ಬಾಲಿವುಡ್‌ನ ದಂತಕಥೆ ಶ್ರೀದೇವಿ ಡೆತ್ ಮಿಸ್ಟರಿ ಕೊನೆಗೂ ಬಯಲಾಗಿದೆ. ಹೌದು.. 8 ವರ್ಷಗಳ ಹಿಂದೆ ದುಬೈನ ಹೋಟೆಲ್‌ವೊಂದರ ಬಾತ್ ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅದು ಇಂದಿಗೂ ಆಕಸ್ಮಿಕ ಸಾವಾ ಅಥ್ವಾ ಕೊಲೆಯಾ ಅನ್ನೋ ಕನ್ಫ್ಯೂಷನ್ ಇತ್ತು. ಆದ್ರೀಗ ತನಿಖಾಧಿಕಾರಿಯೊಬ್ಬ ಅತಿಲೋಕ ಸುಂದರಿ ಸಾವನ್ನಪ್ಪಿದ ಅದೇ ಹೋಟೆಲ್, ಅದೇ ರೂಮ್, ಅದೇ ಬಾಟ್ ಟಬ್ ಬಳಿ ಆಕೆಯ ಆತ್ಮದ ಜೊತೆ ಮಾತನಾಡಿದ್ದಾರೆ. ಶ್ರೀದೇವಿ ಆತ್ಮ ನೀಡಿದ ಆ ಸ್ಫೋಟಕ ಸ್ಟೇಟ್ಮೆಂಟ್ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಾ. ಅದೇನು ಅಂತೀರಾ ಈ ಸ್ಟೋರಿ ನೋಡಿ…
- ನನ್ನ ಕೊಂದಿದ್ದು ಬೋನಿ.. ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್
- 8 ವರ್ಷದ ನಂತ್ರ ಬಾಲಿವುಡ್ ಬ್ಯೂಟಿ ಸಾವಿನ ರಹಸ್ಯ ರಿವೀಲ್
- ಅದೇ ಹೋಟೆಲ್, ರೂಮ್, ಬಾತ್ ಟಬ್ ಬಳಿ ಆತ್ಮ ಹೇಳಿಕೆ
- ಇದು ಸೌರಭ್ ಪೂನಿಯಾ ನಡೆಸಿದ ಪ್ಯಾರಾನಾರ್ಮಲ್ ತನಿಖೆ
ಭಾರತೀಯ ಚಿತ್ರರಂಗದ ಅತಿಲೋಕ ಸುಂದರಿ ಅಂತಲೇ ಫೇಮಸ್ ಆಗಿದ್ದ ಪಂಚಭಾಷಾ ನಟಿ ಶ್ರೀದೇವಿ 54ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ರು. 2018 ಫೆಬ್ರವರಿ 24ರಂದು ದುಬೈನ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಅವರು ಬಾತ್ ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ರು. ಮೂರು ದಿನಗಳ ಬಳಿಕ ಆಕೆಯ ಶವ ಪತ್ತೆ ಆಗಿತ್ತು. ಇದೇ 2026ರ ಫೆಬ್ರವರಿ 24ಕ್ಕೆ ಶ್ರೀದೇವಿ ಸತ್ತು 8 ವರ್ಷಗಳೇ ಕಳೆಯಿತು. ಆದ್ರೆ ಇಂದಿಗೂ ಆಕೆಯ ಸಾವು ನಿಗೂಢವಾಗಿಯೇ ಉಳಿದಿದೆ.
ಬಾಲಿವುಡ್‌ನ ಪ್ರೊಡ್ಯೂಸರ್ ಬೋನಿ ಕಪೂರ್‌ನ ವರಿಸಿದ್ದ ಶ್ರೀದೇವಿ ಸಹಜವಾಗಿಯೇ ಸತ್ತರಾ ಅಥ್ವಾ ಅವರದ್ದು ಅಸಹಜ ಸಾವಾ ಅನ್ನೋ ಕುತೂಹಲ ಇಂದಿಗೂ ಇದ್ದೇ ಇದೆ. ಅಷ್ಟು ದೊಡ್ಡ ವ್ಯಕ್ತಿ ಕೇವಲ ಬಾತ್ ಟಬ್‌ನಲ್ಲಿ ಮುಳುಗಿ ಸಾಯಲು ಸಾಧ್ಯವೇ ಅನ್ನೋ ಯಕ್ಷ ಪ್ರಶ್ನೆ ಕಾಡುತ್ತಲೇ ಇದೆ. ಅದಕ್ಕೆ ಪೂರಕವಾಗಿ ತನಿಖಾಧಿಕಾರಿಗಳು ಕೂಡ ಹೋಟೆಲ್ ರೂಮ್‌ನ ಸಿಸಿಟಿವಿ ದೃಶ್ಯಗಳು ರಿವೀಲ್ ಮಾಡಲಿಲ್ಲ. ಇಂದಿಗೂ ಮಾಡಿಲ್ಲ. ಆದ್ರೀಗ ಬರೋಬ್ಬರಿ 8 ವರ್ಷಗಳ ನಂತ್ರ ಶ್ರೀದೇವಿ ಸಾವಿನ ರಹಸ್ಯ ಬಯಲಾಗಿದೆ.
ಸೌರಭ್ ಪೂನಿಯಾ ನಡೆಸಿರೋ ಪ್ಯಾರಾನಾರ್ಮಲ್ ತನಿಖೆಯಲ್ಲಿ ಬಹುಭಾಷಾ ನಟಿ ಶ್ರೀದೇವಿಯದ್ದು ಸಹಜ ಸಾವಲ್ಲ.. ಅದೊಂದು ಅಸಹಜ ಸಾವು ಅನ್ನೋದು ಪಕ್ಕಾ ಆಗಿದೆ. ಹೌದು.. ಅದನ್ನ ಸ್ವತಃ ಶ್ರೀದೇವಿ ಅವರ ಆತ್ಮವೇ ಖಚಿತ ಪಡಿಸಿದೆ. ಅಷ್ಟೇ ಅಲ್ಲ, ಆಕೆಯನ್ನ ಕೊಂದಿದ್ದು ಸ್ವಂತ ಗಂಡನಾದ ಬೋನಿ ಕಪೂರ್ ಎಂದಿದೆ ಆತ್ಮ. ಶ್ರೀದೇವಿ ಆತ್ಮ ನೀಡಿದ ಈ ಸ್ಫೋಟಕ ಸ್ಟೇಟ್ಮೆಂಟ್ ನೋಡಿ ಇಡೀ ಭಾರತೀಯ ಚಿತ್ರರಂಗವೇ ಬೆಚ್ಚಿಬಿದ್ದಿದೆ.
ಯೆಸ್.. ಸೌರಬ್ ಪೂನಿಯಾ ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಆತ್ಮದ ಜೊತೆ ಮಾತನಾಡಿಸೋ ಕಾರ್ಯ ಮಾಡಿದ್ರು. ಇದೀಗ ಶ್ರೀದೇವಿ ಆತ್ಮದ ಜೊತೆ ಮಾತನಾಡಿದ್ದಾರೆ. ಅದನ್ನ ಸೌರಭ್ ವಿಡಿಯೋ ಸಮೇತ ಡಿಟೆಕ್ಟರ್‌ನಲ್ಲಿ ವಾಯ್ಸ್ ರೆಕಾರ್ಡ್ ಮಾಡಿದ್ದಾರೆ. ಸದ್ಯ ಈ ವಿಷಯ ಟಾಕ್ ಆಫ್ ದಿ ಟೌನ್ ಆಗಿದ್ದು, ಶ್ರೀದೇವಿ ಡೆತ್ ಕೇಸ್ ಮತ್ತೆ ರೀ ಓಪನ್ ಆಗುತ್ತಾ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ.
ಸದ್ಯ ಶ್ರೀದೇವಿಗೆ ಜಾಹ್ನವಿ ಕಪೂರ್ ಹಾಗೂ ಆಕೆಯ ತಂಗಿ ಖುಷಿ ಕಪೂರ್ ಇಬ್ಬರು ಮಕ್ಕಳಿದ್ದಾರೆ. ಆ ಪೈಕಿ ಜಾಹ್ನವಿ ಕಪೂರ್ ಸದ್ಯ ಬಾಲಿವುಡ್‌ನಿಂದ ಹಿಡಿದು ಸೌತ್‌ವರೆಗೂ ಮೋಸ್ಟ್ ಡಿಮ್ಯಾಂಡಿಂಗ್ ನಟಿಮಣಿ. ಇದೀಗ ಬೋನಿ ಕಪೂರ್ ಹೆಸರು ದಟ್ಟವಾಗಿ ಕೇಳಿಬಂದಿರೋದ್ರಿಂದ ಮತ್ತೊಮ್ಮೆ ಕೇಸ್ ಇನ್ವೆಸ್ಟಿಗೇಷನ್ ಆದ್ರೂ ಅಚ್ಚರಿಯಿಲ್ಲ ಅಂತಿವೆ ಮೂಲಗಳು. ಅದೇನೇ ಇರಲಿ.. ಯಾರೇ ಮಾಡಿರಲಿ.. ಸೂಕ್ತ ಹಾಗೂ ಮುಕ್ತವಾಗ ತನಿಖೆ ಆಗಬೇಕಿದೆ. ಆಗಲೇ ಶ್ರೀದೇವಿ ಆತ್ಮಕ್ಕೆ ಸಾಂತಿ ಸಿಕ್ಕಿ, ಮುಕ್ತಿ ದೊರಕಲು ಸಾಧ್ಯವಾಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





