ಭಾರತೀಯ ಚಿತ್ರರಂಗದ ಮೇಲೆ ಡಾರ್ಲಿಂಗ್ ಪ್ರಭಾಸ್ ಪ್ರಭಾವಳಿ ಸಖತ್ ಜೋರಿದೆ. ಬಾಹುಬಲಿ ಬಳಿಕ ಇವ್ರ ಡಿಮ್ಯಾಂಡ್ ಹತ್ತು ಪಟ್ಟು ಹೆಚ್ಚಿದೆ. ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳ ಸರದಾರ ಪ್ರಭಾಸ್, ಸದ್ಯ ರಾಜಾಸಾಬ್ ಆಗಿ ರಂಗೇರಲಿದ್ದಾರೆ. ರಿಲೀಸ್ ಡೇಟ್ ಲಾಕ್ ಆಗಿದ್ದು, ಚಿತ್ರಪ್ರೇಮಿಗಳು ದಿಲ್‌ಖುಷ್ ಆಗುವಂತಹ ಖಬರ್ ಇಲ್ಲಿದೆ ನೋಡಿ.
ರೆಬೆಲ್ ಫೆಸ್ಟ್‌ಗೆ ಮುಹೂರ್ತ ಫಿಕ್ಸ್.. ರಾಜಾಸಾಬ್ ರಂಗು
ಜೂನ್ 16ಕ್ಕೆ ಟೀಸರ್.. ಡಿಸೆಂಬರ್ 5ಕ್ಕೆ ಸಿನಿಮಾ ರಿಲೀಸ್
1200 ಕೋಟಿ ಕಲ್ಕಿ ನಂತ್ರ ಪ್ರಭಾಸ್ ಬಿಗ್ಗೆಸ್ಟ್ ಪ್ಯಾನ್ ಮೂವಿ
ಸೋತ್ರೂ ಗೆದ್ರೂ ಸಿನಿಮಾ ಸಂಖ್ಯೆಯಲ್ಲಿ ನೋ ಕಾಂಪ್ರಮೈಸ್
ರಾಜಾಸಾಬ್.. ಪ್ರಭಾಸ್ ನಟನೆಯ ಮತ್ತೊಂದು ಮೆಗಾ ಪ್ಯಾನ್ ಇಂಡಿಯಾ ಮೂವಿ. ಇದೇ ಮೊದಲ ಬಾರಿಗೆ ರೊಮ್ಯಾಂಟಿಕ್ ಕಾಮಿಡಿ ಕಮ್ ಹಾರರ್ ಸಿನಿಮಾದಲ್ಲಿ ಬಣ್ಣ ಹಚ್ಚಿರೋ ಡಾರ್ಲಿಂಗ್, ಹಿಂದೆಂದೂ ಕಾಣದೇ ಇರೋ ಲುಕ್ಸ್‌ನಿಂದ ಕಿಕ್ ಕೊಡಲಿದ್ದಾರೆ. ಮಾರುತಿ ನಿರ್ದೇಶನದ ರಾಜಾಸಾಬ್‌ನಲ್ಲಿ ಪ್ರಭಾಸ್ ಒಂದಲ್ಲ ಎರಡೆರಡು ಶೇಡ್‌ಗಳಲ್ಲಿ ಮಿಂಚು ಹರಿಸಲಿದ್ದಾರೆ.
ಇಲ್ಲಿಯವರೆಗೂ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ ಅನ್ನೋ ಕುತೂಹಲ ಇತ್ತು. ಒಂದಲ್ಲ ಎರಡೆರಡು ಬಾರಿ ಸಿನಿಮಾದ ಬಿಡುಗಡೆ ದಿನಾಂಕ ಪೋಸ್ಟ್‌ಪೋನ್ ಆಗಿತ್ತು. ಆದ್ರೀಗ ಬಾಹುಬಲಿ ಪ್ರಭಾಸ್ ಫ್ಯಾನ್ಸ್‌ಗೆ ಚಿತ್ರತಂಡ ಕೊನೆಗೂ ಗುಡ್ ನ್ಯೂಸ್ ನೀಡಿದೆ. ಇದೇ ಜೂನ್ 16ಕ್ಕೆ ಟೀಸರ್ ಲಾಂಚ್ ಆಗ್ತಿದ್ದು, ವರ್ಷಾಂತ್ಯದಲ್ಲಿ ಅಂದ್ರೆ ಡಿಸೆಂಬರ್ 5ಕ್ಕೆ ವರ್ಲ್ಡ್‌ವೈಡ್ ಗ್ರ್ಯಾಂಡ್ ರಿಲೀಸ್ ಆಗ್ತಿದೆ ರಾಜಾಸಾಬ್.
350 ಕೋಟಿ ಬಿಗ್ ಬಜೆಟ್‌ನಲ್ಲಿ ತಯಾರಾಗಿರೋ ರಾಜಾಸಾಬ್ ಸಿನಿಮಾ ಸಲಾರ್ ಸಿನಿಮಾದ ಜೊತೆ ಜೊತೆಗೆ ಚಿತ್ರೀಕರಣ ಶುರು ಮಾಡಿತ್ತು. ಆದ್ರೀಗ ಸಲಾರ್-2ಗೂ ಮೊದಲೇ ತೆರೆಗೆ ಬರ್ತಿದೆ. ಇನ್ನು ಇದಕ್ಕೂ ಮುನ್ನ ಪ್ರಭಾಸ್ ಗೆಸ್ಟ್ ಅಪಿಯರೆನ್ಸ್ ನೀಡಿರುವ ಕಣ್ಣಪ್ಪ ಚಿತ್ರ ಇದೇ ಜೂನ್ 27ಕ್ಕೆ ತೆರೆಗಪ್ಪಳಿಸುತ್ತಿದೆ. ರುದ್ರನಾಗಿ ಡಿಫರೆಂಟ್ ಗೆಟಪ್‌ನಲ್ಲಿ ಅಬ್ಬರಿಸಲಿದ್ದಾರೆ ಪ್ರಭಾಸ್.
ಅಂದಹಾಗೆ ಕಳೆದ ವರ್ಷ 1200 ಕೋಟಿ ಕಲೆಕ್ಷನ್ ಆದಂತಹ ಬಿಗ್ ಬಾಕ್ಸ್ ಆಫೀಸ್ ಹಿಟ್ ಕಲ್ಕಿ ಸಿನಿಮಾ ನೀಡಿದ್ರು ಪ್ರಭಾಸ್. ಭೈರವ ಹಾಗೂ ಕರ್ಣ ಎರಡು ರೋಲ್‌ಗಳನ್ನ ನಿಭಾಯಿಸಿದ್ರು. ಆದ್ರೆ ಅದಕ್ಕೂ ಮುನ್ನ ಬಂದಂತಹ ನಾಲ್ಕು ಸಿನಿ ಮಾಗಳು ಬ್ಯಾಕ್ ಟು ಬ್ಯಾಕ್ ನೆಲ ಕಚ್ಚಿದ್ದವು. ಯೆಸ್.. ಬಾಹುಬಲಿ ಬಿಗ್ಗೆಸ್ಟ್ ಹಿಟ್‌ಗಳ ಬಳಿಕ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಡಿಮ್ಯಾಂಡ್ ಕೂಡ ಹೆಚ್ಚಿಸಿಕೊಂಡರು. ಅದಾದ ಬಳಿಕ ಸಾಹೋ, ರಾಧೆ ಶ್ಯಾಮ್, ಆದಿಪುರುಷ್ ಹಾಗೂ ಸಲಾರ್-1 ಯಾವೂ ಸಹ ನಿರೀಕ್ಷಿತ ಸಕ್ಸಸ್ ಕಾಣಲಿಲ್ಲ.
ಹಾಗಂತ ಪ್ರಭಾಸ್ ಪ್ರಯತ್ನಗಳು ಮಾತ್ರ ನಿಂತಿಲ್ಲ. ಸಿನಿಮಾ ಸೋಲಲಿ ಅಥ್ವಾ ಗೆಲ್ಲಲಿ, ತಾನು ಮಾತ್ರ ಎಂದೂ ಕುಗ್ಗಿದ ವ್ಯಕ್ತಿಯೇ ಅಲ್ಲ. ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಪ್ರಭಾಸ್, ಸಿನಿಮಾಗಳ ಸಂಖ್ಯೆಯಲ್ಲಿ ಕಾಂಪ್ರಮೈಸ್ ಆಗೋದೇ ಇಲ್ಲ. ಸತತವಾಗಿ ಶೂಟಿಂಗ್, ಡಬ್ಬಿಂಗ್ ಅಂತ ಬ್ಯುಸಿ ಆಗಿರ್ತಾರೆ. ಇದಲ್ಲವೇ ಸ್ಪಿರಿಟ್..? ಇದಲ್ಲವೇ ಬದ್ಧತೆ..? ನಿಜಕ್ಕೂ ಈ ವಿಚಾರದಲ್ಲಿ ಪ್ರಭಾಸ್‌ರನ್ನ ಇತರೇ ಸ್ಟಾರ್ಸ್ ಫಾಲೋ ಮಾಡಬೇಕು.