2023ನೇ ಸಾಲಿನ ನ್ಯಾಷನಲ್ ಅವಾರ್ಡ್ಸ್ ಅನೌನ್ಸ್ ಆಗಿದ್ದು, ಕಿಂಗ್ ಖಾನ್ ಶಾರೂಖ್‌ಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ನೀಡಿರೋದ್ರ ಬಗ್ಗೆ ಎಲ್ಲೆಡೆ ಚರ್ಚೆ ಆಗ್ತಿದೆ. ನ್ಯಾಷನಲ್ ಅವಾರ್ಡ್ ಏನಾದ್ರೂ ಮಾರಾಟಕ್ಕಿದೆಯಾ..? ಯಾವ ಆಧಾರದ ಮೇಲೆ ಜವಾನ್ ಸಿನಿಮಾದ ನಟನೆಗೆ ನೀಡಿದ್ರು..? ವಿಕ್ರಾಂತ್‌ಗೆ ಓಕೆ.. ಶಾರೂಖ್‌ಗೆ ಯಾಕೆ ಅಂತೆಲ್ಲಾ ಪ್ರಶ್ನಿಸ್ತಿದ್ದಾರೆ.
- ನ್ಯಾಷನಲ್ ಅವಾರ್ಡ್ ಮಾರಾಟಕ್ಕೆ..? ಖಾನ್ ಕಾಲೆಳೆದ ಜನ..!!
- ವಿಕ್ರಾಂತ್‌ಗೆ ಓಕೆ ಶಾರೂಖ್‌ಗೆ ಏಕೆ..? ಕುಗ್ಗಿದ ರಾಷ್ಟ್ರ ಪ್ರಶಸ್ತಿ ಮೌಲ್ಯ
ಜವಾನ್.. 2023ರ ಸೆಪ್ಟೆಂಬರ್ 7ಕ್ಕೆ ತೆರೆಕಂಡ ಸಿನಿಮಾ. ಪಠಾಣ್ ಚಿತ್ರದ ಬಳಿಕ ಶಾರೂಖ್ ನಟನೆಯ ಜವಾನ್ ಕೂಡ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಸಾವಿರ ಕೋಟಿ ಗಡಿ ದಾಟಿತ್ತು. ತಮಿಳಿನ ಅಟ್ಲೀ ನಿರ್ದೇಶನದ ಜವಾನ್ ಸಿನಿಮಾದಲ್ಲಿ ನಯನತಾರಾ, ವಿಜಯ್ ಸೇತುಪತಿ ಹಾಗೂ ನಮ್ಮ ಕನ್ನಡದ ಪ್ರಿಯಾಮಣಿ, ದೀಪಿಕಾ ಪಡುಕೋಣೆ ಕೂಡ ನಟಿಸಿದ್ದಾರೆ. ನಿನ್ನೆಯಷ್ಟೇ 71ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಪಟ್ಟಿ ಪ್ರಕಟಗೊಂಡಿದ್ದು, ಬೆಸ್ಟ್ ಆ್ಯಕ್ಟರ್ ಗರಿ ಶಾರೂಖ್ ಖಾನ್ ಪಾಲಾಗಿದೆ.
ಇಂಟರೆಸ್ಟಿಂಗ್ ಏನಪ್ಪಾ ಅಂದ್ರೆ 12th ಫೇಲ್ ಚಿತ್ರದ ನಟನೆಗಾಗಿ ನಟ ವಿಕ್ರಾಂತ್ ಮಾಸ್ಸಿಗೂ ಬೆಸ್ಟ್ ಆ್ಯಕ್ಟರ್ ಅವಾರ್ಡ್ ನೀಡಲಾಗಿದೆ. ಅತ್ಯುತ್ತಮ ನಟ ಪ್ರಶಸ್ತಿಯನ್ನ ವಿಕ್ರಾಂತ್ ಜೊತೆ ಶಾರೂಖ್‌ಗೂ ಘೋಷಿಸಿರೋದ್ರ ಬಗ್ಗೆ ಎಲ್ಲೆಡೆ ವ್ಯಾಪಕ ಚರ್ಚೆಗೆ ಕಾರಣವಾಗ್ತಿದೆ. ಜವಾನ್ ಸಿನಿಮಾದ ನಟನೆಗೆ ಯಾಕೆ ನೀಡಿದ್ರು..? ಅಂತಹ ಅದ್ಭುತ ನಟನೆ ಏನು ಮಾಡಿದ್ರು ಶಾರೂಖ್..? ಯಾವ ಮಾನದಂಡದ ಮೇಲೆ ನೀಡಿದ್ರು..? ವಿಕ್ರಾಂತ್‌ಗೆ ಓಕೆ ಕಿಂಗ್ ಖಾನ್‌ಗೆ ಏಕೆ..? ನ್ಯಾಷನಲ್ ಅವಾರ್ಡ್ ಏನಾದ್ರೂ ಮಾರಟಕ್ಕಿದೆಯಾ ಅಂತೆಲ್ಲಾ ಟೀಕಿಸುತ್ತಿದ್ದಾರೆ.
ಇಲ್ಲಿಯವರೆಗೂ ನ್ಯಾಷನಲ್ ಅವಾರ್ಡ್‌ಗೆ ಅದರದ್ದೇ ಆದ ಘನತೆ, ಗೌರವ ಇತ್ತು. ಆದ್ರೀಗ ಅದು ಕೂಡ ಹಣ ಕೊಟ್ಟು ಖರೀದಿಸುವ ಮಟ್ಟಿಗೆ ಹೋಗಿದೆ ಅಂತೆಲ್ಲಾ ಜನ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಜ್ಯೂರಿ ಕಮಿಟಿ ಸೇರಿದಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಕೇಂದ್ರ ಸರ್ಕಾರ ಕೂಡ ಶಾರೂಖ್‌ಗೆ ಅವಾರ್ಡ್ ನೀಡ್ತಿರೋ ಹಿನ್ನೆಲೆ ಸಿಕ್ಕಾಪಟ್ಟೆ ಮುಜುಗರಕ್ಕೆ ಈಡಾಗ್ತಿದೆ. ಇದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಇದ್ರಿಂದ ನ್ಯಾಷನಲ್ ಅವಾರ್ಡ್ ಮೌಲ್ಯ ಕುಸಿಯಿತಾ ಅನ್ನೋ ಪ್ರಶ್ನೆ ಕೂಡ ಮೂಡುತ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





