಮ್ಮ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪೆದ್ದಿ ಚಿತ್ರದ ರಿಲೀಸ್ ಡೇಟ್ ರಿವೀಲ್ ಮಾಡಿದ್ದಾರೆ. ಇದೇ ಏಪ್ರಿಲ್ 30ಕ್ಕೆ ಸಿನಿಮಾ ವರ್ಲ್ಡ್‌ವೈಡ್ ತೆರೆಗಪ್ಪಳಿಸುತ್ತಿದ್ದು, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಮತ್ತೊಮ್ಮೆ ಟಾಲಿವುಡ್‌ನಲ್ಲಿ ಕಮಾಲ್ ಮಾಡ್ತಿದ್ದಾರೆ. ಅಂದಹಾಗೆ ಬುಚ್ಚಿಬಾಬು ನಿರ್ದೇಶನದ ಈ ಸಿನಿಮಾದ ಟೀಸರ್ ಹಾಗೂ ಚಿಕಿರಿ ಸಾಂಗ್ ಸಂಚಲನ ಮೂಡಿಸಿದೆ.
ರಂಗಸ್ಥಳಂ ನಂತ್ರ ಮತ್ತೆ ಅಂಥದ್ದೇ ರಗಡ್ ರೋಲ್‌ಗೆ ಚರಣ್ ಬಣ್ಣ ಹಚ್ಚಿದ್ದು, ಗ್ಲಾಮರ್ ಹೆಚ್ಚಿಸಲಿದ್ದಾರೆ ಬಿಟೌನ್ ಬ್ಯೂಟಿ ಜಾಹ್ನವಿ ಕಪೂರ್. ಚಿಕಿರಿ ಸಾಂಗ್ ಅಂತೂ ಬರೋಬ್ಬರಿ 16 ಕೋಟಿ ವೀವ್ಸ್‌ನಿಂದ ಪರಭಾಷಿಗರು ಕೂಡ ನಿದ್ದೆ ಕೆಡಿಸಿಕೊಳ್ಳುವಂತಿದೆ. ಚರಣ್ ಸ್ಟೈಲ್ ಆಫ್ ಡ್ಯಾನ್ಸಿಂಗ್, ಆ ಕ್ರಿಕೆಟ್ ಬ್ಯಾಟ್ ಸ್ಟೆಪ್ ಮಜಾ ಕೊಡ್ತಿದೆ. ಉಸ್ತಾದ್ ಹಾಗೂ ಪೆದ್ದಿ ಎರಡೂ ಚಿತ್ರಗಳ ರಿಲೀಸ್ ಡೇಟ್ಸ್ ರಿವೀಲ್ ಆಗಿರೋದು ಪವನ್ ಹಾಗೂ ಚರಣ್ ಫ್ಯಾನ್ಸ್ ಜೊತೆ ಸೌತ್ ದುನಿಯಾದ ಚಿತ್ರಪ್ರೇಮಿಗಳ ನಾಡಿಮಿಡಿತ ಹೆಚ್ಚಿಸಿದಂತಾಗಿದೆ.





