ನಿಜವಾಯ್ತು ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ನುಡಿದ ಸಮಂತಾ ಮದುವೆ ಭವಿಷ್ಯ. ಕೊನೆಗೂ ಸಮಂತಾ ಎರಡನೇ ಮದ್ವೆ ಆದ್ರು. ಆದ್ರೆ ಸ್ಯಾಮ್ ಆಗಿರೋ ಭೂತ ಶುದ್ದಿ ವಿವಾಹದ ವಿಶೇಷತೆ ಏನು..? ಲಿಂಗ ಭೈರವಿ ಆಲಯದಲ್ಲೇ ಯಾಕೆ ಕಲ್ಯಾಣವಾದ್ರು ಅನ್ನೋದ್ರ ಕಂಪ್ಲೀಟ್ ಸ್ಟೋರಿ ಹೇಳ್ತೀವಿ ಈ ಸ್ಟೋರಿ ನೋಡಿ.
ನಿಜವಾಯ್ತು ವೇಣುಸ್ವಾಮಿ ಭವಿಷ್ಯ.. ಸ್ಯಾಮ್ 2ನೇ ಮದ್ವೆ
ಮತ್ತೆ ಲೈಮ್‌ಲೈಟ್‌ಗೆ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ..!
ಬಹುಭಾಷಾ ನಟಿ ಸಮಂತಾ ಎರಡನೇ ಮದುವೆ ಆಗುವ ಮೂಲಕ ಫ್ಯಾನ್ಸ್ ಹಾಗೂ ಚಿತ್ರರಂಗಕ್ಕೆ ಗುಡ್ ನ್ಯೂಸ್ ನೀಡಿದ್ದು ಗೊತ್ತೇಯಿದೆ. ಆದ್ರೆ ಈ ವಿಷಯ ಮೊದಲನೇ ಮದುವೆಗೂ ಮೊದಲೇ ಭವಿಷ್ಯ ನುಡಿದಿದ್ರು ಖ್ಯಾತ ಟಾಲಿವುಡ್ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ. ಅಕ್ಕಿನೇನಿ ನಾಗಚೈತನ್ಯ ಜೊತೆ ಮದ್ವೆ ಆಗಿದ್ದ ಸಮಂತಾ ಸಂಸಾರ ಮುರಿದುಬೀಳಲಿದೆ ಎಂದಿದ್ದರು. ಅಲ್ಲದೆ ಮತ್ತೆ ಆಕೆ ಮದ್ವೆ ಆಗ್ತಾರೆ ಅಂತಲೂ ಹೇಳಿದ್ರು.
ಇಲ್ಲಿಯವರೆಗೆ ವೇಣುಸ್ವಾಮಿ ಹೇಳಿದ್ದಂತಹ ಸಾಕಷ್ಟು ಘಟನೆಗಳು ಸೆಲೆಬ್ರಿಟಿಗಳ ಬಾಳಲ್ಲಿ ನಡೆದಿದೆ. ಹಾಗಾಗಿ ವೇಣುಸ್ವಾಮಿಯ ಸಲಹೆ, ಸೂಚನೆಗಳನ್ನ ತೆಲುಗು ಸ್ಟಾರ್ಸ್ ಚಾಚೂ ತಪ್ಪದೆ ಪಾಲಿಸ್ತಾರೆ. ಅದ್ರಲ್ಲೂ ರಶ್ಮಿಕಾ ಕೂಡ ವೇಣುಸ್ವಾಮಿ ಬಳಿ ಕಲ್ಯಾಣಕ್ಕಾಗಿಯೇ ವಿಶೇಷ ಪೂಜೆ ಮಾಡಿಸಿದ್ದರು. ವಿಜಯ್ ದೇವರಕೊಂಡ ಕೈ ಹಿಡಿಯುತ್ತಿರೋ ರಶ್ಮಿಕಾ, ಈ ಹಿಂದೆಯೇ ವಿಜಯ್-ರಶ್ಮಿಕಾ ಬಾಳಲ್ಲಿ ಬೇರಾರೂ ಬಾರದಿರಲು ಮುನ್ನೆಚ್ಚರಿಕೆಯ ಕ್ರಮ ವಹಿಸಿದ್ರು.
ರಶ್ಮಿಕಾ ಕೂಡ ವೇಣುಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ್ರು
ವಿಜಯ್ ದೇವರಕೊಂಡ ಕೈ ಹಿಡಿಯುತ್ತಿರೋ ಬ್ಯೂಟಿ ರಶ್ಮಿಕಾ
ಸದ್ಯ ಸಮಂತಾ 2ನೇ ಮದ್ವೆ ಆಗಿರೋ ಹಿನ್ನೆಲೆಯಲ್ಲಿ ವೇಣುಸ್ವಾಮಿ ಮತ್ತೆ ಲೈಮ್‌ಲೈಟ್‌ಗೆ ಬಂದಿದ್ದಾರೆ. ಹೌದು.. ಸಾಕಷ್ಟು ಮಂದಿ ಅವ್ರಿಗೆ ಕರೆಗಳನ್ನ ಮಾಡ್ತಿದ್ದು, ಮುಂದಿನ ಆಕೆಯ ಭವಿಷ್ಯದ ಬಗ್ಗೆ ಪ್ರಶ್ನೆ ಮಾಡ್ತಿದ್ದಾರಂತೆ. ಆದ್ರೆ ಆ ಬಗ್ಗೆ ನಾನು ಮಾತನಾಡಲ್ಲ. ಯಾರ ಮನಸ್ಸನ್ನೂ ನೋಯಿಸೋ ಉದ್ದೇಶ ನನಗಿಲ್ಲ. ಈ ಹಿಂದೆ ಕೂಡ ಅವರಾಗಿಯೇ ಕೇಳಿದ್ದಕ್ಕೆ ನಾನು ಭವಿಷ್ಯ ನುಡಿದಿದ್ದೆ ಎಂದಿದ್ದಾರೆ.
ಯೆಸ್.. ನಟಿ ಸಮಂತಾ ಇತ್ತೀಚೆಗೆ ದಿ ಫ್ಯಾಮಿಲಿಮ್ಯಾನ್ ವೆಬ್ ಸೀರೀಸ್ ಡೈರೆಕ್ಟರ್ ರಾಜ್ ನಿಡಿಮೋರು ಕೈ ಹಿಡಿಯೋ ಮೂಲಕ ನಾನಿನ್ನು ಸಿಂಗಲ್ ಅಲ್ಲ. ಫ್ಯಾಮಿಲಿ ವುಮನ್ ಅಂತ ವಿಶ್ವಕ್ಕೆ ಸಾರಿ ಹೇಳಿದ್ರು. ಅಂದಹಾಗೆ ಈಕೆ ಮದ್ವೆ ಆಗಿರೋದು ಕೊಯಂಬತ್ತೂರಿನ ಇಶಾ ಫೌಂಡೇಷನ್‌ನಲ್ಲಿರೋ ಲಿಂಗ ಭೈರವಿ ಆಲಯದಲ್ಲಿ ಅನ್ನೋದು ಇಂಟರೆಸ್ಟಿಂಗ್. ಅಲ್ಲದೆ, ಭೂತ ಶುದ್ದಿ ವಿವಾಹ ಅಗೋ ಮೂಲಕ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಇಷ್ಟಕ್ಕೂ ಭೂತ ಶುದ್ದಿ ವಿವಾಹ ಅಂದರೆ ಏನು ಅಂತ ಜನ ಕೇಳೋಕೆ ಶುರುವಿಟ್ಟಿದ್ದಾರೆ.
ಸಮಂತಾ ಆಗಿರೋ ಭೂತ ಶುದ್ದಿ ವಿವಾಹ ವಿಶೇಷತೆ ಏನು..?!
ಲಿಂಗ ಭೈರವಿ ಆಲಯದಲ್ಲೇ ರಾಜ್ ಕೈ ಹಿಡಿದಿದ್ಯಾಕೆ ಸ್ಯಾಮ್?
ಭೂತ ಶುದ್ದಿ ವಿವಾಹ ಯೋಗ ವ್ಯವಸ್ಥೆಯಲ್ಲಿ ನಡೆದು ಬಂದಿರೋ ಒಂದು ಪದ್ದತಿ. ಇದೊಂದು ಪವಿತ್ರವಾದ ವಿಹಾಹ ಪದ್ದತಿಯೂ ಹೌದು. ಸತಿ ಪತಿ ಆಗೋಕೆ ಮುನ್ನ ಗಂಡು-ಹೆಣ್ಣು ಇಬ್ಬರೂ ಸಹ ತಮ್ಮ ದೇಹ ಹಾಗೂ ಮನಸ್ಸನ್ನು ಶುದ್ಧೀಕರಿಸುವ ಒಂದು ಯೋಗಿಕ ಅಚರಣೆ ಮಾಡಬೇಕು. ಅದು ಪಂಚಭೂತಗಳಾದ ಗಾಳಿ, ನೀರು, ಭೂಮಿ, ಬೆಂಕಿ, ಆಕಾಶಗಳನ್ನ ಒಳಗೊಂಡಂತಹ ಶುದ್ಧೀಕರಣವಾಗಿದೆ. ಸದ್ಯ ಸಮಂತಾ ಹಾಗೂ ರಾಜ್ ಮಾಡಿದ್ದು ಕೂಡ ಇದನ್ನೇ.
ಅಲ್ಲದೆ ಲಿಂಗ ಭೈರವಿ ಆಲಯದಲ್ಲೇ ಈ ವಿವಾಹ ಆಗೋಕೆ ಕಾರಣ ಅದೊಂದು ಪವರ್‌ಫುಲ್ ದೇವಾಲಯ. ಇದನ್ನ ಸದ್ಗುರು ಜಗ್ಗಿ ವಾಸುದೇವ್ ಅವರು ಇಶಾದಲ್ಲಿ ನಿರ್ಮಿಸಿರೋ ವಿಶೇಷವಾದ ಆಲಯವಾಗಿದೆ. ಈ ದೇವಿಯು ವಿಶಿಷ್ಠ ಶಕ್ತಿ ಹಾಗೂ ಅನುಗ್ರಹ ಹೊಂದಿದ್ದಾಳೆ. ಭಕ್ತರ ಜೀವನದ ಅಡೆತಡೆಗಳನ್ನ ನಿವಾರಿಸಿ, ಅವರಲ್ಲಿ ಆಂತರಿಕ ಶಕ್ತಿಯನ್ನ ಹೆಚ್ಚಿಸುತ್ತದೆ. ಈ ಲಿಂಗ ಭೈರವಿ ಸ್ತ್ರೀ ಶಕ್ತಿಯ ಅತ್ಯುನ್ನತ ರೂಪವಾಗಿದ್ದು, ಶಕ್ತಿ ಹಾಗೂ ಶ್ರೇಷ್ಠತೆಯನ್ನು ಪ್ರತಿನಿಧಿಸುತ್ತದೆ. ಆಧ್ಯಾತ್ಮಕ ಪ್ರಮುಖ ಕೇಂದ್ರಬಿಂದು ಆಗಿರೋ ಲಿಂಗ ಭೈರವಿಯ ಕೃಪೆಯಿಂದ ಆಕೆಯ ಸಮಕ್ಷಮದಲ್ಲೇ ಸತಿ ಪತಿಯಾಗಿದ್ದಾರೆ ಸಮಂತಾ ಹಾಗೂ ರಾಜ್.





