ಮನೆಗಳ ಮುಂದೆ ‘ನಾಯಿ ಇದೆ ಎಚ್ಚರಿಕೆ’ ಅನ್ನೋ ಬೋರ್ಡ್ ಇರೋದನನ್ ನೀವೆಲ್ಲಾ ನೋಡೇ ಇರ್ತೀರಾ. ಆದ್ರೆ ಅದೇ ಟೈಟಲ್‌ನಲ್ಲಿ ಕನ್ನಡದಲ್ಲಿ ಸಿನಿಮಾವೊಂದು ತಯಾರಾಗಿದೆ. ಅದೂ ಡಾಕ್ಟರ್ ಒಬ್ರು ಆ್ಯಕ್ಟರ್ ಆಗಿ ಮಾಡಿರೋ ಪ್ರಯೋಗವಿದು ಅನ್ನೋದು ವಿಶೇಷ. ಇಷ್ಟಕ್ಕೂ ಟ್ರೈಲರ್ ಹೇಗಿದೆ..? ಏನಿದರ ಅಸಲಿ ಕಥೆ ಅಂತೀರಾ..? ಇಲ್ಲಿದೆ ನೋಡಿ.
- ‘ನಾಯಿ ಇದೆ ಎಚ್ಚರಿಕೆ’ ಟೈಟಲ್‌ನಲ್ಲೊಂದು ಸಿನಿಮಾ..!
- ಡಾಕ್ಟರ್ ಆ್ಯಕ್ಟರ್ ಆದ ಕಥೆ.. ವೈದ್ಯ ವೃತ್ತಿ ಸಿನಿಮಾ ಪ್ರವೃತ್ತಿ
ಇದು ನಾಯಿ ಇದೆ ಎಚ್ಚರಿಕೆ ಚಿತ್ರದ ಟ್ರೈಲರ್ ಝಲಕ್. ಹಾರರ್ ಥ್ರಿಲ್ಲರ್ ಜಾನರ್‌ನ ಈ ಸಿನಿಮಾ ಕಥೆ, ಪಾತ್ರಗಳು, ವಿಭಿನ್ನ ಶೈಲಿಯ ಮೇಕಿಂಗ್‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಸಾಲು ಸಾಲು ಸಿನಿಮಾಗಳ ರಿಲೀಸ್ ನಡುವೆ ಈ ಚಿತ್ರ ತನ್ನ ಕಂಟೆಂಟ್‌ನಿಂದ ಪ್ರಾಮಿಸಿಂಗ್ ಅನಿಸಿದೆ. ಪಾಳುಬಿದ್ದ ಬಂಗಲೆಯೊಂದರಲ್ಲಿ ನಡೆಯೋ ಚಿತ್ರ, ವಿಚಿತ್ರ ಘಟನೆಗಳ ಸುತ್ತ ಈ ಸಿನಿಮಾದ ಕಥೆ ನಿಂತಿದೆ.
ವೃತ್ತಿಯಲ್ಲಿ ಡಾಕ್ಟರ್ ಆಗಿರೋ ಲೀಲಾ ಮೋಹನ್ ಸಿನಿಮಾನ ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಅದರ ಪ್ರತಿಫಲವೇ ಈ ನಾಯಿ ಇದೆ ಎಚ್ಚರಿಕೆ ಸಿನಿಮಾ. ಅವರೇ ಲೀಡ್‌ನಲ್ಲಿ ನಟಿಸಿರೋ ಈ ಸಿನಿಮಾದಲ್ಲಿ ಅವರೊಟ್ಟಿಗೆ ಪ್ರಮೋದ್ ಶೆಟ್ಟಿ, ಮಂಗಳೂರು ದಿನೇಶ್, ಪ್ರಬೀಕ್ ಮೊಗವೀರ್, ಬಲರಾಜ್ವಾಡಿ, ದಿವ್ಯಾ, ಚಂದನಾ, ಮಾನಸ ಹೀಗೆ ದೊಡ್ಡ ತಾರಾಗಣವಿದೆ. ಕಲಿಗೌಡ ನಿರ್ದೇಶನದ ಈ ಚಿತ್ರಕ್ಕೆ ಲಾವಣ್ಯ ಬಂಡವಾಳ ಹೂಡಿದ್ದು, ಪ್ರೇಕ್ಷಕರಿಗೆ ರುಚಿಸುವ ಲಕ್ಷಣ ತೋರಿದೆ.
ಅಂದಹಾಗೆ ಲೀಲಾ ಮೋಹನ್ ವೈದ್ಯರಾಗಿ ಬೆಂಗಳೂರಿನ ಹತ್ತಾರು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸುಮಾರು 18 ವರ್ಷಗಳಿಂದ ಸೇವೆ ಮಾಡ್ತಾ ಬರ್ತಿದ್ದಾರೆ. ಅದರೊಟ್ಟಿಗೆ ಒಂದಷ್ಟು ಚಿತ್ರಗಳಲ್ಲಿ ನಟನಾಗಿಯೂ ಬಣ್ಣ ಹಚ್ಚಿರೋದು ಇಂಟರೆಸ್ಟಿಂಗ್. ಉಗ್ರಾವತಾರ, ಪುಟಾಣಿ ಪಂಟ್ರು, ರಾಕ್ಷಸ, ದ ಎಂಡ್, ಬಾರ್ಬಿ ಚಿತ್ರಗಳ ಬಳಿಕ ಇದೀಗ ಲೀಡ್‌ನಲ್ಲಿ ನಾಯಿ ಇದೆ ಎಚ್ಚರಿಕೆ ಅಂತ ಚಿತ್ರಪ್ರೇಮಿಗಳ ಮುಂದೆ ಬರ್ತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





