ಕಥೆ ಹಾಗೂ ಪಾತ್ರಗಳಿಂದ ಎಕ್ಸ್‌ಪೆರಿಮೆಂಟ್ಸ್ ಮಾಡೋದ್ರಲ್ಲಿ ಪಂಟರ್ ಈ ಅಭಿನಯ ಚತುರ ನೀನಾಸಂ ಸತೀಶ್. ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ದಿ ರೈಸ್ ಆಫ್ ಅಶೋಕದಿಂದ ಟಾಕ್ ಕ್ರಿಯೇಟ್ ಮಾಡ್ತಿದ್ದಾರೆ. ಶೂಟಿಂಗ್ ಮುಗಿಸಿದ್ದ ಟೀಂ, ಇದೀಗ ಡಬ್ಬಿಂಗ್ ಕೂಡ ಮಾಡಿ ಮುಗಿಸಿದೆ. ಕಾಂತಾರ ಕ್ವೀನ್ ಸಪ್ತಮಿ ಗೌಡ ಜೊತೆ ಏನೆಲ್ಲಾ ಹಂಗಾಮ ಮಾಡ್ತಾರೆ ಅನ್ನೋದ್ರ ಡಿಟೈಲ್ಡ್ ಸ್ಟೋರಿ ನಿಮಗಾಗಿ ಕಾಯ್ತಿದೆ.
- 137ದಿನ ಶೂಟ್.. ಸಪ್ತಮಿ ಜೊತೆ ರೆಟ್ರೋ ಅಶೋಕ ರೈಸಿಂಗ್
- ಬಿಗ್ ಬಜೆಟ್.. ಅದ್ಧೂರಿ ಮೇಕಿಂಗ್.. 5ಭಾಷೆಯಲ್ಲಿ ಮೂವಿ
- ನಾನ್‌ಸ್ಟಾಪ್ 20 ದಿನ ಬಣ್ಣ ಹಚ್ಚಿದ್ದ ಕಾಂತಾರ ಕ್ವೀನ್ ಸಪ್ತಮಿ
- ಪ್ರಕಾಶ್ ಬೆಳವಾಡಿ ವಿವಾದಾತ್ಮಕ ಕೇಳಿಕೆಗೆ ಸತೀಶ್ ಪ್ರತಿಕ್ರಿಯೆ
ವಿನೋದ್ ದೋಂಡಲೆ ಡ್ರೀಮ್ ಪ್ರಾಜೆಕ್ಟ್ ದಿ ರೈಸ್ ಆಫ್ ಅಶೋಕ ಚಿತ್ರ ಕೊನೆಗೂ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಅಷ್ಟೇ ಅಲ್ಲ, ಇತ್ತೀಚೆಗೆ ಆಕಾಶ್ ಸ್ಟುಡಿಯೋದಲ್ಲಿ ಸಿನಿಮಾಗಾಗಿ ಅಭಿನಯ ಚತುರ ನೀನಾಸಂ ಸತೀಶ್ ಹಾಗೂ ಕಾಂತಾರ ಕ್ವೀನ್ ಸಪ್ತಮಿ ಗೌಡ ಡಬ್ಬಿಂಗ್ ಕೂಡ ಮಾಡಿ ಮುಗಿಸಿದ್ದಾರೆ. ಡಬ್ಬಿಂಗ್ ಪ್ರಾಸಸ್ ಹೇಗಿತ್ತು..? ಸಿನಿಮಾ ಶೂಟಿಂಗ್‌ನ ರೋಚಕ ಕ್ಷಣಗಳ ಸಮೇತ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡ್ತೀವಿ. ಆದ್ರೆ ಅದಕ್ಕೂ ಮುನ್ನ, ಪ್ರಕಾಶ್ ಬೆಳವಾಡಿ ನಮ್ಮ ಚಿತ್ರರಂಗವನ್ನು ಅನ್ ಸಿವಿಲೈಸ್ಡ್ ಸ್ಯಾಂಡಲ್‌ವುಡ್ ಎಂದ ವಿವಾದಾತ್ಮಕ ಹೇಳಿಕೆಗೆ ಸತೀಶ್ ಏನಂದ್ರು ಅಂತ ತೋರಿಸ್ತೀವಿ ನೋಡಿ.
ಯೆಸ್.. ಹಿರಿಯ ಕಲಾವಿದ ಪ್ರಕಾಶ್ ಬೆಳವಾಡಿ ಹೇಳಿಕೆಗೆ ತುಂಬಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ಸತೀಶ್. ಇಷ್ಟು ವರ್ಷ ನಾವೆಲ್ಲಾ ಅನ್ನ ತಿಂತಿರೋದು ಕನ್ನಡ ಚಿತ್ರರಂಗದಿಂದ. ಯಾವುದೋ ಒಂದು ಪ್ರೊಡಕ್ಷನ್ ಹೌಸ್ ಅವರನ್ನ ಹಾಗೆ ನಡೆಸಿಕೊಂಡಿತು ಅಂತ, ಇಡೀ ಚಿತ್ರರಂಗವನ್ನು ಹೊಣೆ ಮಾಡಬಾರದು ಎಂದಿದ್ದಾರೆ. ಅಷ್ಟೇ ಅಲ್ಲ, ನಮ್ಮಲ್ಲಿ ಕಾಂಟ್ರಾಕ್ಟ್ ಪದ್ದತಿ ಇದೆ. ಇಲ್ಲ ಅಂದಾಗ ಅವರೇ ಕೇಳಿ ಮಾಡಿಸ್ಕೋಬೇಕು ಎಂದಿದ್ದಾರೆ.
ಇನ್ನೂ ಅಶೋಕ ಸಿನಿಮಾ ರೆಟ್ರೋ ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯೋ ನೈಜ ಘಟನೆಗಳನ್ನ ಆಧರಿಸಿ ತಯಾರಾಗಿದೆ. ಕ್ಷೌರಿಕನ ಪಾತ್ರದಲ್ಲಿ ನೀನಾಸಂ ಸತೀಶ್ ಮಿಂಚು ಹರಿಸಲಿದ್ದಾರೆ. ಸದಾ ಭಿನ್ನ ಅಲೆಯ ಪಾತ್ರಗಳು ಹಾಗೂ ಕಥೆಗಳಿಗಾಗಿ ತುಡಿಯುವ ಸತೀಶ್ ಅವರು ಈ ಸಿನಿಮಾಗೆ ಸಂಭಾವನೆ ಪಡೆಯದೆ, ತಮ್ಮದೇ ಜೇಬಿನಿಂದ ದುಡ್ಡು ಕೂಡ ಹಾಕಿರೋದು ಇಂಟರೆಸ್ಟಿಂಗ್. ಕಾಂತಾರ ಚೆಲುವೆ ಸಪ್ತಮಿ ಗೌಡ, ಹಳ್ಳಿ ಹೈದೆಯಾಗಿ ಲಂಗಾ ದಾವಣಿಯಲ್ಲಿ ಬಣ್ಣ ಹಚ್ಚಿದ್ದು, ನಾಯಕನಿಗಿಂತ ಜಾಸ್ತಿ ಪಂಚ್ ಡೈಲಾಗ್ಸ್ ಹೊಂದಿದ್ದಾರಂತೆ.
ಸುಮಾರು 137 ದಿನಗಳಷ್ಟು ದಿನ ಚಿತ್ರೀಕರಣ ನಡೆಸಿರೋ ದಿ ರೈಸ್ ಆಫ್ ಅಶೋಕ ಚಿತ್ರತಂಡ, ಕೊನೆಯ ಹಂತದ ಶೂಟಿಂಟ್‌ನ 30 ದಿನಗಳಲ್ಲಿ ಹಠಕ್ಕೆ ಬಿದ್ದು ಕಂಪ್ಲೀಟ್ ಮಾಡಿದೆ. ಅದರಲ್ಲಿ 20 ದಿನಗಳ ಕಾಲ ನಾನ್‌ಸ್ಟಾಪ್ ಬಣ್ಣ ಹಚ್ಚಿದ್ದರಂತೆ ಸಪ್ತಮಿ ಗೌಡ. ಪ್ರತೀ ದಿನ ಬೆಳಗ್ಗೆ 6 ಗಂಟೆಗೇ ಶೂಟಿಂಗ್ ಶುಭಾರಂಭ ಆಗ್ತಿದ್ದಂತೆ ಒಂದೊಂದು ದಿನ 24 ಗಂಟೆಗಳ ಕಾಲ ಕೂಡ ಚಿತ್ರಿಸಿದ್ದುಂಟಂತೆ.
ಇದೊಂದು ರೆವೆಲ್ಯೂಷನರಿ ಕಥಾನಕ ಹೊಂದಿದ್ದು, ಪರಭಾಷೆಯಲ್ಲಿ ಇಂತಹ ಕಥೆಗಳು ಬಂದಾಗ ಹುಬ್ಬೇರಿಸಿ ನೋಡುವ ನಾವುಗಳು, ಈ ಬಾರಿ ಇವರು ಮಾಡಿರೋ ಪ್ರಾಮಾಣಿಕ ಪ್ರಯತ್ನಕ್ಕೆ ಕೈ ಜೋಡಿಸಲೇಬೇಕಿದೆ. ಕಾರಣ ವಿನೋದ್ ದೋಂಡಲೆ ಅವರ ಅಕಾಲಿಕ ನಿಧನ ಎಲ್ಲರಿಗೂ ಗೊತ್ತೇಯಿದೆ. ಮಿಗಿಲಾಗಿ ಹಗಲಿರುಳು ಇಡೀ ಟೀಂ ಈ ಚಿತ್ರಕ್ಕಾಗಿ ಸಿಕ್ಕಾಪಟ್ಟೆ ಶ್ರಮ ಹಾಕಿದೆ. ಇನ್ನು ನೀನಾಸಂ ಸತೀಶ್ ಅಯೋಗ್ಯ-2 ಜೊತೆ ಜೊತೆಗೆ ಈ ಚಿತ್ರವನ್ನು ಮುಗಿಸಿರೋದು ವಿಶೇಷ. ಇನ್ನೆರಡು ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರ್ತಿರೋ ಅಶೋಕ, ಸದ್ಯದಲ್ಲೇ ರಿಲೀಸ್ ಡೇಟ್‌ನ ಅನೌನ್ಸ್ ಮಾಡಲಿದೆಯಂತೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್