ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ ಬಂದು ಎರಡು ವರ್ಷಗಳಾಯ್ತು. ಅಂದಿನಿಂದ ಸ್ಯಾಂಡಲ್‌ವುಡ್‌ನಲ್ಲಿ ನಾಪತ್ತೆ ಆಗಿಬಿಟ್ಟಿದ್ದಾರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಒಂದ್ಕಡೆ ಶೆಟ್ರ ಗ್ಯಾಂಗ್‌ನಲ್ಲಿ ದೊಡ್ಡ ಬಿರುಕು ಅನ್ನೋ ವದಂತಿ. ಮತ್ತೊಂದ್ಕಡೆ ಅಜ್ಞಾತವಾಸಕ್ಕೆ ಜಾರಿರೋ ರಕ್ಷಿತ್. ಇವೆರಡರ ನಡುವೆ ಹುಟ್ಟಿದೂರಿನಲ್ಲಿ ದೈವದ ಮೊರೆ ಹೋದ ಶೆಟ್ರು, ಸದ್ಯದಲ್ಲೇ ಬಿಗ್ ಬ್ರೇಕಿಂಗ್ ನ್ಯೂಸ್ ಜೊತೆ ಬರೋ ಮುನ್ಸೂಚನೆ ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಭಿನ್ನ ಅಲೆಯ ಸಿನಿಮಾಗಳಿಗೆ ಮುನ್ನುಡಿ ಬರೆದ ಶೆಟ್ರ ಜನರೇಷನ್‌ನ ಮೊದಲ ವ್ಯಕ್ತಿ ರಕ್ಷಿತ್ ಶೆಟ್ಟಿ. ಆದ್ರೆ ಅದ್ಯಾಕೋ ಇತ್ತೀಚೆಗೆ ಇವರು ಚಿತ್ರರಂಗದಲ್ಲಿ ಸಕ್ರಿಯರಾಗಿಲ್ಲ. ಕಳೆದ ವರ್ಷ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಚಾಪ್ಟರ್-1, ರಾಜ್ ಬಿ ಶೆಟ್ಟಿ ಅಭಿನಯಿಸಿ ನಿರ್ಮಾಣ ಮಾಡಿದ ಸು ಫ್ರಮ್ ಸೋ ಚಿತ್ರಗಳು ರಿಲೀಸ್ ಆದಾಗಲೂ ರಿಷಬ್ ಗಾಯಬ್. 45 ಸಿನಿಮಾಗೂ ಶುಭ ಕೋರಿಲ್ಲ.
ಫೈನಲಿ ರಕ್ಷಿತ್ ಪ್ರತ್ಯಕ್ಷ.. ದೈವದ ಮೊರೆ ಹೋಗಿದ್ಯಾಕೆ ಶೆಟ್ರು..?
ಎರಡು ವರ್ಷಗಳಿಂದ ಅಜ್ಞಾತವಾಸದಲ್ಲಿದ್ದ ಸಿಂಪಲ್ ಸ್ಟಾರ್
ಸದಾ ಒಬ್ಬರಿಗೊಬ್ಬರು ಬೆನ್ನು ತಟ್ಟಿಕೊಂಡು ಜೊತೆಗೆ ಇರ್ತಿದ್ದ ರಕ್ಷಿತ್-ರಿಷಬ್-ರಾಜ್ ಬಿ ಶೆಟ್ಟಿ ನಡುವೆ ದೊಡ್ಡ ಬಿರುಕು ಮೂಡಿದೆ. ಯಾಕಂದ್ರೆ ಆ ಅಂತೆ ಕಂತೆಗಳಿಗೆ ಪೂರಕವಾಗಿ ಅವರು ನಡೆದುಕೊಳ್ತಿದ್ದಾರೆ. ಈ ನಡುವೆ ಸಪ್ತಸಾಗರದಾಚೆ ಎಲ್ಲೋ-2 ಸಿನಿಮಾ ತೆರೆಕಂಡ ಬಳಿಕ ರಕ್ಷಿತ್ ಅಕ್ಷರಶಃ ಯಾರ ಕಣ್ಣಿಗೂ ಕಾಣಿಸ್ತಿಲ್ಲ. ಎಲ್ಲಿದ್ದಾರೆ..? ಏನು ಮಾಡ್ತಿದ್ದಾರೆ..? ಸಾರ್ವಜನಿಕವಾಗಿ ಏಕೆ ಕಾಣಿಸಿಕೊಳ್ತಿಲ್ಲ..? ಹೀಗೆ ಸಾಕಷ್ಟು ಪ್ರಶ್ನೆಗಳು ಮೂಡಿದ್ದು, ಯಾವುದಕ್ಕೂ ಉತ್ತರ ಸಿಕ್ಕಿಲ್ಲ.
ಆದ್ರೆ ತಮ್ಮ ಬಹುದಿನಗಳ ಕನಸಿನ ಸಿನಿಮಾ ರಿಚರ್ಡ್ ಆ್ಯಂಟನಿ ಅನೌನ್ಸ್ ಮಾಡಿದ ಬಳಿಕ ಅದ್ರ ಕಥೆ ತಯಾರಿಸೋಕೆ ದೂರದ ಅಮೆರಿಕಾದಲ್ಲಿರೋ ಅಕ್ಕನ ಮನೆಯಲ್ಲಿದ್ದಾರೆ ಎನ್ನಲಾಗಿತ್ತು. ಇತ್ತ ಆರ್ ಆರ್ ನಗರದಲ್ಲಿ ಸ್ವಂತ ಮನೆ ಕಟ್ಟಿಸೋಕೆ ಸಜ್ಜಾಗಿದ್ದ ರಕ್ಷಿತ್, ಅದನ್ನ ಅರ್ಧಕ್ಕೇ ನಿಲ್ಲಿಸಿದ್ದಾರಂತೆ. ರಶ್ಮಿಕಾ ಕೈ ಕೊಟ್ಟ ಬಳಿಕ ಮದ್ವೆ ಬಗ್ಗೆಯೂ ಸುದ್ದಿಯಿಲ್ಲ.. ಸುಳಿವಿಲ್ಲ. ಆದ್ರೀಗ ಬಹಳ ದಿನಗಳ ನಂತ್ರ ಹುಟ್ಟಿದೂರಿನಲ್ಲಿ ದೈವದ ಮೊರೆ ಹೋಗಿದ್ದಾರೆ ಸಿಂಪಲ್ ಸ್ಟಾರ್.
ಹುಟ್ಟಿದೂರಲ್ಲಿ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವ
ಸಿನಿಮಾ, ಮನೆ, ಮದ್ವೆ.. ಸದ್ಯದಲ್ಲೇ ಕೊಡ್ತಾರೆ ಬಿಗ್ ಬ್ರೇಕಿಂಗ್
ಹೌದು.. ಉಡುಪಿಯ ಅಲೆವೂರಿನ ಕಲ್ಯಾಣ ನಗರದಲ್ಲಿ ವಿಶೇಷ ನೇಮೋತ್ಸವ ಮಾಡಿಸಿದ್ದಾರೆ ರಕ್ಷಿತ್. ಅಲ್ಲಿ ತಮ್ಮ ಇಷ್ಟ ದೈವ ವೈದ್ಯನಾಥ ಬಬ್ಬು ಸ್ವಾಮಿಗೆ ಹರಕೆ ತೀರಿಸಿದ್ದಾರೆ. ಅಲೆವೂರಿನ ದೊಡ್ಡಮನೆ ಕುಟುಂಬದ ಕುಡಿ ರಕ್ಷಿತ್, ಇಡೀ ಕುಟುಂಬ ಸಮೇತ ದೈವದ ಮೊರೆ ಹೋಗಿದೆ. ಈ ಮೂಲಕ ಮದ್ವೆ, ಮನೆ ಹಾಗೂ ಮುಂದಿನ ಸಿನಿಮಾ ಬಗ್ಗೆ ಸದ್ಯದಲ್ಲೇ ಬಿಗ್ ಬ್ರೇಕಿಂಗ್ ನ್ಯೂಸ್ ನೀಡುವ ಮುನ್ಸೂಚನೆ ನೀಡಿದ್ದಾರೆ ರಕ್ಷಿತ್.





