ಬಾಲಿವುಡ್ ಸ್ಟಾರ್ಸ್ ಮೇಲೆ ಸಮರ ಸಾರಿರುವ ಬಿಷ್ಣೋಯ್.. ಇದೀಗ ಜೈಲಲ್ಲೇ ಕೂತು ನಟ ಟೈಗರ್ ಶ್ರಾಫ್ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ. ಮುಂಬೈನಲ್ಲಿ ಟೈಗರ್ ಶ್ರಾಫ್ ಮೇಲೆ ಮೂರು ಸುತ್ತಿನ ಗನ್ ಫೈಯರ್ ಕೂಡ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಬಿಟೌನ್ ಸ್ಟಾರ್. ಇಡೀ ಹಿಂದಿ ಚಿತ್ರರಂಗ ಬೆಚ್ಚಿ ಬೀಳುವಂತಹ ಕ್ರೈಂ ಕಹಾನಿ ಇಲ್ಲಿದೆ.
- ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ.. ಬೆಚ್ಚಿಬಿದ್ದ ಬಾಲಿವುಡ್
- ಸಲ್ಮಾನ್ ಖಾನ್ ಸಹವಾಸ.. ಬಿಷ್ಣೋಯ್ ಟೀಂ ಜೀವ ಭಯ
- ಜನನಿಬಿಡ ಪ್ರದೇಶದಲ್ಲೇ ಮೂರು ರೌಂಡ್‌ಗಳ ಗನ್ ಫೈಯರ್
- ಬಿಟೌನ್ ಸ್ಟಾರ್ ಸೇಫ್.. ಟೆನ್ಷನ್‌ನಲ್ಲೂ ಡ್ರೈವರ್‌ನ ಕಾಪಾಡಿದ್ರು
2014ರ ಹೀರೋಪಂತಿ ಚಿತ್ರದಿಂದ ಬಾಲಿವುಡ್ ಅಂಗಳದಲ್ಲಿ ಹೀರೋ ಆಗಿ ಲಾಂಚ್ ಆದವರು ಜಾಕಿಶ್ರಾಫ್ ಮಗ ಟೈಗರ್ ಶ್ರಾಫ್. ಮಾರ್ಷಲ್ ಆರ್ಟ್ಸ್ ಪಾರಂಗತ ಹಾಗೂ ರಿಯಲ್ ಫೈಟರ್ ಅಂತಲೇ ಕರೆಯಲ್ಪಡುವ ಟೈಗರ್ ಶ್ರಾಫ್‌ಗೆ ಸದ್ಯ ಸಾಲು ಸಾಲು ಸಿನಿಮಾಗಳು, ಮಲ್ಟಿಸ್ಟಾರ್ ಮೂವಿಗಳಿಂದಲೂ ಸದ್ದು ಮಾಡ್ತಿದ್ದಾರೆ. ಅದ್ರಲ್ಲೂ ಆತನ ಸಿಕ್ಸ್ ಪ್ಯಾಕ್ ಮೈಕಟ್ಟು ಅದೆಷ್ಟೋ ಮಂದಿಗೆ ಇನ್ಸ್‌ಪಿರೇಷನ್. ಆದ್ರೆ ನಿನ್ನೆ ದಿಢೀರ್ ಅಂತ ಆತನ ಕಾರ್ ಮೇಲೆ ದುಷ್ಕರ್ಮಿಗಳು ಗನ್ ಫೈಯರ್ ಮಾಡೋ ಮೂಲಕ ಇಡೀ ಬಾಲಿವುಡ್‌ನ ಬೆಚ್ಚಿ ಬೀಳಿಸಿದೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರೋ ಟೈಗರ್ ಶ್ರಾಫ್.. ಆ ಟೆನ್ಷನ್‌ನಲ್ಲೂ ಗಾಯಗೊಂಡ ಕಾರ್ ಡ್ರೈವರ್‌ನ ತಾವೇ ಆಸ್ಪತ್ರೆಗೆ ಕರೆದೊಯ್ದು ಕಾಪಾಡಿದ್ದಾರೆ. ಯೆಸ್.. ಮುಂಬೈನ ಜುಹು ಕ್ಯಾಂಪಸ್‌ನಲ್ಲಿರೋ ಪುಷ್ಪಾ ಪಾರ್ಕ್‌ನಲ್ಲಿ ಟೈಗರ್ ಶ್ರಾಫ್ ಹಾಗೂ ಆತನ ಕಾರ್ ಡ್ರೈವರ್ ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ರು. ಮೂರು ರೌಂಡ್ ಗನ್ ಫೈಯರ್ ಮಾಡಿದ್ದರಿಂದ ಡ್ರೈವರ್ ಗಾಯಗೊಂಡರು ಹಾಗೂ ಪಕ್ಕದಲ್ಲಿದ್ದ ಆಟೋ ಡ್ರೈವರ್ ಕೂಡ ಗಾಯಗೊಂಡರು.
ಅದರ ಬೆನ್ನಲ್ಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಆಡಿಯೋ ಒಂದು ಬಿಡುಗಡೆ ಆಯಿತು. ಸಲ್ಮಾನ್ ಖಾನ್ ಸಹವಾಸ ಮಾಡಿದವರು ಯಾರನ್ನೂ ನಾವು ಬಿಡಲ್ಲ ಅಂತ ದಾಳಿಯ ಹೊಣೆ ಕೂಡ ಹೊತ್ತರು ಬಿಷ್ಣೋಯ್. ಅನಿಲ್ ಪಂಡಿತ್ ಖಾತೆಯಿಂದ ಹೊರಬಂದ ಆ ಆಡಿಯೋ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿತು. 248 ಕೋಟಿ ರೂಪಾಯಿ ಬೃಹತ್ ಮೊತ್ತದ ಆಸ್ತಿಯ ಒಡೆಯನಾಗಿರೋ ಟೈಗರ್ ಶ್ರಾಫ್ ಮೇಲೆ ದಾಳಿ ಮಾಡಿದವ್ರನ್ನ ಮುಂಬೈ ಪೊಲೀಸರು 24 ಗಂಟೆಯಲ್ಲಿ ಅರೆಸ್ಟ್ ಮಾಡೋದಾಗಿ ಶಪಥ ಮಾಡಿದ್ರು. ಅದ್ರಂತೆ ರಾಜಸ್ತಾನದ ಕೋಟಾದಲ್ಲಿ ಮೂವರನ್ನ ಬಂಧಿಸಿದ್ದಾರೆ.
ಇನ್ನೂ ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಸೇರಿದಂತೆ ಮಾಜಿ ಗರ್ಲ್‌ಫ್ರೆಂಡ್ ದಿಶಾ ಪಟಾನಿ ಕೂಡ ಓಡೋಡಿ ಬಂದು ಟೈಗರ್ ಶ್ರಾಫ್ ಯೋಗಕ್ಷೇಮ ವಿಚಾರಿಸಿದ್ರು. ಅಂದಹಾಗೆ ಸಲ್ಮಾನ್ ಖಾನ್‌ಗೂ ಲಾರೆನ್ಸ್ ಬಿಷ್ಣೋಯ್‌ಗೂ ಮೊದಲಿನಿಂದಲೂ ಹಳೆಯ ದ್ವೇಷವಿದೆ. ಹಾಗಾಗಿ ಆತನ ಸಹವಾಸ ಮಾಡಿದ ಯಾರನ್ನೂ ಬಿಡಲ್ಲ ಎಂದಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಟೈಗರ್ ಶ್ರಾಫ್‌ನ ಸಾಜಿದ್ ನದಿಯದ್ವಾಲಾ ಮೂಲಕ ಸಲ್ಲುನೇ ಹೀರೋ ಆಗಿ ಲಾಂಚ್ ಮಾಡಿಸಿದ್ದನ್ನ ಈ ಕ್ಷಣದಲ್ಲಿ ನೆನೆಯಲೇಬೇಕು.
ಮೂವರು ಆರೋಪಿಗಳ ಪೈಕಿ ಇಬ್ಬರು ಹರಿಯಾಣದವರಾದ್ರೆ ಮತ್ತೊಬ್ಬ ಬಿಹಾರ ಮೂಲದವನು. ಬಂಧಿತರಲ್ಲಿ ಇಬ್ಬರು ಹಣ ಪಡೆದು ಈ ಕೃತ್ಯಕ್ಕೆ ಮುಂದಾಗಿದ್ದರು ಎನ್ನಲಾಗ್ತಿದೆ. ಹರಿಯಾಣ ಮೂಲದ ಆರೋಪಿ ಸೋನಿಪತನ್ 17 ವರ್ಷದ ಅಪ್ರಾಪ್ತನಾಗಿರೋದು ಅಚ್ಚರಿ. ಇನ್ನಿಬ್ಬರು ಹೃತಿಕ್ ಕುಮಾರ್ ಹಾಗೂ ರೆಹಾನ್ ಎಂದು ಗುರ್ತಿಸಲಾಗಿದೆ. ಒಟ್ಟಾರೆ ಇದ್ರಿಂದ ಸಲ್ಮಾನ್ ಖಾನ್‌ಗೂ ಭಯ ಶುರುವಾಗಿದ್ದು, ಸೆಕ್ಯೂರಿಟಿ ಹೆಚ್ಚಿಸಲಾಗಿದೆ. ಅಲ್ಲದೆ ಬಾಲಿವುಡ್ ಸ್ಟಾರ್‌ಗಳೆಲ್ಲಾ ಭಯಭೀತರಾಗಿ ಶೂಟಿಂಗ್, ಡಬ್ಬಿಂಗ್‌ಗೆ ಹೋಗೋಕೆ ಹೆದರುವಂತಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





