ಅತಿಯಾದ್ರೆ ಅಮೃತ ಕೂಡ ವಿಷವಾಗುತ್ತೆ ಅನ್ನೋ ಮಾತು ಅಕ್ಷರಶಃ ಸತ್ಯ. ತಂತ್ರಜ್ಞಾನ ಮುಂದುವರೆದಂತೆ ಅದು ಎಷ್ಟು ಪೂರಕವಾಗ್ತಿದೆಯೋ ಅಷ್ಟೇ ಮಾರಕವೂ ಆಗ್ತಿದೆ. ಇತ್ತೀಚೆಗೆ ಡೀಪ್ ಫೇಕ್‌ನಿಂದ ರಶ್ಮಿಕಾ ಮಂದಣ್ಣ ಬೇಸತ್ತಿದ್ದರು. ಆದ್ರೀಗ AI ಕಾಟಕ್ಕೆ ಕ್ಯೂಟ್ ಕ್ವೀನ್ ಶ್ರೀಲೀಲಾ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.
ಶ್ರೀಲೀಲಾ.. ಸ್ಯಾಂಡಲ್‌ವುಡ್‌ನ ಈ ಕ್ಯೂಟ್ ಕ್ವೀನ್ ಸದ್ಯ ಟಾಲಿವುಡ್ ಹಾಗೂ ಬಾಲಿವುಡ್‌ನ ಮೋಸ್ಟ್ ಡಿಮ್ಯಾಂಡಿಂಗ್ ನಟೀಮಣಿ. ಅದ್ರಲ್ಲೂ ಪುಷ್ಪ-2ನಲ್ಲಿ ಅಲ್ಲು ಅರ್ಜುನ್ ಜೊತೆ ಕಿಸಿಕ್ ಸಾಂಗ್‌ಗೆ ಸ್ಟೆಪ್ ಹಾಕಿದ್ದು, ಮಹೇಶ್ ಬಾಬು ಜೊತೆ ಕುರ್ಚಿ ಮರ್ತಪೆಟ್ಟಿ ಸಾಂಗ್ ಸ್ಟೆಪ್ಸ್ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಈಕೆ ಮಿಂಚು ಹರಿಸಿದರು. ಇತ್ತೀಚೆಗೆ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆಗೂ ಕುಣಿದು ಕುಪ್ಪಳಿಸಿದ್ದಾರೆ.
ಶ್ರೀಲೀಲಾ ಬಾತ್ ಟವೆಲ್.. AI ಕಾಟಕ್ಕೆ ಬೇಸತ್ತ ಬ್ಯೂಟಿ..!
ಫೇಕ್ ಫೇಕ್ ಫೇಕ್.. ಕ್ಯೂಟ್ ಕ್ವೀನ್ ಫೋಟೋಸ್ ಫೇಕ್
ತಾನಾಯ್ತು, ತನ್ನ ಕೆಲಸ ಆಯ್ತು ಅಂತ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿರೋ ಶ್ರೀಲೀಲಾಗೆ ಎಐ ತಂತ್ರಜ್ಞಾನ ಇನ್ನಿಲ್ಲದೆ ಕಾಡಿದೆ. ಹೌದು.. ಯಾರೋ ಕಿಡಿಗೇಡಿಗಳು ಶ್ರೀಲೀಲಾ ಬಾತ್ ರೂಮ್‌ನಲ್ಲಿ ಬಾತ್ ಟವೆಲ್‌ನಲ್ಲಿರೋ ಫೋಟೋಸ್‌ನ ಎಐ ತಂತ್ರಜ್ಞಾನದ ಮೂಲಕ ಕ್ರಿಯೇಟ್ ಮಾಡಿ, ಸೋಶಿಯಲ್ ಮೀಡಿಯಾಗೆ ಹರಿಬಿಟ್ಟಿದ್ದಾರೆ. ಇದು ತಡವಾಗಿ ಆಕೆಯ ಗಮನಕ್ಕೆ ಬಂದಿದ್ದು, ಆ ಎಐ ಜನರೇಟೆಡ್ ಫೋಟೋಸ್ ಕುರಿತು ಮೌನ ಮುರಿದಿದ್ದಾರೆ ಕನ್ನಡತಿ.

ನಾನು ನನ್ನ ಕೆಲಸಗಳಲ್ಲಿ ಬ್ಯುಸಿಯಾಗಿದ್ದೆ. ಈ ಸೋಶಿಯಲ್ ಮೀಡಿಯಾದಲ್ಲಿ ಏನೇನ್ ನಡೀತಿದೆ ಅನ್ನೋದರ ಪರಿವೇ ನನಗಿರಲಿಲ್ಲ. ಆದ್ರೆ ನನ್ನ ಫೋಟೋಸ್ ನಿಜಕ್ಕೂ ನನಗೆ ಸಿಕ್ಕಾಪಟ್ಟೆ ನೋವುಂಟು ಮಾಡಿದೆ. ದಯವಿಟ್ಟು ಯಾರೂ ಹೀಗೆ ಎಐ ಮೂಲಕ ಯಾರೊಬ್ಬರ ಭಾವನೆಗಳೊಂದಿಗೂ ಆಟ ಆಡಬೇಡಿ. ಅವಶ್ಯಕತೆಗೆ ತಂತ್ರಜ್ಞಾನದ ಬಳಕೆ ಆಗಬೇಕೇ ಹೊರತು ದುರ್ಬಳಕೆ ಆಗಬಾರದು. ಇಲ್ಲಿರುವ ಪ್ರತಿ ಹೆಣ್ಣು ಕೂಡ ಯಾರಿಗೋ ಒಬ್ಬರಿಗೆ ಮಗಳೋ, ಮೊಮ್ಮಗಳೋ ಅಥ್ವಾ ಸಹೋದರಿ ಆಗಿರ್ತಾರೆ. ಇನ್ನು ಉಳಿದಿದ್ದನ್ನ ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ತಾರೆ ಅಂತ ಪೋಸ್ಟ್ ಹಾಕಿದ್ದಾರೆ.
ತಂತ್ರಜ್ಞಾನದ ಬಳಕೆ ಹಾಗೂ ದುರ್ಬಳಕೆಗೆ ವ್ಯತ್ಯಾಸವಿದೆ..!
ನೆಟ್ಟಿಗರ ವಿರುದ್ಧ ಕಿಡಿಕಾರಿದ ಕಿಸಿಕ್ ಚೆಲುವೆ.. ಆಗಿದ್ದೇನು ?
ಇತ್ತೀಚೆಗೆ ಡೀಪ್ ಫೇಕ್ ಅನ್ನೋ ತಂತ್ರಜ್ಞಾನದಿಂದ ನಟಿ ರಶ್ಮಿಕಾ ಮಂದಣ್ಣಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ತೊಂದರೆ ಆಗಿತ್ತು. ಆ ಬಗ್ಗೆ ಕೊನೆಗೆ ಪಿಎಂ ಮೋದಿ ಕೂಡ ರಿಯಾಕ್ಟ್ ಮಾಡುವಂತಾಯ್ತು.
ಆದ್ರೀಗ AI ಟೆಕ್ನಾಲಜಿ ನಟಿಮಣಿಯರ ವಿಚಾರದಲ್ಲಿ ದುರ್ಬಳಕೆ ಆಗ್ತಿರೋದು ಬೇಸರದ ಸಂಗತಿ. ಇದಕ್ಕೆ ಸೈಬರ್ ಕ್ರೈಂ ಯಾವ ರೀತಿಯ ಪರಿಹಾರ ನೀಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.





