ಕಾಂತಾರ ಕ್ವೀನ್ ರುಕ್ಮಿಣಿ ವಸಂತ್‌ಗೆ ತೆಲುಗು, ತಮಿಳಿನಿಂದ ರೆಡ್ ಕಾರ್ಪೆಟ್ ಹಾಸಿ, ವೆಲ್ಕಮ್ ಹೇಳಿದ್ದು ಗೊತ್ತೇಯಿದೆ. ಆದ್ರೀಗ ಆಕೆ ತನ್ನ ಕರಿಯರ್‌ನ ಮತ್ತೊಂದು ಮಹತ್ವದ ಮಜಲು ಮುಟ್ಟಿದ್ದಾರೆ. ಎಲ್ಲರ ಡ್ರೀಮ್ ಇಂಡಸ್ಟ್ರಿ ಬಾಲಿವುಡ್, ಕನ್ನಡತಿಯನ್ನ ಕೈ ಬೀಸಿ ಕರೆದಿದೆ. ರಣ್‌ವೀರ್ ಸಿಂಗ್ ನೆಕ್ಸ್ಟ್ ವೆಂಚರ್ ಪ್ರಳಯ್‌ನಲ್ಲಿ ಕರ್ನಾಟಕದ ಅಳಿಮಯ್ಯನ ಜೊತೆ ತೆರೆ ಹಂಚಿಕೊಳ್ತಿದ್ದಾರೆ ರುಕ್ಕಮ್ಮ.
ಕಾಂತಾರ ಕ್ವೀನ್ ರುಕ್ಮಿಣಿ ವಸಂತ್‌ಗೆ ಎಲ್ಲೆಡೆ ಸಖತ್ ಡಿಮ್ಯಾಂಡ್. ಅದ್ಭುತ ಪರ್ಫಾಮರ್ ಅನಿಸಿಕೊಂಡಿರೋ ರುಕ್ಕಮ್ಮನಿಗೆ ತಮಿಳು ಫಿಲ್ಮ್ ಮೇಕರ್ಸ್ ರತ್ನಗಂಬಳಿ ಹಾಸಿ ಕಾಲಿವುಡ್‌ಗೆ ಸ್ವಾಗತ ಕೋರಿದ್ದರು. ಅಲ್ಲಿ ವಿಜಯ್ ಸೇತುಪತಿ ಜೊತೆ ಏಸ್ ಹಾಗೂ ಶಿವಕಾರ್ತಿಕೇಯನ್ ಜೊತೆ ಮದ್ರಾಸಿ ಸಿನಿಮಾಗಳನ್ನ ಮಾಡಿ ಬಂದಿದ್ದಾರೆ ಈ ಕನ್ನಡದ ಚೆಲುವೆ ರುಕ್ಮಿಣಿ.
ಬಾಲಿವುಡ್‌ಗೆ ಕಾಂತಾರ ಕ್ವೀನ್.. ರಣ್‌ವೀರ್ ಜೊತೆ ರುಕ್ಮಿಣಿ
ತೆಲುಗು, ತಮಿಳಲ್ಲಿ ಕನ್ನಡತಿ ಬ್ಯುಸಿ.. ಕೈ ಬೀಸಿ ಕರೆದ ಬಿಟೌನ್
ಸದ್ಯ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನ ಬಹು ನಿರೀಕ್ಷಿತ ಡ್ರ್ಯಾಗನ್ ಸಿನಿಮಾಗೂ ನಮ್ಮ ರುಕ್ಕಮ್ಮನೇ ನಾಯಕನಟಿ. ಸದ್ಯ ಡ್ರ್ಯಾಗನ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಬರೀ ಸೌತ್ ದುನಿಯಾ ಅಷ್ಟೇ ಅಲ್ಲ, ಬಾಲಿವುಡ್ ಕೂಡ ರುಕ್ಮಿಣಿಗೆ ರೆಡ್ ಕಾರ್ಪೆಟ್ ಹಾಸಿ ವೆಲ್ಕಮ್ ಹೇಳಿದೆ ಎನ್ನಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಸುದ್ದಿ ಮೂಲಗಳ ಪ್ರಕಾರ ಬಿಟೌನ್‌ನ ಸದ್ಯದ ಸೆನ್ಸೇಷನಲ್ ಸ್ಟಾರ್ ರಣ್‌ವೀರ್ ಸಿಂಗ್ ನೆಕ್ಸ್ಟ್ ಮೂವಿಗೆ ರುಕ್ಮಿಣಿ ವಸಂತ್ ನಾಯಕಿ ಆಗಲಿದ್ದಾರಂತೆ.
ಧುರಂಧರ್-2 ಬಳಿಕ ರಣ್‌ವೀರ್ ಸಿಂಗ್ ನಟನೆಯ ಪ್ರಳಯ್ ಚಿತ್ರ ಸೆಟ್ಟೇರಲಿದೆ ಅನ್ನೋದು ಗೊತ್ತೇಯಿದೆ. ಅದಕ್ಕೆ ನಾಯಕನಟಿ ಮಲಯಾಳಂನ ಸೂಪರ್ ಹೀರೋ ಮೂವಿ ಲೋಕ್ಹಾ ನಾಯಕನಟಿ ಕಲ್ಯಾಣಿ ಪ್ರಿಯದರ್ಶನ್ ಕೂಡ ಫೈನಲ್ ಆಗಿದ್ದಾರೆ. ಇದೀಗ ಮತ್ತೊಬ್ಬ ನಟಿಯಾಗಿ ರುಕ್ಮಿಣಿಗೆ ಆಫರ್ ಬಂದಿದೆಯಂತೆ. ಆದ್ರೆ ಅದನ್ನ ಕಾಂತಾರ ಚೆಲುವೆ ಓಕೆ ಮಾಡ್ತಾರಾ ಅಥ್ವಾ ಡೇಟ್ಸ್ ಕ್ಲ್ಯಾಶ್‌ನಿಂದ ಬಿಟ್ಟುಕೊಡ್ತಾರಾ ಅನ್ನೋದು ಕಾದು ನೋಡಬೇಕಿದೆ.
ಧುರಂಧರ್-2 ನಂತ್ರ ಝಾಂಬಿ ಸರ್ವೈವಲ್ ಥ್ರಿಲ್ಲರ್ ಪ್ರಳಯ್
ಮುಂಬೈ ಧ್ವಂಸದ ಕುರಿತ ಕಥೆ.. ಕಲ್ಯಾಣಿ ಜೊತೆ ಕನ್ನಡತಿ ರುಕ್ಕು
ಅಂದಹಾಗೆ ಜೈ ಮೆಹ್ತಾ ನಿರ್ದೇಶನದ ಚೊಚ್ಚಲ ಸಿನಿಮಾ ಈ ಪ್ರಳಯ್ ಸಿನಿಮಾ ಆಗಿದ್ದು, ಇದು ಝಾಂಬಿ ಸರ್ವೈವಲ್ ಥ್ರಿಲ್ಲರ್ ಜಾನರ್‌ನದ್ದು ಆಗಿರಲಿದೆಯಂತೆ. ಪೋಸ್ಟ್ ಅಪೋಕ್ಯಾಲಿಪ್ಟಿಕ್ ಡಿಸ್ಟೋಪಿಯಾ.. ಅಂದ್ರೆ ಮಾನವ ನಿರ್ಮಿತ ಜಗತ್ತು ಅಂತ್ಯದ ನಂತ್ರ ಮುಂಬೈನಲ್ಲಿ ನಡೆಯೋ ಕಥಾನಕ ಈ ಸಿನಿಮಾ ಆಗಿರಲಿದೆ ಎನ್ನಲಾಗ್ತಿದೆ.
ಮುಂಬೈ ಸಿಟಿಯನ್ನ ವಿಪತ್ತಿನ ಬಳಿಕ ವ್ಯವಸ್ಥಿತವಾಗಿ ತೋರಿಸಲು ಡಿಜಿಟಲ್ ತಂತ್ರಜ್ಞಾನವನ್ನು ಕೂಡ ಬಳಸಲಾಗುತ್ತಿದೆಯಂತೆ. ಇದು ದುಬಾರಿ ಸಿನಿಮಾ ಕೂಡ ಆಗಿರಲಿದ್ದು, ಟೆಕ್ನಾಲಜಿಯನ್ನ ದೊಡ್ಡ ಮಟ್ಟಕ್ಕೆ ಬಳಸಿಕೊಂಡು ಚಿತ್ರ ತಯಾರಿಸೋ ಧಾವಂತದಲ್ಲಿದೆಯಂತೆ ಟೀಂ.





