ಸಿಕ್ಕಾಪಟ್ಟೆ ಹೈಪ್‌ನಿಂದಾಗಿ ರಾಕಿಭಾಯ್ ಯಶ್‌ರ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದಲ್ಲಿ ಆಂತರಿಕ ಕಲಹಗಳು ಉಂಟಾಗಿವೆ ಎನ್ನಲಾಗ್ತಿದೆ. ಡೈರೆಕ್ಟರ್ ಗೀತು ಮೋಹನ್‌ದಾಸ್ ಹಾಗೂ ಯಶ್ ನಡುವೆ ಬಜೆಟ್ ವಾರ್ ನಡೀತಿದೆ. 60 ಪರ್ಸೆಂಟ್ ಮೂವಿಗೆ 600 ಕೋಟಿ ಖರ್ಚು ಮಾಡಿದ್ದು, ಕಿರಿಕ್‌ಗಳು ಶುರುವಾಗಿವೆ ಎನ್ನೋದು ಟಾಕ್. ಇಷ್ಟಕ್ಕೂ ಈ ಬಗ್ಗೆ ನಿರ್ಮಾಪಕರು ಏನು ಹೇಳ್ತಾರೆ..? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
- 60%ಗೆ 600ಕೋಟಿ.. ಬಜೆಟ್ ಕಿರಿಕ್..? ಇಲ್ಲಿದೆ ಟಾಕ್ಸಿಕ್ ಸತ್ಯ
- ಡೈರೆಕ್ಟರ್ ಗೀತು- ಯಶ್ ನಡುವೆ ನಡೀತಿದ್ಯಾ ಬಜೆಟ್ ವಾರ್..?
ಮೊನ್ನೆಯಷ್ಟೇ ಟಾಕ್ಸಿಕ್ ಅಡ್ಡಾದಿಂದ ಸುಮಾರು 45 ದಿನಗಳ ಕಾಲ ಹೈ ವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನ ಚಿತ್ರಿಸೋಕೆ ಸಜ್ಜಾಗಿರೋ ಫೋಟೋಸ್ ರಿವೀಲ್ ಮಾಡಿತ್ತು ಚಿತ್ರತಂಡ. ರಾಕಿಂಗ್ ಸ್ಟಾರ್ ಯಶ್, ಡೈರೆಕ್ಟರ್ ಗೀತು ಮೋಹನ್‌ದಾಸ್ ಹಾಗೂ ಹಾಲಿವುಡ್‌ನ ಸ್ಟಂಟ್ ಮಾಸ್ಟರ್ ಜೆ ಜೆ ಪೆರ್ರಿ ಪ್ಲ್ಯಾನ್ ಮಾಡ್ತಿರೋ ಸ್ಟಿಲ್ಸ್ ಹೊರಬಿದ್ದಿತ್ತು. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಯಶ್‌ರ ಟಾಕ್ಸಿಕ್ ಬಗ್ಗೆ ಬೇರೆಯದ್ದೇ ವದಂತಿಗಳು ಹರಿದಾಡ್ತಿವೆ.
ಹೌದು, ಕೆಜಿಎಫ್ ಸಿನಿಮಾಗಳ ನಂತ್ರ ಯಶ್ ಮಹೋನ್ನತ ಚಿತ್ರ ಟಾಕ್ಸಿಕ್ ಶೂಟಿಂಗ್ ಭರದಿಂದ ಸಾಗ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೂಡಿ ಸ್ವತಃ ಯಶ್ ಇದರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕನ್ನಡ ಸಿನಿಮಾಗಳನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸೋಕೆ ಸಜ್ಜಾಗಿರೋ ಯಶ್, ಟಾಕ್ಸಿಕ್ ಮೇಕಿಂಗ್‌ನ ಥೇಟ್ ಹಾಲಿವುಡ್ ಚಿತ್ರಗಳ ರೇಂಜ್‌ಗೆ ಮಾಡ್ತಿರೋದು ಇಂಟರೆಸ್ಟಿಂಗ್. ಆದ್ರೀಗ ಟಾಕ್ಸಿಕ್ ಅಡ್ಡಾದಿಂದ ಬೇರೆಯದ್ದೇ ಮ್ಯಾಟರ್ ಹೊರಬರ್ತಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ಟಾಕ್ಸಿಕ್ ಚಿತ್ರತಂಡದಲ್ಲಿ ಒಳ ಜಗಳಗಳು ಹೆಚ್ಚಾಗಿದ್ದು, ಶೂಟಿಂಗ್ ನಿಂತಿದೆ ಎನ್ನಲಾಗ್ತಿದೆ. ಡೈರೆಕ್ಟರ್ ಗೀತು ಮೋಹನ್‌ದಾಸ್ ಹಾಗೂ ಯಶ್ ನಡುವೆ ಬಜೆಟ್ ವಾರ್ ನಡೀತಿದೆ ಎನ್ನಲಾಗ್ತಿದೆ. ಶೇಕಡಾ 60ರಷ್ಟು ಶೂಟಿಂಗ್ ಮಾಡಲು 600 ಕೋಟಿ ಖರ್ಚಾಗಿದ್ದು, ಉಳಿದ ಪೋರ್ಷನ್ಸ್ ಚಿತ್ರಿಸೋಕೆ ಕನಿಷ್ಟ 400 ಕೋಟಿ ಬೇಕಾಗಿದೆ ಎನ್ನಲಾಗ್ತಿದೆ. ಇದು ನಿಜಾನಾ ಅನ್ನೋದು ಯಕ್ಷ ಪ್ರಶ್ನೆ. ಆದ್ರೆ ಇದಕ್ಕೆ ಸ್ವತಃ ಕೆವಿಎನ್ ಪ್ರೊಡಕ್ಷನ್ಸ್ ನಮ್ಮ ಗ್ಯಾರಂಟಿ ಪಿಚ್ಚರ್ ಟೀಂಗೆ ಸ್ಪಷ್ಟನೆ ನೀಡಿದೆ.
- ಅದೆಲ್ಲಾ ಸತ್ಯಕ್ಕೆ ದೂರವಾದದ್ದು.. ವದಂತಿಗಳಿಗೆ ಕಿವಿಗೊಡಬೇಡಿ
- 2026ರ ಮಾರ್ಚ್ ಡೇಟ್‌ಗೆ ಟಾಕ್ಸಿಕ್ ಬರೋದು 100% ಫಿಕ್ಸ್
- ಅಕ್ಟೋಬರ್‌ಗೆ ಶೂಟಿಂಗ್ ಕಂಪ್ಲೀಟ್ ಆಗಲಿದೆ.. KVN ಸ್ಪಷ್ಟನೆ..!
ಹೌದು.. ಸದ್ಯ ಹರಿದಾಡ್ತಿರೋ ಸುದ್ದಿಗಳು ಸತ್ಯಕ್ಕೆ ದೂರವಾದ ವಿಚಾರಗಳು. ಬೇಕು ಅಂತಲೇ ಯಾರೋ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕ್ಯಾಂಪೇನ್ ಮಾಡ್ತಿದ್ದಾರೆ. ಮೊನ್ನೆಯಷ್ಟೇ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಣದ ಬಗ್ಗೆ ಅಪ್ಡೇಟ್ಸ್ ನೀಡಿದ್ವಿ. ಸದ್ಯ ಪೆರ್ರಿ ಮುಂದಾಳತ್ವದಲ್ಲಿ ಮುಂಬೈನಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಚಿತ್ರತಂಡದಲ್ಲಿ ಅಂತಹ ಯಾವುದೇ ಮನಸ್ತಾಪಗಳು ಇಲ್ಲ. ಅಕ್ಟೋಬರ್ ತಿಂಗಾಳಂತ್ಯಕ್ಕೆ ಟಾಕ್ಸಿಕ್ ಶೂಟಿಂಗ್ ಕಂಪ್ಲೀಟ್ ಆಗಲಿದೆ. ಈಗಾಗ್ಲೇ ಅನೌನ್ಸ್ ಮಾಡಿರೋ 2026ರ ಮಾರ್ಚ್ 19ಕ್ಕೆ ಟಾಕ್ಸಿಕ್ ರಿಲೀಸ್ ಆಗಲಿದೆ ಅಂತ ಕೆವಿಎನ್ ಪ್ರೊಡಕ್ಷನ್ಸ್‌ನ ನಿರ್ಮಾಪಕ ಸುಪ್ರೀತ್ ನಮ್ಮ ಗ್ಯಾರಂಟಿ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ.
ನಟ ಯಶ್ ಯಾವಾಗ್ಲೂ ಕಾಣೋ ಕನಸು ದೊಡ್ಡದಾಗಿರಬೇಕು ಅನ್ನೋ ದೂರದೃಷ್ಠಿ ಇರೋ ಅತ್ಯದ್ಭುತ ಪ್ರತಿಭೆ. ಏನೇ ಮಾಡಿದ್ರೂ ಹತ್ತು ಸಲ ಯೋಚಿಸಿ ಮಾಡ್ತಾರೆ. ಅಲ್ಲದೆ, ಬಜೆಟ್ ಸಮಸ್ಯೆ ಬರೋಕೆ ಸಾಧ್ಯವೇ ಇಲ್ಲ. ಯಾಕಂದ್ರೆ ಕೆವಿಎನ್ ಸಂಸ್ಥೆ ದಳಪತಿ ವಿಜಯ್, ಅಕ್ಷಯ್ ಕುಮಾರ್, ಚಿರಂಜೀವಿ ಅಂತಹ ಘಟಾನುಘಟಿ ಸೂಪರ್ ಸ್ಟಾರ್ಸ್‌ಗೆ ಸಿನಿಮಾಗಳನ್ನ ನಿರ್ಮಾಣ ಮಾಡ್ತಿದೆ. ಹೀಗಿರುವಾಗ ಅಲ್ಲಿ ಹಣಕಾಸಿನ ಕೊರತೆ ಅನ್ನೋ ಮಾತು ಬರೋಕೆ ಸಾಧ್ಯವೇ ಇಲ್ಲ. ಹಾಗಾಗಿ ಕನ್ನಡದ ನಿರ್ಮಾಣ ಸಂಸ್ಥೆಯೊಂದು ಕನ್ನಡದ ಕಲಾವಿದರು ಇಂಥದ್ದೊಂದು ಮಹೋನ್ನತ ಪ್ರಾಜೆಕ್ಟ್‌ಗೆ ಕೈ ಹಾಕಿರೋದು ಸಹಿಸಲಾಗದೆ ಕಿಡಿಗೇಡಿಗಳು ಈ ರೀತಿ ವದಂತಿ ಹಬ್ಬಿಸುತ್ತಿದ್ದು, ಅದ್ಯಾವುದಕ್ಕೂ ಕಿವಿಗೊಡಬೇಡಿ ಅನ್ನೋದು ಚಿತ್ರತಂಡದಿಂದ ಬಂದ ಖಬರ್ ಆಗಿದೆ.