ಬಾಲಿವುಡ್ ನಟ ರಣ್‌ಬೀರ್ ಕಪೂರ್ ಈಗ ಜಸ್ಟ್ ಆ್ಯಕ್ಟರ್ ಮಾತ್ರವಲ್ಲ. ರಾಮ ಜನ್ಮ ಭೂಮಿ ಅಯೋಧ್ಯೆಯ ಹೊಸ ನಾಗರಿಕ ಕೂಡ ಹೌದು. ಬೆಳ್ಳಿ ಪರದೆಯ ಮೇಲೆ ‘ಶ್ರೀರಾಮ’ನಾಗಿ ಕಾಣಿಸಿಕೊಳ್ತಿರೋ ಬಾಲಿವುಡ್ ನಟ, ಸದ್ಯ ರಿಯಲ್ ಲೈಫ್‌ನಲ್ಲಿ ರಾಮನೂರಿನಲ್ಲೇ ನೆಲೆಸೋಕೆ ಸಜ್ಜಾಗಿದ್ದಾರೆ. ಅದಕ್ಕೆ ಅಂತ ಕೋಟಿ ಕೋಟಿ ಸುರಿದು ಆಸ್ತಿ ಖರೀದಿಸಿದ್ದಾರೆ. ಈ ಕುರಿತ ಒಂದು ವೆರಿ ವೆರಿ ಇಂಟರೆಸ್ಟಿಂಗ್ ರಿಪೋರ್ಟ್ ಇಲ್ಲಿದೆ.
- ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ರಾ ನಟ ರಣ್‌ಬೀರ್..?
- ಸರಯೂ ನದಿ ತೀರದ ಪ್ರೀಮಿಯಂ ಲೇಔಟ್‌ನಲ್ಲಿ ಹೂಡಿಕೆ
- ಇದು ಕೇವಲ ಭೂಮಿ ಮಾತ್ರವಲ್ಲ.. ಸನಾತನ ಭಕ್ತಿಯ ಪ್ರತೀಕ
- 2134 ಚದರಡಿ ಭೂಮಿ.. 3 ಕೋಟಿ 31 ಲಕ್ಷ ರೂಪಾಯಿ ಹಣ
ನಿತೇಶ್ ತಿವಾರಿ ನಿರ್ದೇಶನದ ಮೋಸ್ಟ್ ಅವೈಟೆಡ್ ಮೂವಿ ‘ರಾಮಾಯಣ’ದಲ್ಲಿ ಶ್ರೀರಾಮನಾಗಿ ಕಾಣಿಸಿಕೊಳ್ತಿರೋ ಬಾಲಿವುಡ್ ನಟ ರಣ್‌ಬೀರ್ ಕಪೂರ್, ಸಿನಿಮಾ ರಿಲೀಸ್‌ಗೂ ಮೊದ್ಲೇ ಅಯೋಧ್ಯೆಯೊಂದಿಗೆ ಬಿಗ್ ಕನೆಕ್ಷನ್ ಬೆಳೆಸಿಕೊಂಡಿದ್ದಾರೆ. ಚಿತ್ರದ ಶೂಟಿಂಗ್‌ಗಾಗಿ ಆಧ್ಯಾತ್ಮಿಕವಾಗಿ ಅಯೋಧ್ಯೆಗೆ ಕನೆಕ್ಟ್ ಆಗಿದ್ದ ರಣ್‌ಬೀರ್, ಇದೀಗ ಅಲ್ಲಿ ಆಸ್ತಿ ಖರೀದಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಬೆನ್ನಲ್ಲಿ ರಾಮ ಜನಿಸಿದ ಅಯೋಧ್ಯೆ ಪವಿತ್ರ ಭೂಮಿಯಲ್ಲಿ ಹೂಡಿಕೆ ಮಾಡಿದ ಎರಡನೇ ಬಾಲಿವುಡ್ ಸ್ಟಾರ್ ಎಂಬ ಹೆಗ್ಗಳಿಕೆಗೆ ನಮ್ಮ ಕಪೂರ್ ಖಾನ್‌ದಾನ್ ಕುಡಿ ಪಾತ್ರವಾಗಿದೆ.
ಹೌದು.. ಅಯೋಧ್ಯೆಯ ಅತ್ಯಂತ ಪ್ರತಿಷ್ಠಿತ ಹಾಗೂ ಪ್ರೀಮಿಯಂ ಲೇಔಟ್ ಆದ ‘ದಿ ಸರಯು’ನಲ್ಲಿ ರಣ್‌ಬೀರ್ ಕಪೂರ್ ಹೊಸ ನಿವೇಶನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಭಿನಂದನ್ ಲೋಧಾ ಹೌಸ್ ನಿರ್ಮಿಸಿರುವ ಈ ಹೈಫೈ ಲೇಔಟ್‌ನಲ್ಲಿ ರಣ್‌ಬೀರ್ ಬರೋಬ್ಬರಿ 2,134 ಚದರ ಅಡಿ ವಿಸ್ತೀರ್ಣದ ಪ್ಲಾಟ್ ಖರೀದಿಸಿದ್ದು, ಇದರ ಡೀಲ್ ವ್ಯಾಲ್ಯೂ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಕೇವಲ ಈ ಪುಟ್ಟ ಸೈಟ್‌ಗಾಗಿ ರಣ್‌ಬೀರ್ ಬರೋಬ್ಬರಿ 3.31 ಕೋಟಿ ಸುರಿದಿದ್ದಾರೆ. ಸದ್ಯ ಬಿ ಟೌನ್‌ನಲ್ಲಿ ರಣ್‌ಬೀರ್ ಅವರ ಈ ಕೋಟಿ ಕೋಟಿಯ ಅಯೋಧ್ಯಾ ಡೀಲ್ ಸಖತ್ ಸಂಚಲನ ಮೂಡಿಸಿದೆ.
ಚಿತ್ರರಂಗದ ಪಂಡಿತರ ಪ್ರಕಾರ, ರಣ್‌ಬೀರ್ ಕಪೂರ್ ಮಾಡಿರುವ ಈ ಹೂಡಿಕೆ ಕೇವಲ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಅಲ್ಲವೇ ಅಲ್ಲ. ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ, ಅವರಿಗೆ ರಾಮನ ಜನ್ಮಭೂಮಿಯ ಮೇಲೆ ಹುಟ್ಟಿರುವ ಅಪಾರ ಭಕ್ತಿ ಮತ್ತು ಭಾವನಾತ್ಮಕ ಸಂಬಂಧವೇ ಇದಕ್ಕೆ ಅಸಲಿ ಕಾರಣ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸಿನಿಮಾದಲ್ಲಿ ‘ರಾಮ’ನ ಪಾತ್ರಕ್ಕೆ ಜೀವ ತುಂಬುತ್ತಿರುವ ರಣ್‌ಬೀರ್, ಮಾಂಸಾಹಾರ ಕೂಡ ತ್ಯಜಿಸಿರೋದು ವಿಶೇಷ. ಈಗ ಅಯೋಧ್ಯೆಯಲ್ಲೇ ನೆಲೆ ಕಂಡುಕೊಳ್ಳಲು ಮುಂದಾಗಿರೋದು ಅವರ ಅಭಿಮಾನಿಗಳಿಗೆ ಭರ್ಜರಿ ಕಿಕ್ ಕೊಟ್ಟಿದೆ. ಅಲ್ಲದೆ, ಅವರು ಎಂಥಾ ಸನಾತನಿ ಅನ್ನೋದಕ್ಕೆ ಸಾಕ್ಷಿಯಾಗಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





