ಜಪಾನ್ ಮಾಧ್ಯಮಗಳ ಮುಂದೆ ಜೂನಿಯರ್ ಎನ್‌ಟಿಆರ್ ಸೀಕ್ರೆಟ್ ಬಿಚ್ಚಿಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ. ಸದ್ಯ RRR ಚಿತ್ರದ ಬಿಹೈಂಡ್ ದಿ ಸೀನ್ಸ್ ಡಾಕ್ಯುಮೆಂಟರಿ ರಿಲೀಸ್ ಮಾಡಿರೋ ಮೌಳಿ, ಕೊಮರಂ ಭೀಮುಡೋ ಹಾಡಿನ ವೇಳೆ ಆದಂತಹ ಅವಿಸ್ಮರಣೀಯ ಕ್ಷಣಗಳ ಬುತ್ತಿ ಬಿಚ್ಚಿಟ್ಟಿದ್ದಾರೆ.
ಜೂನಿಯರ್ ಎನ್‌ಟಿಆರ್..ತಾತ NTR ಹೆಸರನ್ನೇ ಇಟ್ಕೊಂಡು, ಅವ್ರ ಕನ್ನಡಿಯಂತೆ ಚಿತ್ರರಂಗದಲ್ಲಿ ಅತ್ಯದ್ಭುತವಾಗಿ ಬೆಳೆಯುತ್ತಿರೋ ಮೋಸ್ಟ್ ಟ್ಯಾಲೆಂಟೆಡ್ ಸೂಪರ್ ಸ್ಟಾರ್. 500 ಕೋಟಿ ಗಳಿಸೋ ಮೂಲಕ ದಾಖಲೆ ಬರೆದ ದೇವರ ಸಿನಿಮಾದ ಸಕ್ಸಸ್ ಬೆನ್ನಲ್ಲೇ, ಬಾಲಿವುಡ್‌ಗೆ ಹಾರಿದ ತಾರಕ್, ವಾರ್ ಸಿನಿಮಾದ ಸೀಕ್ವೆಲ್ ವಾರ್-2ನಲ್ಲಿ ಬಣ್ಣ ಹಚ್ಚಿದ್ರು.
ಹೃತಿಕ್ ರೋಷನ್ ಜೊತೆ ವಾರ್-2ನಲ್ಲಿ ಜೂನಿಯರ್ ಎನ್‌ಟಿಆರ್ ನಟಿಸಿದ್ದು, ಇವರಿಬ್ಬರ ನಡುವಿನ ಜುಗಲ್ಬಂದಿ ಕಣ್ತುಂಬಿಕೊಳ್ಳಲು ಇಡೀ ಭಾರತೀಯ ಚಿತ್ರರಂಗದ ಎದುರು ನೋಡ್ತಿದೆ. ಆಗಸ್ಟ್ 14ಕ್ಕೆ ವಾರ್-2 ಪ್ರೇಕ್ಷಕರ ಮುಂದೆ ಬರ್ತಿದ್ದು, ರಜನೀಕಾಂತ್ ನಟನೆಯ ಕೂಲಿ ಸಿನಿಮಾ ಜೊತೆ ಬಾಕ್ಸ್ ಆಫೀಸ್ ಕ್ಲ್ಯಾಶ್‌ಗೆ ನಾಂದಿ ಹಾಡ್ತಿದೆ.
ಇವೆಲ್ಲವುಗಳ ನಡುವೆ RRR ಸಿನಿಮಾ ಜಪಾನ್‌ನಲ್ಲಿ ಇಂದಿಗೂ ಹೌಸ್‌ಫುಲ್ ಪ್ರದರ್ಶನ ಕಾಣ್ತಿರೋದು ಇಂಟರೆಸ್ಟಿಂಗ್. ಇತ್ತೀಚೆಗೆ ಆ ತ್ರಿಬಲ್ ಆರ್ ಸಿನಿಮಾದ ಬಿಹೈಂಡ್ ದಿ ಸೀನ್ಸ್ ಡಾಕ್ಯುಮೆಂಟರಿ ಕೂಡ ಮಾಡಿರೋ ರಾಜಮೌಳಿ, ಅದನ್ನ ನೆಟ್‌ಫ್ಲಿಕ್ಸ್ ಮೂಲಕ ರಿಲೀಸ್ ಮಾಡಿದ್ರು. ಸಿನಿಮಾದ ಪ್ರಮೋಷನ್ಸ್‌ಗಾಗಿ ಜಪಾನ್‌ಗೆ ತೆರಳಿದ್ದ ಸೆನ್ಸೇಷನಲ್ ಡೈರೆಕ್ಟರ್ ಮೌಳಿ, ಅಲ್ಲಿನ ಮಾಧ್ಯಮಗಳ ಜೊತೆ ಮಾತಾಡ್ತಾ, ಜೂನಿಯರ್ ಎನ್‌ಟಿಆರ್‌ನ ಕೊಂಡಾಡಿದ್ದಾರೆ.
ಕೊಮರಂ ಭೀಮ್ ಅನ್ನೋ ಪಾತ್ರದಲ್ಲಿ ಎಲ್ಲರ ಹುಬ್ಬೇರಿಸಿದ್ದ ಜೂನಿಯರ್ ಎನ್‌ಟಿಆರ್, ಕೊಮರಂ ಭೀಮುಡೋ ಅನ್ನೋ ಹಾಡಿನಲ್ಲಿನ ಅವರ ಹಾವ, ಭಾವ, ನಟನೆಗಾಗಿ ಆತ ಪರಕಾಯ ಪ್ರವೇಶ ಮಾಡಿದ ಪರಿ ವೆರಿ ವೆರಿ ಇಂಪ್ರೆಸ್ಸೀವ್. ಹಾಗಾಗಿಯೇ ಚಿತ್ರದ ಪ್ರಮುಖ ದೃಶ್ಯಗಳಲ್ಲಿ ಒಂದಾದ ಆ ಹಾಡು, ಅದನ್ನ ಚಿತ್ರೀಕರಿಸಿದ ಕೊರಿಯೋಗ್ರಾಫರ್ ಪ್ರೇಮ್ ರಕ್ಷಿತ್ ಹಾಗೂ ಮನೋಜ್ಞ ಅಭಿನಯ ನೀಡಿದ ಜೂನಿಯರ್ ಎನ್‌ಟಿಆರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ತ್ರಿಬಲ್ ಆರ್ ಸಿನಿಮಾ ರಾಜಮೌಳಿ ನಿರ್ದೇಶನದ್ದೇ ಆದ್ರೂ ಸಹ, ಜೊತೆಗೆ ಕೆಲಸ ಮಾಡಿದಂತಹ ಕಲಾವಿದರು ಹಾಗೂ ತಂತ್ರಜ್ಞರಿಗೆ ಕ್ರೆಡಿಟ್ ಕೊಡೋ ಅವರ ದೊಡ್ಡತನ ಎಂಥದ್ದು ನೋಡಿ. ಚಿತ್ರೀಕರಣದ ವೇಳೆ ಆ ಹಾಡು ಪ್ಲೇ ಆಗ್ತಿದ್ದಂತೆ, ಜೂನಿಯರ್ ಎನ್‌ಟಿಆರ್ ಹಣೆ, ಕಣ್ಣುಬ್ಬು, ಕಣ್ಣು, ದವಡೆ ಎಲ್ಲವೂ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದವಂತೆ. ಅದೇ ಕಾರಣದಿಂದ ರಾಜಮೌಳಿಯ ಆಲ್‌ಟೈಂ ಬೆಸ್ಟ್ ಆ್ಯಕ್ಟರ್ ಯಾರು ಅಂದ್ರೆ, ಅದು ಒನ್ ಅಂಡ್ ಓನ್ಲಿ ತಾರಕ್.
ಅದೇನೇ ಇರಲಿ, ಸದ್ಯ ಪ್ರಶಾಂತ್ ನೀಲ್ ಜೊತೆಗಿನ ಎನ್‌ಟಿಆರ್ ಸಿನಿಮಾ ಸೆಟ್ಟೇರಿದ್ದು, ರಾಜಮೌಳಿ ಕೂಡ ಪ್ರಿನ್ಸ್ ಮಹೇಶ್ ಬಾಬು ಜೊತೆ ಹಾಲಿವುಡ್ ಶೈಲಿಯ ಸಿನಿಮಾ ಮಾಡ್ತಿದ್ದಾರೆ. ಗ್ಲೋಬಲ್ ಸ್ಟಾರ್ ಗಳಾಗಿ ಹಾಲಿವುಡ್ ಮಂದಿಯ ದಿಲ್ ದೋಚಿರೋ ಈ ಮೌಳಿ-ತಾರಕ್ ಜೋಡಿ, ಆಸ್ಕರ್ ಕೂಡ ತಂದಿದ್ದು ಮರೆಯುವ ಹಾಗಿಲ್ಲ.