ಬಾದ್‌ಷಾ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಅದನ್ನ ಸಂಭ್ರಮಿಸುವ ಮೊದಲೇ ಬರೋಬ್ಬರಿ 9 ಸಾವಿರ ಪೈರಸಿ ಲಿಂಕ್ಸ್ ತಲೆ ಎತ್ತಿವೆ. ಮಾರ್ಕ್ ಸಕ್ಸಸ್‌ನಿಂದ ಟ್ರೇಡ್ ಹೆಚ್ಚಿಸಿಕೊಂಡ ಕಿಚ್ಚ, ಸಿಹಿ ಮತ್ತು ಕಹಿಯನ್ನ ಸಕ್ಸಸ್ ಮೀಟ್ ಮೂಲಕ ಹೊರಹಾಕಿದ್ರು. ಎಲ್ಲಾ ಅಂತೆ-ಕಂತೆಗಳಿ ಸ್ಪಷ್ಟನೆ ಕೊಟ್ರು. ಮುಟ್ಟಿ ನೋಡಿಕೊಳ್ಳುವಂತೆ ಟಕ್ಕರ್ ಕೂಡ ನೀಡಿದ್ರು.
- ಬಾದ್‌ಷಾ ಬಿಂದಾಸ್.. ಟ್ರೇಡ್ ಹೆಚ್ಚಿಸಿದ ‘ಮಾರ್ಕ್’ ಸಕ್ಸಸ್
- ಮ್ಯಾಕ್ಸ್‌ಗಿಂತ 25% ಜಾಸ್ತಿ ಕಲೆಕ್ಷನ್.. 95% ಸ್ಕ್ರೀನ್‌ಗಳು ಫುಲ್
- ಕೆರಳಿದ ಕಿಚ್ಚ.. ಹುಬ್ಬಳ್ಳಿಯ ಮಾತು ನೆಗೆಟಿವ್ ಆದ್ರೆ ಆಗ್ಲಿ ಬಿಡಿ
- 24 ಗಂಟೆಯಲ್ಲಿ ಪೈರಸಿ, 48 ಗಂಟೆ ಮೊದಲೇ ಎಚ್ಚರಿಕೆ ಗಂಟೆ
ಕಿಚ್ಚನ ಮಾರ್ಕ್ ಸಿನಿಮಾ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಆದ್ರೂ ಸಹ ಕೆಲ ಕಿಡಿಗೇಡಿಗಳು ಚಿತ್ರದ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ಹೌದು.. ಈ ಸಿನಿಮಾ ಮ್ಯಾಕ್ಸ್‌ಗಿಂತ ಜೋರಾಗಿಯೇ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡ್ತಿದೆ. ಮ್ಯಾಕ್ಸ್‌ಗಿಂತ ಶೇಕಡಾ 25ರಷ್ಟು ಕಲೆಕ್ಷನ್ ಜಾಸ್ತಿನೇ ಇದೆ. ಕರ್ನಾಟಕದಾದ್ಯಂತ ಸುಮಾರು 95 ಪರ್ಸೆಂಟ್ ಸ್ಕ್ರೀನ್ಸ್ ಫುಲ್ ಆಗ್ತಿವೆ. ಮಾಸ್ ಪೊಲಿಟಿಕಲ್ ಡ್ರಾಮಾಗೆ ಪ್ರೇಕ್ಷಕರು ಫಿದಾ ಆಗಿದ್ದು, ಮೊದಲ ದಿನವೇ 16 ಕೋಟಿ ಗಳಿಕೆಯಾಗಿದ್ದು, ಇದು ಕಿಚ್ಚನ ಟ್ರೇಡ್ ಹೆಚ್ಚಿಸಿದೆ.
ಸಿನಿಮಾದ ಸಕ್ಸಸ್‌ನ ಹಂಚಿಕೊಳ್ಳೋಕೆ ಅಂತ ಚಿತ್ರತಂಡದ ಜೊತೆ ಪಂಚತಾರಾ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಿಚ್ಚ, ಸಾಕಷ್ಟು ವಿಷಯಗಳ ಬಗ್ಗೆ ಕೆರಳಿದರು. ಹುಬ್ಬಳ್ಳಿಯ ಸ್ಟೇಟ್‌ಮೆಂಟ್ ನೆಗೆಟಿವ್ ಆದ್ರೆ ಆಗ್ಲಿಬಿಡಿ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕಿಚ್ಚ, 24 ಗಂಟೆಯಲ್ಲಿ ಸಿನಿಮಾ ಪೈರಸಿ ಆಗಿದೆ. ಅದೇ ಕಾರಣಕ್ಕೆ ನಾನು 48 ಗಂಟೆಗಳ ಹಿಂದೆಯೇ ಎಚ್ಚರಿಕೆ ಕೊಟ್ಟಿದ್ದೆ ಎಂದರು.
- 9 ಸಾವಿರ ಪೈರಸಿ ಲಿಂಕ್ಸ್.. ಸರ್ಕಾರ ಕೂಡ ಕೈ ಜೋಡಿಸಬೇಕು
- 45ಗೂ ಪೈರಸಿ.. ಅನಾರೋಗ್ಯದಲ್ಲಿ ನಟಿಸಿದ ಶಿವಣ್ಣನನ್ನೂ ಬಿಟ್ಟಿಲ್ಲ
ಮಾರ್ಕ್ ರಿಲೀಸ್ ಆದ ಒಂದೇ ದಿನದಲ್ಲಿ ಬರೋಬ್ಬರಿ 4 ಸಾವಿರ ಪೈರಸಿ ಲಿಂಕ್ಸ್ ಡಿಟೆಕ್ಟ್ ಆಗಿದ್ದು, ಎರಡನೇ ದಿನದ ವೇಳೆಗೆ ಅವುಗಳ ಸಂಖ್ಯೆ 9 ಸಾವಿರ ಗಡಿ ದಾಟಿದೆ. ಸರ್ಕಾರ ಕೂಡ ಇದಕ್ಕೆ ಕೈ ಜೋಡಿಸಬೇಕು ಎಂದರು ಸುದೀಪ್. ಅಷ್ಟೇ ಅಲ್ಲ, ಅನಾರೋಗ್ಯದ ನಡುವೆಯೂ ಶಿವಣ್ಣ 45 ಸಿನಿಮಾದಲ್ಲಿ ನಟಿಸಿದ್ರು. ಅದನ್ನೂ ಬಿಟ್ಟಿಲ್ಲ. ಪೈರಸಿ ಮಾಡಿದ್ದಾರೆ ಅಂತ 45 ಸಿನಿಮಾದ ಪರ ಕೂಡ ಬ್ಯಾಟ್ ಬೀಸಿದ್ರು ಬಾದ್‌ಷಾ. ಅಲ್ಲದೆ 29ನೇ ತಾರೀಖಿನ ಬಳಿಕ ನೋಡಿ. ಈ ಹಿಂದೆ ಚಿಕ್ಕ ವಯಸ್ಸಿನ ಹುಡುಗರು ಅಂತ ಬಿಟ್ಟಿದ್ದೆವು. ಈಗ ಬಿಡೋ ಪ್ರಮೇಯವೇ ಇಲ್ಲ ಎಂದರು.
- ಸಾನ್ವಿಗೆ ಕೆಟ್ಟ ಕಮೆಂಟ್.. ನನ್ನ ಮಗಳು ಸರ್ ಎದುರಿಸ್ತಾಳೆ
- ವಿಜಯಲಕ್ಷ್ಮೀ ಕಂಪ್ಲೆಂಟ್.. ಕ್ಲಾಸ್ ಫ್ಯಾನ್ಸ್‌ಗೆ ಕಿಚ್ಚನ ಮಾತು
ಮಗಳು ಸಾನ್ವಿ ಸುದೀಪ್‌ಗೆ ಕೆಟ್ಟ ಕಮೆಂಟ್ಸ್ ಮಾಡಿದವರ ಬಗ್ಗೆ ಮಾತನಾಡಿದ ಸುದೀಪ್, ಆಕೆ ನನ್ನ ಮಗಳು ಸರ್. ನಾನೇ ಫೇಸ್ ಮಾಡ್ತಿದ್ದೀನಿ ಅಂದ್ಮೇಲೆ, ನನ್ನ ಹತ್ತರಷ್ಟು ಆಕೆ ಎದುರಿಸ್ತಾಳೆ ಎಂದರು. ಯಾವುದೋ ಕಿತ್ತೋಗಿರೋ ವಿಡಿಯೋಗೆ ಜಾಸ್ತಿ ತಲೆ ಕೆಡಿಸಿಕೊಳ್ಳಬಾರದು. ಜೀವನದಲ್ಲಿ ಜಿಗುಪ್ಸೆ ಬಂದು, ಸೂಸೈಡ್ ಪಾಯಿಂಟ್‌ನಲ್ಲಿ ಇರೋರು ಅವ್ರೆಲ್ಲಾ ಅಂತ ಕಮೆಂಟ್ ಮಾಡೋರ ಮನಸ್ಥಿತಿಯನ್ನ ವಿವರಿಸಿದ್ರು ಕಿಚ್ಚ.
ಇವುಗಳ ಜೊತೆ ತಮ್ಮ ರಾಜಕೀಯ ಎಂಟ್ರಿ ಹಾಗೂ ವಿಜಯಲಕ್ಷ್ಮೀ ಕೊಟ್ಟ ಕಂಪ್ಲೆಂಟ್, ಕ್ಲಾಸ್ ಫ್ಯಾನ್ಸ್ ಎಲ್ಲವುಗಳ ಬಗ್ಗೆ ಮಾತನಾಡಿದ್ರು. ಕಪಾಳಕ್ಕೆ ಹೊಡಿಸಿಕೊಳ್ಳುವಷ್ಟು ಒಳ್ಳೆಯವ ನಾನಲ್ಲ. ಪ್ರೀತಿಯಿಂದ ತಾಯಿ ಹೊಡೆಯೋದು ಬೇರೆ ಎಂದರು ಬಾದ್‌ಷಾ ಕಿಚ್ಚ ಸುದೀಪ್.
ಒಟ್ಟಾರೆ ಎಲ್ಲೆಡೆ ಮಾರ್ಕ್ ಮಸ್ತ್ ಮ್ಯಾಜಿಕ್ ಮಾಡ್ತಿದ್ದು, ನೋಡುಗರು ಎಂಜಾಯ್ ಮಾಡ್ತಿದ್ದಾರೆ. ಬಿಗ್‌ಬಾಸ್ ಬ್ಯುಸಿ ಶೆಡ್ಯೂಲ್ ನಡುವೆ ಮಾರ್ಕ್ ರಿಲೀಸ್ ಮಾಡಿ, ಪ್ರಮೋಷನ್ಸ್ ಮಾಡ್ತಿರೋ ಕಿಚ್ಚನ ಸ್ಪಿರಿಟ್ ಯಂಗ್‌ಸ್ಟರ್ಸ್‌ನ ನಾಚಿಸುವಂತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





