• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, June 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಂದು ‘ಹುಚ್ಚ’ ಇಂದು ‘ಪಚ್ಚ’ ಹಿಸ್ಟರಿ ರಿಪೀಟ್ಸ್..!

ಮ್ಯಾಂಗೋ ಪಚ್ಚ ಸಿನಿಮಾ ನೋಡಿದ ಕಿಚ್ಚನ ಫ್ಯಾಮಿಲಿ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
June 5, 2026 - 5:45 pm
in ಸಿನಿಮಾ
0 0
0
BeFunky collage (4)

ಗಾಂಧಿನಗರದ ರಣರಂಗದಲ್ಲಿ ಈಗ ಜಸ್ಟ್ ಹೊಸದೊಂದು ಸಾಮ್ರಾಜ್ಯದ ಉದಯವಾಗಿದೆ. ಹೌದು, ಸ್ಯಾಂಡಲ್‌ವುಡ್ ಬಾದ್‌ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕುಟುಂಬದ ಕುಡಿ, ಅವರ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಸಿನೆಮಾ ಇಂದು ರಾಜ್ಯಾದ್ಯಂತ ಅತ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಹುಚ್ಚ ಸಿನಿಮಾ ಸೃಷ್ಟಿಸಿದ್ದ ಇತಿಹಾಸ ನಿಮಗೇ ಗೊತ್ತು. ಈಗ ಬಂದಿರೋ ‘ಪಚ್ಚ’ನ ಬಗ್ಗೆ ಇಂಡಸ್ಟ್ರಿ ನಲ್ಲಿ ನಡೀತಿರೋದು ಟಾಕ್ ಏನು..?ಸುದೀಪ್ ಗೆ ಪತ್ನಿ ಪ್ರಿಯಾ ಕೊಟ್ಟ ಆ ಬಿಗ್ ಆಫರ್ ಏನು..?

ಕನ್ನಡ ಚಿತ್ರರಂಗದ ಇತಿಹಾಸವನ್ನು ತಿರುವಿ ಹಾಕಿದರೆ 2001ನೇ ಇಸವಿ ಸದಾ ನೆನಪಿನಲ್ಲಿ ಉಳಿಯುವಂತದ್ದು. ಯಾಕಂದರೆ, ಅಂದು ತೆರೆಕಂಡಿದ್ದ ಕಿಚ್ಚ ಸುದೀಪ್ ನಟನೆಯ ಹುಚ್ಚ ಸಿನಿಮಾ ಬಾಕ್ಸಾಫೀಸ್ ಧೂಳಿಪಟ ಮಾಡಿ, ಸುದೀಪ್ ಅವರನ್ನು ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿಸಿತ್ತು. ಈಗ ಸರಿಯಾಗಿ 25 ವರ್ಷಗಳ ಸುವರ್ಣ ಕಾಲಘಟ್ಟದ ನಂತರ, ಅಂದರೆ ಈ 2026ರಲ್ಲಿ ಅದೇ ರಕ್ತದ ಮತ್ತೊಂದು ಕುಡಿ ಪಚ್ಚ ಅವತಾರದಲ್ಲಿ ಬೆಳ್ಳಿಪರದೆ ಮೇಲೆ ಲಗ್ಗೆ ಇಟ್ಟಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಮೊದಲ ದಿನವೇ ಚಿತ್ರಮಂದಿರಗಳಿಂದ ಹೊರಬರುತ್ತಾ, “ಅಂದು ಹುಚ್ಚು… ಇಂದು ಪಚ್ಚ” ಎಂದು ಘೋಷಣೆ ಕೂಗುತ್ತಿದ್ದಾರೆ. ಮಾವನ ಕೆರಿಯರ್ ಬದಲಾಯಿಸಿದಂತೆ, ಸ್ಯಾಂಡಲ್‌ವುಡ್‌ನಲ್ಲಿ ಅಳಿಯನ ಭವಿಷ್ಯಕ್ಕೂ ಈ ಚಿತ್ರ ಗಟ್ಟಿ ಮುದ್ರೆ ಒತ್ತಿದೆ ಎನ್ನುತ್ತಿದ್ದಾರೆ ಸಿನಿ ಪಂಡಿತರು.

RelatedPosts

ರಿಲೀಸ್‌ಗೂ ಮೊದ್ಲೇ ಕಿಚ್ಚನ ‘ಪಚ್ಚ’ನಿಗೆ ಪ್ರಶಂಸೆಗಳ ಸುರಿಮಳೆ

ಪ್ರೀತಿಸಿ, ಮದುವೆಯಾಗಿದ್ದ ಶುಭ ಪೂಂಜಾ-ಸುಮಂತ್ ಜೋಡಿಗೆ ವಿಚ್ಛೇದನದ ಗ್ರಹಣ..!!

ಚರಣ್ ಪವರ್.. ಶಿವಣ್ಣ ಉಸ್ತಾದ್ ಗೌರ್ ನಾಯ್ಡು ಖದರ್

ಬೆಂಗಳೂರು ಹುಡ್ಗಿ ಜೊತೆ ಆಮೀರ್ ಖಾನ್ 3ನೇ ಮದುವೆ

ADVERTISEMENT
ADVERTISEMENT

250 (1)

ಅಂದು ‘ಹುಚ್ಚ’ ಇಂದು ‘ಪಚ್ಚ’ ಹಿಸ್ಟರಿ ರಿಪೀಟ್ಸ್..!

ಚಿತ್ರಮಂದಿರಗಳಲ್ಲಿ ಜೂ. ಕಿಚ್ಚನ ಆರ್ಭಟ, ಬಾಕ್ಸಾಫೀಸ್ ಶೇಕ್!

ಬೆಂಗಳೂರಿನ ಸಿನಿಮಾ ಹಬ್ ಎಂದೇ ಕರೆಯಲ್ಪಡುವ ಕೆಂಪೇಗೌಡ ರಸ್ತೆಯ ಪ್ರತಿಷ್ಠಿತ ಸಂತೋಷ್ ಥಿಯೇಟರ್ ಮುಂದೆ ಇಂದು ಜನಸಾಗರ ನೆರೆದಿತ್ತು. ಜೂನಿಯರ್ ಕಿಚ್ಚನ ಮಾಸ್ ಎಂಟ್ರಿ ಕಣ್ತುಂಬಿಕೊಳ್ಳಲು ಸುದೀಪ್ ಅಭಿಮಾನಿಗಳು ಮುಗಿಬಿದ್ದಿದ್ದರು. ಮೊದಲ ಶೋ ನೋಡಲು  ಪತ್ನಿ ಪ್ರಿಯಾ ಹಾಗೂ ಅಕ್ಕ ಸುಜಾತಾ ಜೊತೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಅವರನ್ನು ನೋಡಿದ ಫ್ಯಾನ್ಸ್ ನಿಯಂತ್ರಣ ತಪ್ಪಿದ್ದರು. ಪಟಾಕಿಗಳ ಸದ್ದು, ಗಗನಚುಂಬಿ ಕಟೌಟ್‌ಗಳ ಅಬ್ಬರದ ನಡುವೆ ಅಭಿಮಾನಿಯೊಬ್ಬನಿಗೆ ಖುದ್ದಾಗಿ ಕಿಚ್ಚನೇ ಖಡ್ಗ ತೊಡಿಸಿ ಸಿನಿಮಾದ ಸೆಲೆಬ್ರೇಶನ್ ಎಂಜಾಯ್ ಮಾಡಿದ್ದು ಈ ದಿನದ ಬಿಗ್ ಹೈಲೈಟ್ ಆಗಿತ್ತು.

703026590 18586067713007198 1076744406995164353 n

ಅಭಿಮಾನಿಯ ಕೈಗೆ ಖಡ್ಗ ತೊಡಿಸಿದ ಕಿಚ್ಚ ಸುದೀಪ್..!

ಮ್ಯಾಂಗೋ ಪಚ್ಚ ಸಿನಿಮಾ ನೋಡಿದ ಕಿಚ್ಚನ ಫ್ಯಾಮಿಲಿ

ಕೇವಲ ಮಾಸ್ ಮಾತ್ರವಲ್ಲದೇ, ಈ ಚಿತ್ರಕ್ಕೊಂದು ಗಟ್ಟಿ ಇನ್ಫಾರ್ಮೇಟಿವ್ ಹಿನ್ನೆಲೆಯಿದೆ. 2000ರಿಂದ 2010ರ ಕಾಲಘಟ್ಟದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಒಂದಷ್ಟು ನೈಜ, ರೋಚಕ ಕ್ರೈಮ್ ಘಟನೆಗಳನ್ನು ಆಧರಿಸಿ ನಿರ್ದೇಶಕ ವಿವೇಕ್ ಈ ಚಿತ್ರಕಥೆಯನ್ನು ಹೆಣೆದಿದ್ದಾರೆ. ಆ ಕಾಲದ ರಿಯಲ್ ರೌಡಿಸಂ ಮತ್ತು ಪ್ರೀತಿಯ ಕರಾಳ ಮುಖವನ್ನು ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಅತ್ಯಂತ ನೈಜವಾಗಿ ತೆರೆಗೆ ತರಲಾಗಿದೆ. ಇದೇ ಕಾರಣಕ್ಕೆ ಚಿತ್ರಕ್ಕೆ ಜನಸಾಮಾನ್ಯರಿಂದ ಹಿಡಿದು ಕ್ಲಾಸ್ ಪ್ರೇಕ್ಷಕರವರೆಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

707511948 17908500954413532 8251307284053314865 n

ಸಿನಿಮಾ ನೋಡಿದ ಪ್ರೇಕ್ಷಕರು ಸಂಚಿತ್ ಸಂಜೀವ್ ಆಕ್ಟಿಂಗ್ ನೋಡಿ ಫಿದಾ ಆಗಿದ್ದಾರೆ. ಚಿತ್ರದ ಎಮೋಷನಲ್ ಸೀನ್‌ಗಳು ಮತ್ತು ಮ್ಯಾನರಿಸಂನಲ್ಲಿ ಸಂಚಿತ್ ಪಕ್ಕಾ ಕಿಚ್ಚ ಸುದೀಪ್ ಅವರ ಕಾರ್ಬನ್ ಕಾಪಿಯಂತೆ ಕಾಣಿಸುತ್ತಾರೆ. ವಾಯ್ಸ್ ಬೇಸ್ ಕೂಡ ಕಿಚ್ಚನನ್ನೇ ನೆನಪಿಸುತ್ತದೆ. ಎಲ್ಲೂ ಇದು ಅವರ ಮೊದಲ ಸಿನಿಮಾ ಅನಿಸುವುದೇ ಇಲ್ಲ. ಈ ವರ್ಷದ ‘ಅತ್ಯುತ್ತಮ ನಟ’ ಪ್ರಶಸ್ತಿ ಸಂಚಿತ್ ಮುಡಿಗೇರುವುದು 100% ಗ್ಯಾರಂಟಿ ಅಂತಿದ್ದಾರೆ ಸಿನಿಮಾ ಪ್ರೇಮಿಗಳು.

705982414 18586354852007198 7728171316183386358 n

“ಸಂಚಿತ್ ಆಕ್ಟಿಂಗ್‌ನಲ್ಲಿ ಸುದೀಪ್ ಕಾಣಿಸಲಿಲ್ಲ, ನಾನು ಗೆದ್ದೆ”

ಕಿಚ್ಚ-ಪಚ್ಚ ಮಲ್ಟಿಸ್ಟಾರರ್ ಕಾಂಬೋ : ಪ್ರಿಯಾ ಸುದೀಪ್ ಆಫರ್..!

ಚಿತ್ರ ವೀಕ್ಷಿಸಿದ ಬಳಿಕ ಮಾಧ್ಯಮಗಳ ಮುಂದೆ ಬಂದ ಪ್ರಿಯಾ ಸುದೀಪ್ “ಚಿತ್ರದಲ್ಲಿ ಎಲ್ಲೂ ಲ್ಯಾಗ್ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸಂಚಿತ್ ಆಕ್ಟಿಂಗ್‌ನಲ್ಲಿ ಎಲ್ಲೂ ಸುದೀಪ್ ಸರ್ ನೆರಳು ಕಾಣದೆ, ಕೇವಲ ‘ಪಚ್ಚ’ ಮಾತ್ರ ಕಂಡಿದ್ದೇ ಬಿಗ್ ಸಕ್ಸಸ್ ಅಂದ್ರು. ಜೊತೆಗೆ, ಸುದೀಪ್ ಮತ್ತು ಸಂಚಿತ್ ಇಬ್ಬರೂ ಒಟ್ಟಿಗೆ ಬಂದು ನನಗೆ ಡೇಟ್ಸ್ ಕೊಟ್ರೆ, ಇಬ್ಬರನ್ನೂ ಇಟ್ಟುಕೊಂಡು ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಸಿನಿಮಾ ಪ್ರೊಡ್ಯೂಸ್ ಮಾಡೋಕೆ ನಾನು ರೆಡಿ ಎಂದು ಖುಷಿಯಿಂದ ಹೇಳಿಕೊಂಡ್ರು.ಅಲ್ಲಿಗೆ ಕಿಚ್ಚ-ಪಚ್ಚ ಕಾಂಬಿನೇಷನ್ ಸಿನಿಮಾ ಲೋಡಿಂಗ್ ಆಗ್ತಿರೋ ಮುನ್ಸೂಚನೆ ಸಿಕ್ಕಂತಾಗಿದೆ.

714829419 18590320780007198 6993948092209890067 n

ಮಗನ ಆಕ್ಟಿಂಗ್ ನೋಡಿ ಕಣ್ಣೀರು ಹಾಕಿದ ಸುಜಾತಾ..!

ಮೊದಲ ಚಿತ್ರದಲ್ಲೇ ಬೆಸ್ಟ್ ಡೆಬ್ಯೂ ಅವಾರ್ಡ್ ಫಿಕ್ಸ್ ಎಂದ ಪ್ರೇಕ್ಷಕರು

ಇನ್ನು ಸಿನಿಮಾ ನೋಡಿ ಕಣ್ಣೀರು ಹಾಕಿದ ಸಂಚಿತ್ ತಾಯಿ ಸುಜಾತಾ ಹಳೆ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ನನ್ನ ತಮ್ಮ ಸುದೀಪ್‌ಗೆ ‘ಅಭಿನಯ ಚಕ್ರವರ್ತಿ’ ಅನ್ನೋ ಬಿರುದಿದೆ. ಮಗನನ್ನು ಜೂನಿಯರ್ ಕಿಚ್ಚ ಎಂದು ಕರೆಯಲಾರಂಭಿಸಿದಾಗ ಆ ವೇಯ್ಟ್ ನನ್ನ ಮಗ ನಿಭಾಯಿಸುತ್ತಾನಾ ಅಂತ ಭಯವಾಗಿತ್ತು. ಅವನನ್ನು ಡಾಕ್ಟರ್ ಮಾಡಬೇಕೆಂಬ ಆಸೆ ನನಗಿತ್ತು. ಆದರೆ ಸುದೀಪ್, ಆಕ್ಟರ್ ಆದ್ರೆ ದಿನಕ್ಕೊಂದು ಪ್ರೊಫೆಷನ್ ಎಂಜಾಯ್ ಮಾಡಬಹುದು ಅಂದಿದ್ದಕ್ಕೆ ಒಪ್ಪಿದೆವು. ನಾನು ಹೆತ್ತಿದ್ದರೂ ಸಂಚಿತ್‌ಗೆ ನಿಜವಾದ ತಾಯಿ ಪ್ರಿಯಾ ಸುದೀಪ್. ಅಂದು ಹುಚ್ಚ ನೋಡಿ ಅತ್ತಿದ್ದೆ, ಇಂದು ಪಚ್ಚ ನೋಡಿ ಹೆಮ್ಮೆಯಿಂದ ಕಣ್ಣೀರಿಟ್ಟೆ ಎಂದು ಭಾವುಕರಾಗಿದ್ದಾರೆ.

SaveClip.App 626448861 18069385145629877 5803462710593820995 n

ಸಂಚಿತ್‌ನನ್ನು ಕೇವಲ ಅಕ್ಕನ ಮಗನಂತೆ ನೋಡದೆ, ತನ್ನ ಸ್ವಂತ ಮಗನಂತೆಯೇ ಪ್ರೀತಿಸುವ ಪ್ರಿಯಾ ಸುದೀಪ್ ಅವರೇ ಈ ಚಿತ್ರಕ್ಕೆ ಅಸಲಿ ಬೆನ್ನೆಲುಬು. ತಮ್ಮದೇ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಯಾವುದೇ ರಾಜಿ ಇಲ್ಲದೆ ಕೋಟಿ ಕೋಟಿ ಬಂಡವಾಳ ಹೂಡಿ ಗ್ರಾಂಡ್ ಆಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ ಪ್ರಿಯಾ. ಇವರ ಬೆಂಬಲಕ್ಕೆ ಸ್ಯಾಂಡಲ್‌ವುಡ್‌ನ ಸ್ಟಾರ್ ವಿತರಕರಾದ ಕೆಆರ್‌ಜಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಕೈಜೋಡಿಸಿ ಇಡೀ ರಾಜ್ಯಾದ್ಯಂತ ಚಿತ್ರವನ್ನು ಹೈಪ್ ಕ್ರಿಯೇಟ್ ಮಾಡಿ ರಿಲೀಸ್ ಮಾಡಿದ್ದಾರೆ.

Screenshot 2026 06 02

ಮ್ಯಾಂಗೋ ಪಚ್ಚ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಚಿತ್ರದಲ್ಲಿರುವ ತಾರಾಗಣ. ಬೆಳ್ಳಿಪರದೆಯಲ್ಲಿ ಬಿಗ್ ಸಾಮ್ರಾಜ್ಯ ಕಟ್ಟಲು ಹೊರಟಿರುವ ಸಂಚಿತ್ ಸಂಜೀವ್‌ಗೆ ಜೋಡಿಯಾಗಿ ಗ್ಲಾಮರಸ್ ನಟಿ ಜಾಕಲ್ ಕುಂದರ್ ಅದ್ಭುತವಾಗಿ ನಟಿಸಿದ್ದಾರೆ. ಇವರ ಜೊತೆಗೆ ನಟಿ ಭಾವನಾ ರಾಮಣ್ಣ, ಮಯೂರ್ ಪಟೇಲ್, ಉಗ್ರಂ ಖ್ಯಾತಿಯ ಮಂಜು, ಹಂಸ ನಂಜುಂಡಸ್ವಾಮಿ ಹಾಗೂ ಸ್ಟಾರ್ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಚಿತ್ರದ ತೂಕ ಹೆಚ್ಚಿಸಿದ್ದಾರೆ.

Sanch

ಮ್ಯಾಂಗೋ ಪಚ್ಚ ಚಿತ್ರಕ್ಕೆ ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮಾವನ ನೆರಳಿನಿಂದ ಹೊರಬಂದು ತನ್ನದೇ ಆದ ನಟನಾ ಸಾಮರ್ಥ್ಯ ನಿರೂಪಿಸಿರುವ ಸಂಚಿತ್, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಾಮ್ರಾಜ್ಯ ಕಟ್ಟಲು ಸಜ್ಜಾಗಿದ್ದಾರೆ. ಸದ್ಯ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಆಗಿರುವ ಮ್ಯಾಂಗೋ ಪಚ್ಚ ಸಿನಿಮಾ ಪ್ರೇಕ್ಷಕರ ಮನ ಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾನೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage (5)

ಸಿಮ್ ಸ್ವಾಪ್ ವಂಚನೆಗೆ ಟೆಲಿಕಾಂ ಕಂಪನಿಗಳಿಗೆ ಚಾಟಿ: BSNLಗೆ ₹55.5 ಲಕ್ಷ ದಂಡ!

by ಶ್ರೀದೇವಿ ಬಿ. ವೈ
June 5, 2026 - 6:00 pm
0

BeFunky collage (4)

ಅಂದು ‘ಹುಚ್ಚ’ ಇಂದು ‘ಪಚ್ಚ’ ಹಿಸ್ಟರಿ ರಿಪೀಟ್ಸ್..!

by ಶ್ರೀದೇವಿ ಬಿ. ವೈ
June 5, 2026 - 5:45 pm
0

BeFunky collage (3)

ಹೇರ್ ಡೈ ಬಳಸುವುದರಿಂದ ಕ್ಯಾನ್ಸರ್ ಬರುತ್ತಾ? ವೈಜ್ಞಾನಿಕ ಸತ್ಯ ಏನು?

by ಶ್ರೀದೇವಿ ಬಿ. ವೈ
June 5, 2026 - 5:21 pm
0

BeFunky collage (2)

ಸಚಿವ ಸಂಪುಟದಲ್ಲಿ ಮಹಿಳೆಯರೇ ಇಲ್ಲ! ಹಿರಿಯ ಕಾಂಗ್ರೆಸ್ ನಾಯಕಿ ಬೇಸರ

by ಶ್ರೀದೇವಿ ಬಿ. ವೈ
June 5, 2026 - 4:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 04T185959.860
    ರಿಲೀಸ್‌ಗೂ ಮೊದ್ಲೇ ಕಿಚ್ಚನ ‘ಪಚ್ಚ’ನಿಗೆ ಪ್ರಶಂಸೆಗಳ ಸುರಿಮಳೆ
    June 4, 2026 | 0
  • Untitled design 2026 06 04T180722.074
    ಪ್ರೀತಿಸಿ, ಮದುವೆಯಾಗಿದ್ದ ಶುಭ ಪೂಂಜಾ-ಸುಮಂತ್ ಜೋಡಿಗೆ ವಿಚ್ಛೇದನದ ಗ್ರಹಣ..!!
    June 4, 2026 | 0
  • Untitled design 2026 06 04T171336.402
    ಚರಣ್ ಪವರ್.. ಶಿವಣ್ಣ ಉಸ್ತಾದ್ ಗೌರ್ ನಾಯ್ಡು ಖದರ್
    June 4, 2026 | 0
  • Untitled design 2026 06 04T164103.449
    ಬೆಂಗಳೂರು ಹುಡ್ಗಿ ಜೊತೆ ಆಮೀರ್ ಖಾನ್ 3ನೇ ಮದುವೆ
    June 4, 2026 | 0
  • BeFunky collage (68)
    3ನೇ ಮದುವೆಗೆ ರೆಡಿಯಾದ ಅಮಿರ್ ಖಾನ್..!
    June 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version