ರಾಕಿಂಗ್ ರಾಮಾಯಣ ಟೈಟಲ್ ಟೀಸರ್ ಬೆನ್ನಲ್ಲೇ ರಾಕಿಭಾಯ್ ಯಶ್ ಅಡ್ಡಾದಿಂದ ಮತ್ತೊಂದು ಬಿಗ್ ಅಪ್ಡೇಟ್ ಸಿಕ್ಕಿದೆ. ಹೌದು, ಟಾಕ್ಸಿಕ್ ಚಿತ್ರಕ್ಕೆ ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ಫೈನಲ್ ಆಗಿದ್ದಾರೆ. ಇಲ್ಲಿಯವರೆಗೂ ಗೌಪ್ಯವಾಗಿದ್ದ ಟಾಕ್ಸಿಕ್ ಮ್ಯೂಸಿಕ್ ಮಾಸ್ಟರ್, ಇದೀಗ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಈ ಮೂಲಕ ಕನ್ನಡಕ್ಕೆ ಅವರ ಗ್ರ್ಯಾಂಡ್ ಎಂಟ್ರಿ ಕೂಡ ಆಗ್ತಿದೆ.
- ಟಾಕ್ಸಿಕ್‌ಗೆ ಸೆನ್ಸೇಷನಲ್ ಕಂಪೋಸರ್.. ಕನ್ನಡಕ್ಕೆ ಅನಿರುದ್ದ್
- ಈತ ಸೂಪರ್ ಸ್ಟಾರ್‌ಗಳ ಫೇವರಿಟ್ ಮ್ಯೂಸಿಕ್ ಡೈರೆಕ್ಟರ್!
- ಇತ್ತೀಚೆಗೆ ಬೆಂಗಳೂರಲ್ಲಿ ಲೈವ್ ಕಾನ್ಸರ್ಟ್.. KVN ಸಾಥ್..!
- ರಾಕಿಂಗ್ ಸ್ಟಾರ್ ಟೇಸ್ಟ್ ಸೂಪರ್.. ಬೇಕಿದೆ ನ್ಯೂ ಸ್ಟೈಲ್ ಬೀಟ್ಸ್
ಟಾಕ್ಸಿಕ್.. ರಾಕಿಂಗ್ ಸ್ಟಾರ್ ಯಶ್ ಕರಿಯರ್‌ನ ಮತ್ತೊಂದು ಮಹೋನ್ನತ ಸಿನಿಮಾ. ಕೆಜಿಎಫ್ ಬಳಿಕ ಯಶ್ ಪ್ರೇಕ್ಷಕರ ನಿರೀಕ್ಷೆಗೆ ತಕ್ಕನಾದ ಹೈ ವೋಲ್ಟೇಜ್ ಮಾಸ್ ಕಮರ್ಷಿಯಲ್ ಎಂಟರ್‌ಟೈನರ್ ಮಾಡೋಕೆ ಹೊರಟಿರೋ ಚಿತ್ರವಿದು. ಇದಕ್ಕೆ ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಲಯಾಳಂ ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಡೈರೆಕ್ಟರ್ ಗೀತು ಮೋಹನ್‌ದಾಸ್ ಕೂಡ ಸಾಥ್ ನೀಡಿದ್ದಾರೆ.
ದೊಡ್ಡದೊಂದು ಗನ್ ಹಿಡಿದು, ಬಾಯಲ್ಲಿ ಸಿಗಾರ್ ಜೊತೆ ಕೌಬಾಯ್ ಟೋಪಿಯೊಂದಿಗೆ ಯಶ್ ರಾಕಿಂಗ್ ಎಂಟ್ರಿ ಕೊಟ್ಟಂತಹ ಫಸ್ಟ್ ಲುಕ್ ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ಇನ್ನು ಟಾಕ್ಸಿಕ್ ಸಿನಿಮಾ ಗೋವಾ ಡ್ರಗ್ ಮಾಫಿಯಾ ಕುರಿತ ಹೊಸತೊಂದು ಜಗತ್ತನ್ನ ಪರಿಚಯಿಸಲಿದೆ ಎನ್ನಲಾಗಿತ್ತು. ರಾಕಿಭಾಯ್ ಬರ್ತ್ ಡೇಗೆ ರಿವೀಲ್ ಆದ ಟೀಸರ್‌ನಿಂದ ಸಿನಿಮಾದ ಸ್ಟ್ರೆಂಥ್ ಎಲ್ಲರಿಗೂ ಗೊತ್ತಾಯ್ತು.
ಯಶ್ ಬರ್ತ್ ಡೇ ಪೀಕ್ ಟೀಸರ್ ಬಿಡುಗಡೆ ಆದ್ರೂ ಸಹ, ಅಲ್ಲಿ ಯಶ್, ಡೈರೆಕ್ಟರ್ ಹಾಗೂ ನಿರ್ಮಾಣ ಸಂಸ್ಥೆ ಹೆಸರು ಬಿಟ್ರೆ ಬೇರೆ ಯಾವುದೇ ಟೆಕ್ನಿಷಿಯನ್ಸ್ ಹೆಸರುಗಳು ರಿವೀಲ್ ಆಗಿರಲಿಲ್ಲ. ಇಷ್ಟಕ್ಕೂ ಟಾಕ್ಸಿಕ್ ಸಿನಿಮಾಗೆ ಯಾರು ಸಿನಿಮಾಟೋಗ್ರಾಫರ್, ಯಾರು ಮ್ಯೂಸಿಕ್ ಡೈರೆಕ್ಟರ್ ಅನ್ನೋದೇ ಸಸ್ಪೆನ್ಸ್. ಆದ್ರೀಗ ಟಾಕ್ಸಿಕ್ ಗೆ ಮ್ಯೂಸಿಕ್ ಕಂಪೋಸ್ ಮಾಡ್ತಿರೋ ಸೆನ್ಸೇಷನಲ್ ಕಂಪೋಸರ್ ಹೆಸರನ್ನ ಎಕ್ಸ್‌ಕ್ಲೂಸಿವ್ ಆಗಿ ವಿವರಿಸಿದ್ದೀವಿ.
ಹೌದು, ಸದಾ ಹೊಸತನವನ್ನು ಬಯಸುವ ರಾಕಿಂಗ್ ಸ್ಟಾರ್ ಯಶ್, ಈ ಬಾರಿ ಕನ್ನಡಿಗರನ್ನ ಬಿಟ್ಟು, ಪರಭಾಷಾ ಕಂಪೋಸರ್ ಮೊರೆ ಹೋಗಿದ್ದಾರೆ. ಮೂಲಗಳ ಪ್ರಕಾರ ಪಕ್ಕದ ತಮಿಳು ಚಿತ್ರರಂಗದ ಮೋಸ್ಟ್ ಡಿಮ್ಯಾಂಡಿಂಗ್ ಹಾಗೂ ಸೆನ್ಸೇಷನಲ್ ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದರ್ ಟಾಕ್ಸಿಕ್‌ಗೆ ಟ್ಯೂನ್ಸ್ ಕಂಪೋಸ್ ಮಾಡ್ತಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಅಧಿಕೃತವಾಗಿ ಕಾಲಿಡ್ತಿದ್ದಾರೆ ಅನಿರುದ್ದ್.
ರಜನೀಕಾಂತ್, ಕಮಲ್ ಹಾಸನ್, ಧನುಷ್, ಶಾರೂಖ್ ಖಾನ್, ದಳಪತಿ ವಿಜಯ್, ತಲಾ ಅಜಿತ್ ಸೇರಿದಂತೆ ಆಲ್ಮೋಸ್ಟ್ ಎಲ್ಲಾ ಸೂಪರ್ ಸ್ಟಾರ್ಸ್‌ಗೂ ಅನಿರುದ್ದ್ ಫೇವರಿಟ್ ಕಂಪೋಸರ್. ಯಾಕಂದ್ರೆ ಡಿಫರೆಂಟ್ ಬೀಟ್ಸ್ ಕಂಪೋಸ್ ಮಾಡೋದ್ರ ಜೊತೆಗೆ ಸ್ಟಾರ್‌ಗಳ ಯುನಿಕ್ ಸ್ಟೈಲು, ಮ್ಯಾನರಿಸಂಗೆ ತಕ್ಕನಾಗಿ ಟ್ಯೂನ್ಸ್ ಕೊಡ್ತಾರೆ. ಹುಕ್ ಲೈನ್ ಸ್ಟೆಪ್ಸ್ ಗೆ ಬೇಕಾಗುವಂತಹ ಬೀಟ್ಸ್ ಕ್ರಿಯೇಟ್ ಮಾಡ್ತಾರೆ. ಅವು ಸಿಕ್ಕಾಪಟ್ಟೆ ಟ್ರೆಂಡ್ ಆಗೋದ್ರ ಜೊತೆಗೆ ಕೋಟ್ಯಂತರ ವೀವ್ಸ್‌ನಿಂದ ಎಲ್ಲರ ಕಣ್ಮನ ತಣಿಸುತ್ತವೆ.
ಹೀಗಾಗಿಯೇ ಯಶ್ ಈ ಬಾರಿ ತಮಿಳಿನ ಅನಿರುದ್ದ್‌ನ ಆರಿಸಿಕೊಂಡಿದ್ದಾರೆ. ಇನ್ನು ಇದಕ್ಕೆ ಪೂರಕವಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಲೈವ್ ಕಾನ್ಸರ್ಟ್ ಮಾಡಿದಂತಹ ಅನಿರುದ್ದ್‌ಗೆ ಕೆವಿಎನ್ ಪ್ರೊಡಕ್ಷನ್ಸ್‌ನ ಕೆ ವೆಂಕಟ್ ನಾರಾಯಣ್ ಅವರು ಕೂಡ ಸಾಥ್ ನೀಡಿದ್ರು. ಅಂದಹಾಗೆ ಯಶ್‌ಗೆ ಬಾಲಿವುಡ್‌ನ ಹಾಟ್ ಬ್ಯೂಟಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ಬಣ್ಣ ಹಚ್ಚಿದ್ದು, ನಯನತಾರಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿರಲಿದೆ ಎನ್ನಲಾಗ್ತಿದೆ.