45, ಲ್ಯಾಂಡ್‌ಲಾರ್ಡ್ ಹಾಗೂ ರಕ್ಕಸಪುರದೋಳ್..ಬ್ಯಾಕ್ ಟು ಬ್ಯಾಕ್ ಮೂರು ವೆರೈಟಿ ಜಾನರ್ ಚಿತ್ರಗಳಲ್ಲಿ ನಟಿಸಿದ ರಾಜ್ ಬಿ ಶೆಟ್ರು, ಸದ್ಯ ಏನ್ಮಾಡ್ತಿದ್ದಾರೆ ಅನ್ನೋ ಐಡಿಯಾ ಯಾರಿಗೂ ಇಲ್ಲ. ಒಂದಲ್ಲ ಎರಡಲ್ಲ ಮೂರ್ನಾಲ್ಕು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇರೋ ಶೆಟ್ರು, ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಕೈ ಜೋಡಿಸಿರೋ ಗ್ಯಾರಂಟಿ ಎಕ್ಸ್‌ಕ್ಲೂಸಿವ್ ಸ್ಟೋರಿ.
ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್ ತನಕ ಡಿಮ್ಯಾಂಡ್ ಇರೋ ನಟ ಅಂದ್ರೆ ಅದು ರಾಜ್ ಬಿ ಶೆಟ್ಟಿ. ಅವರ ಕಥೆ, ಪಾತ್ರಗಳ ಆಯ್ಕೆ, ಬರವಣಿಗೆ, ನಿರ್ದೇಶನ, ನಿರ್ಮಾಣದ ಚಿತ್ರಗಳು ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತವೆ. ನಮ್ಮ ಭಾರತೀಯ ಚಿತ್ರರಂಗದ ಮೋಸ್ಟ್ ವರ್ಸಟೈಲ್ ಆ್ಯಕ್ಟರ್‌ಗಳಲ್ಲಿ ರಾಜ್ ಬಿ ಶೆಟ್ಟಿ ಕೂಡ ಒಬ್ರು. ಪಾಲಿಗೆ ಬಂದ ಪಾತ್ರಕ್ಕೆ ಜೀವ ತುಂಬುತ್ತಾ ನೋಡುಗರ ಹುಬ್ಬೇರಿಸ್ತಾರೆ ಶೆಟ್ರು.

KVN ಪ್ರೊಡಕ್ಷನ್ಸ್‌ನಲ್ಲಿ ರಾಜ್ ಬಿ ಶೆಟ್ಟಿ ಹಾರರ್ ಮೂವಿ..!
ಸದ್ದಿಲ್ಲದೆ ಸೈಲೆಂಟ್ ಆಗಿ 80% ಶೂಟಿಂಗ್ ಮುಗಿಸಿದ ಶೆಟ್ರು

ಇತ್ತೀಚೆಗೆ 45, ಲ್ಯಾಂಡ್‌ಲಾರ್ಡ್ ಹಾಗೂ ರಕ್ಕಸಪುರದೋಳ್ ಅನ್ನೋ ಸಿನಿಮಾಗಳಲ್ಲಿ ನಟಿಸಿ, ಓ ಮೈ ಗಾಡ್ ಇವರಲ್ಲಿ ಇಂಥದ್ದೊಬ್ಬ ಕಲಾವಿದ ಅಡಗಿದ್ದಾನಾ ಅಂತ ಬಾಯ್ಮೇಲೆ ಬೆರಳಿಟ್ಕೊಂಡ್ರು ಚಿತ್ರ ಪ್ರೇಮಿಗಳು. ಆದ್ರೆ ಆಫ್ಟರ್ ರಕ್ಕಸಪುರದೋಳ್ ಶೆಟ್ರು ಏನ್ಮಾಡ್ತಿದ್ದಾರೆ..? ಎಲ್ಲಿದ್ದಾರೆ ಅನ್ನೋದ್ರ ಮಾಹಿತಿ ಇಲ್ಲ. ಅದಕ್ಕೆ ಅಂತಲೇ ನಾವು ಒಂದು ಎಕ್ಸ್‌ಕ್ಲೂಸಿವ್ ಖಬರ್ ಹೊತ್ತು ಬಂದಿದ್ದೀವಿ. ಸದ್ಯ ಶೆಟ್ರ ಜೊತೆ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಕೈ ಜೋಡಿಸಿದೆ.

ಸ್ವಾತಿ ಮುತ್ತಿನ ಮಳೆ ಹನಿಯೇ ನಂತ್ರ ಡೈರೆಕ್ಷನ್‌ಗೆ ಕಂಬ್ಯಾಕ್
ಗ್ಯಾರಂಟಿ ನ್ಯೂಸ್‌ನಲ್ಲಿ ರಾಜ್ ಶೆಟ್ಟಿ ನೆಕ್ಸ್ಟ್ ಪ್ರಾಜೆಕ್ಸ್ಟ್ ಅಪ್ಡೇಟ್

3 ವರ್ಷಗಳ ಹಿಂದೆ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವನ್ನ ನಿರ್ದೇಶಿಸಿ, ಲೀಡ್‌ನಲ್ಲಿ ನಟಿಸಿದ್ದ ರಾಜ್ ಬಿ ಶೆಟ್ಟಿ, ಇದೀಗ ಲಾಂಗ್ ಗ್ಯಾಪ್ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಟಾಕ್ಸಿಕ್, ಜನನಾಯಗನ್ ಹಾಗೂ ಕೆಡಿ ಚಿತ್ರಗಳ ನಿರ್ಮಾಪಕರು ಶೆಟ್ರಿಂದ ಹಾರರ್ ಜಾನರ್ ಸಿನಿಮಾ ಮಾಡಿಸ್ತಿದ್ದಾರೆ. ಇನ್ನೂ ಹೆಸರಿಡದ ಆ ಚಿತ್ರದ ಶೂಟಿಂಗ್ ಬಹುತೇಕ 80 ಪರ್ಸೆಂಟ್ ಮುಗಿದುಹೋಗಿದೆ ಎನ್ನಲಾಗ್ತಿದೆ. ಇದೇ ಫಸ್ಟ್ ಟೈಂ ಹಾರರ್ ಜಾನರ್ ಟ್ರೈ ಮಾಡಿರೋ ರಾಜ್ ಶೆಟ್ಟಿ, ನಿರ್ದೇಶನದ ಜೊತೆ ಲೀಡ್‌ನಲ್ಲಿ ನಟಿಸಿರೋದು ವಿಶೇಷ.
ಇದಲ್ಲದೆ ಬಿ.ಕೆ. ಗಂಗಾಧರ್ ಜೊತೆಗೂಡಿ ಸು ಫ್ರಮ್ ಸೋ ರವಿಅಣ್ಣ ಪಾತ್ರಧಾರಿ ಶನೀಲ್ ಗೊಂದು ಸಿನಿಮಾನ ಪ್ರೊಡ್ಯೂಸ್ ಮಾಡ್ತಿದ್ದಾರೆ ಶೆಟ್ರು. ಒಟ್ಟಾರೆ ತಾನು ಬೆಳೆಯೋದ್ರ ಜೊತೆಗೆ ತನ್ನೊಟ್ಟಿಗೆ ಇರೋರು ಕೂಡ ಬೆಳೆಯಬೇಕು ಅನ್ನೋ ಅವರ ಆಶಯ ನಿಜಕ್ಕೂ ಮೆಚ್ಚುವಂಥದ್ದು.





