ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತಮ್ಮ ಬರ್ತ್‌ಡೇ ದಿನಂದೇ ಮದುವೆಯ ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದ್ದಾರೆ. ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಅವರು, ವೈವಾಹಿಕ ಜೀವನದ ಯೋಜನೆಯ ಬಗ್ಗೆ ಮಾತನಾಡಿದ್ದಾರೆ.
33 ವರ್ಷದ ರಚಿತಾ, ಇಲ್ಲಿವರೆಗೆ ಮದುವೆಯ ಬಗ್ಗೆ ಯೋಚಿಸದಿದ್ದರೂ, ಈಗ ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಬರ್ತ್‌ಡೇ ಸಂದರ್ಭದಲ್ಲಿ ಮದುವೆಯ ಬಗ್ಗೆ ಕೇಳಿದಾಗ, “ವಿವಾಹ ಆಗಬೇಕು ಅಂತ ನಿರ್ಧರಿಸಿದ್ದೇನೆ. ಆದಷ್ಟು ಬೇಗ ಮದುವೆ ಆಗುತ್ತೇನೆ. ಮನೆಯವರು ಹುಡುಗನನ್ನು ಹುಡುಕುತ್ತಿದ್ದಾರೆ. ನಾನು ಅರೇಂಜ್ಡ್ ಮ್ಯಾರೇಜ್ ಮಾಡಿಕೊಳ್ಳುತ್ತೇನೆ” ಎಂದು ಹೇಳಿದರು.
ಕನ್ನಡ ನಟಿ ಹರಿಪ್ರಿಯಾ ಅವರು ಮದುವೆಯ ನಂತರ ಸಿನಿಮಾ ರಂಗದಿಂದ ದೂರವಾದರು. ಮಗು ಜನಿಸಿದ ನಂತರ ಅವರು ಕುಟುಂಬದ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ರಚಿತಾ ಅವರಿಗೂ ಇದೇ ಭಯ ಅಭಿಮಾನಿಗಳಿಗಿದೆ. ಅವರು ಮದುವೆಯಾದರೂ ಚಿತ್ರರಂಗವನ್ನು ತೊರೆಯಬಾರದು ಎಂದು ಅಭಿಮಾನಿಗಳು ಕೋರುತ್ತಿದ್ದಾರೆ. ರಚಿತಾ ತಮ್ಮ ವೃತ್ತಿಯನ್ನು ಮುಂದುವರೆಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ರಚಿತಾ ರಾಮ್ ಅವರಿಗೆ ಈಗ ಪರಭಾಷಾ ಸಿನಿಮಾಗಳಲ್ಲಿ ಬೇಡಿಕೆ ಉಂಟಾಗಿದೆ. ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿ ಗಮನ ಸೆಳೆದರು. ಲೋಕೇಶ್ ಕನಗರಾಜ್ ನಟನೆಯ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ. ಕನ್ನಡದಲ್ಲಿ ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್‌ರ ‘ಕಲ್ಟ್’ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಇದರೊಂದಿಗೆ ಸಂಜು ವೇಡ್ಸ್ ಗೀತಾ 2 ಸಹ ಬಿಡುಗಡೆಯಾಗಲಿದೆ.
ರಚಿತಾ ರಾಮ್ ಅವರ ಮೂಲ ಹೆಸರು ಬಿಂದಿಯಾ ರಾಮ್ ಆಗಿದ್ದು,ಇವರು ಮೂತಃ ತುಮಕೂರಿನವರಾಗಿದ್ದಾರೆ. ತಂದೆ ಕೆ.ಎಸ್. ರಾಮು ಭರತನಾಟ್ಯ ಗುರು. ಸಹೋದರಿ ನಿತ್ಯಾ ರಾಮ್ ಸಹ ಕಿರುತರೆ ನಟಿಯಾಗಿದ್ದಾರೆ. 2013ರಲ್ಲಿ ‘ಬುಲ್ ಬುಲ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿಕದ ರಚಿತಾ ರಾಮ್, ದರ್ಶನ್, ಪುನೀತ್ ರಾಜ್‌ಕುಮಾರ್, ಸುದೀಪ್ ಹಾಗೂ ಇತರ ಸ್ಟಾರ್‌ಗಳೊಂದಿಗೆ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ





