ಲೇಖಕರು: ಪ್ರಶಾಂತ್, ಸ್ಪೆಷಲ್ ಡೆಸ್ಕ್
ಬಾಲಿವುಡ್ ನಲ್ಲಿ ಪುತ್ರ ಛತ್ರಪತಿ ಸಂಭಾಜಿ ಸಿನಿಮಾದ.. ‘ಛತ್ರಪತಿ ಶಿವಾಜಿ’ಯಾಗಿ ರಿಷಬ್ ಶೆಟ್ಟಿ ನಟಿಸ್ತಾರಾ..? ಬೇರೆಯವರು ಮಿಂಚುತ್ತಾರಾ..?
ಛಾವ.. ಛಾವ..ಛಾವ.. ಭಾರತದಾದ್ಯಂತ ಎಲ್ಲಾರ ಬಾಯಲ್ಲೂ ಛಾವ ಸಿನಿಮಾದ್ದೇ ಮಾತು. ಇತಿಹಾಸದ ಬಗ್ಗೆಯೇ ಚರ್ಚೆ. ನಾವು ಓದಿದ ಹಿಸ್ಟರಿ ತಪ್ಪಾ..? ಕಣ್ಮುಂದೆ ರಾರಾಜಿಸ್ತಿರೋ ಛಾವ ಸಿನಿಮಾದ ಕಥೆ ಸರಿನಾ..? ಇಂಥದೊಂದು ಪ್ರಶ್ನೆ ಎದ್ದಿದೆ. ಛಾವ ಸಿನಿಮಾ ನೋಡೋದಕ್ಕೆ ಥಿಯೇಟರ್ ಒಳಗೆ ನುಗ್ಗಿದ ಪ್ರತಿಯೊಬ್ಬ ಪ್ರೇಕ್ಷಕನು ಕಣ್ಣೀರು ಹಾಕುತ್ತಾ ಹೊರ ಬರುತ್ತಿದ್ದಾನೆ. ಇದು ಒರಿಜಿನಲ್ ಕಥೆ. ಪ್ರತಿಯೊಬ್ಬ ಭಾರತೀಯನು ನೋಡಲೇ ಬೇಕು. ಮುಖ್ಯವಾಗಿ ಹಿಂದೂಗಳಂತೂ ಮಿಸ್ ಮಾಡದೆ ಛಾವ ಸಿನಿಮಾನ ನೋಡ್ಬೇಕು ಎನ್ನುತ್ತಿದ್ದಾರೆ. ಅಷ್ಟರ ಮಟ್ಟಿಗೆ ಛಾವ ಬಾಲಿವುಡ್ನ ಚಿತ್ರರಂಗದಲ್ಲಿ ಚಾಪು ಮೂಡಿಸಿದೆ. ದೇಶಾದ್ಯಂತ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸ್ತಿದೆ.
ಛತ್ರಪತಿ ಶಿವಾಜಿ ಮಹಾರಾಜ್.. ಮರಾಠಿಗರ ಆರಾಧ್ಯ ದೊರೆ.. ಹಿಂದವೀ ಸಾಮ್ರಾಜ್ಯದ ಸಾಮ್ರಾಟ್. ಶೌರ್ಯ ಪರಾಕ್ರಮಕ್ಕೆ ಹೆಸರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಶತ್ರುಗಳ ನಿದ್ದೆಗೆಡಿಸಿದ್ದರು. ಇವರ ಪುತ್ರನೇ ಎರಡನೇ ಛತ್ರಪತಿ ಸಂಭಾಜಿ ಮಹಾರಾಜ್. ಮೊಘಲರಿಗೆ ಶರಣಾಗುವ ಬದಲು ಹೋರಾಟವನ್ನೇ ಆರಿಸಿಕೊಂಡ ಧೀರ.. ತಮ್ಮ ಕೊನೆಯುಸಿರು ಇರೋವರೆಗೆ ಸ್ವರಾಜ್ಯಕ್ಕಾಗಿ ಹೋರಾಡಿ ಮಡಿದ ಛತ್ರಪತಿ ಸಂಭಾಜಿ ಮಹಾರಾಜ್ ಜೀವನಾಧರಿತ ಚಿತ್ರವೇ ಛಾವ.
ಛತ್ರಪತಿ ಶಿವಾಜಿ ಮಹಾರಾಜರ ಪುತ್ರ, ಛತ್ರಪತಿ ಸಂಭಾಜಿ ಮಹಾರಾಜರ ಕಥೆಯಾದ ಛಾವ ಸಿನಿಮಾವೇನೋ ಬಾಲಿವುಡ್ನಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡ್ತಿದೆ. ತಂದೆ ಶಿವಾಜಿ ಮಹಾರಾಜ ಸಿನಿಮಾ ಯಾವಾಗ ಸೆಟ್ಟೇರುತ್ತೆ..? ಯಾವಾಗ ಶೂಟಿಂಗ್ ಸ್ಟಾರ್ಟ್ ಆಗುತ್ತೆ ಎಂದು ಕಾತುರ ಜಾಸ್ತಿಯಾಗಿದೆ. ಸಂದೀಪ್ ಸಿಂಗ್ ಆಕ್ಷನ್ ಕಟ್ ಹೇಳಲಿರುವ ‘ದಿ ಪ್ರೈಡ್ ಆಫ್ ಭಾರತ್, ಶಿವಾಜಿ ಮಹಾರಾಜ್’ ಚಿತ್ರವನ್ನು ಘೋಷಣೆ ಮಾಡಲಾಗಿದೆ. ಮರಾಠ ಸಾಮ್ರಾಜ್ಯದ ಸಾಮ್ರಾಟನಾಗಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸುಮಾರು 7 ಭಾಷೆಗಳಲ್ಲಿ ತೆರೆಗೆ ಬರಲಿದೆ. ಸದ್ಯ ಕಾಂತಾರ-1 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರೋ ರಿಷಬ್ ಶೆಟ್ಟಿ, ತೆಲುಗಿನಲ್ಲಿ ನಿರ್ಮಾಣ ಆಗ್ತಿರುವ ‘ಜೈ ಹನುಮಾನ್’ ಚಿತ್ರಕ್ಕೂ ಜೈ ಅಂದಿದ್ದಾರೆ.
ಛತ್ರಪತಿ ಸಂಭಾಜಿ ಮಹಾರಾಜ್ ಸಿನಿಮಾ ನೋಡಿದ ಮೇಲೆ, ಅವರ ತಂದೆ ಛತ್ರಪತಿ ಶಿವಾಜಿ ಮಹಾರಾಜರ ಜೀವನಾಧರಿತ ಕಥೆಯನ್ನ ತೆರೆಮೇಲೆ ಕಣ್ತುಂಬಿಕೊಳ್ಳೋದಕ್ಕೆ ಅಭಿಮಾನಿಗಳಿಗೆ ಕಾತುರ ಜಾಸ್ತಿಯಾಗಿದೆ. ‘ದಿ ಪ್ರೈಡ್ ಆಫ್ ಭಾರತ್, ಶಿವಾಜಿ ಮಹಾರಾಜ್’ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಆದರೆ ಕರ್ನಾಟಕಕ್ಕೆ ಶಿವಾಜಿ ಮಹಾರಾಜರ ಕೊಡುಗೆ ಏನು..? ಕನ್ನಡಿಗರ ವಿರೋಧಕ್ಕೂ ಕಾರಣವಾಗಿದೆ. ಚಿತ್ರಕ್ಕೆ ಕನ್ನಡಿಗರ ವಿರೋಧ ವ್ಯಕ್ತವಾಗಿರುವುದರಿಂದ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಾರಾ..? ಇಲ್ಲವೇ ಶಿವಾಜಿ ಪಾತ್ರದಲ್ಲಿ ಬೇರೆ ನಟ ತೆರೆಯ ಮೇಲೆ ಮಿಂಚುತ್ತಾರಾ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಎದುರಾಗಿದೆ. ಇಷ್ಟೆಲ್ಲ ಆದರೂ ಸಹ, ‘ದಿ ಪ್ರೈಡ್ ಆಫ್ ಭಾರತ್, ಶಿವಾಜಿ ಮಹಾರಾಜ್’ ಚಿತ್ರ ಯಾವಾಗ ತೆರೆಗೆ ಬರುತ್ತೆ ಎಂದು ಕಾದು ನೋಡಬೇಕಿದೆ.
ಲೇಖಕರು: ಪ್ರಶಾಂತ್, ಸ್ಪೆಷಲ್ ಡೆಸ್ಕ್