• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, March 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪತ್ನಿ ಸಂಗೀತಾಗೆ ಅನ್ಯಾಯ..ರಾಜ್ಯದ ಹೆಣ್ಮಕ್ಳಿಗೆ ನ್ಯಾಯ..ಇದ್ಯಾವ ನ್ಯಾಯ ದಳಪತಿ ವಿಜಯ್?

ವಿಜಯ್ TVK ಪಕ್ಷದಿಂದ ಮಹಿಳಾ ಕಲ್ಯಾಣಕ್ಕೆ ಬಂಪರ್ ಆಫರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 8, 2026 - 5:21 pm
in ಸಿನಿಮಾ
0 0
0
ದಳಪತಿ ವಿಜಯ್

ಮನೆಯ ಮಡದಿಗೆ ಅನ್ಯಾಯ ಮಾಡುತ್ತಲೇ ರಾಜ್ಯದ ಹೆಣ್ಣು ಮಕ್ಕಳನ್ನ ಉದ್ಧರಿಸಲು ಮುಂದಾಗಿರೋ ದಳಪತಿ ವಿಜಯ್‌ಗೆ ಇದ್ಯಾವ ನ್ಯಾಯ ಥಂಬಿ ಅಂತಿದ್ದಾರೆ ಜನ. ಇದರ ನಡುವೆ ಪತ್ನಿ ಆರೋಪಿಸಿರೋ ಆ ಅಕ್ರಮ ಸಂಬಂಧವನ್ನೇ ಸಕ್ರಮ ಮಾಡಲು ಸಜ್ಜಾಗಿರೋ ವಿಜಯ್ ನಡೆ ಎಂಥದ್ದು..? ಸಾರ್ವಜನಿಕವಾಗಿ ಆ ಬಗ್ಗೆ ದಳಪತಿ ಹೇಳಿದ್ದೇನು..? ವಿಜಯ್-ತ್ರಿಶಾ ಪ್ರೇಮ್ ಕಹಾನಿ ಎಷ್ಟು ವರ್ಷದ್ದು..? ಎಲ್ಲೆಲ್ಲಿ ಯಾವಾಗ ಏನೆಲ್ಲಾ ನಡೀತು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.

ದಳಪತಿ ವಿಜಯ್‌ ರಾಜಕಾರಣಿ ಆಗೋಕೆ ಟೊಂಕ ಕಟ್ಟಿ ನಿಂತಿರೋದು ನಿಜ. ಹಾಗಂತ ಆತ್ಮ ಸಾಕ್ಷಿಯನ್ನ ಸಾಯಿಸಿಕೊಂಡು ರಾಜಕೀಯ ಮಾಡೋ ಅವಶ್ಯಕತೆ ಏನಿತ್ತು ಅನ್ನೋದೇ ಪ್ರಶ್ನೆ. ಸಾಯೋ ತನಕ ಜೊತೆಗಿರುವೆ ಅಂತ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿ, 27 ವರ್ಷಗಳ ಕಾಲ ಸಹಬಾಳ್ವೆ ನಡೆಸಿದ ಪತ್ನಿಗೇ ನ್ಯಾಯ ಕೊಡಲಾಗದ ವಿಜಯ್, ಇನ್ನೂ ರಾಜ್ಯದ ಜನತೆಯನ್ನ ಉದ್ದರಿಸಲು ಮುಂದಾಗ್ತಿರೋದು ಬಿಗ್ಗೆಸ್ಟ್ ಜೋಕ್ ಅನಿಸ್ತಿದೆ.

RelatedPosts

ಪಾಲಿಟಿಕ್ಸ್‌ಗೆ ಪಾದಾರ್ಪಣೆ.. NTR ಮೊಮ್ಮಗ Jr. ಹೇಳಿದ್ದೇನು ?

ಬಿಗ್ ಅಪ್ಡೇಟ್.. ಜೂ-4ಕ್ಕೆ ಟಾಕ್ಸಿಕ್.. ಜೂ.19ಕ್ಕೆ ಜನನಾಯಗನ್

‘ಟಾಕ್ಸಿಕ್’ ಸಿನಿಮಾದ ಪೋಸ್ಟ್‌ಪೋನ್‌ಗೆ ಅಸಲಿ ಕಾರಣ ಬಹಿರಂಗ..!

ಲವ್ ಫೇಲ್ಯೂರ್, ಡಿಪ್ರೆಷನ್‌ಗೆ ಡೋಂಟ್ ಕೇರ್..! ‘ಡ್ರ್ಯಾಗನ್’ ರೀತಿ ರಕ್ಷಿತ್ ಶೆಟ್ಟಿ ಎಂಟ್ರಿ ?

ADVERTISEMENT
ADVERTISEMENT

ಸತಿಗೆ ಅನ್ಯಾಯ..ರಾಜ್ಯದ ಹೆಣ್ಮಕ್ಳಿಗೆ ನ್ಯಾಯ..ಇದ್ಯಾವ ನ್ಯಾಯ?

ವಿಜಯ್ TVK ಪಕ್ಷದಿಂದ ಮಹಿಳಾ ಕಲ್ಯಾಣಕ್ಕೆ ಬಂಪರ್ ಆಫರ್

ಪತ್ನಿ ಸಂಗೀತಾಗೆ ಅನ್ಯಾಯ ಮಾಡಿ, ಇಡೀ ರಾಜ್ಯದ ಹೆಣ್ಣು ಮಕ್ಕಳ ಪರ ನಾನಿದ್ದೇನೆ ಅನ್ನೋ ಭರವಸೆ, ಆಶ್ವಾಸನೆ ನೀಡೋಕೆ ಇದು ಸಿನಿಮಾ ಅಲ್ಲ. ವಿಜಯ್ ಸಿನಿಮಾ ಹೀರೋ ಕೂಡ ಅಲ್ಲ. ಸಿಎಂ ಪದವಿ ಆಕಾಂಕ್ಷಿ. ಜನಸೇವೆಯೇ ಜನಾರ್ಧನ ಸೇವೆ ಅಂತ ತನು-ಮನ-ಧನ ಅರ್ಪಿಸಿ ರಾಜ್ಯದ ಚುಕ್ಕಾಣಿ ಹಿಡಿಯಲು ಮುಂದಾಗ್ತಿರೋ ವ್ಯಕ್ತಿ.  ತಾನು ನಿಜ ಜೀವನದಲ್ಲಿ ಮಾಡುವ ಪ್ರತಿಯೊಂದು ಕೆಲಸ ಕೂಡ ಇಲ್ಲಿ ಮುಖ್ಯ ಆಗುತ್ತೆ. ಹೇಳೋದು ಒಂದಾಗಿ, ಮಾಡೋದು ಮತ್ತೊಂದು ಆದ್ರೆ ಜನ ಛೀಮಾರಿ ಹಾಕ್ತಾರೆ. ಸದ್ಯ ವಿಜಯ್ ನಡೆ ಅಂತಹ ಛೀಮಾರಿ ಹಾಕಿಸಿಕೊಳ್ಳೋ ಹಾದಿಯಲ್ಲಿ ಸಾಗ್ತಿದೆ.

ಮಹಿಳೆಯರಿಗಾಗಿ ವಿಜಯ್ ಟಿವಿಕೆ ಪ್ರಣಾಳಿಕೆ: 
  1. ಹೆಣ್ಣು ಮಕ್ಕಳ ಅಕೌಂಟ್‌ಗೆ ಪ್ರತಿ ತಿಂಗಳು- 2500 ರೂ
  2. ವರ್ಷಕ್ಕೆ ಒಂದು ಕುಟುಂಬಕ್ಕೆ 6 ಗ್ಯಾಸ್ ಸಿಲಿಂಡರ್ ಫ್ರೀ
  3. ಮದ್ವೆ ಆಗುವ ವಧುವಿಗೆ 8 ಗ್ರಾಂ ಚಿನ್ನ, ರೇಷ್ಮೆ ಸೀರೆ
  4. ಮಕ್ಕಳ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ ತಲಾ 15 ಸಾವಿರ ರೂ
  5. ಹೆಣ್ಣು ಮಕ್ಕಳಿಗೆ ಉಚಿತ ಬಸ್ ಟಿಕೆಟ್
  6. ಸಾರ್ವಜನಿಕ ಸಾರಿಗೆಯಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಗೆ SOS
  7. ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್ಸ್
  8. ಸ್ವ ಸಹಾಯ ಸಂಘಗಳಿಗೆ ಬಡ್ಡಿ ರಹಿತ 5 ಲಕ್ಷ ರೂ
  9. ಹುಟ್ಟಿದ ಮಗುವಿಗೊಂದು ಚಿನ್ನದ ಉಂಗುರ, ಬೇಬಿ ಕಿಟ್ ಫ್ರೀ

ನೋಡಿದ್ರಲ್ಲಾ..ವಿಜಯ್ ರಾಜ್ಯದ ಜನತೆ ಬಗ್ಗೆ ಅದರಲ್ಲೂ ಹೆಣ್ಣು ಮಕ್ಕಳ ಕುರಿತಿ ಇಷ್ಟೆಲ್ಲಾ ಯೋಚಿಸಿ ಮ್ಯಾನಿಫೆಸ್ಟೋ ತಯಾರಿಸಿದ್ದಾರೆ. ಆದ್ರೆ ತನ್ನದೇ ಮನೆಯ ಹೆಣ್ಣು ಮಗಳಿಗೆ ಆಗ್ತಿರೋ ಅನ್ಯಾಯದ ಬಗ್ಗೆ ಯೋಚಿಸ್ತಿಲ್ಲ ಅನ್ನೋದೇ ದುರ್ದೈವ.

ಪಬ್ಲಿಕ್‌‌‌ನಲ್ಲಿ ವಿಜಯ್ ಸಿಗ್ನಲ್..ಅಕ್ರಮ ಸಕ್ರಮ ಮಾಡಲು ಸಜ್ಜು?

ಮದ್ವೆ ಫಂಕ್ಷನ್‌‌ನಲ್ಲಿ ತ್ರಿಶಾ ಜೊತೆ ವಿಜಯ್ ಓಪನ್ ಆಗಿ ಓಡಾಟ

ಒಂದ್ಕಡೆ ಪತ್ನಿ ಸಂಗೀತಾ ತಮ್ಮ ಗಂಡ ವಿಜಯ್‌ಗೆ ನಟಿ ತ್ರಿಶಾ ಜೊತೆ ಅಕ್ರಮ ಸಂಬಂಧವಿದೆ ಅನ್ನೋ ಆರೋಪ ಮಾಡಿದ್ದಾರೆ. ಅದಕ್ಕೆ ಪುಷ್ಟಿ ನೀಡುವಂತೆ ಇಷ್ಟು ದಿನ ಕದ್ದು ಮುಚ್ಚಿ ಓಡಾಡ್ತಿದ್ದ ವಿಜಯ್-ತ್ರಿಶಾ ಹೇಗೋ ನಮ್ಮಿಬ್ಬರ ಗುಟ್ಟು ರಟ್ಟಾಗಿಬಿಟ್ಟಿದೆ. ಸೋ.. ಇನ್ಮೇಲೆ ಕದ್ದು ಮುಚ್ಚಿ ಸೀಕ್ರೆಟ್ ಆಗಿ ಮೀಟ್ ಮಾಡೋದು, ಓಡಾಡೋದು ಏನು ಬೇಡ ಅಂತ ನೇರವಾಗಿಯೇ ಸಾರ್ವಜನಿಕವಾಗಿ ಒಟ್ಟೊಟ್ಟಿಗೆ ಓಡಾಡಲು ಮುಂದಾಗಿದ್ದಾರೆ.

ಇತ್ತೀಚೆಗೆ ಪರಿಚಯಸ್ಥರ ಮದ್ವೆ ಕಾರ್ಯಕ್ರಮವೊಂದಕ್ಕೆ ವಿಜಯ್-ತ್ರಿಶಾ ಒಟ್ಟಿಗೆ ಭೇಟಿ ನೀಡಿ, ನೂತನ ದಂಪತಿಗೆ ಶುಭ ಹಾರೈಸಿದ್ದಾರೆ. ಅದರಲ್ಲೂ ಮ್ಯಾಚಿಂಗ್ ಮ್ಯಾಚಿಂಗ್ ಬಟ್ಟೆ ಧರಿಸಿ ಬಂದಿರೋದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಗಂಡ-ಹೆಂಡತಿ ರೀತಿ ನಿರ್ಭೀತಿಯಿಂದ, ನಿಸ್ಸಂಕೋಚವಾಗಿ ಹೀಗೆ ಪಬ್ಲಿಕ್ ಅಪಿಯರೆನ್ಸ್ ನೀಡಿರೋ ವಿಜಯ್-ತ್ರಿಶಾ ಗುಂಡಿಗೆ ನಿಜಕ್ಕೂ ಬಹಳ ಗಟ್ಟಿಯಾಗಿದೆ ಅಂತ ಜನ ಮಾತಾಡ್ತಿದ್ದಾರೆ.

ಅಲ್ಲದೆ, ಇತ್ತೀಚೆಗೆ ನಡೆದ ಟಿವಿಕೆ ಪಕ್ಷದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಭಾವುಕರಾಗಿ ಮಾತನಾಡಿದ ವಿಜಯ್, ಕಣ್ತುಂಬ ನೀರು ತುಂಬಿಕೊಂಡರು. ಸದ್ಯ ನನ್ನ ಸುತ್ತಲೂ ನಡೆಯುತ್ತಿರೋ ವಿಷಯಗಳ ಬಗ್ಗೆ ಯಾರೂ ತಲೆ ಕೆಡಿಸಿಕೋಬೇಡಿ. ನಿಮ್ಮ ಸಮಯಕ್ಕೆ ಅವು ಅನವಶ್ಯಕ. ಅವುಗಳನ್ನ ನಾನೇ ನಿಭಾಯಿಸಿಕೊಳ್ಳುತ್ತೇನೆ. ನನಗೆ ನೋವು ತರಿಸುವ ವಿಷಯ ಏನಂದ್ರೆ ನೀವು ನನಗಾಗಿ ನೋವಿನಲ್ಲಿ ಇರೋದು. ನನ್ನ ಸಮಸ್ಯೆಗಳಿಗಾಗಿ ಒತ್ತಡವನ್ನ ತಗೋತಿರೋದು. ದಯವಿಟ್ಟು ನನಗಾಗಿ ಆ ಹೊರೆಯನ್ನ ಹೊತ್ತುಕೊಳ್ಳಬೇಡಿ. ಜನರ ಕಲ್ಯಾಣಕ್ಕಾಗಿ ಫೋಕಸ್ ಮಾಡೋಣವಷ್ಟೇ ಎಂದಿದ್ದಾರೆ.

ವಿಜಯ್- ತ್ರಿಶಾರದ್ದು ಎಷ್ಟು ವರ್ಷದ ಸ್ನೇಹ ಬಂಧ ಗೊತ್ತಾ..?

ಐದು ಸಿನಿಮಾಗಳಲ್ಲಿ ಒಟ್ಟಿಗೆ ನಟನೆ.. ಒಂದು ಸ್ಪೆಷಲ್ ಸಾಂಗ್

ತ್ರಿಶಾ- ವಿಜಯ್ ಜೋಡಿ ಕಾಲಿವುಡ್‌ನ ಆಲ್ ಟೈಂ ಹಿಟ್ ಜೋಡಿಗಳಲ್ಲೊಂದು. ದಳಪತಿ ವಿಜಯ್ ಗೆ ತ್ರಿಶಾ ಯಾವೆಲ್ಲಾ ಚಿತ್ರಗಳಿಗೆ ನಾಯಕಿ ಆಗಿದ್ದಾರೋ ಅವೆಲ್ಲಾ ಆಲ್ಮೋಸ್ಟ್ ಬ್ಲಾಕ್ ಬಸ್ಟರ್ ಹಿಟ್ಸ್. ಅಂದಹಾಗೆ ಇವರಿಬ್ಬರೂ ಒಟ್ಟಿಗೆ ನಟಿಸಿದ ಸಿನಿಮಾಗಳು ಐದೇ ಐದು. 2004ರ ಗಿಲ್ಲಿ ಚಿತ್ರದಿಂದ ನೋಡುಗರನ್ನ ರಂಜಿಸಿದ ವಿಜಯ್-ತ್ರಿಶಾ, ಅದಾದ ಬಳಿಕ ತಿರುಪಾಚಿ, ಆತಿ, ಕುರುವಿ ಸಿನಿಮಾಗಳನ್ನ ಒಟ್ಟಿಗೆ ಮಾಡಿದ್ರು.

ಕುರುವಿ ಬಂದ ಸುಮಾರು 15 ವರ್ಷಗಳ ಬಳಿಕ ಲಿಯೋ ಚಿತ್ರಕ್ಕಾಗಿ ಮತ್ತೆ ಒಂದಾಯ್ತು ದಳಪತಿ-ತ್ರಿಶಾ ಜೋಡಿ. ಅಂದಹಾಗೆ ಲಿಯೋ ಕಮರ್ಷಿಯಲಿ ಸೂಪರ್ ಹಿಟ್. ಹಳೇ ಜೋಡಿ ಮತ್ತೆ ಮೋಡಿ ಮಾಡಿತು ಅಂತೆಲ್ಲಾ ರಿವ್ಯೂಸ್ ನೀಡಲಾಗಿತ್ತು. ಅಲ್ಲದೆ, ಲಿಯೋ ಚಿತ್ರದ ಇವೆಂಟ್ ವೇಳೆ ಇವರಿಬ್ಬರೂ ಪರಸ್ಪರ ಒಬ್ಬರ ಬಗ್ಗೆ ಮತ್ತೊಬ್ಬರು ಮಾತಾಡಿದ ಪರಿ ಅಂದೇ ಸಂಥಿಂಗ್ ಸಂಥಿಂಗ್ ವಾಸನೆಯನ್ನ ಹರಡಿತ್ತು.

ಇವಲ್ಲದೆ, ಲಿಯೋ ಬಳಿಕ ಬಂದಂತಹ ದಿ ಗ್ರೇಟೆಸ್ಟ್ ಆಫ್ ಆಲ್ ಟೈಂ ಚಿತ್ರದ ಸ್ಪೆಷಲ್ ಹಾಡೊಂದಕ್ಕೆ ವಿಜಯ್ ಜೊತೆ ಸಖತ್ ಸೊಂಟ ಬಳುಕಿಸೋ ಮೂಲಕ ಗಮನ ಸೆಳೆದಿದ್ರು ತ್ರಿಶಾ. ಅರೇ ವಿಜಯ್‌‌ಗಾಗಿ ತ್ರಿಶಾ ಐಟಂ ಡ್ಯಾನ್ಸರ್ ಕೂಡ ಆಗಿಬಿಟ್ರಾ ಅಂತೆಲ್ಲಾ ಜನ ಮೂತಿ ಮೇಲೆ ಬೆರಳಿಟ್ಕೊಂಡು ಮಿಕಾ ಮಿಕಾ ನೋಡಿದ್ರು.

ಲಿಯೋ ಚಿತ್ರದ ಲಿಪ್‌‌ಕಿಸ್‌ಗಾಗಿ ತ್ರಿಶಾ-ವಿಜಯ್ 27 ಟೇಕ್

ವೇದಿಕೆಯಲ್ಲಿ ತ್ರಿಶಾ ಬಗ್ಗೆ ಪಾರ್ಥಿಬನ್ ವಿವಾದಾತ್ಮಕ ಹೇಳಿಕೆ

ಆ್ಯಕ್ಷನ್ ಕಮ್ ರೊಮ್ಯಾಂಟಿಕ್ ಸಿನಿಮಾಗಳನ್ನೇ ಮಡಿರೋ ತ್ರಿಶಾ-ವಿಜಯ್, ಲಿಯೋ ಸಿನಿಮಾದ ಲಿಪ್ ಲಾಕ್ ದೃಶ್ಯವೊಂದಕ್ಕಾಗಿ ಬರೋಬ್ಬರಿ 27 ಟೇಕ್‌‌ಗಳನ್ನ ತೆಗೆದುಕೊಂಡಿದ್ದರಂತೆ. ಅಂದ್ರೆ ಅದು ಉದ್ದೇಶಪೂರ್ವಕವಾಗಿ ಹಾಗೆ ಮಾಡಿದ್ರು ಅನ್ನೋ ಅಪವಾದ ಕೂಡ ಅವರುಗಳ ಮೇಲಿದೆ.

ಸದ್ಯ ಇಂದು ನಡೆದ ಕಾರ್ಯಕ್ರಮವೊಂದರಲ್ಲಿ ಹಿರಿಯ ನಟ ಪಾರ್ಥಿಬನ್, ನಟಿ ತ್ರಿಶಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ತ್ರಿಶಾನ ಮನೆಯಲ್ಲೇ ಇರಿಸಬೇಕು.. ಹೊರಗೆ ಬಿಡಬಾರದು’ ಅನ್ನೋ ಸ್ಟೇಟ್ಮೆಂಟ್ ನೀಡಿದ್ದಾರೆ ಪಾರ್ಥಿಬನ್. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಇದೊಂದು ದ್ವೇಷಪೂರಿತ ದಾಳಿ ಅಂತಲೇ ಜನ ಮಾತಾಡ್ತಿದ್ದಾರೆ.

ಒಟ್ಟಾರೆ ನಟ ವಿಜಯ್‌ಗೆ ಮಾಸ್ ಮಸಾಲ ಸಿನಿಮಾದಲ್ಲಿ ಹೀರೋಯಿನ್, ವಿಲನ್ ಕಾಡುವ ಹಾಗೆ ರಿಯಲ್ ಲೈಫ್‌‌ನಲ್ಲಿ ಕೂಡ ಪ್ರತಿಪಕ್ಷಗಳ ದಾಳಿಗಳು, ಜನರ ಟೀಕೆ ಟಿಪ್ಪಣಿಗಳು, ಬೇರೆ ಸ್ಟಾರ್‌‌ಗಳ ಫ್ಯಾನ್ಸ್ ಮಾಡೋ ಟ್ರೋಲ್‌ಗಳು, ಸಾಮಾಜಿಕ ಜಾಲತಾಣಗಳು, ಮೀಡಿಯಾಗಳು ಸಿಕ್ಕಾಪಟ್ಟೆ ಕಾಲೆಳೆಯುತ್ತಿವೆ. ಇವೆಲ್ಲವುಗಳನ್ನ ಮೆಟ್ಟಿ ಹೇಗೆ ನಿಲ್ತಾರೆ..? ಪವನ್ ಕಲ್ಯಾಣ್ ರೀತಿ ತಾನೂ ಕೂಡ ವಿಜಯ್ ವಿಜಯದ ಗದ್ದುಗೆ ಹೇಗೆ ಹಿಡಿಯುತ್ತಾರಾ ಅಥ್ವಾ ಜನರು ತಮಿಳುನಾಡು ವಿಧಾನಸಭಾ ಚುನಾವಣೆಯ ತೀರ್ಪಿಗೆ ಬದ್ಧರಾಗುತ್ತಾರಾ ಅನ್ನೋದೇ ಕ್ಯೂರಿಯಾಸಿಟಿ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 09T232548.311

ಹಾಸಿಗೆ ಮೇಲೆ ಹೊರಳಾಡುವುದನ್ನು ನಿಲ್ಲಿಸಿ! ನೈಸರ್ಗಿಕವಾಗಿ ಗಾಢಗೆ ಜಾರಲು ಈ 4 ಆಹಾರ ಸೇವಿಸಿ

by ಯಶಸ್ವಿನಿ ಎಂ
March 9, 2026 - 11:31 pm
0

Untitled design 2026 03 09T225955.393

ತಾಮ್ರದ ಲೋಟದಲ್ಲಿ ನೀರು ಕುಡಿಯುತ್ತಿದ್ದೀರಾ? ಈ ತಪ್ಪು ಮಾಡಿದ್ರೆ ಅಪಾಯ ಗ್ಯಾರಂಟಿ..!

by ಯಶಸ್ವಿನಿ ಎಂ
March 9, 2026 - 11:05 pm
0

Untitled design 2026 03 09T223507.289

ಇನ್ಮುಂದೆ ಮನುಷ್ಯರು 150 ವರ್ಷ ಬದುಕುತ್ತಾರಾ ? ಸಂಶೋಧನೆಯಿಂದ ಬಯಲಾಯ್ತು ಅಚ್ಚರಿ ಸತ್ಯ..!

by ಯಶಸ್ವಿನಿ ಎಂ
March 9, 2026 - 10:37 pm
0

Untitled design 2026 03 09T221532.240

ಗ್ಯಾಸ್‌ ಸಿಲಿಂಡರ್‌ ಕೊರತೆ: ನಾಳೆಯಿಂದ ಹೋಟೆಲ್ಸ್‌ ತೆಗೆಯೋದು ಡೌಟ್‌..!!

by ಯಶಸ್ವಿನಿ ಎಂ
March 9, 2026 - 10:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 09T174557.286
    ಪಾಲಿಟಿಕ್ಸ್‌ಗೆ ಪಾದಾರ್ಪಣೆ.. NTR ಮೊಮ್ಮಗ Jr. ಹೇಳಿದ್ದೇನು ?
    March 9, 2026 | 0
  • Untitled design 2026 03 09T161849.560
    ಬಿಗ್ ಅಪ್ಡೇಟ್.. ಜೂ-4ಕ್ಕೆ ಟಾಕ್ಸಿಕ್.. ಜೂ.19ಕ್ಕೆ ಜನನಾಯಗನ್
    March 9, 2026 | 0
  • Untitled design 2026 03 09T155441.657
    ‘ಟಾಕ್ಸಿಕ್’ ಸಿನಿಮಾದ ಪೋಸ್ಟ್‌ಪೋನ್‌ಗೆ ಅಸಲಿ ಕಾರಣ ಬಹಿರಂಗ..!
    March 9, 2026 | 0
  • Untitled design 2026 03 09T154116.126
    ಲವ್ ಫೇಲ್ಯೂರ್, ಡಿಪ್ರೆಷನ್‌ಗೆ ಡೋಂಟ್ ಕೇರ್..! ‘ಡ್ರ್ಯಾಗನ್’ ರೀತಿ ರಕ್ಷಿತ್ ಶೆಟ್ಟಿ ಎಂಟ್ರಿ ?
    March 9, 2026 | 0
  • Untitled design 2026 03 09T152745.229
    ಅಪ್ಪು ಆಕಾಶ್ ಜೊತೆ ಡೆವಿಲ್ ರೀ- ರಿಲೀಸ್.. ಫ್ಯಾನ್ಸ್ ಖುಷ್
    March 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version