ನನ್ನ ಮಗಳನ್ನ ಬಾಲಿವುಡ್‌ನ ಉತ್ತುಂಗದಲ್ಲಿ ಕೂರಿಸೇ ಕೂರಿಸ್ತೀನಿ ನೋಡಿ ಅಂತ ಹೇಳ್ತಿದ್ದ ರಶ್ಮಿಕಾ ಮಂದಣ್ಣ ಅವರ ತಾಯಿಯ ಮಾತು ಇಂದು ಅಕ್ಷರಶಃ ನಿಜವಾಗಿದೆ. ಹೌದು.. ಬಾಲಿವುಡ್ ಅಂಗಳದ ಮೋಸ್ಟ್ ಟ್ರೆಂಡಿಂಗ್ ನಟೀಮಣಿ ಯಾರು ಅಂದ್ರೆ ಅದು ಒನ್ ಅಂಡ್ ಓನ್ಲಿ ನಮ್ಮ ಕನ್ನಡತಿ, ನ್ಯಾಷನಲ್ ಕ್ರಶ್, ರಶ್ಮಿಕಾ ಮಂದಣ್ಣ. ಈ ಹಿಂದೆಯೇ ಮುಂಬೈ ಸಿನಿ ದುನಿಯಾಗೆ ಕಾಲಿಟ್ಟಿದ್ದರೂ, ಇತ್ತೀಚೆಗೆ ರಶ್ಮಿಕಾಗೆ ಸಿಗ್ತಿರೋ ಸಕ್ಸಸ್ ನೋಡಿದ್ರೆ, ಈ ಮೊದಲು ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ ಮಿಂಚಿದ ರೀತಿ ಬಿಟೌನ್ ಆಳುವ ಎಲ್ಲಾ ಲಕ್ಷಣಗಳು ಎದ್ದು ಕಾಣ್ತಿವೆ.
ಅಂದಹಾಗೆ ಸದ್ಯ ರಶ್ಮಿಕಾ ಮಂದಣ್ಣ, ಹಿಂದಿಯಲ್ಲಿ ಹ್ಯಾಟ್ರಿಕ್ ಹಿಟ್ ನ ನಿರೀಕ್ಷೆಯಲ್ಲಿದ್ದಾರೆ. ರಣ್ಬೀರ್ ಕಪೂರ್ ಜೊತೆಗಿನ ಅನಿಮಲ್ ಹಾಗೂ ವಿಕ್ಕಿ ಕೌಶಲ್ ಜೊತೆ ತೆರೆ ಹಂಚಿಕೊಂಡ ಛಾವಾ ಚಿತ್ರಗಳು ಬಿಗ್ಗೆಸ್ಟ್ ಹಿಟ್ ಆದ ಬಳಿಕ ಸಿಕಂದರ್ ಕೂಡ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲೇ ಕಮಾಲ್ ಮಾಡೋ ಮುನ್ಸೂಚನೆ ನೀಡಿದೆ.
ಹೌದು.. ನಿನ್ನೆಯಷ್ಟೇ ಸಿಕಂದರ್ ಅಫಿಶಿಯಲ್ ಟೀಸರ್ ರಿಲೀಸ್ ಆಗಿದೆ. ತಮಿಳಿನ ಸ್ಟಾರ್ ಡೈರೆಕ್ಟರ್ ಎ ಆರ್ ಮುರುಗದಾಸ್ ನಿರ್ದೇಶನದ ಈ ಸಿನಿಮಾ ಮಾಸ್ ಕಮರ್ಷಿಯಲ್ ಎಂಟರ್ ಟೈನರ್ ಆಗಿದ್ದು, ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಲೀಡ್ ನಲ್ಲಿ ಮಿಂಚು ಹರಿಸಿದ್ದಾರೆ. ಇಲ್ಲಿ ಸಲ್ಲುಗೆ ನಮ್ಮ ರಶ್ಮಿಕಾನೇ ಜೋಡಿ. ಇವ್ರ ಜೋಡಿ ದೊಡ್ಡದಾಗಿಯೇ ಮೋಡಿ ಮಾಡಲಿದೆ ಅನ್ನೋದು ಸಿನಿಪಂಡಿತರ ಲೆಕ್ಕಾಚಾರವಾಗಿದೆ.
ಬರೋಬ್ಬರಿ 400 ಕೋಟಿ ಬಿಗ್ ಬಜೆಟ್ ನಲ್ಲಿ ತಯಾರಾಗಿರೋ ಸಿಕಂದರ್ ಮೂವಿ ಈದ್ ಪ್ರಯುಕ್ತ ಇದೇ ಮಾರ್ಚ್ 28ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸುತ್ತಿದೆ. ಒಂದ್ಕಡೆ ರಶ್ಮಿಕಾ ಈ ಚಿತ್ರದ ಮೂಲಕ ಹ್ಯಾಟ್ರಿಕ್ ಹಿಟ್ ನಿರೀಕ್ಷೆಯಲ್ಲಿದ್ರೆ, ಮತ್ತೊಂದ್ಕಡೆ ಈ ಅದೃಷ್ಠ ದೇವತೆಯಿಂದಾಗಿ ಸಾಲು ಸಾಲು ಸಿನಿಮಾಗಳಿಂದ ಸೋತು ಕಂಗೆಟ್ಟಿರೋ ಸಲ್ಮಾನ್ ಖಾನ್ ಗೆ ಶುಭವಾಗೋ ಲಕ್ಷಣಗಳಿವೆ. ಯೆಸ್.. ಇತ್ತೀಚೆಗೆ ಸಲ್ಲು ಮಾಡಿದಂತಹ ಚಿತ್ರಗಳು ಬ್ಯಾಕ್ ಟು ಬ್ಯಾಕ್ ನೆಲಕಚ್ಚಿದ್ದವು. ಸಲ್ಮಾನ್ ಖಾನ್ ಗೂ ಈಗ ಒಂದೇ ಒಂದು ಸಕ್ಸಸ್ ಬೇಕಿದೆ. ಅದು ನಮ್ಮ ಕನ್ನಡತಿ ಮೂಲಕ ಬರೋ ಸೂಚನೆ ಎದ್ದು ಕಾಣ್ತಿದೆ.
ಸಿಕಂದರ್ ಚಿತ್ರದ ಟೀಸರ್ ಕೇವಲ 18 ನಿಮಿಷಗಳಲ್ಲಿ ಬರೋಬ್ಬರಿ ಎರಡೂವರೆ ಕೋಟಿ ಯೂಟ್ಯೂಬ್ ವೀವ್ಸ್ ಪಡೆದಿದೆ. ಅಲ್ಲಿಗೆ ಸಲ್ಮಾನ್ ಖಾನ್ ಗಿರೋ ಕ್ರೇಜ್ ಜೊತೆಗೆ ರಶ್ಮಿಕಾ ಗ್ಲಾಮರ್ ಕೂಡ ಸೇರಿರೋದು ಈ ಚಿತ್ರದ ಗಮ್ಮತ್ತು ಹೆಚ್ಚುವಂತೆ ಮಾಡಿದೆ. ಬರೀ ರಶ್ಮಿಕಾ ಅಷ್ಟೇ ಟ್ರೆಂಡಿಂಗ್ ಅಲ್ಲ. ಆಕೆಯ ಸಿಕಂದರ್ ಚಿತ್ರದ ಟೀಸರ್ ಕೂಡ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಂಬರ್ ಒನ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್