• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, May 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪವನ್ ಕಲ್ಯಾಣ್ ಕಿಂಗ್ ಮೇಕರ್ ಆದ್ರೆ ದಳಪತಿ ವಿಜಯ್ ‘ಕಿಂಗ್’

MGR, ಜಯಲಲಿತಾ ಹಾದಿಯಲ್ಲಿ ವಿಜಯ್ ವಿಜಯೋತ್ಸವ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 4, 2026 - 4:58 pm
in ಸಿನಿಮಾ
0 0
0
Untitled design 2026 05 04T165353.989

ತಮಿಳುನಾಡು ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲ ಆಗಿದೆ. ಇಲ್ಲಿಯ ತನಕ ನೀವು ಓದಿದಿ ಇತಿಹಾಸ ಈಗ ಕಂಪ್ಲೀಟ್ ಆಗಿ ಬದಲಿಸಿ ಬರೆಯುವಂತಾಗಿದೆ. ಯೆಸ್.. ಯಾರೂ ಕಂಡು ಕೇಳರಿಯದ ರೇಂಜ್‌‌ನಲ್ಲಿ ದಳಪತಿ ವಿಜಯ್ ಮೊದಲ ಹೆಜ್ಜೆಯಲ್ಲೇ ಭಾರೀ ವಿಜಯ ಸಾಧಿಸೋ ಮೂಲಕ ಸಿಎಂ ಆಗ್ತಿದ್ದಾರೆ. ಸ್ಟಾಲಿನ್ ಡಿಎಂಕೆ ಭದ್ರಕೋಟೆ ಛಿದ್ರ ಆಗಿದ್ದು, ಚುನಾವಣಾ ಫಲಿತಾಂಶ ಮಾಸ್ಟರ್‌‌ಸ್ಟ್ರೋಕ್ ನೀಡಿದೆ. ಈ ಕುರಿತ ಕಂಪ್ಲೀಟ್ ಅಪ್ಡೇಟ್ಸ್ ಇಲ್ಲಿದೆ ನೋಡಿ.

  • ಪವನ್ ಕಲ್ಯಾಣ್ ಕಿಂಗ್ ಮೇಕರ್ ಆದ್ರೆ ವಿಜಯ್ ‘ಕಿಂಗ್’
  • ಇಷ್ಟು ದಿನ ಬಾಕ್ಸ್ ಆಫೀಸ್.. ಈಗ EVM ಮಷಿನ್‌‌ ಸುಲ್ತಾನ

ರಾಜಕೀಯ ಒಂಥರಾ ಅನ್‌‌ಪ್ರೆಡಿಕ್ಟಬಲ್. ಯಾವಾಗ ಎಲ್ಲಿ ಏನಾಗುತ್ತೆ ಅನ್ನೋದನ್ನ ಊಹಿಸೋದು ಬಹಳ ಅಸಾಧ್ಯದ ಮಾತು. ಅದ್ಹೇಗೆ ಅಂದ್ರೆ ಐಪಿಎಲ್‌‌‌ ಮ್ಯಾಚ್ ನೋಡುವಾಗ ಒಂದೊಂದು ಓವರ್‌‌ಗೂ ಮ್ಯಾಚ್ ವಿನ್ನಿಂಗ್ ಪ್ರೆಡಿಕ್ಟ್ ಬದಲಾಗ್ತಾ ಹೋಗುವ ಹಾಗೆ. ಯೆಸ್.. ಇದನ್ನ ಈಗ್ಯಾಕೆ ಹೇಳ್ತಿದ್ದೀವಿ ಅಂದ್ರೆ ತಮಿಳುನಾಡು, ಕೇರಳಂ, ಪುದುಚೆರಿ ಸೇರಿದಂತೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ.

RelatedPosts

ಎಸ್.ಕೆ ಸುನೀಲ್ ಕುಮಾರ್ ನಿರ್ದೇಶನದ “ಮಕ್ಕಳ ಸೈನ್ಯೆ” ಚಿತ್ರ ಮೇ 22 ರಂದು ತೆರೆಗೆ

ಟಿವಿಕೆ & ದಳಪತಿ ವಿಜಯ್‌ಗೆ ಐತಿಹಾಸಿಕ ವಿಕ್ಟರಿ..!!

ರೇಣುಕಾಸ್ವಾಮಿ ಕೇಸ್: ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಅರ್ಜಿ ವಿಚಾರಣೆ ಏನಾಯ್ತು??

ರಿಸಲ್ಟ್‌ಗೂ ಮುನ್ನ ತ್ರಿಶಾ ತಿರುಪತಿ ಭೇಟಿ ನೀಡಿದ್ದು ವಿಜಯ್​​ಗೋಸ್ಕರಾನಾ?

ADVERTISEMENT
ADVERTISEMENT

ಅದರಲ್ಲೂ ತಮಿಳುನಾಡು ರಾಜ್ಯ ರಾಜಕಾರಣದಲ್ಲಿ ಹಿಂದೆಂದೂ ಕಂಡು ಕೇಳರಿಯದ ಮಹತ್ವದ ಬದಲಾವಣೆಗಳು ಆಗಿರೋದು ಅಚ್ಚರಿ ಮೂಡಿಸಿದೆ. ಜೈಲಲ್ಲಿದ್ದ ಚಂದ್ರಬಾಬು ನಾಯ್ಡುರನ್ನ ಹೊರಗೆ ಕರೆತಂದು, ಮತ್ತೆ ಆತ ಟಿಡಿಪಿಯಿಂದ ಸಿಎಂ ಆಗುವಂತೆ ಮಾಡಿದ್ರು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್. ಅಷ್ಟೇ ಅಲ್ಲ ವೈಸಿಪಿಗೆ ಕಂಪ್ಲೀಟ್ ಆಗಿ ಮಣ್ಣು ಮುಕ್ಕಿಸಿ, ತಾನು ಡಿಸಿಎಂ ಕೂಡ ಆಗಿಬಿಟ್ರು ಪವನ್.

ಪವನ್ ಕಲ್ಯಾಣ್ ಆಂಧ್ರ ಪಾಲಿಟಿಕ್ಸ್‌ಗೆ ಕಿಂಗ್ ಮೇಕರ್ ಆದ್ರು. ಆದ್ರೆ ದಳಪತಿ ವಿಜಯ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ತಮಿಳುನಾಡು ರಾಜಕಾರಣದಲ್ಲಿ ಕಿಂಗ್ ಆಗಿದ್ದಾರೆ. ಯೆಸ್ ಟಿವಿಕೆ ಪಕ್ಷ ಸ್ವತಂತ್ರವಾಗಿ ಸರ್ಕಾರವನ್ನ ಕಟ್ಟುವ ರೇಂಜ್‌ಗೆ ಫಲಿತಾಂಶ ಹೊರಬಿದ್ದಿದ್ದು, ಇಷ್ಟು ದಿನ ಬರೀ ಬಾಕ್ಸ್ ಆಫೀಸ್ ಸುಲ್ತಾನನಾಗಿ ಅಬ್ಬರಿಸುತ್ತಿದ್ದ  ವಿಜಯ್, ಸದ್ಯ ಇವಿಎಂ ಮಷಿನ್ಸ್‌‌ಗೂ ಸುಲ್ತಾನ ಅನ್ನೋದು ಪ್ರೂವ್ ಆಗಿದೆ.

  • ಡಿಎಂಕೆ ಸ್ಟಾಲಿನ್‌ಗೆ ಮಾಸ್ಟರ್‌ಸ್ಟ್ರೋಕ್.. ಹಿಸ್ಟರಿ ರೀ- ರೈಟ್..!!
  • MGR, ಜಯಲಲಿತಾ ಹಾದಿಯಲ್ಲಿ ವಿಜಯ್ ವಿಜಯೋತ್ಸವ

ಒಂದು ಕಾಲದಲ್ಲಿ ತಮಿಳುನಾಡು ಅಂದ್ರೆ ಅಣ್ಣಾ ದೊರೈ ಕಟ್ಟಿದ ಡಿಎಂಕೆ ಎನ್ನಲಾಗುತ್ತಿತ್ತು. ನಂತ್ರ ಅದರ ಚುಕ್ಕಾಣಿಯನ್ನ ಕರುಣಾನಿಧಿ ಹಾಗೂ ಸೂಪರ್ ಸ್ಟಾರ್ ಎಂಜಿಆರ್‌‌ ಹಿಡಿದರು. ಎಂಜಿಆರ್ ಸಾಲು ಸಾಲು ಸಿನಿಮಾಗಳಲ್ಲಿ ಡಿಎಂಕೆ ಪಕ್ಷದ ಸೂರ್ಯ ಚಿಹ್ನೆಯನ್ನ ಖುದ್ದು ಅವರೇ ಪ್ರಮೋಟ್ ಮಾಡಿದ್ದಾರೆ ಕೂಡ. ಆದ್ರೆ ಯಾವಾಗ ಎಂಜಿಆರ್ ತನಗೆ ಮುಂದೊಂದು ದಿನ ಮುಳುವಾಗ್ತಾರೆ ಅಂತ ಕರುಣಾನಿಧಿಗೆ ಅನಿಸುತ್ತೋ, ಅಂದೇ ಎಂಜಿಆರ್‌‌ರಿಂದ ಅಂತರ ಕಾಯ್ದುಕೊಳ್ತಾರೆ ಕರುಣಾನಿಧಿ. ಆಗಲೇ ಎಂಜಿಆರ್‌ ಡಿಎಂಕೆ ಪಕ್ಷದಿಂದ ಹೊರಬಂದು ಎಐಡಿಎಂಕೆ ಕಟ್ಟುತ್ತಾರೆ. ಅದಕ್ಕೆ ಜಯಲಲಿತಾ ಕೂಡ ಕೈ ಜೋಡಿಸ್ತಾರೆ.

ಡಿಎಂಕೆ ಹಾಗೂ ಎಐಡಿಎಂಕೆ ಪಕ್ಷಗಳು ತಮಿಳುನಾಡಿನ ಬಹಳ ಗಟ್ಟಿಯಾದ ಪ್ರಾದೇಶಿಕ ಪಕ್ಷಗಳಾಗಿ ಹೊರಹೊಮ್ಮಿ ನಾನಾ-ನೀನಾ ಫೈಟ್‌‌‌ನಂತೆ ರಾಜ್ಯಭಾರ ಮಾಡ್ತಾ ಬರ್ತಿವೆ. ಅದರಲ್ಲೂ ಜಯಲಲಿತಾ ನಿಧನಾ ನಂತರ ಎಐಡಿಎಂಕೆ ಕಂಪ್ಲೀಟ್ ಆಗಿ ದುರ್ಬಲಗೊಂಡಿದ್ದು, ಬಿಜೆಪಿ ಜೊತೆ ಕೈ ಜೋಡಿಸಿತು. ಇತ್ತ ಸ್ಟಾಲಿನ್ ಡಿಎಂಕೆ ಪಕ್ಷದಿಂದ ಗೆದ್ದು, ಸಿಎಂ ಆಗುವ ಮೂಲಕ ತಮ್ಮ ಕೋಟೆ ಕೊತ್ತಲುಗಳನ್ನ ಮತ್ತಷ್ಟು ವಿಸ್ತರಿಸಿಕೊಂಡಿದ್ದರು. ಅವರ ಆಟ ಇಲ್ಲಿಯ ತನಕ ನಡೆಯಿತಷ್ಟೇ. ಆದ್ರೀಗ ಅಂತಹ ದೈತ್ಯ ಪ್ರತಿಭೆ ಸ್ಟಾಲಿನ್‌ಗೇ ಮಾಸ್ಟರ್‌ಸ್ಟ್ರೋಕ್ ನೀಡಿದ್ದಾರೆ ದಳಪತಿ ವಿಜಯ್.

ಹೌದು.. ಟಿವಿಕೆ ಪಕ್ಷ ಕಟ್ಟಿ, ಅದನ್ನ ಬಹುಬೇಗ ಅಧಿಕಾರಕ್ಕೆ ತರುವಲ್ಲಿ ದಳಪತಿ ವಿಜಯ್ ಯಶಸ್ವಿ ಆದರು. ಆ ಮೂಲಕ ಇಲ್ಲಿಯ ತನಕ ಇದ್ದಂತಹ ತಮಿಳುನಾಡು ರಾಜ್ಯ ರಾಜಕಾರಣದ ಇತಿಹಾಸದ ಪುಟಗಳನ್ನ ಮತ್ತೆ ತಿರುಗಿಸಿ ಹೊಸ ಇತಿಹಾಸ ಬರೆದಿದ್ದಾರೆ ಜೋಸೆಫ್ ವಿಜಯ್ ಚಂದ್ರಶೇಖರ್. ಸ್ಟಾಲಿನ್‌ಗಿಂತ ಅರ್ಧಕ್ಕರ್ಧದಷ್ಟು ಹೆಚ್ಚುವರಿ ಸೀಟ್‌‌ಗಳನ್ನ ಗೆದ್ದು, ತಾನು ಸಿನಿಮಾದಲ್ಲಷ್ಟೇ ಅಲ್ಲ, ಪಾಲಿಟಿಕ್ಸ್‌‌ನಲ್ಲೂ ಹೀರೋನೇ ಅನ್ನೋದನ್ನ ತೋರಿಸಿದ್ದಾರೆ ದಳಪತಿ.

  • ಅದೊಂದು ಸಿನಿಮಾ ದಳಪತಿ ಹಣೆಬರಹ ಬದಲಿಸಿದ್ಹೇಗೆ..?!
  • ಸರ್ಕಾರ್ ಸಿನಿಮಾದಿಂದ ಬದಲಾಯ್ತು ದಳಪತಿ ಇಮೇಜ್
  • ವೋಟ್ ಮಹತ್ವ ಸಾರಿದ್ದ ಚಿತ್ರ.. ರೀಲ್‌‌ನಂತೆ ರಿಯಾಲಿಟಿ..!
  • ದೇಶ, ವಿದೇಶಗಳಿಂದ ಬಂದು ಮತ ಚಲಾಯಿಸಿದ್ದ ಫ್ಯಾನ್ಸ್

ಸರ್ಕಾರ್.. 2018ರಲ್ಲಿ ತೆರೆಕಂಡ ತಮಿಳಿನ ಈ ಸಿನಿಮಾ ದಳಪತಿ ವಿಜಯ್ ಕರಿಯರ್‌‌ನ ಗೇಮ್ ಚೇಂಜರ್ ಸಿನಿಮಾ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಎ ಆರ್ ಮುರುಗದಾಸ್ ನಿರ್ದೇಶನದ ಈ ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಮತದಾರನ ವೋಟ್‌‌ಗಿರೋ ಪವರ್ ಎಂಥದ್ದು ಅನ್ನೋದನ್ನ ಸಮಾಜಕ್ಕೆ ತಿಳಿಸುವ ಪ್ರಯತ್ನ ನಡೆದಿತ್ತು. ಎಲ್ಲೋ ವಿದೇಶದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಂತಹ ಹೀರೋ, ಎಲೆಕ್ಷನ್ ಬಂದಾಗ ಮತ ಚಲಾಯಿಸಿ ಹೋಗೋಕೆ ಅಂತ ತಮಿಳುನಾಡಿನ ತಮ್ಮ ಮನೆಗೆ ಬರ್ತಾನೆ. ಆಗ ಯಾರೋ ಕಳ್ಳ ವೋಟ್ ಹಾಕೋ ಮೂಲಕ ತನಗೆ ವೋಟ್ ಹಾಕುವ ಹಕ್ಕೇ ಇಲ್ಲದಂತೆ ಮಾಡ್ತಾರೆ. ಅದನ್ನ ಪ್ರಶ್ನಿಸಿ ಎಲೆಕ್ಷನ್ ಕಮಿಷನ್ ವಿರುದ್ಧ ಕೋರ್ಟ್‌ಗೆ ಹೋಗುವ ಹೀರೋ, ಸಿಎಂ ಪ್ರಮಾಣ ವಚನ ಕ್ಯಾನ್ಸಲ್ ಆಗಿ, ಮತ್ತೆ ಮರು ಚುನಾವಣೆ ನಡೆಯುವಂತಾಗುತ್ತೆ.

ಇಡೀ ಸಿನಿಮಾ ರಾಜಕೀಯ ವ್ಯವಸ್ಥೆ, ನಮ್ಮ ಸಮಾಜ, ಜನರ ಪರಿಸ್ಥಿತಿ ಹಾಗೂ ಮನಸ್ಥಿತಿಗಳ ಮೇಲೆ ಕೆಂದ್ರೀಕೃತವಾಗಿದ್ದು, ಟೆಕ್ನಾಲಜಿ ಹಾಗೂ ಯೂತ್ಚ್ ಪವರ್‌‌ನಿಂದ ರಾಜ್ಯ ರಾಜಕಾರಣದ ದಿಕ್ಕು, ದೆಸೆ ಹೇಗೆಲ್ಲಾ ಬದಲಿಸಬಹುದು ಅನ್ನೋದನ್ನ ತೋರಿಸಲಾಗಿದೆ. ಬಹುಶಃ ಸರ್ಕಾರ್ ಸಿನಿಮಾ ರೀಲ್ ಇರಬಹುದು. ಆದ್ರೆ ರಿಯಲ್ ಲೈಫ್‌‌ಗೆ ಅದನ್ನ ಬಹಳಷ್ಟು ಮಂದಿ ಅಳವಡಿಸಿಕೊಂಡರು.

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಲು ದೇಶ, ವಿದೇಶಗಳಿಂದ ಸಾವಿರಾರು ಕಿಲೋಮೀಟರ್ ಗಟ್ಟಲೆ ಪ್ರಯಾಣ ಮಾಡಿ ಬಂದಿದ್ರು ಮತದಾರರು. ಅದನ್ನ ವಿಡಿಯೋಗಳ ಮೂಲಕ ವಿಜಯ್‌ಗಾಗಿಯೇ ನಾವು ವೋಟ್ ಮಾಡೋಕೆ ಅಷ್ಟು ದೂರದಿಂದ ಬಂದೆವು ಅಂತ ಓಪನ್ ಆಗಿಯೇ ಹೇಳಿಕೊಂಡಿದ್ದರು. ಅದೇ ಕಾರಣದಿಂದ ತಮಿಳುನಾಡು ವಿಧಾನ ಸಭಾ ಚುನಾವಣೆಯ ಇತಿಹಾಸದಲ್ಲಿ ಇಲ್ಲಿಯತನಕ ಆಗದೇ ಇರೋ ಅಷ್ಟು ಶೇಕಡಾವಾರು ವೋಟಿಂಗ್ ಆಗಿತ್ತು. ಎಲೆಕ್ಷನ್ ಕಮಿಷನ್ ಹೇಳಿದಂತೆ ಬರೋಬ್ಬರಿ 84% ವೋಟಿಂಗ್ ಈ ಬಾರಿ ಆಗಿರೋದು ಇತಿಹಾಸವೇ ಸರಿ.

  • ನಿಜವಾಯ್ತು ವಿಜಯ್ ಆ ಸಿಂಗಲ್ ಲಯನ್ ಡೈಲಾಗ್
  • ವಿಜಯೋತ್ಸವಕ್ಕೂ ಮುನ್ನ ಎದುರಾಗಿದ್ವು ಹತ್ತಾರು ವಿಘ್ನ

ಎಲೆಕ್ಷನ್ ಕ್ಯಾಂಪೇನ್ ವೇಳೆ ಕರೂರು ಕಾಲ್ತುಳಿತ ಪ್ರಕರಣ, ಜನನಾಯಗನ್ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಎದುರಾಗಿ ರಿಲೀಸ್ ಆಗದೇ ಇದ್ದಿದ್ದು, ಪತ್ನಿ ಸಂಗೀತಾ ಡಿವೋರ್ಸ್ ನೀಡಲು ಮುಂದಾಗಿದ್ದು, ನಟಿ ತ್ರಿಶಾ ಜೊತೆಗಿನ ಅಕ್ರಮ ಸಂಬಂಧದ ಆರೋಪ.. ಓ ಮೈ ಗಾಡ್ ದಳಪತಿ ವಿಜಯ್‌ಗೆ ಎದುರಾದ ವಿಘ್ನಗಳು ಒಂದಾ ಎರಡಾ..? ಹೀಗೆ ಹೇಳ್ತಾ ಹೋದ್ರೆ ಸಾಕಷ್ಟಿವೆ. ಆದ್ರೆ ಅವೆಲ್ಲವನ್ನ ಎದೆಗುಂದದೆ, ಧೈರ್ಯವಾಗಿ ಎದುರಿಸಿ, ಗಟ್ಟಿಯಾಗಿ ನೆಲೆ ನಿಂತರು ದಳಪತಿ ವಿಜಯ್.

ಚುನಾವಣಾ ಕ್ಯಾಂಪೇನ್ ವೇದಿಕೆಗಳಲ್ಲಿ ಖುದ್ದು ವಿಜಯ್ ಹೇಳಿದಂತೆ.. ವಿಜಯ್‌‌ನ ಯಾಕಾದ್ರೂ ಕೆಣಕಿದ್ವಿ ಅಂತ ಮುಟ್ಟಿ ನೋಡಿಕೊಳ್ಳಬೇಕು. ಅಂಥದ್ದೊಂದು ದಿನ, ಕ್ಷಣ ಬರುತ್ತೆ ಅಂದಿದ್ರು. ಅದೀಗ ನಿಜವಾಗಿದೆ. ಅಷ್ಟೇ ಅಲ್ಲ, ಸಿಂಗಲ್ ಲಯನ್ ಡೈಲಾಗ್ ಕೂಡ ಹೊಡೆದಿದ್ರು ದಳಪತಿ. ಅದು ಬರೀ ಡೈಲಾಗ್ ಆಗಿ ಮಾತ್ರ ಉಳಿದಿಲ್ಲ. ಹಿ ಈಸ್ ಹಂಡ್ರೆಡ್ ಪರ್ಸೆಂಟ್ ಲಯನ್ ರೀತಿ ಕಿಂಗ್ ಆಫ್ ತಮಿಳುನಾಡು ಪಾಲಿಟಿಕ್ಸ್ ಅನ್ನೋದನ್ನ ಸಾಧಿಸಿ ತೋರಿಸಿದ್ದಾರೆ.

ಅಂದಹಾಗೆ ವಿಜಯ್ ರಾಜಕೀಯ ಕರಿಯರ್‌ಗೆ ಬ್ರೇಕ್ ಹಾಕಲು ಸ್ಟಾಲಿನ್ ಮಾಡಿದ ಕಸರತ್ತುಗಳು ಅಷ್ಟಿಷ್ಟಲ್ಲ. ಆದ್ರೆ ಅದ್ಯಾವುದಕ್ಕೂ ಕುಗ್ಗದೆ, ತಾನು ಏನು..? ತನ್ನ ಖದರ್ ಏನು ಅನ್ನೋದನ್ನ ಮನೋಬಲ ಹಾಗೂ ಅಭಿಮಾನಿ ಬಳಗದಿಂದಲೇ ಗೆದ್ದು ತೋರಿಸಿದ್ದಾರೆ ವಿಜಯ್. ಹೆಸರಿಗೆ ತಕ್ಕನಾಗಿ ಈತ ಸಕ್ಸಸ್‌‌ಗೆ ಕೇರ್ ಆಫ್ ಅಡ್ರೆಸ್. ಕೇವಲ 69 ಸಿನಿಮಾಗಳನ್ನ ಮಾಡಿರೋ ವಿಜಯ್ ದ್ರಾವಿಡ ನೆಲದ ಗೇಮ್ ಚೇಂಜರ್ ಆಗಿ, ಎಂಜಿಆರ್, ಜಯಲಲಿತಾ ಹಾದಿಯಲ್ಲಿ ಜರ್ನಿ ಶುಭಾರಂಭ ಮಾಡಿರೋದು ಹೊಸ ಅಧ್ಯಾಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್   

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 05 04T212654.367

ಎಸ್.ಕೆ ಸುನೀಲ್ ಕುಮಾರ್ ನಿರ್ದೇಶನದ “ಮಕ್ಕಳ ಸೈನ್ಯೆ” ಚಿತ್ರ ಮೇ 22 ರಂದು ತೆರೆಗೆ

by ಶಾಲಿನಿ ಕೆ. ಡಿ
May 4, 2026 - 9:28 pm
0

Untitled design 2026 05 04T211146.526

“ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಅರಳಿದ ಕಮಲ”: ಬಿಜೆಪಿ ಗೆಲುವಿಗೆ ಪ್ರಧಾನಿ ಮೋದಿ ಸಂತಸ

by ಶಾಲಿನಿ ಕೆ. ಡಿ
May 4, 2026 - 9:17 pm
0

Wmremove transformed

ಪಂಚರಾಜ್ಯಗಳ ಮಹಾಸಮರ: ಯಾರ ಕೈ ಹಿಡಿದಿದ್ದಾನೆ ಮತದಾರ?

by Hemanth Kumar S
May 4, 2026 - 8:45 pm
0

Untitled design 2026 05 04T201231.223

ಪಂಚರಾಜ್ಯ ಚುನಾವಣೆ: ಟ್ವೀಟ್ ಮೂಲಕ ಕಾರ್ಯಕರ್ತರು, ಮತದಾರರಿಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

by ಶಾಲಿನಿ ಕೆ. ಡಿ
May 4, 2026 - 8:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 04T212654.367
    ಎಸ್.ಕೆ ಸುನೀಲ್ ಕುಮಾರ್ ನಿರ್ದೇಶನದ “ಮಕ್ಕಳ ಸೈನ್ಯೆ” ಚಿತ್ರ ಮೇ 22 ರಂದು ತೆರೆಗೆ
    May 4, 2026 | 0
  • Untitled design 2026 05 04T181552.181
    ಟಿವಿಕೆ & ದಳಪತಿ ವಿಜಯ್‌ಗೆ ಐತಿಹಾಸಿಕ ವಿಕ್ಟರಿ..!!
    May 4, 2026 | 0
  • BeFunky collage (58)
    ರೇಣುಕಾಸ್ವಾಮಿ ಕೇಸ್: ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಅರ್ಜಿ ವಿಚಾರಣೆ ಏನಾಯ್ತು??
    May 4, 2026 | 0
  • BeFunky collage (69)
    ರಿಸಲ್ಟ್‌ಗೂ ಮುನ್ನ ತ್ರಿಶಾ ತಿರುಪತಿ ಭೇಟಿ ನೀಡಿದ್ದು ವಿಜಯ್​​ಗೋಸ್ಕರಾನಾ?
    May 4, 2026 | 0
  • BeFunky collage (55)
    ರೇಣುಕಾಸ್ವಾಮಿ ಕೊಲೆ ಕೇಸ್: ಸುಪ್ರೀಂಕೋರ್ಟ್ ನಲ್ಲಿ ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ಏನಾಗುತ್ತದೆ?
    May 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version