ಸ್ಯಾಂಡಲ್‌ವುಡ್‌ನಿಂದ ಗ್ಲೋಬಲ್ ಮಟ್ಟಕ್ಕೆ ಸೌಂಡ್ ಮಾಡಿರೋ ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಸಿನಿಮಾದಿಂದ ಈಗ ಬ್ಯಾಕ್ ಟು ಬ್ಯಾಕ್ ಧಮಾಕಾ ಅಪ್‌ಡೇಟ್‌ಗಳು ಹೊರಬಿದ್ದಿವೆ. ಟಾಕ್ಸಿಕ್ ರನ್‌ಟೈಮ್ ವಿಷಯ ಕೇಳಿ ಫ್ಯಾನ್ಸ್ ಆಲ್ರೆಡಿ ಥ್ರಿಲ್ ಆಗಿದ್ರೆ, ಇತ್ತೀಚೆಗಷ್ಟೇ ರಿಲೀಸ್ ಆಗಿರೋ ‘Ladies & Ladies’ ಟೀಸರ್ ಅಂತೂ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ. ಹಾಗಾದ್ರೆ ಟಾಕ್ಸಿಕ್ ಲೇಟೆಸ್ಟ್ ಅಪ್ಡೇಟ್ ಏನು? ‘ಧುರಂಧರ್ 2’ ಚಿತ್ರಕ್ಕೆ ರಾಕಿ ಭಾಯ್ ಕೊಡ್ತಿರೋ ಟಕ್ಕರ್ ಎಂಥದ್ದು? ಇದರ ಫುಲ್ ಡಿಟೇಲ್ಸ್ ಇಲ್ಲಿದೆ…
- ಟಾಕ್ಸಿಕ್ ಹವಾ ಜೋರು ರನ್‌ಟೈಮ್‌ನಿಂದಲೇ ದಾಖಲೆ..!
- ಟಾಕ್ಸಿಕ್ ರನ್‌ಟೈಮ್ ರಿವೀಲ್.. 195 ನಿಮಿಷಗಳ ಮಾಸ್ ಸ್ಟಾರ್ಮ್
- 3 ಗಂಟೆ 15 ನಿಮಿಷ ಅಟ್ಯಾಕ್ ಧುರಂಧರ್2ಗೆ ಟಾಕ್ಸಿಕ್ ಟಕ್ಕರ್..?
- ಲೇಡೀಸ್ & ಲೇಡೀಸ್ ಎಫೆಕ್ಟ್..ಟಾಕ್ಸಿಕ್ ಟ್ರೆಂಡಿಂಗ್ ನಂ.1
ನಿರ್ದೇಶಕಿ ಗೀತು ಮೋಹನ್‌ದಾಸ್ ಕಲ್ಪನೆಯಲ್ಲಿ ಮೂಡಿಬರುತ್ತಿರುವ ‘ಟಾಕ್ಸಿಕ್’ ಸಿನಿಮಾ ಕೇವಲ ನಟನೆಯಷ್ಟೇ ಅಲ್ಲ, ತಾಂತ್ರಿಕವಾಗಿಯೂ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದೊಡ್ಡ ಇತಿಹಾಸ ಸೃಷ್ಟಿಸಲು ರೆಡಿಯಾಗುತ್ತಿದೆ. ಪ್ರೇಕ್ಷಕರನ್ನು ಚಿತ್ರಮಂದಿರದ ಸೀಟಿನ ತುದಿಗೆ ತಂದು ನಿಲ್ಲಿಸಲು ಚಿತ್ರತಂಡ ಅದ್ದೂರಿ ಸಿದ್ಧತೆ ಮಾಡಿಕೊಂಡಿದೆ. Sony CineAlta Venice 2 ನಂತಹ ಹೈ-ಎಂಡ್ ಇಂಟರ್ನ್ಯಾಷನಲ್ ಕ್ಯಾಮೆರಾಗಳು ಹಾಗೂ ಡಾಲ್ಬಿ ಅಟ್ಮಾಸ್ ಧ್ವನಿ ತಂತ್ರಜ್ಞಾನದ ಮೂಲಕ ಪ್ರೇಕ್ಷಕರಿಗೆ ಬೆರಗುಗೊಳಿಸುವ ಇಮ್ಮರ್ಸಿವ್ ಥಿಯೇಟ್ರಿಕಲ್ ಎಕ್ಸ್‌ಪೀರಿಯನ್ಸ್ ನೀಡಲು ಇಡೀ ಟೀಮ್ ಹಗಲಿರುಳು ಶ್ರಮಿಸುತ್ತಿದೆ. ಸಿನಿಮಾ ಎಷ್ಟು ಅದ್ಭುತವಾಗಿ ಮೂಡಿಬರುತ್ತಿದೆ ಎಂದರೆ, ಚಿತ್ರದ ಪ್ರತಿ ಫ್ರೇಮ್ ಕೂಡ ವಿಶ್ವಮಟ್ಟದಲ್ಲಿ ಹೊಸ ಸಂಚಲನ ಸೃಷ್ಟಿಸೋದು ಗ್ಯಾರಂಟಿ ಎನ್ನಲಾಗುತ್ತಿದೆ.
ಸದ್ಯ ಥ್ರಿಲ್ಲಿಂಗ್ ಮ್ಯಾಟರ್ ಏನಂದ್ರೆ ಟಾಕ್ಸಿಕ್ ಸಿನಿಮಾ ಬರೋಬ್ಬರಿ 195 ನಿಮಿಷಗಳ ಸುದೀರ್ಘ ರನ್‌ಟೈಮ್ ಹೊಂದಿರಲಿದೆ ಎಂಬ ಅಧಿಕೃತ ತಾಂತ್ರಿಕ ವಿವರಗಳು ಹೊರಬೀಳುತ್ತಿದ್ದಂತೆಯೇ ಇಂಟರ್ನೆಟ್‌ನಲ್ಲಿ ಲೈಕ್ಸ್‌ಗಳ ಸುನಾಮಿಯೇ ಎದ್ದಿದೆ. ‘ಕೆಜಿಎಫ್’ ಚಾಪ್ಟರ್ 2 ನಂತರ ಇಡೀ ವಿಶ್ವವೇ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಹೆಜ್ಜೆಗಾಗಿ ಕಾಯುತ್ತಿದ್ದು, ಈ ದೀರ್ಘಾವಧಿಯ ಮಾಸ್ ಎಂಟರ್‌ಟೈನರ್ ಸುದ್ದಿ ಅಭಿಮಾನಿಗಳಲ್ಲಿ ಹೈಪ್ ಅನ್ನು ಆಕಾಶ ಮುಟ್ಟುವಂತೆ ಮಾಡಿದೆ.
ಈ ಸಿನಿಮಾದ ಅಸಲಿ ಮಸಾಲೆ ಇರೋದೇ ಇತ್ತೀಚೆಗೆ ಯಶ್ ರಿಲೀಸ್ ಮಾಡಿದ “Ladies & Ladies” ಟೀಸರ್‌ನಲ್ಲಿ. ಚಿತ್ರದಲ್ಲಿ ಕೇವಲ ಯಶ್ ಅಷ್ಟೇ ಅಲ್ಲ, ಅವರ ಜೊತೆ ಫೈಟ್ ಮಾಡಲು ಮತ್ತು ಗ್ಲಾಮರ್ ಹರಿಸಲು ಲೇಡಿ ಸೂಪರ್‌ಸ್ಟಾರ್ ನಯನತಾರಾ, ಕಿಲ್ಲರ್ ಲುಕ್‌ನಲ್ಲಿ ಕಿಯಾರಾ ಅಡ್ವಾಣಿ ಹಾಗೂ ನಮ್ಮ ಕರಾವಳಿ ಬೆಡಗಿ ರುಕ್ಮಿಣಿ ವಸಂತ್ ಅಬ್ಬರಿಸಲಿದ್ದಾರೆ. ಇವರ ಜೊತೆಗೆ ಹುಮಾ ಖುರೇಷಿ ಖಳನಾಯಕಿಯಾಗಿ ಹಾಗೂ ತಾರಾ ಸುತಾರಿಯಾ ತಮ್ಮ ಹಾಟ್ ಅಂಡ್ ಬೋಲ್ಡ್ ಲುಕ್ ಮೂಲಕ ಸಖತ್ ಸ್ಪೈಸ್ ಆಡ್ ಮಾಡಿದ್ದಾರೆ. ಈ ಪವರ್‌ಫುಲ್ ನಟಿಯರ ಎಂಟ್ರಿ ಚಿತ್ರದ ಮೇಲಿನ ಹೈಪ್ ಅನ್ನು ಇನ್ನೊಂದು ಲೆವೆಲ್‌ಗೆ ತಗೆದುಕೊಂಡು ಹೋಗಿದೆ.
ಇನ್ನು ಚಿತ್ರದ ಅವಧಿಯ ವಿಷಯಕ್ಕೆ ಬಂದರೆ, ಇತ್ತೀಚೆಗೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ರಣವೀರ್ ಸಿಂಗ್ ಅವರ ‘ಧುರಂಧರ್ 2’ ಸಿನಿಮಾ ಬರೋಬ್ಬರಿ 3 ಗಂಟೆ 49 ನಿಮಿಷಗಳ ಬೃಹತ್ ರನ್‌ಟೈಮ್ ಹೊಂದಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸಿತ್ತು. ಆದರೆ, ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಕೇವಲ 3 ಗಂಟೆ 15 ನಿಮಿಷ ಅಚ್ಚುಕಟ್ಟಾದ ರನ್‌ಟೈಮ್ ಹೊಂದುವ ಮೂಲಕ, ‘ಧುರಂಧರ್ 2’ಗಿಂತ ಹೆಚ್ಚು ಶಾರ್ಪ್, ಫಾಸ್ಟ್ ಮತ್ತು ಕ್ರಿಸ್ಪ್ ಆಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲಿದೆ. ಅತಿಯಾದ ಲ್ಯಾಗ್ ಇಲ್ಲದೆ, ಪ್ರತಿ ಸೆಕೆಂಡ್ ಕೂಡ ಸೀಟ್ ಎಡ್ಜ್ ಆಕ್ಷನ್ ನೀಡಲು ಚಿತ್ರತಂಡ ಈ ಪಕ್ಕಾ ರನ್‌ಟೈಮ್ ಫಿಕ್ಸ್ ಮಾಡಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ, ‘ಟಾಕ್ಸಿಕ್’ ಸಿನಿಮಾ ಕೇವಲ ಆಕ್ಷನ್ ಮಾತ್ರವಲ್ಲದೆ ಭರಪೂರ ಡ್ರಾಮಾ, ಸಸ್ಪೆನ್ಸ್ ಮತ್ತು ಸ್ಟೈಲಿಶ್ ಎಲಿಮೆಂಟ್ಸ್‌ಗಳನ್ನು ಒಳಗೊಂಡ ಕಂಪ್ಲೀಟ್ ಪ್ಯಾಕೇಜ್ ಆಗಿರಲಿದೆ. ಧುರಂಧರ್ 2 ಚಿತ್ರದ ಸುದೀರ್ಘ ಅವಧಿಗೆ ಸೆಡ್ಡು ಹೊಡೆದು, ಅಚ್ಚುಕಟ್ಟಾದ 195 ನಿಮಿಷಗಳಲ್ಲಿ ಥಿಯೇಟರ್‌ನಲ್ಲಿ ಧೂಳೆಬ್ಬಿಸಲು ರೆಡಿಯಾಗುತ್ತಿರುವ ಯಶ್, ಈ ಬಾರಿ ಗ್ಲೋಬಲ್ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸೋದು ಗ್ಯಾರಂಟಿ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್




