RC16.. ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾ ಗೇಮ್ ಚೇಂಜರ್ ಸಿನಿಮಾ ಬಳಿಕ ಬಣ್ಣ ಹಚ್ಚಿರೋ ಮತ್ತೊಂದು ಬಿಗ್ ಬಜೆಟ್ ಮೂವಿ. ಬುಚ್ಚಿಬಾಬು ನಿರ್ದೇಶನದಲ್ಲಿ ತಯಾರಾಗ್ತಿರೋ ಈ ಸಿನಿಮಾ ಈಗಾಗ್ಲೇ ತನ್ನ ಮೊದಲ ಹಂತದ ಚಿತ್ರೀಕರಣವನ್ನು ಮೈಸೂರಿನಲ್ಲಿ ಶುರುವಿಟ್ಟಿತ್ತು. ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್, ನಟ ರಾಮ್ ಚರಣ್ ಜೊತೆ ಬಣ್ಣ ಹಚ್ಚಿದ್ದು, ಮೈಸೂರಿನಲ್ಲಿ ಯಶಸ್ವಿ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಆಗಿತ್ತು.
ಇದೀಗ ಚಿತ್ರದ ಎರಡನೇ ಶೆಡ್ಯೂಲ್ ಇದೇ ಮಾರ್ಚ್ 4ರಿಂದ ಅಂದ್ರೆ ನಾಳೆಯಿಂದ ಶೂಭಾರಂಭ ಆಗ್ತಿದೆ. ಅದೂ ರಾಷ್ಟ್ರ ರಾಜಧಾನಿ ಡೆಲ್ಲಿಯಲ್ಲಿ ಅನ್ನೋದು ಇಂಟರೆಸ್ಟಿಂಗ್. ಅದಕ್ಕಿಂತ ಹೈ ವೋಲ್ಟೇಜ್ ನ್ಯೂಸ್ ಏನಪ್ಪಾಂದ್ರೆ ಇನ್ನೂ ಹೆಸರಿಡದ RC16 ಮೂವಿ ಶೂಟಿಂಗ್, ಡೆಲ್ಲಿಯಲ್ಲಿರೋ ಹೊಚ್ಚ ಹೊಸ ಪಾರ್ಲಿಮೆಂಟ್ ಭವನ ಹಾಗೂ ಜಾಮಾ ಮಸೀದಿಯಲ್ಲಿ ನಡೆಯಲಿದೆ. ಅರೇ ಹೊಸ ಸಂಸತ್ ಭವನದಲ್ಲಿ ಶೂಟಿಂಗ್ ಗೆ ಹೇಗೆ ಅನುಮತಿ ಸಿಕ್ತು ಅನ್ನೋದು ಸಾಕಷ್ಟು ಮಂದಿಯ ಪ್ರಶ್ನೆಯಾಗಿದೆ.
ಹೌದು.. ಹಳೆಯ ಸಂಸತ್ ಭವನದ ಮೇಲೆ ಹಿಂದೊಮ್ಮೆ ದಾಳಿ ನಡೆದಿತ್ತು. ಇದೀಗ ಹೊಸ ಸಂಸತ್ ಭವನ ಇತ್ತೀಚೆಗೆ ಉದ್ಘಾಟನೆ ಅಗಿ, ಇಲ್ಲಿಯೂ ಸಹ ಸಂಸದ ಪ್ರತಾಪ್ ಸಿಂಹ ಹೆಸರು ಹೇಳಿಕೊಂಡು ಆದಂತಹ ಹಂಗಾಮದ ಬಗ್ಗೆ ಎಲ್ರಿಗೂ ಗೊತ್ತೇಯಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಾರ್ಲಿಮೆಂಟ್ ನಲ್ಲಿ ಚಿತ್ರೀಕರಿಸೋದಷ್ಟೇ ಅಲ್ಲ, ಅದರ ಬಗ್ಗೆ ಯೋಚಿಸೋದು ಕೂಡ ಕಷ್ಟ ಕಷ್ಟ. ಆದ್ರೂ ಕೂಡ ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ನಟನೆಯ ಆರ್ ಸಿ-16 ಮೂವಿ ಚಿತ್ರೀಕರಣಕ್ಕೆ ಪಾರ್ಲಿಮೆಂಟ್ ನಲ್ಲಿ ಸಿಕ್ಕಿದೆ ಅನುಮತಿ. ಅದಕ್ಕೆ ಕಾರಣ ಒನ್ ಅಂಡ್ ಓನ್ಲಿ ರಿಯಲ್ ಗೇಮ್ ಚೇಂಜರ್ ಪವನ್ ಕಲ್ಯಾಣ್.
ಆಂಧ್ರ ಡಿಸಿಎಂ ಆಗಿರೋ ಪವನ್ ಕಲ್ಯಾಣ್, ತನ್ನ ಅಣ್ಣನ ಮಗನ ಚಿತ್ರಕ್ಕಾಗಿ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ, ಎಲ್ಲಾ ರೂಲ್ಸ್ ಅಂಡ್ ರೆಗ್ಯೂಲೇಷನ್ಸ್ ಗೆ ಒಪ್ಪಿ ಸಂಸತ್ ಭವನದಲ್ಲಿ ಚಿತ್ರೀಕರಿಸಲು ಅನುಮತಿ ಕೊಡಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ಜಾಮಾ ಮಸೀದಿಯಲ್ಲಿ ಸದ್ಯ ರಂಜಾನ್ ನಡೆಯುತ್ತಿದ್ದು, ಮಾರ್ಚ್ ತಿಂಗಳಾಂತ್ಯದ ವರೆಗೆ ಶೂಟಿಂಗ್ ನಡೆಸೋಕೆ ಅನುಮತಿ ಸಿಕ್ಕಿಲ್ಲ. ಹಾಗಾಗಿ ಹಬ್ಬ ಕಳೆಯುತ್ತಿದ್ದಂತೆ ಜಾಮಾ ಮಸೀದಿಯಲ್ಲೂ RC16 ಚಿತ್ರದ ಶೂಟಿಂಗ್ ಶುರುವಾಗಲಿದೆಯಂತೆ.
ಎಲ್ಲಕ್ಕಿಂತ ವಿಶೇಷ ಏನಂದ್ರೆ, ರಾಮ್ ಚರಣ್ ಜೊತೆ ನಮ್ಮ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಡೆಲ್ಲಿಯಲ್ಲಿ ಶುರುವಾಗ್ತಿರೋ RC16 ಸೆಕೆಂಡ್ ಶೆಡ್ಯೂಲ್ ನಲ್ಲೇ ಶಿವಣ್ಣ ಕೂಡ ಭಾಗಿಯಾಗಲಿದ್ದಾರೆ ಎನ್ನಲಾಗ್ತಿದೆ. ಇದು ನಿಜಕ್ಕೂ ಖುಷಿಯ ವಿಚಾರ. ನಮ್ಮ ಶಿವಣ್ಣನ ಸಿನಿಮಾವೊಂದು ಪಾರ್ಲಿಮೆಂಟ್ ಭವನದಲ್ಲಿ ಚಿತ್ರೀಕರಣ ನಡೆಯಲಿದೆ ಅನ್ನೋದೇ ಹೆಮ್ಮೆಯ ವಿಷಯ.