ಟಾಕ್ಸಿಕ್.. ಟಾಕ್ಸಿಕ್.. ಟಾಕ್ಸಿಕ್.. ಬಾಕ್ಸ್ ಆಫೀಸ್‌ನಲ್ಲಿ ಸಖತ್ ಜೋರಿದೆ ಟಾಕ್ಸಿಕ್ ಅಬ್ಬರ, ಆರ್ಭಟ. ಎರಡೇ ದಿನಕ್ಕೆ 191 ಕೋಟಿ ಗಳಿಸಿರೋ ರಾಕಿಂಗ್ ರಾಯನನ್ನ ಕಣ್ತುಂಬಿಕೊಂಡು ಸಖತ್ ಥ್ರಿಲ್ ಆಗ್ತಿದ್ದಾರೆ ಚಿತ್ರಪ್ರೇಮಿಗಳು. ಹಾಗಾದ್ರೆ ಎಲ್ಲೆಡೆ ಹೇಗಿದೆ ಟಾಕ್ಸಿಕ್ ದರ್ಶನ..? ಸೆಲ್ಫ್ ಮೇಡ್ ಶಹಜಾದ ಬೆನ್ನಿಗೆ ನಿಂತ ಸ್ಯಾಂಡಲ್‌ವುಡ್ ಸ್ಟಾರ್ಸ್ ಯಾಱರು ಅನ್ನೋದ್ರ ಡಿಟೇಲ್ಸ್ ಇಲ್ಲಿದೆ ನೋಡಿ…
- ಎರಡೇ ದಿನಕ್ಕೆ 191ಕೋಟಿ.. ಟಾಕ್ಸಿಕ್ ಬಾಕ್ಸಾಫೀಸ್ ತಾಂಡವ
- ಜಪಾನ್ ಸೇರಿದಂತೆ ವಿದೇಶದಲ್ಲಿ ಟಾಕ್ಸಿಕ್ ದರ್ಬಾರ್ ಜೋರು
ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡ್ತಿದೆ. ಮೊದಲ ದಿನ ಬರೋಬ್ಬರಿ 150 ಕೋಟಿ ಗಳಿಸೋ ಮೂಲಕ ಬಿಗ್ಗೆಸ್ಟ್ ಓಪನಿಂಗ್ ಪಡೆದ ಸಿನಿಮಾ ಅನಿಸಿಕೊಂಡಿತ್ತು. ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್‌ನ ಖುದ್ದು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಡೈರೆಕ್ಟರ್ ಗೀತು ಮೋಹನ್‌ದಾಸ್ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳ ಮೂಲಕ ಖಚಿತಪಡಿಸಿದ್ರು.
ಇದೀಗ ಟಾಕ್ಸಿಕ್‌ನ ಎರಡು ದಿನದ ಗಲ್ಲಾ ಪೆಟ್ಟಿಗೆ ರಿಪೋರ್ಟ್ ಹೊರಬಿದ್ದಿದೆ. ವರ್ಲ್ಡ್‌ವೈಡ್ ಸುಮಾರು 191 ಕೋಟಿ ಕಲೆಕ್ಷನ್ ಮಾಡೋ ಮೂಲಕ ಎರಡು ದಿನದಲ್ಲಿ ಹೆಚ್ಚೂ ಕಡಿಮೆ 200 ಕೋಟಿ ಕ್ಲಬ್ ಸೇರಿದೆ. ಇದು ಟಾಕ್ಸಿಕ್ ಸಿನಿಮಾದ ಗೆಲುವಲ್ಲ. ಇಡೀ ಕನ್ನಡ ಚಿತ್ರರಂಗದ ಗೆಲುವು. ಯಾಕಂದ್ರೆ ಗ್ಲೋಬಲ್ ಮಾರ್ಕೆಟ್‌ನಲ್ಲಿ ಕನ್ನಡ ಸಿನಿಮಾವೊಂದಕ್ಕೆ ಈ ಪಾಟಿ ಮನ್ನಣೆ ಸಿಗೋಕೆ ಒನ್ & ಓನ್ಲಿ ಕಾರಣ ನಮ್ಮ ಯಶ್.
ಅಂದಹಾಗೆ ಇದು ಕನ್ನಡದ ಜೊತೆ ಇಂಗ್ಲಿಷ್‌ನಲ್ಲೂ ತಯಾರಾಗಿದ್ದು, ವಿಶ್ವದಾದ್ಯಂತ ಸಾಕಷ್ಟು ದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ರಿಲೀಸ್ ಆಗಿದೆ. ಅದ್ರಲ್ಲೂ ಜಪಾನ್, ಅಮೆರಿಕ ಸೇರಿದಂತೆ ವಿದೇಶಿಗರಿಗೆ ಟಾಕ್ಸಿಕ್ ಸಖತ್ ಕಿಕ್ ಕೊಡ್ತಿದೆಯಂತೆ. ಗುಡ್, ವೆರಿ ಗುಡ್, ಅಮೇಜಿಂಗ್ ಅಂತೆಲ್ಲಾ ಅಲ್ಲಿನ ಚಿತ್ರರಸಿಕರು ಸಿನಿಮಾನ ಕೊಂಡಾಡ್ತಿರೋದು ಇಂಟರೆಸ್ಟಿಂಗ್.
- ಅಟೆನ್ಷನ್ ಪ್ಲೀಸ್.. ಕನ್ನಡಿಗ ಯಶ್ ಸೆಲ್ಫ್ ಮೇಡ್ ಶಹಜಾದ
- ಟಾಲಿವುಡ್‌ನಲ್ಲಿ ಒಗ್ಗಟ್ಟು.. ಕನ್ನಡಾಭಿಮಾನ ತೋರದ ಇಂಡಸ್ಟ್ರಿ
- ಟಾಕ್ಸಿಕ್ ನೋಡಿ ವ್ಹಾವ್ ಎಂದ ಉಪ್ಪಿ.. ತುಟಿ ಬಿಚ್ಚದ ಸ್ಟಾರ್ಸ್
- ಸ್ವಂತ ಟ್ಯಾಲೆಂಟ್.. ನಿಯತ್ತಾಗಿ ಕಟ್ಟಿದ ಬ್ರ್ಯಾಂಡ್ ನೇಮ್ ಯಶ್
ಯೆಸ್.. ಟಾಕ್ಸಿಕ್ ಸಿನಿಮಾಗೆ ಪಕ್ಕದ ಟಾಲಿವುಡ್ ಅಂಗಳದಲ್ಲಿ ರಿಲೀಸ್ ಆಗಿರೋ ರವಿತೇಜಾ ನಟನೆಯ ಇರುಮುಡಿಯನ್ನ ಕಂಪೇರ್ ಮಾಡ್ತಿಲ್ಲ. ಆದ್ರೆ ಆ ಸಿನಿಮಾಗೆ ಅಲ್ಲಿನ ಚಿತ್ರಪ್ರೇಮಿಗಳ ಜೊತೆ ಚಿತ್ರರಂಗದ ಮಂದಿ ಕೂಡ ಸಾಥ್ ನೀಡ್ತಿರೋ ಪರಿ ಇಂಟರೆಸ್ಟಿಂಗ್ ಅನಿಸಿದೆ. ನಟ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ, ರಾಮ್ ಚರಣ್ ತೇಜಾ ಹಾಗೂ ಚಿರಂಜೀವಿ ಸೇರಿದಂತೆ ಸಾಕಷ್ಟು ಮಂದಿ ಸ್ಟಾರ್‌ಗಳು ಇರುಮುಡಿಗೆ ಭೇಷ್ ಅಂತ ಪೋಸ್ಟ್ ಹಾಕೋ ಮೂಲಕ ಒಗ್ಗಟ್ಟು ಪ್ರದರ್ಶಿಸ್ತಿದ್ದಾರೆ.
ಆದ್ರೆ ನಮ್ಮ ಸ್ಯಾಂಡಲ್‌ವುಡ್‌ಗೆ ಏನಾಗಿದೆ..? ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೆ ಏನು ಮಾಡ್ತಿದ್ದಾರೆ..? ವಿಶ್ವ ಸಿನಿದುನಿಯಾದಲ್ಲಿ ಕನ್ನಡದ ಬಾವುಟ ಹಾರಿಸಿದಂತಹ ಅಪ್ಪಟ ಪ್ರತಿಭೆ ಯಶ್‌ಗೆ ವಿಶ್ ಮಾಡುವ ಒಂದೇ ಒಂದು ವ್ಯವದಾನ ಬೇಡವೇ..? ಇವರಿಗೆ ಕನ್ನಡಾಭಿಮಾನದ ಕೊರತೆಯೋ ಅಥ್ವಾ ಆತ್ಮಾಭಿಮಾನದ ಆತ್ಮವಿಶ್ವಾಸದ ಕೊರೆತೆಯೋ ಗೊತ್ತಾಗ್ತಿಲ್ಲ. ರಿಯಲ್ ಸ್ಟಾರ್ ಉಪೇಂದ್ರ ಒಬ್ರೇ ಒಬ್ರು ಟಾಕ್ಸಿಕ್ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡು ಭೇಷ್ ಅಂತ ಯಶ್ & ಟೀಂ ಬೆನ್ನು ತಟ್ಟಿದ್ದಾರೆ. ಉಳಿದಂತೆ ಎಲ್ರೂ ಸೈಲೆಂಟ್ ಆಗಿಬಿಟ್ಟಿದ್ದಾರೆ.
ಒಬ್ಬರಿಗೊಬ್ಬರು ಸಾಥ್ ಕೊಟ್ರೇ ಅಲ್ಲವೇ ಚಿತ್ರರಂಗದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತೆ..? ಎಲ್ಲಾ ಸ್ಟಾರ್ ಗಳ ಅಭಿಮಾನಿಗಳು ಎಲ್ಲಾ ಸ್ಟಾರ್ಸ್ ಸಿನಿಮಾಗಳನ್ನ ನೋಡಿದ್ರೆ ಮಾತ್ರ ತಾನೇ ಚಿತ್ರರಂಗದ ಏಳಿಗೆ ಸಾಧ್ಯ..? ಅದಕ್ಕೆ ಸ್ಟಾರ್‌ಗಳೇ ಮುಂದೆ ಬರದೇ ಇದ್ದಾಗ ಅವ್ರ ಫ್ಯಾನ್ಸ್ ಏನು ಮಾಡೋಕೆ ಸಾಧ್ಯ ನೀವೇ ಹೇಳಿ. ಅಂದಹಾಗೆ ಯಶ್ ಇದ್ಯಾವುದನ್ನೂ ನಿರೀಕ್ಷಿಸುವಂತಹ ಸ್ಟಾರ್ ಅಲ್ವೇ ಅಲ್ಲ. ಸ್ವಂತ ಟ್ಯಾಲೆಂಟ್‌ನಿಂದ ನಿಯತ್ತಾಗಿ ಕಟ್ಟಿರೋ ಬ್ರ್ಯಾಂಡ್ ನೇಮ್ ಅದು. ಹಾಗಾಗಿ ಆತ ಯಾರೇ ಸಾಥ್ ಕೊಟ್ರೂ, ಕೊಡದೇ ಇದ್ರೂ ಸೆಲ್ಫ್ ಮೇಡ್ ಶಹಜಾದ ಅನ್ನೋದನ್ನ ಮರೆಯೋ ಹಾಗಿಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





