• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸ್ಟಾರ್‌ಗಳಿಲ್ಲ, ಪ್ರಚಾರದ ಅಬ್ಬರವಿಲ್ಲ: ಆದ್ರೂ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ! ಈ ವರ್ಷದ ಅನಿರೀಕ್ಷಿತ ಹಿಟ್ಸ್‌ ಯಾವುವು ಗೊತ್ತಾ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 13, 2026 - 1:33 pm
in ಸಿನಿಮಾ
0 0
0
Your paragraph text (49)

ಕಲಾವಿದರಿಗಿಂತ ಕಂಟೆಂಟ್ ಮುಖ್ಯ. ಅಬ್ಬರ-ಆಡಂಬರಕ್ಕಿಂತ ನೈಜತೆ ಹಾಗೂ ಸ್ವಾಭಾವಿಕತೆ ಮುಖ್ಯ. ರೀಲ್‌ಗಿಂತ ರಿಯಾಲಿಟಿಗೇನೇ ಜನ ಜಾಸ್ತಿ ಜೈಕಾರ ಹಾಕ್ತಾರೆ.. ಶಿಳ್ಳೆ, ಚಪ್ಪಾಳೆ ಹೊಡೀತಾರೆ. ಈ ವರ್ಷ ಕನ್ನಡ ಸೇರಿದಂತೆ ಸೌತ್‌‌ನಿಂದ ಬಾಲಿವುಡ್‌ ತನಕ ಎಲ್ಲಾ ಅನ್‌‌ಎಕ್ಸ್‌‌ಪೆಕ್ಟೆಡ್ ಸಿನಿಮಾಗಳೇ ಬಾಕ್ಸ್ ಆಫೀಸ್‌‌ನಲ್ಲಿ ಬಿಗ್ ಸರ್‌‌ಪ್ರೈಸ್‌‌ ನೀಡಿವೆ. ಪ್ರೇಕ್ಷಕರ ಹೃದಯ ಕದಿಯೋದ್ರ ಜೊತೆಗೆ ನೂರಾರು ಕೋಟಿ ಲೂಟಿ ಮಾಡಿವೆ.

ಹಿಂದಿ- ಹನುಮಾನ್ ಅಂಶ್

RelatedPosts

ರಾಮರಸ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟ ಶ್ರೀಮುರಳಿ

11 ವರ್ಷಗಳ ಬಳಿಕ ಸೂರಿ ಕಾಗೆ ಬಂಗಾರದ ಬೇಟೆ ಶುರು!

ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ವಿಜಯ್ ದೇವರಕೊಂಡ-ರಶ್ಮಿಕಾ

‘ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ

ADVERTISEMENT
ADVERTISEMENT

ತೆಲುಗು- ಇರುಮುಡಿ

ತಮಿಳು- ಕರುಪ್ಪು

ಮಲಯಾಳಂ- ಬೆತ್ಲಹೆಮ್ ಕುಟುಂಬ ಯುನಿಟ್

ಕನ್ನಡ- ಪ್ರೇಮದ ಊರಲಿ

ಇವೇ ಈ ವರ್ಷದ ಅನಿರೀಕ್ಷಿತ ಹಿಟ್ಸ್..!!

ಲೆಕ್ಕಾಚಾರ ತಲೆಕೆಳಗೆ ಮಾಡಿದ ಮಾಸ್ಟರ್‌‌‌ಪೀಸ್‌‌‌ಗಳು

ಸಿನಿಮಾಗಳ ಸಕ್ಸಸ್ ಅನ್ನೋದು ಒಂಥರಾ ಲಾಟರಿ ಇದ್ದಂತೆ. ನಾವು ಯಾವೆಲ್ಲಾ ಸಿನಿಮಾಗಳ ಮೇಲೆ ದೊಡ್ಡ ಮಟ್ಟದ ಭರವಸೆ ಇಟ್ಟು, ನಿರೀಕ್ಷೆಯಿಂದ ಕಾಯ್ತಾ ಇರ್ತೀವೋ.. ಅವೆಲ್ಲಾ ಅಟ್ಟರ್ ಫ್ಲಾಪ್ ಆಗಿಬಿಡುತ್ತವೆ. ಅದೇ ರೀತಿ ಕನಸಲ್ಲಿ ಕೂಡ ಊಹಿಸಿರದ ಸಿನಿಮಾಗಳು ಬಾಕ್ಸ್ ಅಫೀಸ್ ಬ್ಲಾಕ್ ಬಸ್ಟರ್ ಹಿಟ್ ಆಗಿಬಿಡುತ್ತವೆ. ಹಣ ಕಮಾಯಿ ಮಾಡೋಕ್ಕಿಂತ ಹೆಚ್ಚಾಗಿ ಜನ ಮೆಚ್ಚುಗೆಯ ಮಾಸ್ಟರ್‌‌ಪೀಸ್‌‌ಗಳು ಆಗಿ ರಾರಾಜಿಸಿ ಬಿಡುತ್ತವೆ.

2 ಕೋಟಿ ಹನುಮಾನ್ ಅಂಶ್ 435 ಕೋಟಿ ಕಮಾಯಿ

ನೀಮ್ ಕರೋಲಿ ಬಾಬಾ ಆಧ್ಯಾತ್ಮಿಕ ಪಯಣದ ಸಿನಿಮಾ

ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಹಾಗೆ ಯಾರೂ ಊಹಿಸಿರದ ಐದು ಚಿತ್ರಗಳು.. ಐದು ಬೇರೆ ಬೇರೆ ಭಾಷೆಗಳಲ್ಲಿ ಸಾರ್ವಕಾಲಿಕ ದಾಖಲೆ ಬರೆದಿವೆ. ಆ ಪೈಕಿ ಬಾಲಿವುಡ್‌ನ ಹನುಮಾನ್ ಅಂಶ್ ಸಿನಿಮಾ ಖಾನ್, ಕಪೂರ್‌‌ಗಳ ಹುಬ್ಬೇರಿಸಿದೆ. ಹೌದು.. ಎರಡು ಕೋಟಿ ಸ್ಮಾಲ್ ಬಜೆಟ್‌‌ನಲ್ಲಿ ತಯಾರಾದ ನೀಮ್ ಕರೋಲಿ ಬಾಬಾ ಅವ್ರ ಜೀವನ ಹಾಗೂ ಆಧ್ಯಾತ್ಮಿಕ ಪಯಣವನ್ನ ಆಧರಿಸಿದ ಭಕ್ತಿಪ್ರಧಾನ ಚಿತ್ರ ಬಾಕ್ಸ್ ಆಫೀಸ್‌‌ನಲ್ಲಿ ವರ್ಲ್ಡ್‌‌ವೈಡ್ ಬರೋಬ್ಬರಿ 435ಕ್ಕೂ ಅಧಿಕ ಕೋಟಿ ಗಳಿಸಿ ಇತಿಹಾಸ ಸೃಷ್ಟಿಸಿದೆ.

ವಿಶಾಲ್ ಚತುರ್ವೇದಿ ನಿರ್ದೇಶನದ ಹಾಗೂ ಶೋಭಿನವ್ ಸತ್ಯಾ ನಟನೆಯ ಈ ಸಿನಿಮಾ ಹಿಂದಿ ಹೊರತಾಗುಯೂ ಸಹ ದೇಶದಾದ್ಯಂತ ಸಂಚಲನ ಮೂಡಿಸಿದೆ. ಇದೀಗ ಪರಭಾಷೆಗಳಿಗೂ ಡಬ್ ಆಗಿ ತೆರೆ ಕಾಣೋ ಮೂಲಕ ಮತ್ತಷ್ಟು ಮಂದಿಯನ್ನ ತಲುಪುತ್ತಿದೆ.

ರವಿತೇಜಾ ಇರುಮುಡಿಗೆ ಒಲಿದಿದ್ದು 250ಕೋಟಿ ರೂಪಾಯಿ

ತಂದೆ-ಮಗಳ ಭಾವನಾತ್ಮಕ ಆ್ಯಕ್ಷನ್ ಥ್ರಿಲ್ಲರ್‌ಗೆ ಡಿವೈನ್ ಟಚ್

ಪಕ್ಕದ ಟಾಲಿವುಡ್‌‌ನಲ್ಲಿ ಮಾಸ್ ಮಹಾರಾಜ ರವಿತೇಜಾ ನಟನೆಯ ಇರುಮುಡಿ ಸಿನಿಮಾ ಕೂಡ ಗಲ್ಲಾ ಪೆಟ್ಟಿಗೆಯಲ್ಲಿ ಅನಿರೀಕ್ಷಿತ ಮಟ್ಟದಲ್ಲಿ ಧೂಳೆಬ್ಬಿಸಿತು. 35 ಕೋಟಿ ಬಜೆಟ್‌‌ನಲ್ಲಿ ತಯಾರಾದ ಸಿನಿಮಾ ಬರೋಬ್ಬರಿ 250 ಕೋಟಿಗೂ ಅಧಿಕ ಮೊತ್ತದ ಹಣವನ್ನು ಗಳಿಸಿತು. ತಂದೆ-ಮಗಳ ಭಾವನಾತ್ಮಕ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗೆ ದೈವಿಕ ಟಚ್ ಕೂಡ ನೀಡಲಾಗಿದ್ದು, ಫ್ಯಾಮಿಲಿ ಆಡಿಯೆನ್ಸ್ ಮುಗಿಬಿದ್ದು ಸಿನಿಮಾ ನೋಡಿದ್ರು. ಆಂಧ್ರ-ತೆಲಂಗಾಣ ಅಲ್ಲದೆ ದೇಶ ವಿದೇಶಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಯ್ತು ಶಿವ ನಿರ್ವಾಣ ನಿರ್ದೇಶನದ ಇರುಮುಡಿ. ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ರವಿತೇಜಾಗೂ ಇದು ಫೀನಿಕ್ಸ್‌‌ನಂತೆ ಎದ್ದು ಬರೋಕೆ ವೇದಿಕೆ ಆಯ್ತು.

ಸೂರ್ಯ ಸಿನಿಕರಿಯರ್‌ ಕೈಹಿಡಿದ್ರು ‘ಕರುಪ್ಪು’ಸ್ವಾಮಿ

315 ಕೋಟಿ ಗಲ್ಲಾಪೆಟ್ಟಿಗೆ ಗಳಿಕೆ.. ಭರ್ಜರಿ ಕಂಬ್ಯಾಕ್

ತಮಿಳು ಚಿತ್ರರಂಗದಲ್ಲಿ ನಟ ಸೂರ್ಯಗೂ ಈ ವರ್ಷ ಕರುಪ್ಪಸ್ವಾಮಿ ಬಿಗ್ ಹಿಟ್ ನೀಡಿದ್ದಾನೆ. ಯೆಸ್.. ಸತತ ಸೋಲುಗಳಿಂದ ಕಂಗೆಟ್ಟಿದ್ದ ಸೂರ್ಯಗೆ ಕರುಪ್ಪು ಬ್ಲಾಕ್ ಬಸ್ಟರ್ ಹಿಟ್ ಆಗೋದ್ರಿಂದ ಕಂಬ್ಯಾಕ್ ಮೂವಿ ಆಗಿ ರಾರಾಜಿಸಿತು. ಫ್ಯಾಂಟಸಿ ಆ್ಯಕ್ಷನ್ ಡ್ರಾಮಾ ಆದ್ರೂ ಸಹ ವಕೀಲರು ಹಾಗೂ ದೇವರ ನಡುವಿನ ಕಾಳಗದ ಕಥೆ ನೋಡುಗರನ್ನ ಸಖತ್ ಇಂಪ್ರೆಸ್ ಮಾಡಿತು. 130 ಕೋಟಿ ಬಜೆಟ್ ಸಿನಿಮಾ 315ಕ್ಕೂ ಅಧಿಕ ಕೋಟಿ ಗಳಿಸಿ, ಭೇಷ್ ಅನಿಸಿಕೊಳ್ತು.

ನಿವಿನ್ ಪೌಲಿ ಈಸ್ ಬ್ಯಾಕ್.. ಬೆತ್ಲಹೆಮ್ ಕುಟುಂಬಕ್ಕೆ 338Cr

ಮಲಯಾಳಂನ ಹೈಯೆಸ್ಟ್ ಕಲೆಕ್ಷನ್ ಮೂವಿ ಹಾಗೂ ನಂ.1 ಸ್ಥಾನ

ಮಲಯಾಳಂ ಚಿತ್ರರಂಗ ಬಹಳ ಚಿಕ್ಕದು. ಅದರ ಮಾರ್ಕೆಟ್ ಕೂಡ ಕಿರಿದಾಗಿದೆ ಅಂತಾರೆ. ಆದ್ರೆ ನಟ ನಿವಿನ್ ಪೌಲಿ ಹಾಗೂ ಮಮಿತಾ ಬೈಜು ಜೋಡಿ ಬೆತ್ಲಹೆಮ್ ಕುಟುಂಬ ಯುನಿಟ್ ಚಿತ್ರದಿಂದ ಅಕ್ಷರಶಃ ಮೋಡಿ ಮಾಡಿತು. 25 ಕೋಟಿ ಸ್ಮಾಲ್ ಬಜೆಟ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ 338 ಕೋಟಿಗೂ ಅಧಿಕ ಮೊತ್ತದ ಹಣ ಗಳಿಸಿದೆ. ಗಿರೀಶ್ ಆ್ಯಕ್ಷನ್ ಕಟ್ ಹೇಳಿರೋ ಈ ಸಿನಿಮಾ ಸದ್ಯ ಮಲಯಾಳಂ ಇಂಡಸ್ಟ್ರಿಯಲ್ಲಿ ಅತಿಹೆಚ್ಚು ಬಾಕ್ಸ್ ಆಫೀಸ್ ಗಳಿಕೆಯ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿ ನಂ.1 ಆಗಿ ಸೌಂಡ್ ಮಾಡ್ತಿದೆ.

80 ಕೋಟಿ ಗಳಿಸಿದ ಪ್ರೇಮದೂರು.. 100 ಕೋಟಿಯತ್ತ ಹೆಜ್ಜೆ

ಸರಸ್ವತಿಯನ್ನ ಆರಾಧಿಸಿದ್ರೆ ಸಾಕು ಲಕ್ಷ್ಮೀ ಒಲಿದೇ ಒಲಿಯುತ್ತಾಳೆ

ಈ ವರ್ಷದ ಎವರ್‌‌‌ಗ್ರೀನ್ ಸಿನಿಮಾಗಳ ಸಾಲಿಗೆ ಕನ್ನಡದ ಪ್ರೇಮದ ಊರಲಿ ಸಿನಿಮಾ ಸೇರಿಕೊಂಡಿದೆ. ಹೌದು.. ಯಾವುದೇ ಸ್ಟಾರ್‌‌ ನಟ, ನಟಿಯರು ಇಲ್ಲದ. ಪ್ರಚಾರದ ಅಬ್ಬರತೆ ಇಲ್ಲದ.. ಕಂಟೆಂಟ್‌‌ನಿಂದಲೇ ಪ್ರೇಕ್ಷಕರ ಹೃದಯ ಗೆದ್ದ ಚಿತ್ರವಾಗಿ ಭಾವನಾತ್ಮಕ ಫ್ಯಾಮಿಲಿ ಎಂಟರ್‌‌ಟೈನರ್ ಆಗಿ ಪ್ರೇಮದೂರಿಗೆ ಸಿನಿರಸಿಕರನ್ನ ತುಂಬು ಹೃದಯದಿಂದ ಸ್ವಾಗತಿಸುತ್ತಿದೆ. ಮನೋಜ್ ಕುಮಾರ್ ನಿರ್ದೇಶನದ ಹಾಗೂ ಶ್ರೀರಾಮ್, ರಂಗಾಯಣ ರಘು, ರಮಿಕಾ ಶಿವು, ತಪಸ್ವಿನಿ ಪೂಣಚ್ಚ ನಟನೆಯ ಈ ಚಿತ್ರ ಹಳ್ಳಿ ಸೊಗಡು, ಸೊಬಗಿನ ಜೊತೆ ಪ್ರೀತಿ, ಸಂಬಂಧ, ಬಾಂಧವ್ಯಗಳ ಭಾವಲೋಕಕ್ಕೆ ಕೊಂಡೊಯ್ಯುತ್ತಿದೆ.

ಕೇವಲ ಎರಡೂವರೆ ಕೋಟಿಯಷ್ಟು ಸಣ್ಣ ಬಂಡವಾಳದಲ್ಲಿ ಈ ಸಿನಿಮಾ ತಯಾರಾಗಿತ್ತು. ಆದ್ರೀಗ ಕರ್ನಾಟದ ಗಡಿ ದಾಟಿ, ದೇಶದಾದ್ಯಂತ ವ್ಯಾಪಿಸಿದೆ ಪ್ರೇಮದೂರು. ಅಷ್ಟೇ ಅಲ್ಲ.. ಸಪ್ತಸಾಗರದಾಚೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ದುಬೈ, ಕತಾರ್‌‌‌ನಲ್ಲೂ ಸದ್ದು ಮಾಡ್ತಿದೆ. ಬರೋಬ್ಬರಿ 80 ಕೋಟಿ ಗಳಿಸಿರೋ ಈ ಸಿನಿಮಾ ಸದ್ಯದಲ್ಲೇ ನೂರು ಕೋಟಿ ಕ್ಲಬ್ ಕೂಡ ಸೇರಲಿದೆ. ಇದು ನಿಜವಾದ ಕಲೆಗೆ ಸಿಕ್ಕ ಬೆಲೆ ಹಾಗೂ ಗೌರವ ಎನ್ನಬಹುದು. ಸರಸ್ವತಿಯನ್ನ ನಂಬಿದವರಿಗೆ ಲಕ್ಷ್ಮೀ ತಾನಾಗೇ ಒಲಿಯುತ್ತಾಳೆ. ಆದ್ರೆ ಲಕ್ಷ್ಮೀಗಾಗಿ ಸರಸ್ವತಿಯನ್ನ ಕಡೆಗಣಿಸಿದ್ರೆ ಅದರ ಪರಿಣಾಮ ಏನಾಗುತ್ತೆ ಅನ್ನೋದು ಅದೆಷ್ಟೋ ಮಂದಿಗೆ ಆ ಕಲಾದೇವಿಯೇ ಉತ್ತರ ಕೂಡ ನೀಡಿದ್ದಾಳೆ. ಇನ್ನಾದ್ರೂ ಕಥೆ ಹಾಗು ಕಂಟೆಂಟ್ ಮುಖ್ಯ ಅನ್ನೋದನ್ನ ಫಿಲ್ಮ್ ಮೇಕರ್ಸ್ ಅರಿತುಕೊಳ್ಳಬೇಕಿದೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಪಾಕಿಸ್ತಾನದಲ್ಲಿ

ಪಾಕಿಸ್ತಾನದಲ್ಲಿ ಹಳಿತಪ್ಪಿದ ರೆಹಮಾನ್ ಬಾಬಾ ಎಕ್ಸ್‌ಪ್ರೆಸ್ ರೈಲು: ಐವರು ಸಾ*ವು

by ಶಾಲಿನಿ ಕೆ. ಡಿ
October 13, 2026 - 4:39 pm
0

Untitled design 2026 10 13T161316.256

ಗಾಂಧಿನಗರ ಪಾಲಿಕೆ ಚುನಾವಣೆ: ಬಿಜೆಪಿಗೆ ಭರ್ಜರಿ ಜಯ, ಕಾಂಗ್ರೆಸ್‌ಗೆ 5 ಸ್ಥಾನ, ಆಪ್‌ಗೆ ಭಾರೀ ಮುಖಭಂಗ

by ಶಾಲಿನಿ ಕೆ. ಡಿ
October 13, 2026 - 4:13 pm
0

Untitled design 2026 10 13T154026.830

ರಾಮರಸ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟ ಶ್ರೀಮುರಳಿ

by ಶಾಲಿನಿ ಕೆ. ಡಿ
October 13, 2026 - 3:40 pm
0

Untitled design 2026 10 13T151843.868

ಪಂಜಾಬ್‌ನಲ್ಲಿ ಡ್ರಗ್ಸ್ ವಿರೋಧಿ ಹೋರಾಟಗಾರನನ್ನು ಗುಂಡಿಕ್ಕಿ ಹತ್ಯೆಗೈದ ಮೆಡಿಕಲ್ ಮಾಲೀಕ

by ಶಾಲಿನಿ ಕೆ. ಡಿ
October 13, 2026 - 3:19 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 13T154026.830
    ರಾಮರಸ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟ ಶ್ರೀಮುರಳಿ
    October 13, 2026 | 0
  • Your paragraph text (48)
    11 ವರ್ಷಗಳ ಬಳಿಕ ಸೂರಿ ಕಾಗೆ ಬಂಗಾರದ ಬೇಟೆ ಶುರು!
    October 13, 2026 | 0
  • Your paragraph text (47)
    ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ವಿಜಯ್ ದೇವರಕೊಂಡ-ರಶ್ಮಿಕಾ
    October 13, 2026 | 0
  • 11 (1)
    ‘ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ
    October 13, 2026 | 0
  • 1
    3 ವಾರ ಕಳೆದರೂ ಕಮ್ಮಿಯಾಗದ ‘ಪ್ರೇಮದ ಊರಲಿ’ ಹವಾ; ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್!
    October 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version