ಮ್ಯಾಂಗೋ ಪಚ್ಚ ಸಿನಿಮಾ ಹೌಸ್‌ಫುಲ್ ಪ್ರದರ್ಶನಗೊಳ್ತಿದೆ. ಕಿಚ್ಚನ ಹುಡ್ಗ ಪಚ್ಚ ತನ್ನದೇ ಆದ ಸಾಮ್ರಾಜ್ಯ ಕಟ್ಟಲು ಅಡಿಪಾಯ ಹಾಕಿದ್ದು, ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆ ಆಗ್ತಿದೆ. ಅಂದಹಾಗೆ ಥಿಯೇಟರ್‌ಗಳ ಮುಂದೆ ಚಿತ್ರರಂಗದ ಸ್ಟಾರ್‌ಗಳ ವಿಶೇಷ ಫ್ಲೆಕ್ಸ್ ರಾರಾಜಿಸ್ತಿದ್ದು, ಅದರಲ್ಲಿ ಡಿ ಬಾಸ್ ದರ್ಶನ್ ಭಾವಚಿತ್ರ ಕೂಡ ಇದೆ. ಈ ಬಗ್ಗೆ ಬಾದ್‌ಷಾ ಏನಂದ್ರು ಅಂತೀರಾ..? ಇದರ ಫುಲ್ ಡಿಟೇಲ್ಸ್ ಇಲ್ಲಿದೆ..
- ಮ್ಯಾಂಗೋ ಪಚ್ಚ ಬ್ಯಾನರ್‌ನಲ್ಲಿ ಕಿಚ್ಚ-ದಚ್ಚು ಮಿಂಚು
- ಆ ಐಡಿಯಾ ನಂದೇ ಎಂದ ಬಾದ್‌ಷಾ ಸುದೀಪ್..!
ಮ್ಯಾಂಗೋ ಪಚ್ಚ.. ಶುಕ್ರವಾರ ತೆರೆಕಂಡ ಈ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೊಬ್ಬ ಭರವಸೆಯ ನಟ ಸಿಕ್ಕಿದಂತಾಗಿದೆ. ಯೆಸ್.. ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್, ಚೊಚ್ಚಲ ಚಿತ್ರದಲ್ಲೇ ಭವಿಷ್ಯದ ಸ್ಟಾರ್ ಆಗುವ ಮುನ್ಸೂಚನೆ ನೀಡಿದ್ದಾರೆ. ಮಾವ ಸುದೀಪ್ ರೀತಿಯ ಬೇಸ್ ವಾಯ್ಸ್, ಅದೇ ಸ್ಟೈಲು, ಮ್ಯಾನರಿಸಂ ಜೊತೆ ಮೊದಲ ಸಿನಿಮಾದ ನಟ ಅಂತ ಅನಿಸೋದೇ ಇಲ್ಲ. ಸ್ಕ್ರೀನ್ ಪ್ರೆಸೆನ್ಸ್ ಚೆನ್ನಾಗಿದ್ದು, ನಟನೆಯಲ್ಲಿ ಪಕ್ವತೆ ಕಾಣ್ತಿದೆ.
ಸಿನಿಮಾಗೆ ರಾಜ್ಯದ ಎಲ್ಲೆಡೆಯಿಂದ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬರ್ತಿದೆ. ಬರೀ ಸುದೀಪ್ ಫ್ಯಾನ್ಸ್ ಅಷ್ಟೇ ಅಲ್ಲ, ಎಲ್ಲಾ ಸ್ಟಾರ್‌ಗಳ ಅಭಿಮಾನಿಗಳೂ ಈ ನವ ನಾಯಕನಟನಿಗೆ ಬೆಸ್ಟ್ ವಿಷಸ್ ಹೇಳ್ತಿದ್ದಾರೆ. ವಿವೇಕ ನಿರ್ದೇಶನದ ಈ ಸಿನಿಮಾಗೆ ಪ್ರಿಯಾ ಸುದೀಪ್, ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸಕ್ಸಸ್ ಬಳಿಕ ಪಚ್ಚನ ಬಗ್ಗೆ ಮಾತನಾಡಲು ಕಿಚ್ಚ ಸುದೀಪ್ ಒಂದು ಸಕ್ಸಸ್ ಮೀಟ್ ಕರೆದಿದ್ರು. ಅಲ್ಲಿ ಸಾಕಷ್ಟು ವಿಷಯಗಳನ್ನ ಹಂಚಿಕೊಂಡರು. ಆಗ.. ಮ್ಯಾಂಗೋ ಪಚ್ಚ ಬ್ಯಾನರ್‌ನಲ್ಲಿ ರಾರಾಜಿಸ್ತಿರೋ ಕಿಚ್ಚ-ದಚ್ಚು ಜೋಡಿ ಬಗ್ಗೆಯೂ ಮಾತನಾಡಿದ್ದಾರೆ. ಯೆಸ್.. ರಾಜ್, ವಿಷ್ಣು, ಅಂಬಿ, ಶಂಕರ್‌ನಾಗ್, ಅಪ್ಪು ಸೇರಿದಂತೆ ಈಗಿರೋ ಯಂಗ್‌ಸ್ಟರ್ಸ್ ತನಕ ಚಿತ್ರರಂಗದ ಎಲ್ಲಾ ಸ್ಟಾರ್‌ಗಳಿರೋ ವಿಶೇಷ ಬ್ಯಾನರ್ ಥಿಯೇಟರ್‌ಗಳ ಮುಂದೆ ತಲೆ ಎತ್ತಿದೆ. ಆ ಬಗ್ಗೆ ಪ್ರತಿಕ್ರಿಯಿಸಿರೋ ಕಿಚ್ಚ, ಅಚ್ಚರಿಯ ಸ್ಟೇಟ್‌ಮೆಂಟ್ ನೀಡಿದ್ದಾರೆ.
ಹೌದು.. ಆ ಬ್ಯಾನರ್ ಹಾಕಿಸೋ ಐಡಿಯಾ ನನ್ನದೇ. ಯಾಕಂದ್ರೆ ಹುಚ್ಚ ಸಿನಿಮಾ ಬಿಡುಗಡೆ ಆದಾಗ, ಕಟೌಟ್ ಹಾಕುವ ಪದ್ದತಿ ಇತ್ತು. ಮೊದಲ ವಾರ ಕಟೌಟ್‌ಗೆ ಒಂದು ಹಾರ ಕೂಡ ಬಿದ್ದಿರಲಿಲ್ಲ. ಕಾರಣ.. ನಾವು ಯಾರು ಅಂತ ಯಾರಿಗೂ ಗೊತ್ತಿರಲಿಲ್ಲ. ಮ್ಯಾಂಗೋ ಪಚ್ಚ ಕಟೌಟ್ ಹಾಕಿಸಿದ್ರೆ ಖಾಲಿ ಬಿಡೋಕೆ ಆಗಲ್ಲ. ಹಾರ ಹಾಕಿದ್ರೆ ಯಾರು ಹಾಕಿಸಿದ್ರು ಅನ್ನೋ ಪ್ರಶ್ನೆ ಬರುತ್ತೆ. ಒಂದೇ ಹಾರ ಇದ್ರೆ ಅವಮಾನ. ಜಾಸ್ತಿ ಹಾಕಿಸಿದ್ರೆ ನಾವು ಹಾಕಿಸಿದ್ದು ಅಂತ ಗೊತ್ತಾಗುತ್ತೆ. ಅಭಿಮಾನಿಗಳು ಕಟೌಟ್‌ನ ಮುಂದೊಂದು ದಿನ ಹಾಕಲಿ. ಇವತ್ತು ಅವರೆಲ್ಲರ ಆಶೀರ್ವಾದದೊಂದಿಗೆ ಹೋಗು ಅಂತ ಸಲಹೆ ನೀಡಿದ್ರಂತೆ ಕಿಚ್ಚ.
ಒಟ್ಟಾರೆ ಸದ್ಯ ಕರುನಾಡಿನ ಮೂಲೆ ಮೂಲೆಯಲ್ಲಿ ಮ್ಯಾಂಗೋ ಹಾಗೂ ಈ ಕಿಚ್ಚನ ಮನೆ ಮಗ ಪಚ್ಚನದ್ದೇ ಸದ್ದು. ಹೊಸ ಪ್ರತಿಭೆಗಳು ಬರಲಿ. ಚಿತ್ರರಂಗದ ಬೆಳಗಲಿ ಅನ್ನೋದೇ ನಮ್ಮ ಆಶಯ. ಆದ್ರೆ ದರ್ಶನ್ ಜೈಲಲ್ಲಿದ್ರೂ ಸಹ, ಬ್ಯಾನರ್‌ನಲ್ಲಿ ಕಿಚ್ಚನ ಜೊತೆ ದಚ್ಚು ಫೋಟೋ ಬಿದ್ದಿರೋದು ಮಾತ್ರ ಪಾಸಿಟಿವ್ ವೈಬ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





