ಭಾರತೀಯ ಚಲನಚಿತ್ರೋದ್ಯಮದ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರು ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಅಭಿಮಾನಿಗಳು, ಸಿನಿ ರಸಿಕರು ಹಾಗೂ ಗಣ್ಯರು ಶುಭ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಜನಿಕಾಂತ್ ಅವರ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ರಜನಿಕಾಂತ್ ಚಿತ್ರರಂಗದ ಕೊಡುಗೆಯನ್ನ ಹಾಡಿಹೊಗಳಿದ್ದಾರೆ. ರಜನಿಕಾಂತ್ ಅವರ ಅಭಿನಯವು ಹಲವು ಪೀಳಿಗೆಗಳನ್ನು ಆಕರ್ಷಿಸಿದೆ ಮತ್ತು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಅವರ ಪ್ರತಿಯೊಂದು ವೈವಿಧ್ಯಮಯ ಪಾತ್ರಗಳು ಚಲನಚಿತ್ರ ಜಗತ್ತಿನಲ್ಲಿ ಒಂದು ಬೆಂಚ್‌ಮಾರ್ಕ್ ಸೃಷ್ಟಿಸಿವೆ.
ಈ ವರ್ಷದ ಹುಟ್ಟುಹಬ್ಬವು ರಜನಿಕಾಂತ್ ಅವರಿಗೆ ಮತ್ತಷ್ಟು ಮಹತ್ವದ್ದಾಗಿದೆ, ಏಕೆಂದರೆ ಅವರು ಚಲನಚಿತ್ರ ಜಗತ್ತಿನಲ್ಲಿ ತಮ್ಮ 50 ವರ್ಷಗಳ ಅಮೂಲ್ಯ ಸೇವೆಯನ್ನು ಪೂರೈಸಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲನ್ನು ಮೋದಿ ಅವರು ತಮ್ಮ ಸಂದೇಶದಲ್ಲಿ ವಿಶೇಷವಾಗಿ ಉಲ್ಲೇಖಿಸಿ, ಚಲನಚಿತ್ರ ಜಗತ್ತಿನಲ್ಲಿ ಅವರು 50 ವರ್ಷಗಳನ್ನು ಪೂರೈಸಿದ್ದರಿಂದ ಈ ವರ್ಷ ಗಮನಾರ್ಹವಾಗಿದೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.
Greetings to Thiru Rajinikanth Ji on the special occasion of his 75th birthday. His performances have captivated generations and have earned extensive admiration. His body of work spans diverse roles and genres, consistently setting benchmarks. This year has been notable because…
— Narendra Modi (@narendramodi) December 12, 2025
ತಲೈವ ಹುಟ್ಟುಹಬ್ಬಕ್ಕೆ ಹಲವಾರು ಪ್ರಮುಖ ರಾಜಕೀಯ ನಾಯಕರು ಮತ್ತು ಚಲನಚಿತ್ರ ಗಣ್ಯರು ಶುಭ ಹಾರೈಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಎಕ್ಸ್ ಖಾತೆಯ ಮೂಲಕ ತಲೈವಾ ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಸ್ಟಾಲಿನ್ ಅವರು ರಜನಿಕಾಂತ್ ಅವರೊಂದಿಗೆ ತಾವು ಹೊಂದಿರುವ ವೈಯಕ್ತಿಕ ಸ್ನೇಹ ಮತ್ತು ಚಿತ್ರರಂಗದಲ್ಲಿ ಅವರಿಂದ ರಾಜ್ಯಕ್ಕೆ ಸಿಕ್ಕ ಗೌರವದ ಬಗ್ಗೆ ತಿಳಿಸಿದ್ದಾರೆ.
ரஜினிகாந்த் = வயதை வென்ற வசீகரம்!
மேடையில் ஏறினால் அனைவரையும் மகிழ்விக்கும் சொல்வன்மை!
உள்ளொன்று வைத்துப் புறமொன்று பேசாத கள்ளம் கபடமற்ற நெஞ்சம்!ஆறிலிருந்து அறுபதுவரைக்கும் அரைநூற்றாண்டாகக் கவர்ந்திழுக்கும் என் நண்பர் #SuperStar @rajinikanth அவர்களுக்கு உளம் நிறைந்த பிறந்தநாள்… pic.twitter.com/txEn7pHwKE
— M.K.Stalin – தமிழ்நாட்டை தலைகுனிய விடமாட்டேன் (@mkstalin) December 12, 2025
ರಜನಿಕಾಂತ್ ಅವರ ಅಳಿಯ ಮತ್ತು ಖ್ಯಾತ ನಟ ಧನುಷ್ ಅವರು, ರಜನಿಕಾಂತ್‌ರಿಗೆ “ತಲೈವಾ” ಎಂದೇ ಸಂಬೋಧಿಸಿ, ಅವರ ಮಾರ್ಗದರ್ಶನ ಮತ್ತು ಪ್ರೇರಣೆಗೆ ಧನ್ಯವಾದಗಳನ್ನು ಸಲ್ಲಿಸಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
Happy birthday thalaiva 🙏🙏🤩🤩😎😎❤️❤️ @rajinikanth
— Dhanush (@dhanushkraja) December 11, 2025
ಇವರೊಂದಿಗೆ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ನಿರ್ದೇಶಕರು, ನಾಯಕ ನಟರು ಮತ್ತು ಸಂಗೀತ ಸಂಯೋಜಕರು ಸಹ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ರಜನಿಕಾಂತ್ ಅವರಿಗೆ ಶುಭ ಹಾರೈಸಿದ್ದಾರೆ.
1975ರಲ್ಲಿ ‘ಅಪೂರ್ವ ರಾಗಂಗಳ್’ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ಶಿವಾಜಿ ರಾವ್ ಗಾಯಕ್ವಾಡ್, ನಂತರ ರಜನಿಕಾಂತ್ ಆಗಿ ರೂಪುಗೊಂಡರು. ವಿಭಿನ್ನ ಶೈಲಿ, ವಿಶಿಷ್ಟ ನಡಿಗೆ, ಮತ್ತು ತಮ್ಮದೇ ಆದ ಮ್ಯಾನರಿಸಂ ಮೂಲಕ ಅವರು ದಕ್ಷಿಣ ಭಾರತದ ಸಿನಿ ಜಗತ್ತಿನಲ್ಲಿ ಪ್ರಮುಖ ಸ್ಥಾನ ಪಡೆದರು.
75ನೇ ವಯಸ್ಸಿನಲ್ಲಿಯೂ ಅವರು ತಮ್ಮ ಉತ್ಸಾಹ ಮತ್ತು ಕ್ರಿಯಾಶೀಲತೆಯನ್ನು ಉಳಿಸಿಕೊಂಡಿದ್ದು, ಈಗಲೂ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರ ಈ ಅರ್ಧ ಶತಮಾನದ ಸಿನಿ ಪಯಣವು ಲಕ್ಷಾಂತರ ಯುವ ನಟರಿಗೆ ಮತ್ತು ಚಲನಚಿತ್ರ ನಿರ್ಮಾಪಕರಿಗೆ ಸ್ಪೂರ್ತಿಯಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳು ಸಂದಿವೆ.





