ದಿ ವೆಯ್ಟ್ ಈಸ್ ಓವರ್..ಮಾರ್ಕೆಟ್‌ನಲ್ಲಿ ಟಾಕ್ಸಿಕ್ ಗಾನ ಬಜಾನ ಶುರುವಾಗಿದೆ. ಟೀಸರ್‌ಗಳಿಂದಲೇ ವರ್ಲ್ಡ್ ಸಿನಿದುನಿಯಾದಲ್ಲಿ ಕಂಪನ ಸೃಷ್ಟಿಸಿದ್ದ ರಾಕಿಂಗ್ ಸ್ಟಾರ್, ಇದೀಗ ಫಸ್ಟ್ ಸಾಂಗ್ ಮೂಲಕ ಕಿಕ್ ಕೊಟ್ಟಿದ್ದಾರೆ. ಯಶ್ ಬರೀ ಮಾಸ್‌ಗೆ ಬಾಸ್ ಅಲ್ಲ. ಕಿಂಗ್ ಆಫ್ ರೊಮ್ಯಾನ್ಸ್ ಕೂಡ ಹೌದು. ಅದಕ್ಕೆ ಸಖತ್ ವಂಡರ್ ಆಗಿರೋ ಈ ತಬಾಹಿ ಸಾಂಗ್ ಸಾಕ್ಷಿ. ಇಷ್ಟಕ್ಕೂ ಹಾಡನ್ನೇಕೆ ಇಷ್ಟು ಪ್ಲೈನ್ ಆಗಿ ರಿಲೀಸ್ ಮಾಡಿದ್ರು..? ಲಿರಿಕಲ್ ವಿಡಿಯೋ ಯಾವಾಗ ಬರುತ್ತೆ..? ಬೆಂಗಳೂರಿಗೆ ಯಶ್ ಯಾವಾಗ ಬರ್ತಾರೆ ಅನ್ನೋದ್ರ ಕಂಪ್ಲೀಟ್ ಕಹಾನಿ ನಿಮ್ಮ ಮುಂದೆ.
ಇದು ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಮೂವಿ ಟಾಕ್ಸಿಕ್ ಆಲ್ಬಮ್‌ನ ಮೊಟ್ಟ ಮೊದಲ ಸಾಂಗ್ ಝಲಕ್. ತಬಾಹಿ ಸಾಂಗ್ ಇಂದು ಮಧ್ಯಾಹ್ನ 12.59ಕ್ಕೆ ರಿಲೀಸ್ ಆಗುತ್ತೆ ಅನ್ನೋ ಸ್ಟಿಲ್ ಫೋಟೋ ಬಿಟ್ಟಾಗಲೇ ಎಲ್ಲರೂ ಹುಬ್ಬೇರಿಸಿದ್ರು. ಅದಕ್ಕೆ ಕಾರಣ ಯಶ್ ಹಾಗೂ ನಾಯಕನಟಿ ಕಿಯಾರಾ ರೊಮ್ಯಾಂಟಿಕ್ ಫೋಟೋ.

‘ತಬಾಹಿ’ ಥಂಡರ್..ಯಶ್ ಬಾಸ್ ‘ಕಿಂಗ್ ಆಫ್ ರೊಮ್ಯಾನ್ಸ್’
ಸ್ಟಿಲ್ ಫೋಟೋದಿಂದ್ಲೇ ಹುಬ್ಬೇರಿಸಿದ್ದ ರಾಕಿಂಗ್ ಸ್ಟಾರ್-ಕಿಯಾರಾ
ಯಶ್ ಬರೀ ಮಾಸ್‌ಗೆ ಮಾತ್ರ ಬಾಸ್ ಅಂದುಕೊಂಡಿದ್ದವ್ರು, ರೊಮ್ಯಾನ್ಸ್‌ನಲ್ಲಿ ಕೂಡ ಕಿಂಗ್ ಅನ್ನೋದನ್ನ ಈ ಹಾಡಿನಿಂದ ತೋರಿಸಿಕೊಟ್ಟಿದ್ದಾರೆ. ಬಾಲಿವುಡ್‌ನ ಖ್ಯಾತ ಗಾಯಕ ಕಮ್ ಕಂಪೋಸರ್ ವಿಶಾಲ್ ಮಿಶ್ರಾ ತಬಾಹಿ ಸಾಂಗ್‌ಗೆ ಸಂಗೀತ ಸಂಯೋಜಿಸಿ, ತಮ್ಮದೇ ಕಂಠದಲ್ಲಿ ಹಾಡಿದ್ದಾರೆ.

ತಬಾಹಿ ಅಂದ್ರೇನು..? ಭಟ್ರು ಬರೆದ ಪದಗಳ ಅರ್ಥವೇನು ಗೊತ್ತಾ?
ವಿಶಾಲ್ ಮಿಶ್ರಾ ಕಂಪೋಸ್ ಮಾಡಿ ಹಾಡಿರೋ ಇಂಟೆನ್ಸ್ ಸಾಂಗ್

ವಿಕಟಕವಿ ಯೋಗರಾಜ್ ಭಟ್ ಈ ತಬಾಹಿ ಗೀತೆಗೆ ಪದಪುಂಜ ಪೋಣಿಸಿದ್ದು, ರೊಮ್ಯಾನ್ಸ್ ಸಖತ್ ಇಂಟೆನ್ಸೀವ್ ಆಗಿದೆ. ಎಲ್ಲಾ..ಮಿತಿ ಮೀರಿ ಹೋಗೋಣ ಬಾ. ಎಲ್ಲಾ.. ಗಡಿ ದಾಟಿ ನೋಡೋಣ ಬಾ. ಶೃಂಗಾರದ ಅಂಗಾರ ಸಿಡಿದೇಳಲು..ತಬಾಹಿ. ಸಾಗರ..ಸರ ಸರ..ದಡವನು ದಾಟಲು. ಭಾವದ ರಭಸವು.. ಎದೆಯನು ಮೀಟಲು. ವೈಯ್ಯಾರ.. ವ್ಯಾಮೋಹ.. ಜೊತೆ ಸೇರಲು.. ತಬಾಹಿ.. ಅನ್ನೋ ಈ ಹಾಡು ನಿಜಕ್ಕೂ ಸಖತ್ ವೈಬ್ರೆಂಟ್ ವಿತ್ ರೊಮ್ಯಾಂಟಿಕ್ ಆಗಿದೆ.

ಇಷ್ಟಕ್ಕೂ ತಬಾಹಿ ಅಂದ್ರೆ ಏನು ಅನ್ನೋದನ್ನ ಹೇಳ್ತೀವಿ ಕೇಳಿ. ತಬಾಹಿ ಅಂದ್ರೆ ವಿನಾಶ, ನಾಶ ಅಥ್ವಾ ಸರ್ವನಾಶ. ಇಲ್ಲಿ ಯಾವ ಅರ್ಥದಲ್ಲಿ ವಿನಾಶ..? ಯಾರಿಂದ ಯಾರು ನಾಶ..? ರಾಯ ಯಾರನ್ನು ಸರ್ವನಾಶ ಮಾಡ್ತಾನೆ ಅನ್ನೋದೇ ಸಸ್ಪೆನ್ಸ್.

ಟಾಕ್ಸಿಕ್ ಬರೀ ರೀಲ್..ಏರ್‌ಪೋರ್ಟ್ ಪ್ರಣಯವೇ ರಿಯಲ್
ಟೀಸರ್‌ಗೂ ಮೊದಲೇ ಪತ್ನಿ ರಾಧಿಕಾ-ಯಶ್ ತಬಾಹಿ ಹಿಂಟ್

ಟಾಕ್ಸಿಕ್ ತಬಾಹಿ ಫಸ್ಟ್‌ಲುಕ್ ಬರೀ ರೀಲ್. ಆದ್ರೆ ರಿಯಲ್ ತಬಾಹಿ ಬೇರೇನೇ ಇದೆ. ಈ ಹಿಂದೆ ಅಂದ್ರೆ ಕಳೆದ ವರ್ಷವೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಮಡದಿ ರಾಧಿಕಾ ಪಂಡಿತ್‌ರನ್ನ ಏರ್‌ಪೋರ್ಟ್‌ನಲ್ಲಿ ಅದೇ ಸ್ಟೈಲ್‌ನಲ್ಲಿ ರೊಮ್ಯಾಂಟಿಕ್ ಆಗಿ ಎತ್ತಿಕೊಂಡಿದ್ದ ಫೋಟೋ ಹಂಚಿಕೊಂಡಿದ್ರು. ಅಂದ್ರೆ ತಬಾಹಿ ಹಾಡಿನ ಹಿಂಟ್‌ನ ರಿಯಲ್ ರಾಕಿಂಗ್ ಜೋಡಿ ಅಂದೇ ನೀಡಿತ್ತು. ಯಶ್-ರಾಧಿಕಾ ನಿಜ ಜೀವನದಲ್ಲಿ ಸಖತ್ ರೊಮ್ಯಾಂಟಿಕ್ ಜೋಡಿ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಟಾಕ್ಸಿಕ್ ಫಸ್ಟ್ ಸಾಂಗ್‌ನಲ್ಲೇ ಭಾರೀ ನಿರಾಸೆ..ಏನಾಯ್ತು..?
ವಿಡಿಯೋ ಇಲ್ಲ..ಕನಿಷ್ಟ ಲಿರಿಕಲ್ ವಿಡಿಯೋ ಕೂಡ ಇಲ್ಲ

ಟೀಸರ್‌ನಲ್ಲೇ ಆ ಪಾಟಿ ಹಸಿಬಿಸಿ ದೃಶ್ಯಗಳಿಟ್ಟಿದ್ದಾರೆ ಅಂದ್ರೆ ಇನ್ನು ಈ ತಬಾಹಿ ಸಾಂಗ್‌ನಲ್ಲಿ ಪಡ್ಡೆ ಹುಡುಗರು ನಿದ್ದೆ ಕೆಡೋದು ಗ್ಯಾರಂಟಿ ಅಂತ ಅಂದಾಜಿಸಲಾಗಿತ್ತು. ಆದ್ರೆ ತಬಾಹಿ ಸಾಂಗ್‌ಗೆ ಈಗಾಗ್ಲೇ ರಿವೀಲ್ ಮಾಡಿದ್ದ ಯಶ್-ಕಿಯಾರಾ ಫಸ್ಟ್‌ಲುಕ್ ಫೋಟೋ ಹಾಕಿ ಬರೀ ಆಡಿಯೋ ಸಾಂಗ್ ರಿಲೀಸ್ ಮಾಡಿದೆ ಝೀ ಮ್ಯೂಸಿಕ್ ಕಂಪೆನಿ. ಇದನ್ನ ಕಂಡು ಬಹಳ ಕಾತರದಿಂದ ಕಾಯ್ತಿದ್ದ ಯಶ್ ಫ್ಯಾನ್ಸ್ ಮಾತ್ರ ಸಿಕ್ಕಾಪಟ್ಟೆ ಡಿಸಪಾಯಿಂಟ್ ಆಗಿದ್ದಾರೆ.

ಹಾಡಲ್ಲಿ ಸಖತ್ ರೊಮ್ಯಾಮ್ಸ್ ಇದ್ದು, ಪ್ರೇಕ್ಷಕರು ಅದನ್ನ ಹೇಗೆ ತಗೋತಾರೋ ಅನ್ನೋ ಭಯದಲ್ಲಿ ಹೀಗೆ ರಿಲೀಸ್ ಮಾಡಿದ್ದಾರೆ ಅನ್ನೋದು ಒಂದು ಮೂಲದ ಸುದ್ದಿ. ಮತ್ತೊಂದು ಕಡೆ, ಟೆಕ್ನಿಕಲಿ ಸಾಂಗ್ ರೆಡಿ ಆಗ್ತಿದ್ದು, ಸದ್ಯದಲ್ಲೇ ಲಿರಿಕಲ್ ವಿಡಿಯೋ ಹೊರಬರಲಿದೆ ಎನ್ನಲಾಗ್ತಿದೆ. ಆದ್ರೆ ಹಾಡು ಮಾತ್ರ ಸಖತ್ ಆಗಿದ್ದು, ಅದಕ್ಕೆ ಯಶ್-ಕಿಯಾರಾ ಜೋಡಿ ಮೋಡಿ ಮಾಡುವ ಸ್ಟಿಲ್ಸ್ ಅಥ್ವಾ ವಿಡಿಯೋಸ್ ವಿತ್ ಮೇಕಿಂಗ್ ಇದ್ದಿದ್ರೆ ಹಾಡಿನ ತೀವ್ರತೆ ಮತ್ತಷ್ಟು ಹೆಚ್ಚುತ್ತಿತ್ತು.

ಮಾರ್ಚ್ 8ಕ್ಕೆ ಬೆಂಗಳೂರಿಗೆ ರಾಕಿಂಗ್ ರಾಯ ಕಮಿಂಗ್
ನಯನತಾರಾ to ರುಕ್ಕು..ಮೀಡಿಯಾ ಮುಂದೆ ಟೀಂ ಹಾಜರ್
ಕೆಜಿಎಫ್ ಚಾಪ್ಟರ್-2 ಸಿನಿಮಾದ ಪ್ರಮೋಷನ್ಸ್ ವೇಳೆ ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್, ಅದಾದ ಬಳಿಕ ಎಲ್ಲೂ ಯಾರ ಕಣ್ಣಿಗೂ ಬಿದ್ದಿಲ್ಲ. ಸಿಗುವಷ್ಟು ಬಿಡುವು ಕೂಡ ಅವರಿಗಿರಲಿಲ್ಲ. ಆದ್ರೀಗ ಟಾಕ್ಸಿಕ್ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಇದೇ ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಹಿನ್ನೆಲೆ ಮಾರ್ಚ್ 8ರಂದು ಒರಾಯನ್ ಮಾಲ್‌ನಲ್ಲಿ ಮಾಧ್ಯಮಗಳನ್ನ ಫೇಸ್ ಮಾಡ್ತಿದ್ದಾರೆ.
ಯಶ್ ಜೊತೆ ಕಿಯಾರಾ ಇಂದ ಹಿಡಿದು ನಯನತಾರಾ, ನಮ್ಮ ರುಕ್ಮಿಣಿ ವಸಂತ್‌ವರೆಗೆ ಎಲ್ಲಾ ಸದಸ್ಯರು ಭಾಗಿಯಾಗಲಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಹಾಗೂ ಕೆವಿಎನ್ ನಿರ್ಮಾಣದ ಟಾಕ್ಸಿಕ್, ವರ್ಲ್ಡ್ ವೈಡ್ ತೆರೆಗಪ್ಪಳಿಸೋಕೆ 17 ದಿನಗಳಷ್ಟೇ ಬಾಕಿಯಿದೆ.





