ತಲೈವಾ ರಜನಿಕಾಂತ್ ಜೈಲರ್-2 ಸಿನಿಮಾದ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿತ್ತು. ಇದೀಗ ಓಣಂ ಹಾಗೂ ವರಮಹಾಲಕ್ಷ್ಮೀ ಹಬ್ಬದ ವಿಶೇಷ ಜೈಲರ್-2 ಗ್ಲಾಮರ್ ಸಾಂಗ್ ರಿಲೀಸ್ ಆಗಿದೆ. ಆದ್ರೆ ಜೈಲರ್ ಚಿತ್ರದ ಮಿಲ್ಕಿ ಬ್ಯೂಟಿ ತಮನ್ನಾ ಸಾಂಗ್ ರೇಂಜ್‌ಗೆ ಹೈಪ್ ತಗೊಂಡಿಲ್ಲ. ಹಾಗಾದ್ರೆ ಸಾಂಗ್ ಹೇಗಿದೆ..? ಏನು ಎಡವಟ್ ಆಗಿದೆ ಅಂತೀರಾ..? ಈ ಸ್ಟೋರಿ ನೋಡಿ.
- ಜೈಲರ್-2 ಗ್ಲಾಮರ್ ಸಾಂಗ್ ಔಟ್..ನೀರಸ ಪ್ರತಿಕ್ರಿಯೆ
- 3 ವರ್ಷದ ಹಿಂದೆ ಧೂಳೆಬ್ಬಿಸಿದ್ರು ಮಿಲ್ಕಿ ಬ್ಯೂಟಿ ತಮನ್ನಾ
ಯೆಸ್.. ಇದು ಇದೇ ಅಕ್ಟೋಬರ್-15ಕ್ಕೆ ಬಿಡುಗಡೆಗೆ ಸಜ್ಜಾಗ್ತಿರೋ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್-2 ಚಿತ್ರದ ಫಸ್ಟ್ ಸಾಂಗ್ ಝಲಕ್. ಅಲಾ ಬೋಲೆಲೋ ಅನ್ನೋ ಈ ಹಾಡು ಔಟ್ & ಔಟ್ ಡ್ಯಾನ್ಸಿಂಗ್ ನಂಬರ್ ಆಗಿದ್ದು, ಮಲಯಾಳಂ ನಟಿ ಕಮ್ ಡ್ಯಾನ್ಸರ್ ಶಾಮ್ನಾ ಕಾಸಿಂ ಸೊಂಟ ಬಳುಕಿಸಿದ್ದಾರೆ. ಓಣಂ ಹಬ್ಬ ಹಾಗೂ ವರಮಹಾಲಕ್ಷ್ಮೀ ಹಬ್ಬದ ವಿಶೇಷ ರಿಲೀಸ್ ಆಗಿರೋ ಜೈಲರ್-2 ಸಾಂಗ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆದ್ರೆ ಮೂರು ವರ್ಷಗಳ ಹಿಂದೆ ಮಿಲ್ಕಿ ಬ್ಯೂಟಿ ತಮನ್ನಾ ಸೊಂಟ ಬಳುಕಿಸಿದ್ದ ಜೈಲರ್ ಚಿತ್ರದ ಐಟಂ ನಂಬರ್ ಬಹುದೊಡ್ಡ ಓಪನಿಂಗ್ ಪಡೆದಿತ್ತು. ಯೂಟ್ಯೂಬ್‌ನಲ್ಲಿ ಬರೋಬ್ಬರಿ 422 ಮಿಲಿಯನ್ ವೀವ್ಸ್‌ನಿಂದ ದಾಖಲೆ ಕೂಡ ಬರೆದಿತ್ತು ಕಾವಾಲ ಸಾಂಗ್. ಅಲ್ಲಿ ತಮನ್ನಾ ಅಂದ ಚೆಂದದ ಜೊತೆ ಹಸಿಬಿಸಿ ದೃಶ್ಯಗಳು ಕೂಡ ನೋಡುಗರನ್ನ ಅಟ್ರ್ಯಾಕ್ಟ್ ಮಾಡಿತ್ತು.
ಇದೀಗ ರಿಲೀಸ್ ಆಗಿರೋ ಜೈಲರ್-2 ಸಾಂಗ್‌ನಲ್ಲಿ ಡ್ಯಾನ್ಸ್ ಇದೆ, ಬೀಟ್ಸ್ ಇದೆ. ಆದ್ರೆ ಗ್ಲಾಮರ್ ಕೊರತೆ ಎದ್ದು ಕಾಣ್ತಿದೆ. ಹಾಗಾಗಿಯೇ ಇದು ರಿಲೀಸ್ ಆಗಿ ಒಂದು ದಿನ ಕಳೆದರೂ 5 ಮಿಲಿಯನ್ ವೀವ್ಸ್ ಕೂಡ ಕಂಪ್ಲೀಟ್ ಆಗಿಲ್ಲ. ಟಿಪಿಕಲ್ ಕ್ಲಾಸಿಕಲ್ ಡ್ಯಾನ್ಸ್‌ನಂತಿರೋ ವಿಶ್ಯುವಲ್ಸ್ ಯೂತ್‌ಗೆ ಅಷ್ಟಾಗಿ ಕನೆಕ್ಟ್ ಆಗಿಲ್ಲ. ಇಲ್ಲಿ ರಜನಿಕಾಂತ್ ಕೂಡ ಸ್ಟೆಪ್ ಹಾಕಿ ಗಮನ ಸೆಳೆದಿಲ್ಲ. ಅಲ್ಲಲ್ಲಿ ಗಂಭೀರವಾಗಿ ಕಾಣಿಸಿಕೊಂಡಿದ್ದಾರಷ್ಟೇ. ಒಟ್ಟಾರೆ ಇದ್ರಿಂದ ಡೈರೆಕ್ಟರ್ ನೆಲ್ಸನ್ ಹಾಗೂ ಕಂಪೋಸರ್ ಅನಿರುದ್ದ್ ರವಿಚಂದರ್ ಫಾರ್ಮುಲಾ ಈ ಸಲ ನಿರೀಕ್ಷಿತ ಮಟ್ಟಕ್ಕೆ ವರ್ಕ್ ಆಗಿಲ್ಲ ಅನ್ನೋದು ಸ್ಪಷ್ಟವಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





