ಸಿಕಂದರ್.. ಈದ್ ಪ್ರಯುಕ್ತ ಇದೇ ಮಾರ್ಚ್ 30ಕ್ಕೆ ತೆರೆಗೆ ಬರೋಕೆ ಸಜ್ಜಾಗಿರೋ ಬಾಲಿವುಡ್ ನ ಈ ವರ್ಷದ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವಿ. ಸಲ್ಮಾನ್ ಖಾನ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ ಅಂದ್ರೆ ಅದೊಂದು ಹೈ ವೋಲ್ಟೇಜ್ ಮಾಸ್ ಎಂಟರ್ ಟೈನರ್ ಆಗೋದ್ರಲ್ಲಿ ಎರಡು ಮಾತಿಲ್ಲ. ವಿಶೇಷ ಅಂದ್ರೆ ನಮ್ಮ ಕನ್ನಡದ ಇಬ್ಬರು ಪ್ರತಿಭೆಗಳು ಸಿಕಂದರ್ ನ ಭಾಗವಾಗಿದ್ದಾರೆ.
ಹೌದು.. ಕೂರ್ಗ್ ಚೆಲುವೆ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಯಕನಟಿಯಾಗಿ ಭಾಯಿಜಾನ್ ಸಲ್ಲು ಜೊತೆ ಗ್ಲಾಮರ್ ಹರಡಿದ್ರೆ, ಲಾಠಿ ಹಿಡಿದು ಖಾಕಿ ತೊಟ್ಟು ಪೊಲೀಸ್ ಖದರ್ ತೋರಲಿದ್ದಾರೆ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಹುಲಿ ಕಿಶೋರ್.
ಈಗಾಗ್ಲೇ ಟೀಸರ್, ಸಾಂಗ್ಸ್ ಹಾಗೂ ಟ್ರೈಲರ್ ಹಲ್ ಚಲ್ ಎಬ್ಬಿಸಿದ್ದು, ಸಲ್ಲು- ರಶ್ಮಿಕಾ ಕೆಮಿಷ್ಟ್ರಿಗೆ ಪ್ರೇಕ್ಷಕಪ್ರಭು ಜೈ ಎಂದಿದ್ದಾನೆ. ಸಿನಿಮಾ ರಿಲೀಸ್ ಡೇಟ್ ಹತ್ತಿರ ಆಗ್ತಿದ್ದಂತೆ ಮುಂಬೈನಲ್ಲಿ ಸಿಕಂದರ್ ಟ್ರೈಲರ್ ಲಾಂಚ್ ಇವೆಂಟ್ ನಡೆದಿದೆ.
ಅಲ್ಲಿ ರಶ್ಮಿಕಾ ಮಂದಣ್ಣ ಕೂಡ ವೇದಿಕೆ ಹಂಚಿಕೊಂಡಿದ್ರು. ಅಲ್ಲಿ ಒಂದಷ್ಟು ಮಂದಿ ಯೂಟ್ಯೂಬರ್ಸ್ ನಿಮಗೂ ರಶ್ಮಿಕಾಗೂ 31 ವರ್ಷ ವಯಸ್ಸಿನ ಅಂತರವಿದೆ. ನಟಿಸುವಾಗ ಏನೂ ಅನಿಸಲಿಲ್ಲವೇ ಅಂತ ಭಾಯಿಜಾನ್ ಸಲ್ಮಾನ್ ಖಾನ್ ಗೆ ಕಾಲೆಳೆದರು.
ಆದ್ರೆ ಕೂಡಲೇ ಅವರಿಗೆ ಉತ್ತರಿಸಿದ ಸಲ್ಲು, ರಶ್ಮಿಕಾಗೆ ಮತ್ತೆ ಅವರಪ್ಪನಿಗೇನೇ ಪ್ರಾಬ್ಲಂ ಇಲ್ಲ.. ಅಂಥದ್ರಲ್ಲಿ ನಿಮಗೇನ್ ಪ್ರಾಬ್ಲಂ..? ಅಂತ ಖಡಕ್ ಆಗಿ ತಿರುಗಿಸಿ ಪ್ರಶ್ನಿಸಿದ್ದಾರೆ.
ಇನ್ನೂ ಮುಂದುವರೆದು ಮಾತನಾಡುತ್ತಾ, ರಶ್ಮಿಕಾ ಅಷ್ಟೇ ಅಲ್ಲ, ಆಕೆಯ ಮಗಳ ಜೊತೆಗೂ ನಟಿಸ್ತೀನಿ ಅಂತ ಸಲ್ಮಾನ್ ಖಾನ್ ಖಾರವಾಗಿ ಮಾತನಾಡಿದ್ದಾರೆ. ಸದ್ಯ ಸಲ್ಲು ಸ್ಟೇಟ್ಮೆಂಟ್ ಬಾಲಿವುಡ್ ನಲ್ಲಿ ಸಂಚನಲ ಮೂಡಿಸಿದ್ದು, ಅಬ್ಬಬ್ಬಾ ಸಲ್ಲು ಸ್ಟ್ರೈಟ್ ಫಾರ್ವರ್ಡ್ ಗುರು ಅಂತಿದ್ದಾರೆ.