ದೀಪಾವಳಿ ಹಾಗೂ ಬರ್ತ್ ಡೇ ಸಂಭ್ರಮದಲ್ಲಿರೋ ಸ್ಯಾಂಡಲ್ವುಡ್ನ ಮೋಸ್ಟ್ ಪ್ಯಾಷನೇಟ್ ಪ್ರೊಡ್ಯೂಸರ್ ರಮೇಶ್ ರೆಡ್ಡಿ ಗುಡ್ ನ್ಯೂಸ್ ನೀಡಿದ್ದಾರೆ. ಶಿವಣ್ಣ-ಉಪ್ಪಿ-ರಾಜ್ ಶೆಟ್ಟಿ ಟ್ರಯೋ ಕಾಂಬೋನ 45 ಚಿತ್ರದ ಬಳಿಕ ಹೊಚ್ಚ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಯಾರು ಹೀರೋ..? ಏನು ಕಥೆ..? ಯಾವಾಗ ಶುರು ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.
- 45 ಪ್ರೊಡ್ಯೂಸರ್ ಈಸ್ ಬ್ಯಾಕ್.. ‘ಕರ್ಮ’ಕ್ಕೆ ಹೊಣೆ ಯಾರು?
- ದೀಪಾವಳಿ ಹಾಗೂ ಬರ್ತ್ ಡೇ ಸಂಭ್ರಮದಲ್ಲಿ ರಮೇಶ್ ರೆಡ್ಡಿ..!
- ಆಗ ಗರುಡ ಪುರಾಣ.. ಈಗ ಕರ್ಮದ ಕಥೆ.. ಸಖತ್ ಸರ್ಪ್ರೈಸ್
- ಜನವರಿಯಿಂದ ಶುರು.. ಹೀರೋ, ಡೈರೆಕ್ಟರ್ ಎಲ್ಲವೂ ಸಸ್ಪೆನ್ಸ್..!
ರಮೇಶ್ ರೆಡ್ಡಿ.. ಸ್ಯಾಂಡಲ್ವುಡ್ನ ಒನ್ ಆಫ್ ದಿ ಫೈನೆಸ್ಟ್ ಪ್ರೊಡ್ಯೂಸರ್ಗಳಲ್ಲಿ ಒಬ್ಬರು. ಗೆದ್ದಾಗ ಹಿಗ್ಗದೆ.. ಸೋತಾಗ ಕುಗ್ಗದೆ.. ಸದಾ ಸದಭಿರುಚಿಯ ಸಿನಿಮಾಗಳನ್ನ ಮಾಡ್ತಾ ಸಾವಿರಾರು ಮಂದಿಗೆ ಅನ್ನದಾತರಾಗ್ತಾ ಸಾಗ್ತಿರೋ ನಿರ್ಮಾಪಕರು. ತಮ್ಮ ಎಸ್ಪಿ ಪ್ರೊಡಕ್ಷನ್ಸ್ ಬ್ಯಾನರ್ನಡಿ ಇಲ್ಲಿಯ ತನಕ ಸುಮಾರು 8 ಸಿನಿಮಾಗಳನ್ನ ನಿರ್ಮಿಸಿದ್ದು, ಇದೀಗ 9ನೇ ಚಿತ್ರದ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ.
ಯೆಸ್.. ಬೆಳಕಿನ ಹಬ್ಬ ದೀಪಾವಳಿ ಹಾಗೂ ತಮ್ಮ ಬರ್ತ್ ಡೇ ವಿಶೇಷ ನಿರ್ಮಾಪಕ ರಮೇಶ್ ರೆಡ್ಡಿ ತಮ್ಮ ಬ್ಯಾನರ್ನಿಂದ 9ನೇ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದಾರೆ. ಅದೇ ಕರ್ಮ. ಅದರ ಕಾನ್ಸೆಪ್ಟ್ ಟೀಸರ್ ಕೂಡ ರಿವೀಲ್ ಮಾಡಿರೋ ನಿರ್ಮಾಪಕರು, ಡೈರೆಕ್ಟರ್ ಯಾರು..? ಹೀರೋ ಯಾರಾಗ್ತಾರೆ..? ಟೆಕ್ನಿಷಿಯನ್ಸ್ ಯಾರೆಲ್ಲಾ ಕೆಲಸ ಮಾಡ್ತಾರೆ ಅನ್ನೋದನ್ನ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಮನುಷ್ಯದ ಮನಸ್ಸಿನ ಶಾಂತಿಯನ್ನ ಕೆಡಿಸುವಂತಹ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳ ಅಂದ್ರೆ ಅರಿಷಡ್ವರ್ಗಗಳ ಕುರಿತ ಕಥಾನಕ ಇದಾಗಿರಲಿದ್ದು.. ಕರ್ಮದ ಕಥೆ ಯಾರೊಟ್ಟಿಗೆ ಅನ್ನೋದೇ ಬಿಗ್ ಸಸ್ಪೆನ್ಸ್.
2027ರ ಜನವರಿಗೆ ಈ ಸಿನಿಮಾ ಸೆಟ್ಟೇರಲಿದ್ದು.. ಯಾರೆಲ್ಲಾ ಈ ತಂಡದಲ್ಲಿ ಇರ್ತಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ. ಅಂದಹಾಗೆ ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ನ ಅನ್ನದಾತ ರಮೇಶ್ ರೆಡ್ಡಿ ಅವ್ರಿಗೆ ಕಸದಿಂದ ರಸ ತೆಗೆದಯುವುದೂ ಗೊತ್ತು.. ಅದೇ ರೀತಿ ಬಿಗ್ ಸ್ಟಾರ್ಸ್ ಜೊತೆ ಬಿಗ್ ಬಜೆಟ್ ಸಿನಿಮಾಗಳನ್ನ ಮಾಡೋದೂ ಗೊತ್ತು. ಅದನ್ನ ಶಿವಣ್ಣ-ಉಪ್ಪಿ-ರಾಜ್ ಶೆಟ್ರ 45 ಸಿನಿಮಾ ಹಾಗೂ ಐದು ನ್ಯಾಷನಲ್ ಅವಾರ್ಡ್ಗಳನ್ನ ಪಡೆದ ನಾತಿಚರಾಮಿ ಚಿತ್ರಗಳ ಮೂಲಕ ಪ್ರೂವ್ ಮಾಡಿ ತೋರಿಸಿದ್ದಾರೆ ರಮೇಶ್ ರೆಡ್ಡಿ.
ಸಂಚಾರಿ ವಿಜಯ್-ಶ್ರುತಿ ಹರಿಹರನ್ ಜೊತೆ ನಾತಿಚರಾಮಿ, ಶ್ರೇಯಸ್ ಮಂಜು ಇಂಟ್ರಡ್ಯೂಸ್ ಆದ ಪಡ್ಡೆಹುಲಿ, ರಮೇಶ್ ಅರವಿಂದ್ ನಟನೆಯ 100, ಗೋಲ್ಡನ್ ಸ್ಟಾರ್ ಗಣೇಶ್-ಭಟ್ರು ಕಾಂಬೋನ ಗಾಳಿಪಟ-2, 45.. ಹೀಗೆ ಸಾಲು ಸಾಲು ಸಿನಿಮಾಗಳಿಂದ ರಮೇಶ್ ರೆಡ್ಡಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೆ ಪಕ್ಕದ ಮಲಯಾಳಂ ಹಾಗೂ ಬಾಲಿವುಡ್ ಅಂಗಳದಲ್ಲೂ ಚಿತ್ರಗಳ ನಿರ್ಮಾಣಕ್ಕೆ ಕೈ ಹಾಕಿ.. ಕನ್ನಡಿಗರ ಗತ್ತು, ಗೈರತ್ತು ಪರಭಾಷೆಗಳಲ್ಲಿ ತೋರಿದ ಗರಿಮೆ ಅವರಿಗಿದೆ.
ಒಟ್ಟಾರೆ.. ಹೊಸ ವರ್ಷಕ್ಕೆ.. ಹೊಸ ಸಿನಿಮಾ, ಹೊಸ ಕನಸು, ಹೊಸ ನಿರೀಕ್ಷೆಯಲ್ಲಿರೋ ಅವರು, ಹುಟ್ಟುಹಬ್ಬದ ಸಂಭ್ರಮದಲ್ಲಿ ನ್ಯೂ ಪ್ರಾಜೆಕ್ಟ್ ಅನೌನ್ಸ್ ಮಾಡೋ ಮೂಲಕ ಟೀಸರ್ ನಿಂದ ಕುತೂಹಲದ ಕಿಡಿ ಹೊತ್ತಿಸಿದ್ದಾರೆ. ಸದಭಿರುಚಿಯ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ರಮೇಶ್ ರೆಡ್ಡಿ ಅವರ ಮುಂದಿನ ಈ ಪ್ರಯತ್ನದ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಈಗಿನಿಂದಲೇ ನಿರೀಕ್ಷೆ ಹೆಚ್ಚಾಗಿದ್ದು.. ನಮ್ಮ ಗ್ಯಾರಂಟಿ ನ್ಯೂಸ್ ವತಿಯಿಂದ ಅವರಿಗೆ ಜನುಮ ದಿನದ ಶುಭಾಶಯಗಳು. ಶುಭವಾಗಲಿ.. ಗೆಲುವಾಗಲಿ ಸರ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





