ಬೇಡ ಬೇಡ ಅಂದ್ರೂ ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್ ಸ್ಟಾರ್‌ಗೆ ಬ್ಯಾಕ್ ಟು ಬ್ಯಾಕ್ ವಿವಾದಗಳು ಸುತ್ತಿಕೊಳ್ತಿವೆ. ಮೊನ್ನೆಯಷ್ಟೇ ನಡೆದ ಬಿಕ್ಲು ಶಿವ ಕೊಲೆ ಆರೋಪಿ ಜಗ್ಗ ಜೊತೆಗಿರೋ ರಚಿತಾ ರಾಮ್ ಫೋಟೋಸ್‌ಆಕೆಗೆ ಮುಳುವಾಗೋ ಮುನ್ಸೂಚನೆ ನೀಡಿದೆ. ಇಷ್ಟಕ್ಕೂ ಈ ಬಗ್ಗೆ ರಚಿತಾ ಏನು ಹೇಳ್ತಾರೆ..? ಇಲ್ಲಿದೆ ಆ ಫೋಟೋಸ್ ಹಿಂದಿನ ಅಸಲಿ ಕಥೆ.
- ಕೊಲೆ ಆರೋಪಿ ಜೊತೆ ರಚ್ಚು.. ಆ ಗಿಫ್ಟ್‌ನಿಂದ ಆಪತ್ತು ?
- ರಚಿತಾಗೆ ಬಿಕ್ಲು ಶಿವ ಮರ್ಡರ್ ಆರೋಪಿ ಜಗ್ಗ ನಂಟು..?!
- ಬಂಗಾರ, ಸೀರೆ ಗಿಫ್ಟ್ ಕೊಟ್ಟಿದ್ಯಾರು..? ಯಾಕೆ ಗೊತ್ತಾ..?
- ಗ್ಯಾರಂಟಿ ನ್ಯೂಸ್‌ನಲ್ಲಿ ಮೌನ ಮುರಿದ ಡಿಂಪಲ್ ಕ್ವೀನ್..!
ರಚಿತಾ ರಾಮ್, ಸ್ಯಾಂಡಲ್‌ವುಡ್‌ನ ಮೋಸ್ಟ್ ಡಿಮ್ಯಾಂಡಿಂಗ್ ನಟಿಮಣಿ. ಸದ್ಯ ಈ ಜನರೇಷನ್ ಪಾಲಿಗೆ ಲೇಡಿ ಸೂಪರ್ ಸ್ಟಾರ್. ಹೌದು, ಒಂದು ಕೋಟಿಗೂ ಅಧಿಕ ರೆಮ್ಯುನರೇಷನ್ ಪಡೆಯುತ್ತಿರೋ ರಚಿತಾಗೆ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಯಾಕಂದ್ರೆ ಈಕೆ ಅಂದ ಚೆಂದ, ಅದ್ಭುತ ಅಭಿನಯದ ಜೊತೆ ಜೊತೆಗೆ ಎಲ್ಲಾ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಹಾಗಾಗಿಯೇ ಎಲ್ಲಾ ಸ್ಟಾರ್‌ಗಳ ಫ್ಯಾನ್ಸ್ ಕೂಡ ಇಷ್ಟು ಪಡುವ ನಟಿಯಾಗಿ ಮಿಂಚು ಹರಿಸುತ್ತಿದ್ದಾರೆ.
ಇಲ್ಲಿಯವರೆಗೂ ಒಂದು ಕಪ್ಪು ಚುಕ್ಕೆ ಇಲ್ಲದೆ ಯಶಸ್ವಿ 12 ವರ್ಷಗಳ ಸಿನಿಯಾನ ಮುಗಿಸಿರೋ ಡಿಂಪಲ್ ಕ್ವೀನ್, ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ವಿವಾದಗಳಲ್ಲಿ ಸಿಲುಕಿಕೊಳ್ತಿದ್ದಾರೆ. ಹೌದು, ಸಂಜು ವೆಡ್ಸ್ ಗೀತಾ-2 ಚಿತ್ರದ ಪ್ರಮೋಷನ್ಸ್‌ಗೆ ಬಂದಿಲ್ಲ ಅಂತ ರಂಪಾಟ ಮಾಡಿದ್ರು ನಿರ್ದೇಶಕ, ನಿರ್ಮಾಪಕ. ಆ ಬಳಿಕ ಉಪ್ಪೀಸ್ ರುಪ್ಪೀಸ್ ಚಿತ್ರದ ನಿರ್ಮಾಪಕಿಗೆ ಲಕ್ಷಾಂತರ ರೂ ವಂಚನೆ ಆರೋಪ ಕೇಳಿ ಬಂದಿತ್ತು. ಇದೀಗ ಬಿಕ್ಲು ಶಿವ ಮರ್ಡರ್ ಕೇಸ್‌ನಲ್ಲೂ ರಚಿತಾ ಹೆಸರು ಕೇಳಿ ಬರ್ತಿದೆ.
ಹಾಗಂತ ಬುಲ್ ಬುಲ್ ಬೆಡಗಿ ಏನೂ ಡೈರೆಕ್ಟ್ ಆಗಿ ಮರ್ಡರ್ ಕೇಸ್‌ನಲ್ಲಿ ಭಾಗಿಯಾಗಿಲ್ಲ. ಆದ್ರೆ ಬಿಕ್ಲು ಶಿವನ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರೋ ಜಗ್ಗ ಜೊತೆ ರಚಿತಾ ಕಾಣಿಸಿಕೊಂಡಿದ್ದಾರೆ. ಅದೂ ಇತ್ತೀಚೆಗೆ ಅಲ್ಲ. 2022ರ ರವಿ ಬೋಪಣ್ಣ ಸಿನಿಮಾದ ಸಮಯದಲ್ಲಿ. ಹೌದು, ಜಗ್ಗ ಅಲಿಯಾಸ್ ಜಗದೀಶ್ ಅನ್ನೋ ಆರೋಪಿ ಸದ್ಯ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದಾನೆ. ಆದ್ರೆ ರಚಿತಾಗೆ ದುಬಾರಿ ಗಿಫ್ಟ್ ನೀಡಿರೋ ಜಗ್ಗನ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ.
ಬಂಗಾರದ ಒಡವೆ ಹಾಗೂ ದುಬಾರಿ ಸೀರೆಯೊಂದನ್ನ ಗಿಫ್ಟ್ ನೀಡ್ತಿರೋ ಫೋಟೋಸ್ ಎಲ್ಲೆಡೆ ವೈರಲ್ ಆಗ್ತಿವೆ. ಇದ್ರಿಂದ ರಚಿತಾಗೂ ಪೊಲೀಸರು ನೋಟಿಸ್ ಕೊಡೋ ಸಾಧ್ಯತೆಯಿದೆ ಎನ್ನಲಾಗ್ತಿದೆ. ಆದ್ರೆ ಅಸಲಿ ಮ್ಯಾಟರ್ ಬೇರೇನೇ ಇದೆ. ಈ ಕುರಿತು ಪ್ರತಿಕ್ರಿಯೆಗಾಗಿ ರಚಿತಾರನ್ನ ಸಂಪರ್ಕಿಸಿದ ಗ್ಯಾರಂಟಿ ನ್ಯೂಸ್‌ಗೆ ಆ ಫೋಟೋ ಕುರಿತು ರಚಿತಾ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇಷ್ಟಕ್ಕೂ ರಚಿತಾ ಏನಂದ್ರು..?
ಜಗ್ಗ ಜೊತೆ ರಚಿತಾ, ಗ್ಯಾರಂಟಿ ನ್ಯೂಸ್‌ಗೆ ಸ್ಪಷ್ಟನೆ :
‘ನನಗೂ ಈ ಜಗ್ಗ ಅನ್ನೋ ವ್ಯಕ್ತಿಗೂ ಅಷ್ಟಾಗಿ ಪರಿಚಯ ಇಲ್ಲ. ನಾನು ರವಿಚಂದ್ರನ್ ಅವರು ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿದಂತಹ ರವಿ ಬೋಪಣ್ಣ ಸಿನಿಮಾದಲ್ಲಿ ನಟಿಸಿದ್ದೆ. ಹಾಡೊಂದರಲ್ಲಿ ಅಭಿನಯಿಸಿದ್ದಕ್ಕೆ ರವಿ ಸರ್ ಸಂಭಾವನೆ ಎಷ್ಟು ಕೊಡಬೇಕು ಅಂದ್ರು. ನಾನು ರವಿ ಸರ್‌ಗಾಗಿ ರೆಮ್ಯುನರೇಷನ್ ಬೇಡ ಸರ್ ಅಂದಿದ್ದೆ. ಆದ್ರೆ ಸರ್ ನನಗೆ ಗಿಫ್ಟ್ ರೂಪದಲ್ಲಿ ಬಂಗಾರದ ಒಡವೆ ಹಾಗೂ ಸೀರೆ ನೀಡಿದ್ರು. ಆ ಫೋಟೋದಲ್ಲಿ ರವಿ ಸರ್ ಜೊತೆಗೆ ಜಗ್ಗ ಕೂಡ ಇದ್ದಾರೆ ಅಷ್ಟೇ.
ಈ ಬಗ್ಗೆ ಪೊಲೀಸರು ನೋಟಿಸ್ ನೀಡಿದ್ರೆ ಖಂಡಿತಾ ಹೋಗಿ ಸ್ಪಷ್ಟನೆ ನೀಡುತ್ತೇನೆ. ಅದರಲ್ಲಿ ಮುಚ್ಚುಮರೆ ಏನಿದೆ..? ಇದರ ಹೊರತಾಗಿ ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರಿಗೆ ಕಳಂಕ ತರುವ ಕೆಲಸ ದಯವಿಟ್ಟು ಯಾರೂ ಮಾಡಬೇಡಿ.’
ಗೊತ್ತಾಯ್ತಲ್ವ? ತಾನಾಯ್ತು, ತನ್ನ ಕೆಲಸ ಆಯ್ತು ಅಂತ ಚಿತ್ರರಂಗದಲ್ಲಿ ಒಂದೊಳ್ಳೆ ಪಯಣ ಮಾಡ್ತಿರೋ ರಚಿತಾಗೆ ಹೀಗೆ ಕಾಂಟ್ರವರ್ಸಿಗಳು ಸುತ್ತಿಕೊಳ್ತಿವೆ. ಜಗ್ಗ ಅನ್ನೋ ವ್ಯಕ್ತಿ ಮಾಡಿದ ಕೊಲೆಗೆ ಈಕೆ ಹೇಗೆ ಹೊಣೆ ಆಗ್ತಾರೆ ಅಲ್ವೇ..? ನಟಿಸಿದ್ದು ತಪ್ಪಾ ಅಥ್ವಾ ಸಂಭಾವನೆ ಪಡೆಯದೆ ಗಿಫ್ಟ್ ಪಡೆದಿದ್ದು ತಪ್ಪಾ ಗೊತ್ತಾಗ್ತಿಲ್ಲ. ಅದ್ರಲ್ಲೂ ರವಿಚಂದ್ರನ್ ಆ ಚಿತ್ರದ ನಿರ್ಮಾಪಕರಾಗಿದ್ದು, ಅವರಿಂದಲೇ ಉಡುಗೊರೆ ಪಡೆದಿರೋದು ಕೂಡ ಸ್ಪಷ್ಟವಾಗಿದೆ.