ಹೀರೋಗಳನ್ನ ನೋಡಿ ಹೀರೋಯಿನ್ಸ್ ಕೂಡ ಬಾಲು, ಬ್ಯಾಟ್ ಹಿಡಿದು ಕ್ರಿಕೆಟ್ ಗ್ರೌಂಡ್‌ಗೆ ಇಳಿಯೋಕೆ ಸಜ್ಜಾಗಿಬಿಟ್ಟಿದ್ದಾರೆ. ಹೌದು.. ಸಿಸಿಎಲ್, ಕೆಸಿಸಿ, ರಾಜ್ ಕಪ್ ಹೆಸರಿನಲ್ಲಿ ಇಡೀ ಸ್ಯಾಂಡಲ್‌ವುಡ್ ಸ್ಟಾರ್ಸ್ ಎಲ್ಲಾ ಒಟ್ಟಿಗೆ ಅಖಾಡಕ್ಕೆ ಇಳಿಯುತ್ತಿದ್ರು. ಇದೀಗ ನಟಿಮಣಿಯರು ಜಮಾನ ಶುರುವಾಗ್ತಿದೆ. ಹೆಣ್ಮಕ್ಳೇ ಸ್ಟ್ರಾಂಗು ಗುರು ಅಂತಿದ್ದಾರೆ.
- ನಟರಷ್ಟೇ ಅಲ್ಲ.. ಕ್ರಿಕೆಟ್ ಗ್ರೌಂಡ್‌ಗೆ ನಟಿಮಣಿಯರು ಎಂಟ್ರಿ..!
- ದುಬೈ ಶಾರ್ಜಾನಲ್ಲಿ ಸ್ಯಾಂಡಲ್‌ವುಡ್ ಹೀರೋಯಿನ್ಸ್ ಕ್ರಿಕೆಟ್
- ತಾರಾ, ಮಾಲಾಶ್ರೀ, ಶ್ರುತಿ, ಅನು & ಪ್ರಿಯಾ ರಾಯಭಾರಿಗಳು
- ಅಭಿನೇತ್ರಿಯರ ವಿನೂತನ ಪ್ರಯತ್ನಕ್ಕೆ ರಾಜ್ ಬಿ ಶೆಟ್ಟಿ ಸಾಥ್..!
ಇದು ಸ್ಯಾಂಡಲ್‌ವುಡ್ ವುಮೆನ್ಸ್ ಸೆಲೆಬ್ರಿಟಿ ಲೀಗ್‌ನ ಲೋಗೋ ಲಾಂಚ್ ಫಂಕ್ಷನ್ ಝಲಕ್. ಲೋಗೋ ಲಾಂಚ್ ಮಾಡಿ, ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದು ಈ ಕಾಲಘಟ್ಟದ ಗ್ಲಾಮರ್ ಡಾಲ್ಸ್ ಅಲ್ಲ. ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಕೊಡುಗೆ ನೀಡಿ, ತಮ್ಮದೇ ಆದ ಛಾಪು ಮೂಡಿಸಿರೋ ದೊಡ್ಡ ದೊಡ್ಡ ಅಭಿನೇತ್ರಿಯರು ಅನ್ನೋದು ಇಂಟರೆಸ್ಟಿಂಗ್.