ಸ್ಯಾಂಡಲ್‌ವುಡ್‌ನಲ್ಲಿ ರಾಮರಸ ಚಿತ್ರ ಈಗ ಹೊಸದೊಂದು ದೈವಿಕ ಸುನಾಮಿ ಎಬ್ಬಿಸಲು ಸಜ್ಜಾಗ್ತಿದೆ. ಈ ಸಿನಿಮಾದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಸೈಲೆಂಟ್ ಆಗಿ ಎಂಟ್ರಿ ಕೊಟ್ಟಿದ್ದು, ಡಬ್ಬಿಂಗ್ ಮಾಡುತ್ತಿರುವ ಸೀಕ್ರೆಟ್ ಫೋಟೋ ಲೀಕ್ ಆಗಿದೆ. ಈ ಬಿಗ್ಗೆಸ್ಟ್ ಫ್ಯಾಂಟಸಿ ಸಿನಿಮಾದ ಲೇಟೆಸ್ಟ್ ಗಾಸಿಪ್ ಇಲ್ಲಿದೆ ನೋಡಿ.
- ದೈವಿಕ ಫ್ಯಾಂಟಸಿ ಲೋಕಕ್ಕೆ ರೋರಿಂಗ್ ಸ್ಟಾರ್ ಎಂಟ್ರಿ
- ರಾಮರಸ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟ ಶ್ರೀಮುರಳಿ
- ಫೋಟೋ ಲೀಕ್.. ಮುರಳಿ ಪಾತ್ರದ ಗುಟ್ಟು ರಟ್ಟಾಗೋದ್ಯಾವಾಗ?
- ಸ್ಟಾರ್‌ಗಳ ಸಂಗಮ.. ಡಿ.11ಕ್ಕೆ ವಿಶ್ವದಾದ್ಯಂತ ರಾಮರಸ ದರ್ಶನ..!
ಕನ್ನಡ ಚಿತ್ರರಂಗದ ಮೋಸ್ಟ್ ಅವೈಟೆಡ್ ಪ್ಯಾನ್-ಇಂಡಿಯಾ ದೈವಿಕ ಫ್ಯಾಂಟಸಿ ಚಿತ್ರ ರಾಮರಸ ಈಗ ಸಿನಿರಸಿಕರ ನಿದ್ದೆಗೆಡಿಸಿದೆ. ಕಾರ್ತಿಕ್ ಮಹೇಶ್ ನಟಿಸಿ, ನಿರ್ದೇಶಕ ಬಿ.ಎಂ. ಗಿರಿರಾಜ್ ಸಾರಥ್ಯದಲ್ಲಿ, ರಾಜಾಹುಲಿ ಗುರುದೇಶಪಾಂಡೆ ಮತ್ತು ವಿಕ್ರಂ ಆರ್ಯ ಬಿಗ್ ಬಜೆಟ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಕೇವಲ ಮನರಂಜನೆಯಷ್ಟೇ ಅಲ್ಲ, ಪರಂಪರಾಗತ ಜಾನಪದ, ಸ್ಥಳೀಯ ಆಧ್ಯಾತ್ಮಿಕ ಆಚರಣೆಗಳು ಹಾಗೂ ದಶ ಮಹಾವಿದ್ಯೆಯರ ಹಿನ್ನೆಲೆಯುಳ್ಳ ಪರಾಶಕ್ತಿಯ ದೈವಿಕ ರಹಸ್ಯಗಳ ಅದ್ಭುತ ಸಮ್ಮಿಲನವಾಗಿದೆ. ಇದೊಂದು ಕೇವಲ ಸಿನಿಮಾವಲ್ಲ, ಬದಲಿಗೆ ಅಪ್ಪಟ ದೈವಿಕ ಅನುಭವ ಎನ್ನಲಾಗ್ತಿದೆ.
ಇನ್ನು ಈ ಸಿನಿಮಾದ ಲೇಟೆಸ್ಟ್ ಅಪ್ಡೇಟ್ ಅಂದ್ರೆ ರೋರಿಂಗ್ ಸ್ಟಾರ್ ಶ್ರೀಮುರಳಿ. ಈಗಾಗಲೇ ಬೃಹತ್ ತಾರಾಗಣ ಹೊಂದಿರುವ ರಾಮರಸ ತಂಡಕ್ಕೆ ಶ್ರೀಮುರಳಿ ಸಾಥ್ ನೀಡಿರೋದು ಫ್ಯಾನ್ಸ್‌ಗೆ ಡಬಲ್ ಧಮಾಕಾ ತಂದಿದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಶ್ರೀಮುರಳಿ ಅವರ ಡಬ್ಬಿಂಗ್ ಸ್ಟುಡಿಯೋ ಫೋಟೋ ನೋಡಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದು, ಸಿನಿಮಾದಲ್ಲಿ ಅವರ ಅಸಲಿ ಪಾತ್ರವೇನು ಎಂಬ ಚರ್ಚೆ ಈಗ ಗಾಂಧಿನಗರದ ಹಾಟ್ ಟಾಪಿಕ್ ಆಗಿದೆ. ಈ ಸೀಕ್ರೆಟ್ ಫೋಟೋ ಅಸಲಿಕತೆಯನ್ನು ಚಿತ್ರತಂಡ ಶೀಘ್ರದಲ್ಲೇ ಬಿಚ್ಚಿಡೋದಾಗಿ ಹೇಳಿದ್ದು, ರೋರಿಂಗ್ ಸ್ಟಾರ್ ಯಾವ ರಗಡ್ ಅಥವಾ ದೈವಿಕ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕ್ಯೂರಿಯಾಸಿಟಿ ದುಪ್ಪಟಾಗಿದೆ
ಈ ಮಲ್ಟಿಸ್ಟಾರ್ ಸಿನಿಮಾದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಕಾಮಿಡಿ ಕಿಂಗ್ ಶರಣ್, ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್, ಬಾಲಿವುಡ್ ಸೆನ್ಸೇಷನ್ ಅದಾ ಶರ್ಮಾ ಹಾಗೂ ಹೆಬಾ ಪಟೇಲ್, ಅನುಷಾ ರೈ ಸೇರಿದಂತೆ ದೊಡ್ಡ ತಾರಾಬಳಗವೇ ಅಬ್ಬರಿಸಲಿದೆ. ಫ್ಯಾಂಟಸಿ ಲೋಕದ ಈ ದೈವಿಕ ಆಟವನ್ನು ಕಣ್ತುಂಬಿಕೊಳ್ಳಲು ಇನ್ನು ಹೆಚ್ಚು ದಿನವಿಲ್ಲ, ಮುಂಬರುವ ಡಿಸೆಂಬರ್ 11 ರಂದು ವಿಶ್ವದಾದ್ಯಂತ ಪ್ಯಾನ್-ಇಂಡಿಯಾ ಮಟ್ಟದಲ್ಲಿ ರಾಮರಸ ತೆರೆಗೆ ಅಪ್ಪಳಿಸಲಿದ್ದು, ಬಾಕ್ಸಾಫೀಸ್‌ನಲ್ಲಿ ಯಾವ ಮಟ್ಟಕ್ಕೆ ದೂಳೆಬ್ಬಿಸಲಿದೆ ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





