ತಮಿಳುನಾಡು ಸಿಎಂ ದಳಪತಿ ವಿಜಯ್ ಸಿಎಂ ಸೀಟ್‌ನಲ್ಲೇ ಊಟ ಮಾಡೋ ಮೂಳಕ ಸರಳ ಸರ್ಕಾರ್ ಅನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರಿಗೆ ಪ್ರೈಮ್ ಮಿನಿಸ್ಟರ್ ಆಗುವ ಯೋಗ ಕೂಡ ಅನ್ನೋ ಭವಿಷ್ಯ ನುಡಿದಿದ್ದಾರೆ ಜ್ಯೋತಿಷಿ. ಇದರೊಟ್ಟಿಗೆ ಸಿಎಂ ವಿಜಯ್ ಹೆಸರು ಹೇಳ್ತಿದ್ದಂತೆ ನಾಚಿ ನೀರಾಗಿದ್ಯಾಕೆ ಸೌತ್ ಕ್ವೀನ್ ತ್ರಿಶಾ..? ವಿಜಯ್ ಸಿಎಂ ಆಗಿದ್ದಕ್ಕೆ ಶಾಕ್ ಆಗಿದ್ಯಾಕೆ ತಲೈವಾ ರಜನಿಕಾಂತ್ ಅನ್ನೋದ್ರ ಫುಲ್ ಡೆಟೇಲ್ಸ್ ಇಲ್ಲಿದೆ ನೋಡಿ..
- CM ಸೀಟ್‌ನಲ್ಲೇ ಊಟ.. ವಿಜಯ್ ಸರಳ ಸರ್ಕಾರ್
- ಸಿನಿಮಾ ಸ್ಟೈಲ್‌ನಲ್ಲಿ ಬಾಕ್ಸ್‌ನಲ್ಲೇ ಊಟ ಸವಿದ ಸಿಎಂ
ತಮಿಳುನಾಡು ಸಿಎಂ ವಿಜಯ್ ಸದ್ಯ ಸೆನ್ಸೇಷನಲ್ ಸಿಎಂ ಆಫ್ ಇಂಡಿಯಾ ಅಂದ್ರೆ ತಪ್ಪಾಗಲ್ಲ. ಹೌದು.. ಎರಡೇ ವರ್ಷದಲ್ಲಿ ಹೊಸ ಪಕ್ಷ ಕಟ್ಟಿ, ಅದನ್ನ ಆಡಳಿತಕ್ಕೆ ತಂದು, ಸಿಎಂ ಆಗಿದ್ದು ನಿಜಕ್ಕೂ ಇತಿಹಾಸವೇ ಸರಿ. ಆದ್ರೀಗ ಸಿಎಂ ವಿಜಯ್ ಏನೇ ಮಾಡಿದ್ರೂ ಟಾಕ್ ಆಫ್ ದಿ ಟೌನ್ ಆಗ್ತಿದ್ದಾರೆ. ಸೆಷನ್‌ನಲ್ಲಿ ಎಲ್ಲರೂ ಹೇಳುವ ಮಾತುಗಳನ್ನ ನೋಟ್ ಮಾಡಿಕೊಳ್ತಿದ್ದ ಅವ್ರ ತಾಳ್ಮೆ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಸಿಎಂ ಸೀಟ್‌ನಲ್ಲೇ ಕೂತು, ಅದೇ ಟೇಬಲ್ ಮೇಲೆ ಬಾಕ್ಸ್‌ನಲ್ಲೇ ಊಟ ಸವಿಯೋ ಫೋಟೋಸ್ ಸರದಿ.
ಯೆಸ್.. ಸಿಎಂ ಆಫೀಸ್‌ನಲ್ಲಿ ಸಿಎಂ ಟೇಬಲ್‌ನಲ್ಲೇ ತಟ್ಟೆ ಕೂಡ ಇಲ್ಲದೆ, ತುಂಬಾ ಸಿಂಪಲ್ ಆಗಿ ಸಿಎಂ ವಿಜಯ್ ಊಟ ಸವಿದಿದ್ದಾರೆ. ಇದು ನೋಡೋಕೆ ಸಿನಿಮಾ ದೃಶ್ಯದಂತಿದ್ದು, ರಿಯಾಲಿಟಿ ಅಂದ್ರೆ ಒಪ್ಪಿಕೊಳ್ಳಬೇಕು. ಹಾಗಾಗಿಯೇ ಎಲ್ಲರೂ ದಳಪತಿ ಸರ್ಕಾರ್‌ನ ಸರಳ ಸರ್ಕಾರ್ ಅಂತಿದ್ದಾರೆ. ಇದು ನಿಜಕ್ಕೂ ಒಬ್ಬ ಯಂಗ್‌ಸ್ಟರ್ ಸಿಎಂ ತನ್ನಿಂದಲೇ ತರ್ತಿರೋ ಕ್ರಾಂತಿಕಾರಿ ಬದಲಾವಣೆ ಅನ್ನಬಹದು.
- PM ಆಗ್ತಾರಂತೆ CM ವಿಜಯ್.. ಜ್ಯೋತಿಷಿ ಭವಿಷ್ಯ!
- ವಿಜಯ್ ಸಿಎಂ ಆಗಿದ್ದು ಶಾಕ್ ಆಯ್ತು ಎಂದ ರಜನಿ
- ರಜನಿ-ಸ್ಟಾಲಿನ್ ಭೇಟಿಗೆ ಟೀಕೆ.. ಸ್ಪಷ್ಟನೆ ಕೊಟ್ಟ ತಲೈವಾ
- MGR-NTRನ ಮೀರಿಸಿದ ವಿಜಯ್‌ಗೆ ರಜನಿ ಶ್ಲಾಘನೆ
ರಾಧನ್ ಪಂಡಿತ್ ವೆಟ್ರಿವೇಲ್.. ತಮಿಳುನಾಡು ಸಿಎಂ ಅವ್ರ ಪರ್ಸನಲ್ ಜ್ಯೋತಿಷಿ ಆಗಿ ಅಪಾಯಿಂಟ್ ಆಗಿರೋ ಜ್ಯೋತಿಷಿ ಈತ. ಅಂದಹಾಗೆ ವಿಜಯ್ ಸಿಎಂ ಆಗ್ತಾರೆ ಅನ್ನೋದನ್ನ ಮೊದಲೇ ಭವಿಷ್ಯ ನುಡಿದಿದ್ರಂತೆ ಈ ರಾಧನ್ ಪಂಡಿತ್. ಇದೀಗ ಅದೇ ಸಿಎಂ ವಿಜಯ್ ಮುಂದೊಂದು ದಿನ ಪ್ರೈಮ್ ಮಿನಿಸ್ಟರ್ ಆಗ್ತಾರೆ ಅಮದಿರೋ ಮಾತು ಸಖತ್ ಟ್ರೆಂಡಿಂಗ್ ನಲ್ಲಿದೆ. ಹಾಗಾದ್ರೆ ವಿಜಯ್ ಭವಿಷ್ಯದಲ್ಲಿ ಪ್ರಧಾನ ಮಂತ್ರಿ ಆಗ್ತಾರಾ..? ಗೊತ್ತಿಲ್ಲ. ಕಾದು ನೋಡಬೇಕಿದೆ.
ಇನ್ನೂ ಚೆನ್ನೈನ ಪೋಯೆಸ್ ಗಾರ್ಡನ್‌ನಲ್ಲಿರೋ ತಮ್ಮ ನಿವಾಸದ ಮುಂದೆ ಡಿಢೀರ್ ಅಂತ ಸುದ್ದಿಗೋಷ್ಠಿ ಕರೆದಂತಹ ಸೂಪರ್ ಸ್ಟಾರ್ ರಜನಿಕಾಂತ್, ವಿಜಯ್ ಸಿಎಂ ಆಗಿದ್ದು ಶಾಕ್ ಆಯ್ತು ಎಂದಿದ್ದಾರೆ. ಅಷ್ಟೇ ಅಲ್ಲ, ಖುಷಿ ಕೂಡೆ ಇದೆ. ಹಾಗಾಗಿ ನಾನು ದೂರವಾಣಿ ಕರೆ ಮೂಲಕ ಅವರಿಗೆ ಅಭಿನಂದನೆ ಸಹ ತಿಳಿಸಿದ್ದೇನೆ ಎಂದಿದ್ದಾರೆ. ಅಲ್ಲದೆ, ಕೊಳತ್ತೂರ್ ಕ್ಷೇತ್ರದಲ್ಲಿ ಸೋತ ಮಾಜಿ ಸಿಎಂ ಸ್ಟಾಲಿನ್‌ನ ಭೇಟಿಯಾಗಿದ್ದ ರಜನಿಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅದೆಲ್ಲಕ್ಕೂ ಸ್ಪಷ್ಟನೆ ನೀಡಿರೋ ತಲೈವಾ, ನನ್ನ-ಸ್ಟಾಲಿನ್ ನಡುವಿನ ಸಂಬಂಧ ರಾಜಕೀಯ ಮೀರಿದ್ದು ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಎಂಜಿಎಆರ್ ಹಾಗೂ ಎನ್‌ಟಿಆರ್ ಸಾಧನೆಯನ್ನ ಕೂಡ ವಿಜಯ್ ಮೀರಿಸಿದ್ದಾರೆ ಅಂತ ಎರಡು ಪ್ರಬಲ ದ್ರಾವಿಡ ಪಕ್ಷಗಳ ಮುಂದೆ ಟಿವಿಕೆ ವಿಜಯೋತ್ಸವ ಸಾಧಿಸಿರೋದನ್ನ ಕೊಂಡಾಡಿದ್ದಾರೆ ರಜನಿಕಾಂತ್. ಏಕಾಂಗಿಯಾಗಿ ವಿಜಯ್ ಹೀಗೆ ಗೆಲುವು ಸಾಧಿಸಿದ್ದಾರೆ. ಅದ್ರಲ್ಲೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧದ ಈ ದಿಗ್ವಿಜಯಕ್ಕೆ ಮನಸಾರೆ ಮೆಚ್ಚಿ, ಹರಿಸಿದ್ದಾರೆ.
- ಮುಖ್ಯಮಂತ್ರಿ ಹೆಸರು ಕೇಳಿ ನಾಚಿ ನೀರಾದ ತ್ರಿಶಾ..!
- ಕರುಪ್ಪು ಶೋ ವೇಳೆ ತ್ರಿಶಾ ಕೊಟ್ರು ಅಚ್ಚರಿ ಸ್ಟೇಟ್ಮೆಂಟ್
ಇತ್ತೀಚೆಗೆ ನಟಿ ತ್ರಿಶಾ ಹಾಗೂ ಸೂರ್ಯ ನಟನೆಯ ಕರುಪ್ಪು ಸಿನಿಮಾ ಬಿಡುಗಡೆ ಆಯಿತು. ಅಭಿಮಾನಿಗಳ ಜೊತೆ ಅದ್ರ ಶೋ ವೀಕ್ಷಿಸಲು ಬಂದಿದ್ದ ತ್ರಿಶಾ, ಸಿಎಂ ವಿಜಯ್ ಹೆಸರು ಕೇಳ್ತಿದ್ದಂತೆ ನಾಚಿ ನೀರಾಗಿಬಿಟ್ಟರು. ಅಷ್ಟೇ ಅಲ್ಲ, ತ್ರಿಶಾ ಮೇಡಂ.. ವಿಜಯ್ ಅವರನ್ನ ಕೇಳಿದ್ವಿ ಅಂತ ಹೇಳಿ ಎಂದ ಫ್ಯಾನ್ಸ್‌ಗೆ ಖಂಡಿತ ಖಂಡಿತಾ ಹೇಳ್ತೀನಿ ಅಂದಿರೋ ತ್ರಿಶಾ ರಿಯಾಕ್ಷನ್ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಒಟ್ಟಾರೆ ವಿಜಯ್ ಸಿಎಂ ಆಗಿದ್ದು, ಕರುಪ್ಪು ಸಿನಿಮಾ ಹಿಟ್ ಆಗಿದ್ದು, ತ್ರಿಶಾಗೆ ಪಾಲಿಟಿಕ್ಸ್‌ಗೆ ಆಹ್ವಾನ ಬಂದಿರೋದು ಎಲ್ಲವೂ ಶುಭ ಶಕುನದ ಸಂಕೇತಗಳೇ ಆಗಿವೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





